Posts

Showing posts from July, 2026

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

 * ಬಿವಿಸೀ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ಬಗ್ಗೆ ಮಾಡಿದ ಟೀಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿರುವುದು ಅರ್ಥವಾಗುವ ಸಂಗತಿಯೇ. ವೈಯಕ್ತಿಕ ಮಟ್ಟಕ್ಕೆ ಇಳಿದು ನಡೆಯುವ ಇಂತಹ ಟೀಕೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದರೆ ಅದೇ ಸಂದರ್ಭದಲ್ಲಿ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ವಿನಾ ಕಾರಣ `ಕೊಳಕು ಮನುಷ್ಯ' ಎಂದು ತುಚ್ಛ ಭಾಷೆಯಲ್ಲಿ ಕರೆದಿರುವುದೂ ಅಷ್ಟೇ ಖಂಡನೀಯ. ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿರುವ ವ್ಯಕ್ತಿಗೆ ತನ್ನ ಭಾಷೆಯ ಮೇಲೆ ಹೆಚ್ಚು ಹಿಡಿತ ಮತ್ತು ಹೊಣೆಗಾರಿಕೆ ಇರಬೇಕಾಗುತ್ತದೆ. ಗೌರವ ಕೊಟ್ಟರೆ ಮಾತ್ರ ಗೌರವ ಸಿಗುತ್ತದೆ ಎಂಬ ಸರಳ ಸತ್ಯವನ್ನು ಎಲ್ಲ ರಾಜಕಾರಣಿಗಳೂ ಅರಿಯಬೇಕಾಗಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರಾಜಕೀಯ ವಿರೋಧವನ್ನು ವ್ಯಕ್ತಪಡಿಸುವಾಗ ಬಳಸುವ ಭಾಷೆಯಲ್ಲಿ ಸಂಯಮದ ಕೊರತೆ ಆಗಾಗ ಕಂಡುಬರುತ್ತದೆ. ಅವರ ತಂದೆ ರಾಜೀವ್ ಗಾಂಧಿ ಅಥವಾ ಅಜ್ಜಿ ಇಂದಿರಾ ಗಾಂಧಿ ತೀವ್ರ ರಾಜಕೀಯ ಸಂಘರ್ಷಗಳ ನಡುವೆಯೂ ಇಂತಹ ಕೆಳಮಟ್ಟದ ಪದಪ್ರಯೋಗಕ್ಕೆ ಇಳಿದ ಉದಾಹರಣೆಗಳು ಇರಲಿಲ್ಲ. ಇಂದಿನ ಗಾಂಧಿ ಕುಟುಂಬದ ರಾಜಕೀಯದಲ್ಲಿ ಭಾಷೆಯ ಸೊಬಗು ಮತ್ತು ಸಾಂಸ್ಕೃತಿಕ ಸಂಯಮ ಹಿಂಬದಿಗೆ ಸರಿದಂತಿದೆ. ಧಮೇರ್ಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ವಿದ್ಯಾರ್ಥಿಗಳ ಹೋರಾಟದ ಯಶಸ್ಸನ್...

ಬೀದಿ ಹೊತ್ತಿ ಉರಿದಾಗ ಸಂಸತ್ತು ಮೌನವೇ?

Image
  ಹೇಳಲೇಬೇಕಾದ್ದು * ಬಿವಿಸೀ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಜನರ ಧ್ವನಿಯನ್ನು ಆಲಿಸುವುದರಲ್ಲಿ ಅಡಗಿದೆ. ಜನರು ತಮ್ಮ ಅಸಮಾಧಾನವನ್ನು ಬೀದಿಗಿಳಿದು ವ್ಯಕ್ತಪಡಿಸುವ ಪರಿಸ್ಥಿತಿ ಎದುರಾದಾಗ, ಸಂಸತ್ತು ಅದನ್ನು ಕಡೆಗಣಿಸಿ ತನ್ನ ಕೆಲಸ ಮುಂದುವರಿಸುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾದ ನಡೆ. ಜನರ ನೋವು, ಆತಂಕ ಮತ್ತು ಆಕ್ರೋಶಕ್ಕೆ ಸ್ಪಂದಿಸಬೇಕಾದ ಮೊದಲ ವೇದಿಕೆ ಸಂಸತ್ತೇ ಎಂಬುದನ್ನು ಇತ್ತೀಚಿನ ಬೆಳವಣಿಗೆಗಳು ಮತ್ತೊಮ್ಮೆ ನೆನಪಿಸುತ್ತಿವೆ. ಸಂಸತ್ತು ಕೇವಲ ಮಸೂದೆಗಳನ್ನು ಅಂಗೀಕರಿಸುವ ಅಥವಾ ಸರ್ಕಾರದ ಕಾರ್ಯಕ್ರಮಗಳಿಗೆ ಮುದ್ರೆ ಒತ್ತುವ ಸಂಸ್ಥೆಯಲ್ಲ. ದೇಶದ ವಿವಿಧ ಭಾಗಗಳಲ್ಲಿ ಮೂಡಿಬರುವ ಸಮಸ್ಯೆಗಳು, ಜನರ ಪ್ರತಿಭಟನೆಗಳು, ಆಡಳಿತದ ವೈಫಲ್ಯಗಳು ಮತ್ತು ಸಾರ್ವಜನಿಕರ ಪ್ರಶ್ನೆಗಳ ಕುರಿತು ಗಂಭೀರ ಚರ್ಚೆ ನಡೆಯಬೇಕಾದ ಅತ್ಯುನ್ನತ ಪ್ರಜಾತಾಂತ್ರಿಕ ವೇದಿಕೆ ಅದು. ಸಂಸದೀಯ ಚರ್ಚೆಗಳು ಅರ್ಥಪೂರ್ಣವಾಗಿದ್ದರೆ ಮಾತ್ರ ಆಡಳಿತದ ಮೇಲೆ ಜನರ ವಿಶ್ವಾಸ ಉಳಿಯುತ್ತದೆ. ವಿದ್ಯಾರ್ಥಿಗಳು, ಯುವಕರು, ರೈತರು ಅಥವಾ ಯಾವುದೇ ವರ್ಗದ ಜನರು ತಮ್ಮ ಬೇಡಿಕೆಗಳನ್ನು ಬೀದಿಗಿಳಿದು ವ್ಯಕ್ತಪಡಿಸುತ್ತಿದ್ದರೆ, ಅದನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ಪರಿಗಣಿಸುವುದು ಸಮಂಜಸವಲ್ಲ. ಪ್ರತಿಭಟನೆಯ ಹಿಂದಿರುವ ಕಾರಣಗಳನ್ನು ಅರಿತುಕೊಳ್ಳುವುದು, ಅವುಗಳಿಗೆ ರಾಜಕೀಯ ಹಾಗೂ ಆಡಳಿತಾತ್ಮಕ ಪರಿಹಾರ ಹುಡುಕುವುದು ಪ್ರಜಾಪ್ರಭುತ್ವದ ಜವಾಬ್ದ...

`ವೃದ್ಧ ನಾರೀ ಪತಿವ್ರತಾ' ಮಾತು ನೆನಪಿಗೆ ತರುವ ಸಿದ್ದು ವರಸೆ

 ರಾಜಕೀಯದ ಕೊಳಕಿನ ಬಗ್ಗೆ ಕುರುಬ ನಾಯಕನ ಉಪದೇಶ! ರೆಕ್ಕೆ ಪುಕ್ಕ ಇಲ್ಲದ ಮಾತು * ಬಿವಿಸೀ ಹಳೆಯ ಮೈಸೂರು ಭಾಗದ ಸಾರ್ವಜನಿಕ ವೇದಿಕೆಯಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ``ಇಂದಿನ ರಾಜಕೀಯ ಕೊಳಕಾಗಿದೆ, ಭ್ರಷ್ಟಾಚಾರದಿಂದ ತುಂಬಿದೆ'' ಎಂದು ಹೇಳಿರುವುದು ವಿಚಿತ್ರವೆನಿಸಿದರೂ ಸತ್ಯ ಎನ್ನುವ ವರದಿ. ಈ ಮಾತು ಕೇಳಿದಾಗ ಕನ್ನಡದ ಹಳೆಯ ಗಾದೆಯಾದ `ವೃದ್ಧ ನಾರೀ ಪತಿವ್ರತಾ' ಎಂಬುದು ನೆನಪಾಗುತ್ತದೆ. ಏಕೆಂದರೆ, ಕರ್ನಾಟಕದ ರಾಜಕೀಯದಲ್ಲಿ ಕೊಳಕು ಹೆಚ್ಚಲು ಕಾರಣವಾದ ಪ್ರಮುಖ ವ್ಯಕ್ತಿಗಳಲ್ಲಿ ಅವರೂ ಕಾರಣರು. ತಮ್ಮನ್ನು ದೇವರಾಜ ಅರಸು ಅವರೊಂದಿಗೆ ಹೋಲಿಸಿಕೊಳ್ಳಲು ಹೆಮ್ಮೆಪಡುವ ಮತ್ತು ಅದನ್ನು ಸಾರಲು ಸರಕಾರದ ಖರ್ಚಿನಲ್ಲಿ ಕೋಟ್ಯಂತರ ರೂ ಜಾಹೀರಾತು ಹಾಕಿಸಿಕೊಂಡ ಸಿದ್ದರಾಮಯ್ಯ, ಹಿಂದುಳಿದವರ ಪರ ಹೋರಾಟ ನಡೆಸಿದ ನಾಯಕನ ಇಮೇಜು ಬೆಳೆಸಿಕೊಳ್ಳಲು ಶ್ರಮಿಸಿದ್ದಾರೆ. ಮಾತೆತ್ತಿದರೆ ಜಾತಿ ಎಂದೇ ಅಣಿಮುತ್ತು ಉದುರಿಸುತ್ತಿದ್ದ ಅವರ ಎರಡು ಅವಧಿಯ ಮುಖ್ಯಮಂತ್ರಿತ್ವದಲ್ಲಿ ಭ್ರಷ್ಟಾಚಾರದ ಹೊಸ ಹೊಸ ಆರೋಪಗಳು ವಾರಕ್ಕೊಮ್ಮೆ ಕೇಳಿಬರುತ್ತಿದ್ದವು. ಮುಡಾ ನಿವೇಶನ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂಹಗರಣದ ಆರೋಪ ಅವರ ಮೇಲೆಯೇ ಕೇಳಿಬಂತು. ಜಾರಿ ನಿರ್ದೇಶನಾಲಯ ಮತ್ತು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿದವು. ಆ ಪ್ರಕರಣಗಳು ಇನ್ನೂ ನ್ಯಾಯಾಲಯದ...

"ಕಾನೂನು ಒಂದು ಕತ್ತೆ" ಎಂಬ ಡಿಕನ್ಸ್ ಮಾತಿಗೆ ಜೀವ ತುಂಬಿದ ಅನುಭವ

Image
  ಅಶೋಕ್ ಲವಾಸಾ ಬರಹದಲ್ಲಿ ನ್ಯಾಯದ ವಿಳಂಬಕ್ಕಿಂತ ಹೆಚ್ಚಾಗಿ ಬಯಲಾಗುವುದು ವ್ಯವಸ್ಥೆಯ ಅಸಂಗತತೆ * ಬಿವಿಸೀ `ಕಾನೂನು ಒಂದು ಕತ್ತೆ' (ಲಾ ಈಸ್ ಆನ್ ಆಸ್) ಎಂಬ ಚಾಲ್ರ್ಸ್ ಡಿಕನ್ಸ್ ಅವರ ಪ್ರಸಿದ್ಧ ಉಲ್ಲೇಖವನ್ನು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಅಶೋಕ್ ಲವಾಸಾ ತಮ್ಮ ಇತ್ತೀಚಿನ ಲೇಖನದಲ್ಲಿ ನೆನಪಿಸಿಕೊಳ್ಳುತ್ತಾರೆ. ಇದು ನ್ಯಾಯಾಂಗವನ್ನು ಹೀಗಳೆಯುವ ಮಾತಲ್ಲ. ಬದಲಾಗಿ, ನ್ಯಾಯದ ಉದ್ದೇಶಕ್ಕಿಂತ ಕಾರ್ಯವಿಧಾನವೇ ಮೇಲುಗೈ ಸಾಧಿಸಿದಾಗ ಕಾನೂನು ಎಷ್ಟರಮಟ್ಟಿಗೆ ಅರ್ಥಹೀನವಾಗಿ ವರ್ತಿಸಬಲ್ಲದು ಎಂಬುದನ್ನು ಅವರ ಸ್ವಂತ ಅನುಭವದ ಮೂಲಕ ತೋರಿಸುವ ಪ್ರಯತ್ನ. 2009ರಲ್ಲಿ ಕೇಂದ್ರ ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಲವಾಸಾ, ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಲು ಅನುಮತಿ ನೀಡಿದ ಪತ್ರಕ್ಕೆ ಸಹಿ ಹಾಕಿದ್ದರು. ಹದಿನೇಳು ವರ್ಷಗಳ ನಂತರ, ಅದೇ ಪತ್ರದ ಮೇಲಿನ ತಮ್ಮ ಸಹಿಯನ್ನು ದೃಢೀಕರಿಸಲು ಪಾಟ್ನಾದ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಅವರಿಗೆ ಸಮನ್ಸ್ ಬಂತು. ಸರ್ಕಾರಿ ದಾಖಲೆಗಳಿಂದಲೇ ಇದನ್ನು ಪರಿಶೀಲಿಸಬಹುದಿತ್ತು. ವಿಡಿಯೊ ಕಾನ್ಫರೆನ್ಸ್ ಮೂಲಕ ಸಾಕ್ಷ್ಯ ಪಡೆಯುವ ಅವಕಾಶವೂ ಇತ್ತು. ಆದರೂ ನ್ಯಾಯಾಲಯವು ವೈಯಕ್ತಿಕ ಹಾಜರಾತಿಯನ್ನೇ ಒತ್ತಾಯಿಸಿತು. ಲವಾಸಾ ಆರೋಪಿಯಲ್ಲ, ಪ್ರಕರಣದ ಸಾಕ್ಷಿದಾರ ಮಾತ್ರ. ಆದರೂ ಅವರು ಅನುಭವಿಸಿದ ಸಂಕಷ್ಟ, ನ್ಯಾಯಾಲಯದ ದ್ವಾರ ತಟ್ಟುವ ಸಾಮಾನ್ಯ...

Refusing a police notice offers no legal shield for lawmakers

  BVSee The incident in Chikkamagaluru, where BJP legislator C T Ravi turned back police officers attempting to serve a notice regarding an alleged hate speech case, underscores a sharp friction between lawmakers and the law enforcement machinery. Having previously faced arrest in December 2024 over derogatory comments against a woman minister — a matter that saw him transferred across multiple police jurisdictions before securing judicial relief—this latest episode reinforces a persistent pattern of defiance toward statutory police processes. Under Section 35(3) of the Bharatiya Nagarik Suraksha Sanhita (BNSS), 2023, a notice of appearance is designed to give an accused person an opportunity to cooperate with an investigation without undergoing immediate arrest for offences carrying sentences under seven years. When an individual actively refuses to receive or acknowledge such a notice, the legal process does not grind to a halt. Section 35(6) of the BNSS explicitly empowers the i...

ಹಿರಿಯಣ್ಣ ತೋರಿದ `ಪೇಡ್ ನ್ಯೂಸ್' ದಾರಿ

Image
 ಸುದ್ದಿ ಪ್ರಕಟಿಸಲು ಕಾಸು ಬಿಚ್ಚಿ, ಬೇಡದ ಸುದ್ದಿ ಮುಚ್ಚಿಡಲೂ ಸಹ ಕಾಪೆರ್Çರೇಟ್‍ಗಳು ಮತ್ತು ಧರ್ಮೋದ್ಯಮಿಗಳ ಓಲೈಕೆ: ಪತ್ರಿಕೋದ್ಯಮದ ಮತ್ತಷ್ಟು ಅಧೋಗತಿಗೆ ಇಳಿಯದಂತೆ ರಕ್ಷಣಾ ಕವಚವಾಗಲು ಬೇಕಿದೆ ಮಾಧ್ಯಮ ಆಯೋಗ ಕೇಳು ಜನಮೇಜಯ * ಬಿವಿಸೀ ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ಇಂದು ಕಂಡುಬರುತ್ತಿರುವ ಮೌಲ್ಯಗಳ ಕುಸಿತವು ಆತಂಕಕಾರಿ ಮಟ್ಟವನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ, ಮುದ್ರಣ ಮಾಧ್ಯಮಗಳು ಅನುಸರಿಸಬೇಕಾದ ನೈತಿಕತೆಯ ಮೇಲ್ವಿಚಾರಣೆಗಾಗಿ ರಾಜ್ಯ ಮಟ್ಟದಲ್ಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ `ಮಾಧ್ಯಮ ಆಯೋಗ' ರಚಿಸಬೇಕೆಂಬ ಹಿರಿಯ ಪತ್ರಕರ್ತರ ಸಲಹೆಯನ್ನು ಮುಖ್ಯಮಂತ್ರಿಗಳು ತಕ್ಷಣವೇ ಪರಿಶೀಲಿಸಬೇಕಾಗಿದೆ. ಜಿಲ್ಲಾಮಟ್ಟದ ಪತ್ರಿಕೆಗಳಿಗೆ ಮಾರ್ಗದರ್ಶಿಯಾಗಬೇಕಿದ್ದ ರಾಜ್ಯಮಟ್ಟದ ಪ್ರಮುಖ ಪತ್ರಿಕೆಗಳು ಇಂದು ಕಾಪೆರ್Çರೇಟ್ ಮನೆತನಗಳು ಮತ್ತು ಧರ್ಮೋದ್ಯಮಿಗಳ ಕರಪತ್ರಗಳಂತೆ ವರ್ತಿಸುತ್ತಿರುವುದು ಅತ್ಯಂತ ಶೋಚನೀಯ ಮಾತ್ರವಲ್ಲ, ನಾಚಿಕೆಗೇಡಿನ ವರ್ತನೆ.  ಪ್ರಮುಖ ಉದ್ಯಮಿಗಳ (ಉದಾಹರಣೆಗೆ ಅಂಬಾನಿ ಕುಟುಂಬದಂತಹ) ವೈಯಕ್ತಿಕ ಹಾಗೂ ರಾಯಲ್ ಜೀವನಶೈಲಿಯ ಕುರಿತಾದ ಸುದ್ದಿಗಳನ್ನು ಪ್ರಥಮ ಪುಟದಲ್ಲೇ ಅರ್ಧ ಅಥವಾ ಕಾಲು ಪುಟದಷ್ಟು ಪ್ರಕಟಿಸಲಾಗುತ್ತಿದೆ. ವಾಸ್ತವವಾಗಿ ಇವು ಜಾಹೀರಾತು ರೂಪದ ಲೇಖನಗಳು (ಅಡ್ವರ್ಟೋರಿಯಲ್ಸ್). ಆದರೆ, ಇವು `ಪ್ರಾಯೋಜಿತ ಸುದ್ದಿಗಳು' ಎಂಬ ಯಾವುದೇ ಸಣ್ಣ ಸುಳಿವು...

ಮುಂದಿನಿಂದ ಹಾಯದ, ಹಿಂದಿನಿಂದ ಒದೆಯದ ಪ್ರಹ್ಲಾದ ಜೋಷಿ ಹರಕೆಯ ಕುರಿ ಆಗುವ ಮುನ್ನ...

 ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಚೈತನ್ಯದಾಯಕ  ತೇಜಸ್ವಿ ಸೂರ್ಯರನ್ನು ಮೋದಿ ಬದಿಗೊತ್ತಿದ್ದೇಕೆ? ಖುಲ್ಲಂ ಖುಲ್ಲಾ * ಬಿವಿಸೀ ಕೇಂದ್ರ ಸಚಿವ ಸಂಪುಟದಿಂದ ಧಮೇರ್ಂದ್ರ ಪ್ರಧಾನ್ ಅವರ ನಿರ್ಗಮನವು ದೇಶದ ಉನ್ನತ ಶಿಕ್ಷಣ ಕ್ಷೇತ್ರದ ಆಡಳಿತದಲ್ಲಿ ಪ್ರಮುಖ ಬದಲಾವಣೆಗೆ ನಾಂದಿ ಹಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ಬಯಸಿ ಸತತ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿ ಸಂಘಟನೆಗಳು ಮತ್ತು ಸುಧಾರಣಾವಾದಿಗಳ ತೀವ್ರ ಒತ್ತಡಕ್ಕೆ ಮಣಿದು, ಪ್ರಧಾನ್ ಕೊನೆಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಚುಕ್ಕಾಣಿ ಹಿಡಿಯಲು ಅತ್ಯುನ್ನತ ಕೌಶಲ್ಯ ಹಾಗೂ ಸ್ಪಷ್ಟ ದೂರದೃಷ್ಟಿಯುಳ್ಳ ನಾಯಕತ್ವದ ಅಗತ್ಯವಿತ್ತು. ಆದರೆ ಆ ಉನ್ನತ ಮಟ್ಟದ ನಿರೀಕ್ಷೆಗಳನ್ನು ತಲುಪುವಲ್ಲಿ ಪ್ರಧಾನ್ ವಿಫಲರಾಗಿ, ರಾಜಕೀಯವಾಗಿ ಭಾರೀ ಬೆಲೆ ತೆರಬೇಕಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ್ ಅವರ ಉತ್ತರಾಧಿಕಾರಿಯಾಗಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಆಯ್ಕೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರವು ಅಧಿಕಾರಿಶಾಹಿಯನ್ನು ಸರಿದಾರಿಗೆ ತರಬಲ್ಲ ಕಟ್ಟುನಿಟ್ಟಾದ ನಾಯಕನನ್ನು ಬಯಸುತ್ತಿರುವ ಈ ಸಮಯದಲ್ಲಿ, ಪ್ರಹ್ಲಾದ್ ಜೋಶಿ ಅವರಂತಹ ಗೋವಿನಂಥ ಹಿರಿಯ ರಾಜಕಾರಣಿಗೆ ಈ ಖಾತೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ತಮ್ಮ ಹಳೆಯ ಸೌಮ್ಯ ರಾಜಕೀಯ ಶೈಲಿಯಿಂದ ಸದಾ ಗುರುತಿಸಿಕೊಂಡಿರುವ ಜೋಶಿ, ಇಂದಿನ ಸವಾಲಿನ ಶೈಕ್...

ಜನಾಂದೋಲನವನ್ನು ಅಪರಾಧೀಕರಿಸುವ ಉಡುಪಿ ಸಂಸದ ಕೋಟ ಪೂಜಾರಿಯ ಉಡಾಫೆಯ ರಾಜಕಾರಣ: ಬದಲಾಗದಿದ್ದರೆ ತಕ್ಕ ಶಾಸ್ತಿ!

 ನೇರಾನೇರ * ಬಿವಿಸೀ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಪ್ರಜಾಪ್ರಭುತ್ವದಲ್ಲಿ ಜನಾಂದೋಲನಗಳು ಕಂಡಾಗಲೆಲ್ಲ ಅದರಲ್ಲಿ `ಅಪರಾಧಿಗಳು', 'ಸಮಾಜ ಕಂಟಕರು' ಮತ್ತು 'ಭಯೋತ್ಪಾದಕರು' ಕಾಣಿಸುವುದು ಈಗ ಅಭ್ಯಾಸವಾಗಿ ಬಿಟ್ಟಿದೆ. ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ `ಭಯೋತ್ಪಾದಕ' ಪಟ್ಟ ಕಟ್ಟಿರುವುದು ಅವರ ಬೇಜವಾಬ್ದಾರಿ ಹಾಗೂ ಆತ್ಮರತಿಯ ರಾಜಕಾರಣದ ಅತ್ಯಂತ ಕೆಟ್ಟ ನಿದರ್ಶನ. ಜನರಿಂದ ಆಯ್ಕೆಯಾದ ಒಬ್ಬ ಪ್ರತಿನಿಧಿ ಜನಾಕ್ರೋಶಕ್ಕೆ ಸ್ಪಂದಿಸುವುದನ್ನು ಬಿಟ್ಟು, ಪ್ರತಿಭಟನಾಕಾರರನ್ನು ಕ್ರಿಮಿನಲ್‍ಗಳಂತೆ ಬಿಂಬಿಸುತ್ತಿರುವುದು ನಾಚಿಕೆಗೇಡು. ಇದು ಶ್ರೀನಿವಾಸ ಪೂಜಾರಿಯವರ ದಿಢೀರ್ ಹೇಳಿಕೆಯಲ್ಲ; ಇದೊಂದು ಸ್ವಾರ್ಥಪೂರಿತ ರಾಜಕೀಯ ತಂತ್ರಗಾರಿಕೆ. ಈ ಹಿಂದೆ ಧರ್ಮಸ್ಥಳದ ಅಸಹಜ ಸಾವುಗಳ ಹಾಗೂ ಸಮೂಹ ಹತ್ಯೆಗಳ ವಿರುದ್ಧ ಧ್ವನಿಯೆತ್ತಿ, ನ್ಯಾಯಕ್ಕಾಗಿ ಹೋರಾಡಿದ   ನಾಗರಿಕರನ್ನು ಮತ್ತು ಸಂಘಟನೆಗಳನ್ನು ಇದೇ ಪೂಜಾರಿ `ವಿದೇಶಿ ಫಂಡ್ ಪಡೆದ ಅಪರಾಧಿಗಳು' ಎಂದು ಹಂಗಿಸಿದ್ದರು. ಈಗ ದೆಹಲಿಯ ವಿದ್ಯಾರ್ಥಿ ಹೋರಾಟಕ್ಕೂ ಅದೇ ಹಳೆಯ, ಕಿಲುಬು ಹಿಡಿದ ತಂತ್ರವನ್ನು ಬಳಸುತ್ತಿದ್ದಾರೆ. ಅವರು ಇಂತಹ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದು ದೆಹಲಿಯ ಹೈಕಮಾಂಡ್ ಕಣ್ಣಿಗೆ ಬಿದ್ದು ಕೇಂದ್ರ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳುವ ಹಪಾಹಪಿಯಿಂದ ಹೊರತು ಬೇರೇನೂ...

Udupi: Kota Srinivas Poojary’s self-serving rhetoric and the dangerous habit of branding dissent as criminal

  When an elected representative consistently sees "anti-social elements," "criminals," and "terrorists" hiding behind every peaceful civil society agitation, it stops being a mere difference of opinion — it becomes a calculated, self-serving political strategy. Udupi-Chikkamagaluru MP Kota Srinivas Poojary’s latest rhetoric, branding student agitators at Jantar Mantar as terror-linked, is not an isolated blurt. It is part of a predictable, loud-mouthed script designed more to catch the eye of the party high command in New Delhi than to serve the constituents who voted him to power. This stock reaction has become Poojary’s political maneuver. Cast your mind back to the civil society outrage in coastal Karnataka surrounding the Dharmasthala mass burial allegations. When local citizens, activists, and aggrieved groups urged transparent state action, Poojary did not demand a fair investigation or express empathy for potential victims. Instead, he immediately ...

Leadership shift at the education ministry: missed opportunity?

  Tejasvi Surya would have been a better choice to replace Dharmendra Pradhan ............... The recent high-profile exit of Dharmendra Pradhan from the Union Cabinet marks a watershed moment in the governance of India’s education sector. Bowing to relentless pressure mounted by student groups and reform campaigners protesting systemic flaws, Pradhan stepped down after failing to meet the high expectations demanded by the post. The ministry presiding over the nation’s premier institutions of higher learning requires high-calibre, vision-driven leadership—a standard Pradhan regrettably fell short of, ultimately paying the political price. However, Prime Minister Narendra Modi’s choice of successor has raised more eyebrows than confidence. The assignment of senior cabinet minister Pralhad Joshi to the education portfolio came as a genuine surprise to political observers. At a juncture when the sector urgently demands a tough, no-nonsense administrator capable of overhauling entrench...

ವಿಕಸಿತ ಭಾರತ ಶಿಕ್ಷಣ ವಿಧೇಯಕಕ್ಕೆ ದೇಶಾದ್ಯಂತ ತೀವ್ರ ವಿರೋಧ

 ವಿಶ್ಲೇಷಣೆ * ಬಿವಿಸೀ ಕೇಂದ್ರ ಸರ್ಕಾರವು ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಆಡಳಿತಾತ್ಮಕ ಸುಧಾರಣೆಗಳನ್ನು ತರುವ ಉದ್ದೇಶದಿಂದ ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ಡಿ ಅಂಗವಾಗಿ ಪ್ರಸ್ತಾಪಿಸಲಾಗಿರುವ ಈ ವಿಧೇಯಕವು ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ ಬಹು-ನಿಯಂತ್ರಣ ವ್ಯವಸ್ಥೆಯನ್ನು ರದ್ದುಗೊಳಿಸಿ, ಸಂಪೂರ್ಣ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಒಂದೇ ಒಡೆತನದ ಉನ್ನತ ಪ್ರಾಧಿಕಾಧಿಕಾರವನ್ನು ರಚಿಸುವ ಗುರಿಯನ್ನು ಹೊಂದಿದೆ. ಈ ನೂತನ ಕಾಯ್ದೆಯು ಈಗ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಮಂಡಳಿಗಳನ್ನು ಸಂಯೋಜಿಸಿ ಒಂದೇ ಮೇಲ್ವಿಚಾರಣಾ ಸಂಸ್ಥೆಯ ಅಡಿಯಲ್ಲಿ ತರಲಿದೆ. ನೂತನವಾಗಿ ರಚನೆಯಾಗಲಿರುವ ಈ ಅಧಿಷ್ಠಾನದ ಅಡಿಯಲ್ಲಿ ವಿವಿಧ ಶೈಕ್ಷಣಿಕ ಸಂಸ್ಥೆಗಳ ಕಾರ್ಯಾಚರಣೆಯ ನಿಯಂತ್ರಣ, ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ಹಾಗೂ ಶಿಕ್ಷಣದ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲು ಮೂರು ಪ್ರತ್ಯೇಕ ವಿಶೇಷ ಪರಿಷತ್ತುಗಳು ಕಾರ್ಯನಿರ್ವಹಿಸಲಿವೆ. ಶಿಕ್ಷಣ ಕ್ಷೇತ್ರದಲ್ಲಿನ ಅನಗತ್ಯ ನಿಯಮಗಳ ಗೊಂದಲ ನಿವಾರಿಸಿ, ಪಾರದರ್ಶಕತೆ ಹೆಚ್ಚಿಸುವುದು ಮತ್ತು ಶಿಕ್ಷಣ ಸಂಸ್ಥೆಗಳ ವಾಣಿಜ್ಯೀಕರಣವನ್ನು ತಡೆಯುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ...

ಜಿರಳೆಗಳ ಮುತ್ತಿಗೆಗೆ ಕಾಯುತ್ತಿದೆ ಭ್ರಷ್ಟಾಚಾರದ ಆಲೆಮನೆಯಾದ ಕೆಪಿಎಸ್‍ಸಿ

 ಕೆಪಿಎಸ್‍ಸಿ ಕೇವಲ ನೇಮಕಾತಿ ನಡೆಸುವ ಕಚೇರಿಯಲ್ಲ; ಅದು ಕರ್ನಾಟಕ ಆಡಳಿತದ ಹೆರಿಗೆಮನೆ ........... * ಬಿವಿಸೀ ಸಂವಿಧಾನದ 315ನೇ ವಿಧಿಯಡಿ ಸ್ಥಾಪಿತವಾಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ರಾಜ್ಯದ ಅತ್ಯಂತ ಮುಖ್ಯ ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಒಂದು. ರಾಜ್ಯದ ಆಡಳಿತಕ್ಕೆ ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಿ ಕಳುಹಿಸುವ ಹೊಣೆ ಈ ಸಂಸ್ಥೆಯದು. ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡಿರುವ ಈ ಆಯೋಗವು ಸರ್ಕಾರದ ಉದ್ಯೋಗಗಳಿಗೆ ನ್ಯಾಯಸಮ್ಮತ, ಪಾರದರ್ಶಕ ಮತ್ತು ಅರ್ಹತೆಯಾಧಾರಿತ ನೇಮಕಾತಿ ನಡೆಸಬೇಕಾಗಿದೆ. ಆದರೆ ಇಂದು ಕರ್ನಾಟಕದ ಜನಸಾಮಾನ್ಯರ ಮನಸ್ಸಿನಲ್ಲಿ ಕೆಪಿಎಸ್‍ಸಿ ಎಂದರೆ ಪ್ರತಿಭೆಯ ಪ್ರತೀಕವಲ್ಲ, ಭ್ರಷ್ಟಾಚಾರದ ಪ್ರತೀಕ ಎಂಬ ಭಾವನೆ ಮೂಡಿರುವುದು ರಾಜ್ಯಕ್ಕೆ ಅತ್ಯಂತ ದೊಡ್ಡ ಅವಮಾನ. ಪರಿಸ್ಥಿತಿ ಜಿರಳೆಗಳನ್ನು ಆಹ್ವಾನಿಸುತ್ತಿದೆ.  ಇತ್ತೀಚಿನ ಬೆಳವಣಿಗೆಗಳು ಈ ಅನುಮಾನವನ್ನು ಮತ್ತಷ್ಟು ಗಾಢಗೊಳಿಸಿವೆ. ರಾಜ್ಯಪಾಲರು ಭ್ರಷ್ಟ ಕೆಪಿಎಸ್‍ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿ, ಸಂವಿಧಾನಾತ್ಮಕ ಪ್ರಕ್ರಿಯೆಯಡಿ ಮುಂದಿನ ತನಿಖೆಗೆ ಶಿಫಾರಸು ಮಾಡಿರುವುದು ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ. ಇದು ಕರ್ನಾಟಕದ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಅಪರೂಪದ ಬೆಳವಣಿಗೆಯಾಗಿದೆ. ಆರೋಪಗಳು ಅಂತಿಮವಾಗಿ ಸಾಬೀತಾಗಬೇಕಿರುವುದು ಸತ್ಯ. ಆದರೆ ಇಂತಹ ಕ್ರಮ ಕೈಗೊಳ್ಳುವ ಹಂತಕ್ಕೆ ಪರಿಸ್ಥಿತಿ ತಲುಪಿರ...

ಚುನಾವಣಾ ಆಯೋಗದ ನಿಷ್ಪಕ್ಷಪಾತತನಕ್ಕೆ ಗ್ರಹಣ: ಸ್ವಾಯತ್ತತೆ ಹೆಸರಿನಲ್ಲಿ ನಡೆಯುತ್ತಿದೆಯೇ ನಾಟಕ?

 ಸಂಸ್ಥೆಗಳ ಸಮಾಧಿಯ ಮೇಲೆ ಚುನಾವಣೆ: ಮನ್‍ಮೋಹನ್ ಸಿಂಗ್ ಕಾಲದಿಂದ ಮೋದಿ ಯುಗದ ಸವಾಲುಗಳವರೆಗೆ! ಇರೋ ವಿಚಾರ * ಬಿವಿಸೀ ಮಾಜಿ ಮುಖ್ಯ ಚುನಾವಣೆ ಆಯುಕ್ತ ಎಸ್ ವೈ ಖುರೇಷಿ ಅವರು ಇತ್ತೀಚೆಗೆ ಬಹಿರಂಗಪಡಿಸಿದ ಘಟನೆಯೊಂದು ಭಾರತೀಯ ಪ್ರಜಾಪ್ರಭುತ್ವದ ಸುವರ್ಣ ಅಧ್ಯಾಯವೊಂದಕ್ಕೆ ಬೆಳಕು ಚೆಲ್ಲಿದೆ. ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರೊಬ್ಬರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದಾಗ, ಚುನಾವಣಾ ಆಯೋಗವು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿತ್ತು. ಆ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್‍ನ ಕೆಲ ನಾಯಕರು ಆಯೋಗದ ವಿರುದ್ಧ ನೀಡಿದ್ದ ಹಗುರ ಹೇಳಿಕೆಗಳಿಂದ ಕಂಗೆಟ್ಟಿದ್ದ ಪ್ರಧಾನಿ ಮನ್‍ಮೋಹನ್ ಸಿಂಗ್ ಅವರು, "ನನ್ನ ಸರ್ಕಾರವೇ ಆಯೋಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ನೀವು ಭಾವಿಸುವುದಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಭಾವುಕರಾಗಿ ನುಡಿದಿದ್ದರಂತೆ. ಪ್ರಧಾನಿಯೊಬ್ಬರ ಈ ಆಕ್ರೋಶ ಮತ್ತು ಭಾವುಕತೆ, ಸ್ವತಂತ್ರ ಸಂಸ್ಥೆಗಳ ಪಾವಿತ್ರ್ಯತೆ ಹಾಗೂ ಚುನಾವಣಾ ವ್ಯವಸ್ಥೆಯ ನಿಷ್ಪಕ್ಷಪಾತತನದ ಬಗ್ಗೆ ಅವರಿಗಿದ್ದ ಅಪಾರ ಗೌರವ ಮತ್ತು ಪ್ರಜಾಸತ್ತಾತ್ಮಕ ಆತ್ಮಸಾಕ್ಷಿಗೆ ಹಿಡಿದ ಕನ್ನಡಿಯಾಗಿತ್ತು. ಆದರೆ, ಇಂದಿನ ನರೇಂದ್ರ ಮೋದಿ ಆಡಳಿತಾವಧಿಯ ಸನ್ನಿವೇಶವನ್ನು ಅಂದಿನ ದಿನಗಳಿಗೆ ಹೋಲಿಸಿ ನೋಡಿದರೆ ಪ್ರಜಾಪ್ರಭುತ್ವ ಎಷ್ಟು ಅಧೋಗತಿಗೆ ಇಳಿದಿದೆ ಎಂಬುದು ಸ್ಪಷ್ಟವಾಗುತ್ತದೆ. ಇಂದು ಭಾರತದ ಚುನಾವಣಾ ಪ್ರಕ್...

ಭ್ರಷ್ಟಾಚಾರ ಇದ್ದರೂ ನಾಗರಿಕರಲ್ಲಿ ಸಂಚಲನ ಏಕೆ ಕಾಣುತ್ತಿಲ್ಲ?

 ಹಾಗೆ ಸುಮ್ಮನೇ * ಬಿವಿಸೀ ಒಂದು ಕಾಲದಲ್ಲಿ ಭ್ರಷ್ಟಾಚಾರದ ಆರೋಪವೇ ಸರ್ಕಾರಗಳನ್ನು ಅಲುಗಾಡಿಸುತ್ತಿತ್ತು. ಒಂದು ಹಗರಣ ಬಹಿರಂಗವಾದರೆ ವಿಧಾನಮಂಡಲಗಳ ಕಲಾಪಗಳು ಸ್ಥಗಿತವಾಗುತ್ತಿದ್ದವು, ತನಿಖೆಗೆ ಒತ್ತಾಯ ಕೇಳಿಬರುತ್ತಿತ್ತು ಮತ್ತು ಸಾರ್ವಜನಿಕ ಆಕ್ರೋಶ ರಾಜಕೀಯದ ದಿಕ್ಕನ್ನೇ ಬದಲಾಯಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ. ಭ್ರಷ್ಟಾಚಾರದ ಆರೋಪಗಳು, ಸರ್ಕಾರಿ ಒಪ್ಪಂದಗಳ ವಿವಾದಗಳು, ನಿಯಂತ್ರಣ ಸಂಸ್ಥೆಗಳ ಬಗ್ಗೆ ಮೂಡುವ ಅನುಮಾನಗಳು ಅಥವಾ ಅಧಿಕಾರ ದುರುಪಯೋಗದ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚು ಕಾಲ ಚರ್ಚೆಗೆ ಒಳಗಾಗುತ್ತಿಲ್ಲ. ಕೆಲವೇ ದಿನಗಳಲ್ಲಿ ಅವು ಹೊಸ ಸುದ್ದಿಗಳ ಅಲೆಯ ನಡುವೆ ಮರೆಯಾಗುತ್ತವೆ. ಈ ಬದಲಾವಣೆಯ ಹಿಂದಿನ ಕಾರಣ ಕೇವಲ ಭ್ರಷ್ಟಾಚಾರ ಕಡಿಮೆಯಾಗಿದೆ ಎನ್ನುವುದಲ್ಲ. ಬದಲಾಗಿ, ಜನರ ಗಮನ ಸೆಳೆಯುವ ರಾಜಕೀಯ ಮತ್ತು ಮಾಧ್ಯಮಗಳ ಸ್ವರೂಪವೇ ಬದಲಾಗಿದೆ. ರಾಷ್ಟ್ರೀಯ ಭದ್ರತೆ, ಧರ್ಮ, ಗುರುತಿನ ರಾಜಕೀಯ, ಚುನಾವಣೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಕ್ಷಣಿಕ ಚರ್ಚೆಗಳು ಜನರ ಗಮನವನ್ನು ನಿರಂತರವಾಗಿ ಬೇರೆ ವಿಷಯಗಳತ್ತ ತಿರುಗಿಸುತ್ತಿವೆ. ಪರಿಣಾಮವಾಗಿ ಸಾರ್ವಜನಿಕ ಹಣದ ಬಳಕೆ, ಆಡಳಿತದ ಪಾರದರ್ಶಕತೆ ಮತ್ತು ಅಧಿಕಾರದ ದುರುಪಯೋಗದಂತಹ ಮೂಲಭೂತ ಪ್ರಶ್ನೆಗಳು ಹಿನ್ನೆಲೆಗೆ ಸರಿಯುತ್ತಿವೆ. ಭ್ರಷ್ಟಾಚಾರದ ಸ್ವರೂಪವೂ ಬದಲಾಗಿದೆ. ಹಿಂದೆ ಸಣ್ಣ ಮಟ್ಟದ ಲಂಚ ಅಥವಾ ವೈಯಕ್ತಿಕ ಅಕ್...

ಸೌಜನ್ಯ ಕೊಲೆ ಪ್ರಕರಣ: ನಿಷ್ಪಕ್ಷಪಾತ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ತನಿಖೆಯೇ ಅಗತ್ಯ

 ಸಂಗತ * ಬಿವಿಸೀ ಧರ್ಮಸ್ಥಳದ ಅಪ್ರಾಪ್ತ ಬಾಲಕಿ ಸೌಜನ್ಯಾ ಮೇಲೆ ನಡೆದ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣವು ಒಂದೂವರೆ ದಶಕಕ್ಕೆ ಸನಿಹ ಕಳೆದರೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕದೇ ಉಳಿದಿರುವುದು ನಮ್ಮ ತನಿಖಾ ಸಂಸ್ಥೆಗಳ ಹಾಗೂ ನ್ಯಾಯಾಂಗ ವ್ಯವಸ್ಥೆಯ ದಕ್ಷತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಇತ್ತೀಚೆಗೆ ಈ ಪ್ರಕರಣದ ಮರು ತನಿಖೆಗೆ ಆದೇಶಿಸುವ ಸುಪ್ರೀಂ ಕೋರ್ಟ್ ನಿರ್ಧಾರವು ಸಾರ್ವಜನಿಕರಲ್ಲಿ ಹೊಸ ಆಶಾವಾದವನ್ನು ಚಿಗುರಿಸಿದೆ. ಆದರೆ, ಈ ಮರು ತನಿಖೆಯು ಕೇವಲ ಮತ್ತೊಂದು ಔಪಚಾರಿಕ ಅಥವಾ ವಿಳಂಬ ನೀತಿಯ ಭಾಗವಾಗದೆ ನೈಜ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತಾಗಬೇಕಾದರೆ, ಅದನ್ನು ಸುಪ್ರೀಂ ಕೋರ್ಟ್‍ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇರ ನೇತೃತ್ವದಲ್ಲೇ ನಡೆಸುವುದು ಅತ್ಯಂತ ಅನಿವಾರ್ಯವಾಗಿದೆ. ಈ ಹಿಂದೆ ನಡೆದ ಸ್ಥಳೀಯ ಪೆÇಲೀಸ್, ಸಿಐಡಿ ಹಾಗೂ ಸಿಬಿಐ ತನಿಖೆಗಳು ಕೇವಲ ವಿಫಲವಾದವು ಎನ್ನುವುದಕ್ಕಿಂತ ಹೆಚ್ಚಾಗಿ, ಅವು ನೈಜ ಸಾಕ್ಷ್ಯಾಧಾರಗಳನ್ನು ಮರೆಮಾಚಿ, ಪ್ರಭಾವಿ ಅಪರಾಧಿಗಳನ್ನು ರಕ್ಷಿಸಲು ಯತ್ನಿಸಿದವು ಎಂಬ ಗಂಭೀರ ಆರೋಪಗಳಿವೆ. ಸುದೀರ್ಘ 13 ವರ್ಷಗಳ ತನಿಖೆಯ ನಂತರ ಪ್ರಕರಣದ ಮೂಲ ಆರೋಪಿ ಎಂದು ಬಿಂಬಿಸಲಾಗಿದ್ದ ವ್ಯಕ್ತಿಯನ್ನು ನ್ಯಾಯಾಲಯ ಸಂಪೂರ್ಣ ನಿರ್ದೋಷಿ ಎಂದು ಖುಲಾಸೆಗೊಳಿಸಿತು. ಇದರಿಂದಾಗಿ ನೈಜ ಕ್ರೂರಿಗಳು ಇಂದಿಗೂ ಸಮಾಜದಲ್ಲಿ ಸಾರ್ವಜನಿಕವಾಗಿ ಸ್ವತಂತ್ರವಾಗಿ ಓಡಾಡುತ್ತಿದ್ದು, ಸೌಜನ್ಯಾ ಕುಟುಂಬಕ್ಕೆ ನ್ಯಾಯ...

ರಾಜ್ಯ ಸರಕಾರದ ಗೌರವ: ವ್ಯಕ್ತಿಗೋ, ವಂಶಕ್ಕೋ?

 ಕೇವಿಯಟ್ * ಬಿವಿಸೀ ಪ್ರಜಾಪ್ರಭುತ್ವದಲ್ಲಿ ರಾಜ್ಯ ಗೌರವ ಎನ್ನುವುದು ಕೇವಲ ಒಂದು ಆಚರಣೆಯಲ್ಲ; ಅದು ರಾಜ್ಯವು ತನ್ನ ನಾಗರಿಕರೊಬ್ಬರ ಸಾರ್ವಜನಿಕ ಬದುಕು ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಗೆ ಸಲ್ಲಿಸುವ ಅತ್ಯುನ್ನತ ಗೌರವ. ಆದ್ದರಿಂದಲೇ ಯಾರಿಗೆ ರಾಜ್ಯ ಗೌರವ ನೀಡಬೇಕು ಎಂಬ ಪ್ರಶ್ನೆ ಭಾವನಾತ್ಮಕವಾಗಿರುವಷ್ಟೇ ಸಾಂವಿಧಾನಿಕ ಮತ್ತು ನೈತಿಕ ಪ್ರಶ್ನೆಯೂ ಆಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಗೌರವ ಸಲ್ಲಿಸಿದ್ದು, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ವತಃ ತೆರಳಿ ರಾಷ್ಟ್ರಧ್ವಜವನ್ನು ದೇವೇಗೌಡ ಅವರಿಗೆ ಹಸ್ತಾಂತರಿಸಿದ್ದು, ನಂತರ ಪೆÇಲೀಸ್ ಗೌರವ, ಬ್ಯಾಂಡ್ ವಾದನ ಸೇರಿದಂತೆ ಅಧಿಕೃತ ವಿಧಿವಿಧಾನಗಳು ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇಲ್ಲಿ ಯಾರೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಪ್ರಶ್ನೆಯಿಲ್ಲ. ಮೃತರ ಬಗ್ಗೆ ಗೌರವ ಮತ್ತು ಸಂತಾಪ ಎಲ್ಲರಿಗೂ ಸಮಾನ. ಆದರೆ ಸಾರ್ವಜನಿಕ ಹುದ್ದೆ, ಸಾರ್ವಜನಿಕ ಸೇವೆ ಮತ್ತು ರಾಜ್ಯ ಗೌರವಗಳ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಎತ್ತುವುದು ಪ್ರಜಾಪ್ರಭುತ್ವದಲ್ಲಿ ನಾಗರಿಕರ ಕರ್ತವ್ಯ. ಚೆನ್ನಮ್ಮ ಅವರು ತಮ್ಮ ಕುಟುಂಬದ ಆಧಾರಸ್ತಂಭರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಮಾಜಿ ಪ್ರಧಾನಿಯ ಬದುಕಿನಲ್ಲಿ ಅವರು ವಹಿಸಿದ ಪಾತ್ರವೂ ಕುಟುಂಬದ ದೃಷ್ಟಿಯಿಂದ ಮಹತ್ವದ್ದೇ ಆಗಿರಬಹುದು. ಆದರೆ ರಾಜ್ಯ ಗೌರವವ...

ರಾಜ್ಯದಲ್ಲಿ ಪ್ರಕರಣ ಹಿಂಪಡೆಯುವ ರಾಜಕಾರಣ: ನ್ಯಾಯದ ತಕ್ಕಡಿ ಅಧಿಕಾರದ ಕಡೆ ವಾಲಿದಾಗ

 * ಬಿವಿಸೀ ರಾಜ್ಯ ಸರ್ಕಾರಗಳು ಕೆಲವೊಮ್ಮೆ ರಾಜಕೀಯ ಹೋರಾಟಗಳು, ಪ್ರತಿಭಟನೆಗಳು ಅಥವಾ ಸಾರ್ವಜನಿಕ ಚಳವಳಿಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳುತ್ತವೆ. ಮೇಲ್ನೋಟಕ್ಕೆ ಇದು ರಾಜಕೀಯ ಪ್ರತೀಕಾರದಿಂದ ದಾಖಲಾದ ಪ್ರಕರಣಗಳನ್ನು ರದ್ದುಪಡಿಸುವ ಪ್ರಯತ್ನದಂತೆ ಕಾಣಬಹುದು. ಆದರೆ ಇಂತಹ ನಿರ್ಧಾರಗಳು ಗಂಭೀರ ಅಪರಾಧಗಳನ್ನೂ ಒಳಗೊಂಡಾಗ, ಅದು ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಪರಿಸ್ಥಿತಿ ಉಂಟಾಗುತ್ತದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇದೇ ವಿಷಯ ಮತ್ತೊಮ್ಮೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕಾನೂನಿನ ಪ್ರಕಾರ ಅಪರಾಧ ಪ್ರಕರಣವನ್ನು ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಸಂಪೂರ್ಣವಾಗಿ ನಿರಂಕುಶವಾಗಿ ಇರುವುದಿಲ್ಲ. ಸಾರ್ವಜನಿಕ ಅಭಿಯೋಜಕರು ನ್ಯಾಯಾಲಯದ ಅನುಮತಿ ಪಡೆದು ಮಾತ್ರ ಪ್ರಕರಣ ಹಿಂಪಡೆಯಲು ಮುಂದಾಗಬಹುದು. ಸರ್ಕಾರದ ಇಚ್ಛೆಯೇ ಅಂತಿಮ ತೀರ್ಮಾನವಾಗಬಾರದು ಎಂಬ ಉದ್ದೇಶದಿಂದಲೇ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ, ನ್ಯಾಯದ ಅಗತ್ಯ ಮತ್ತು ಸಾಕ್ಷ್ಯಾಧಾರಗಳ ಸ್ಥಿತಿಯನ್ನು ಪರಿಗಣಿಸಿದ ಬಳಿಕವೇ ನ್ಯಾಯಾಲಯ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಆದರೆ ರಾಜಕೀಯದಲ್ಲಿ ಈ ಅಧಿಕಾರವನ್ನು ಹಲವಾರು ಬಾರಿ ಬಹುಮಾನ ಅಥವಾ ಪ್ರತಿಫಲದ ಸಾಧನವಾಗಿ ಬಳಸುವ ಆರೋಪಗಳು ಕೇಳಿಬರುತ್ತವೆ. ಆಡಳಿತಕ್ಕೆ ಬೆಂಬಲ ನೀಡಿದವರು, ಪಕ್ಷದ ಕಾರ್ಯಕರ್ತರು ಅಥವಾ ನಿರ್ದಿಷ್ಟ ರಾಜಕೀಯ ಗುಂಪು...

ಭಾರತದ ಪ್ರವಾಸೋದ್ಯಮದ ವಿರೋಧಾಭಾಸ

 ದೊಡ್ಡ ಭರವಸೆಗಳು, ಕಳಪೆ ಅನುಷ್ಠಾನ ಹೇಳಲೇಬೇಕಾಗಿದ್ದು * ಬಿವಿಸೀ ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಹಿಮಾಲಯದ ಹಿಮಶಿಖರಗಳಿಂದ ಹಿಡಿದು ಕನ್ಯಾಕುಮಾರಿಯ ಕಡಲತೀರಗಳವರೆಗೆ, ಪುರಾತನ ದೇವಾಲಯಗಳಿಂದ ಹಿಡಿದು ಆಧುನಿಕ ನಗರಗಳವರೆಗೆ, ಕಾಡುಗಳು, ವನ್ಯಜೀವಿಗಳು, ಸಂಸ್ಕøತಿ, ಆಹಾರ ವೈವಿಧ್ಯ ಮತ್ತು ಹಬ್ಬಗಳ ಶ್ರೀಮಂತಿಕೆಯನ್ನು ಹೊಂದಿರುವ ದೇಶವಾಗಿ ಭಾರತಕ್ಕೆ ಅಪಾರ ಪ್ರವಾಸೋದ್ಯಮ ಸಾಮಥ್ರ್ಯವಿದೆ. ಆದರೆ ಈ ಸಾಮಥ್ರ್ಯವನ್ನು ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ದೇಶ ಇನ್ನೂ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಇದೇ ಭಾರತದ ಪ್ರವಾಸೋದ್ಯಮದ ದೊಡ್ಡ ವಿರೋಧಾಭಾಸವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಭರವಸೆಗಳನ್ನು ನೀಡುತ್ತವೆ. ಹೊಸ ಯೋಜನೆಗಳು, ಪರಂಪರೆ ತಾಣಗಳ ಅಭಿವೃದ್ಧಿ, ಧಾರ್ಮಿಕ ಪ್ರವಾಸೋದ್ಯಮ, ಕಡಲತೀರ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಘೋಷಿಸಲಾಗುತ್ತದೆ. ಆದರೆ ನೆಲಮಟ್ಟದಲ್ಲಿ ಪ್ರವಾಸಿಗರು ಎದುರಿಸುವ ಅನುಭವಗಳು ಈ ಘೋಷಣೆಗಳಿಗೆ ತಕ್ಕಂತೆ ಇರುವುದಿಲ್ಲ. ದೇಶದ ಅನೇಕ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯದ ಕೊರತೆ ಇನ್ನೂ ಕಾಡುತ್ತಿದೆ. ರಸ್ತೆಗಳು ಹಾಳಾಗಿರುವುದು, ಸಾರ್ವಜನಿಕ ಶೌಚಾಲಯಗಳ ಅಭಾವ, ಕುಡಿಯುವ ನೀರಿನ ಸೌಲಭ್ಯಗಳ ಕೊರತೆ, ಕಸ...

ದಲಿತರ ಭೂಕಬಳಿಕೆ ತನಿಖೆ: ಶ್ರೀ ರವಿಶಂಕರ್ ಗುರೂಜಿಗೆ ಎಸ್‍ಐಟಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಗೇಕೆ ವಿನಾಯಿತಿ?

 ಖುಲ್ಲಂಖುಲ್ಲಾ * ಬಿವಿಸೀ ರವಿಶಂಕರ್ ಗುರೂಜಿ ನೇತೃತ್ವದ `ಆರ್ಟ್ ಆಫ್ ಲಿವಿಂಗ್' ಸಂಸ್ಥೆಯು ದಲಿತರ ಮತ್ತು ಸರ್ಕಾರದ ನೂರಾರು ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂಬ ಗಂಭೀರ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ಅತ್ಯಂತ ಪ್ರಶಂಸನೀಯ. ಕಾನೂನು ಎಲ್ಲರಿಗೂ ಒಂದೇ, ಅದು ಪ್ರಭಾವಿ ಧರ್ಮಗುರುವೇ ಆಗಿರಲಿ ಅಥವಾ ಸಾಮಾನ್ಯ ಪ್ರಜೆಯೇ ಆಗಿರಲಿ, ಅಕ್ರಮಗಳನ್ನು ಬಯಲಿಗೆಳೆಯುವುದು ಸರ್ಕಾರದ ಆಡಳಿತಾತ್ಮಕ ಕರ್ತವ್ಯ. ಕಂದಾಯ ಸಚಿವರು ದಲಿತ ನಾಯಕರ ಸಭೆಯಲ್ಲಿ ಈ ದಿಟ್ಟ ನಿರ್ಧಾರ ಪ್ರಕಟಿಸಿ ಸಾರ್ವಜನಿಕರ ಶಹಬಾಸ್‍ಗಿರಿ ಪಡೆದಿದ್ದಾರೆ. ಆದರೆ, ಇಲ್ಲೊಂದು ಯಕ್ಷಪ್ರಶ್ನೆ ಉದ್ಭವಿಸುತ್ತದೆ -  ರವಿಶಂಕರ್ ಅವರಿಗೆ ಅನ್ವಯವಾಗುವ ಈ ಕಾನೂನಿನ ಪಾವಿತ್ರ್ಯತೆ ಮತ್ತು ತನಿಖೆಯ ಉತ್ಸಾಹ, `ನಡೆದಾಡುವ ದೇವರು' ಎಂದೇ ಬಿಂಬಿತರಾಗಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಮೇಲಿರುವ ದಲಿತರ ಜಮೀನು ಒತ್ತುವರಿ ಆರೋಪಗಳ ವಿಷಯದಲ್ಲಿ ಏಕೆ ಮೌನವಾಗುತ್ತದೆ? ನಾಗರಿಕ ಸೇವಾ ಟ್ರಸ್ಟ್ ಸುದೀರ್ಘ ಕಾಲದಿಂದ ಹೆಗ್ಗಡೆ ಕುಟುಂಬದ ಭೂಕಬಳಿಕೆ ಮತ್ತು ದಲಿತರ ಜಮೀನು ಕಸಿದುಕೊಂಡ ಪ್ರಕರಣಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಬಂದಿದೆ. ಈ ಸಂಬಂಧ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರ ನ್ಯಾಯಾಲಯ ನೀಡಿದ ಮಹತ್ವದ ತೀರ್ಪು ಹೆಗ್ಗಡೆ ಕುಟುಂಬದ ಅಕ್ರಮಗಳನ್ನು ಈಗಾಗಲೇ ಬೆತ್ತಲೆಗೊಳಿಸಿದೆ. ಅ...

ಬ್ಯಾಂಕ್‍ಗಳ ವಿಲೀನ: ಗಾತ್ರ ಹೆಚ್ಚಿದರೆ ಬ್ಯಾಂಕಿಂಗ್ ವ್ಯವಸ್ಥೆ ಬಲಗೊಳ್ಳುವುದೇ?

 ನಮ್ಮ ಕರಾವಳಿಯ ರಾಷ್ಟ್ರೀಕೃತ ಕಾರ್ಪೊರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಖ್ ವಿಲೀನಕ್ಕೆ ಬಲಿಯಾದವು. ಯಾರಿಗೇನು ಪ್ರಯೋಜನವಾಯಿತು? ................. ಖುಲ್ಲಂಖುಲ್ಲಾ * ಬಿವಿಸೀ  ಸಾರ್ವಜನಿಕ ವಲಯದ ಬ್ಯಾಂಕ್‍ಗಳ ವಿಲೀನವನ್ನು ಸಾಮಾನ್ಯವಾಗಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಯ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗುತ್ತದೆ. ದೊಡ್ಡ ಬ್ಯಾಂಕ್‍ಗಳು ಹೆಚ್ಚು ಬಂಡವಾಳ ಹೊಂದಿರುತ್ತವೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲವು ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡಬಲ್ಲವು ಎಂಬ ವಾದವನ್ನು ಮುಂದಿಡಲಾಗುತ್ತದೆ. ಆದರೆ ಬ್ಯಾಂಕಿಂಗ್ ಕ್ಷೇತ್ರದ ಅನುಭವವನ್ನು ಗಮನಿಸಿದರೆ, ಬ್ಯಾಂಕ್‍ಗಳ ಗಾತ್ರ ಹೆಚ್ಚುವುದರಿಂದ ಮಾತ್ರ ಅವುಗಳ ಕಾರ್ಯಕ್ಷಮತೆ ಮತ್ತು ಹಣಕಾಸಿನ ಆರೋಗ್ಯ ಸುಧಾರಿಸುತ್ತದೆ ಎನ್ನುವುದು ಖಚಿತವಲ್ಲ. ಸಮಸ್ಯೆಯ ಮೂಲವನ್ನು ಸ್ಪರ್ಶಿಸದ ವಿಲೀನಗಳು ಹಲವು ಬಾರಿ ಕೇವಲ ಆಡಳಿತಾತ್ಮಕ ಬದಲಾವಣೆಯಾಗಿಯೇ ಉಳಿಯುತ್ತವೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಮುಖ ಸವಾಲು ಬ್ಯಾಂಕ್‍ಗಳ ಸಂಖ್ಯೆಯಲ್ಲ. ದುರ್ಬಲ ಆಡಳಿತ, ಸಾಲ ಮಂಜೂರಾತಿಯಲ್ಲಿನ ಲೋಪಗಳು, ಅಪಾಯವನ್ನು ಸರಿಯಾಗಿ ಅಂದಾಜಿಸದಿರುವುದು, ರಾಜಕೀಯ ಹಾಗೂ ಇತರ ಪ್ರಭಾವಗಳಿಂದ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಸಮರ್ಪಕ ಮೇಲ್ವಿಚಾರಣೆಯ ಕೊರತೆಯೇ ಅನೇಕ ಬ್ಯಾಂಕ್‍ಗಳನ್ನು ಸಂಕಷ್ಟಕ್ಕೆ ತಳ್ಳಿವೆ. ಇಂತಹ ಪರಿಸ್ಥಿತಿಯಲ್ಲಿ ಎರಡು ಅಥವಾ ಮೂರು ಬ್ಯಾಂಕ್‍ಗಳನ್ನು ...

ಇಂಗ್ಲಿಷ್ ಭಾರತೀಯ ಭಾಷೆಯೇ?

ಸುಪ್ರೀಂ ಪ್ರಶ್ನೆಯ ಹಿಂದಿನ ಸವಾಲಿನ ಚಿಂತನೆ * ಬಿವಿಸೀ ಒಂದು ಕಾಲದಲ್ಲಿ ಆಳ್ವಿಕೆಯ ಸಂಕೇತವಾಗಿದ್ದ ಇಂಗ್ಲಿಷ್, ಇಂದು ಭಾರತೀಯತೆಯ ಭಾಗವಾಗಿದೆಯೇ? ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಳಿರುವ ಈ ಪ್ರಶ್ನೆ ಕೇವಲ ಭಾಷೆಯ ಚರ್ಚೆಯಲ್ಲ. ಅದು ಭಾರತದ ಇತಿಹಾಸ, ಸಂವಿಧಾನ, ಶಿಕ್ಷಣ ನೀತಿ, ಸಾಂಸ್ಕøತಿಕ ಅಸ್ಮಿತೆ ಮತ್ತು ಭವಿಷ್ಯದ ಭಾಷಾ ರಾಜಕಾರಣದ ಕುರಿತ ವಿಶಾಲವಾದ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಭಾಷೆಯ ಜನ್ಮಸ್ಥಳ ಮುಖ್ಯವೇ, ಅಥವಾ ಅದನ್ನು ಬದುಕಿಸಿದ ಜನರ ಸ್ವೀಕಾರ ಮುಖ್ಯವೇ ಎಂಬ ಮೂಲ ಪ್ರಶ್ನೆಯನ್ನು ಈ ಚರ್ಚೆ ನಮ್ಮ ಮುಂದೆ ಇಟ್ಟಿದೆ. ಮೂರು ಭಾಷಾ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಇಂಗ್ಲಿಷ್ ಅನ್ನು ಇನ್ನೂ 'ವಿದೇಶಿ' ಅಥವಾ 'ಸ್ಥಳೀಯವಲ್ಲದ' ಭಾಷೆ ಎಂದು ನೋಡುವುದು ಎಷ್ಟರಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಎತ್ತಿತು. ಎರಡು ಶತಮಾನಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಬಳಕೆಯಲ್ಲಿರುವ ಭಾಷೆಯನ್ನು ಅದರ ವಸಾಹತುಶಾಹಿ ಹಿನ್ನೆಲೆಯ ಕಾರಣಕ್ಕೆ ಮಾತ್ರ ಪರಿಗಣಿಸಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದು ಅಂತಿಮ ತೀರ್ಪಲ್ಲದಿದ್ದರೂ, ದೇಶದ ಭಾಷಾ ನೀತಿಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ. ಇಂಗ್ಲಿಷ್ ಈಗ ಭಾರತೀಯ ಜೀವನದ ಪ್ರತಿಯೊಂದು ಪ್ರಮುಖ ಕ್ಷೇತ್ರದಲ್ಲೂ ತನ್ನ ಸ್ಥಾನವನ್ನು ಗಟ್ಟಿಯಾಗಿ ಪಡೆದುಕೊಂಡಿದೆ. ನ್ಯಾಯಾಂಗ, ಆಡಳಿತ, ಉನ್ನತ ಶಿಕ್ಷಣ, ವೈದ್ಯಕೀಯ, ವಿಜ್ಞಾನ, ಮಾಹಿತಿ ತಂ...

ಕೇಂದ್ರ ಸರಕಾರ ಅಧೀನದ ಒಎನ್‍ಜಿಸಿ ಕಂಪೆನಿಯ 668 ಕೋಟಿ ರೂ ದೇಣಿಗೆ ಆರೆಸ್ಸೆಸ್ ಸಂಸ್ಥೆಗಳಿಗೆ

 ನವದೆಹಲಿ: ಕೇಂದ್ರ ಸರ್ಕಾರದ ಸ್ವಾಮ್ಯದ ತೈಲ ಮತ್ತು ಅನಿಲ ಮಹಾ ಸಂಸ್ಥೆ ಒಎನ್‍ಜಿಸಿ (ಇದು ಮಂಗೂಳೂರಿನಲ್ಲಿ ಎಂಆರ್‍ಪಿಎಲ್ ತೈಲ ಉತ್ಪಾದನಾ ಘಟಕವನ್ನು ನಡೆಸುತ್ತಿದೆ) ಕಳೆದ ಹತ್ತು ವರ್ಷಗಳಲ್ಲಿ ತನ್ನ ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ನಿಧಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿವೆ ಎಂದು ಹೇಳಲಾಗಿರುವ 20 ಸಂಸ್ಥೆಗಳಿಗೆ ಒಟ್ಟು 668.01 ಕೋಟಿ ರೂಪಾಯಿಗಳನ್ನು ನೀಡಿದೆ ಎಂಬ ಆರೋಪ ಹೊಸ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರಕಟವಾದ ತನಿಖಾ ವರದಿ ಹುಬ್ಬೇರಿಸಿದೆ. ವರದಿಯ ಪ್ರಕಾರ, 2015ರಿಂದ 2025ರ ಅವಧಿಯಲ್ಲಿ ಒಎನ್‍ಜಿಸಿ ತನ್ನ ಸಿಎಸ್‍ಆರ್ ಕಾರ್ಯಕ್ರಮಗಳಡಿ ಸುಮಾರು 4,531 ಕೋಟಿ ರೂಪಾಯಿಗಳನ್ನು ಎರಡು ಸಾವಿರಕ್ಕೂ ಹೆಚ್ಚು ಯೋಜನೆಗಳು ಮತ್ತು ಸಂಸ್ಥೆಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಸುಮಾರು 14.7 ಶೇಕಡಾ, ಅಂದರೆ 668.01 ಕೋಟಿ ರೂಪಾಯಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಂಟು ಹೊಂದಿವೆ ಎಂದು ಹೇಳಲಾಗಿರುವ 20 ಸಂಸ್ಥೆಗಳಿಗೆ ಸಂದಿವೆ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ. ಪಟ್ಟಿಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸೇವಾ ಚಟುವಟಿಕೆಗಳು, ಆದಿವಾಸಿ ಕಲ್ಯಾಣ ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಟ್ರಸ್ಟ್‍ಗಳು ಮತ್ತು ಸಂಘಟನೆಗಳ ಹೆಸರುಗಳಿವೆ. ಇವುಗಳು ಪ್ರತ್ಯೇಕವಾಗಿ ನೋಂದಾಯಿತ ಸಂಸ್ಥೆಗಳಾಗಿದ್ದರೂ...

ಧಮೇರ್ಂದ್ರ ಪ್ರಧಾನರ ರಾಜೀನಾಮೆ ಪಿಎಂ ಮೋದಿ ಏಕೆ ಕೇಳುತ್ತಿಲ್ಲ?

ನೇರಾನೇರ * ಬಿವಿಸೀ ನೀಟ್ ಪರೀಕ್ಷಾ ಅಕ್ರಮ, ವಿಶ್ವವಿದ್ಯಾಲಯ ಅನುದಾನ ಆಯೋಗದ ಪರೀಕ್ಷಾ ಗೊಂದಲ, ಸಿಬಿಎಸ್‍ಇ ಮೌಲ್ಯಮಾಪನದ ವಿವಾದ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದಾಗಿ ವಿವಾದಗಳು ಸಿಡಿಯುತ್ತಿದ್ದರೂ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ ಅವರ ರಾಜೀನಾಮೆ ಕೇಳಿಬರುತ್ತಿಲ್ಲ. ಹಿಂದಿನ ದಶಕಗಳಲ್ಲಿ ಇಂತಹ ಸಂದರ್ಭಗಳಲ್ಲಿ ಸಚಿವರು ನೈತಿಕ ಹೊಣೆ ಹೊತ್ತು ಸ್ಥಾನ ತ್ಯಜಿಸುತ್ತಿದ್ದರೆ, ಈಗ ಅದೇ ರಾಜಕೀಯ ಸಂಪ್ರದಾಯ ಕಾಣಿಸುತ್ತಿಲ್ಲ.  ಹಲವಾರು ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಪೆÇೀಷಕರ ಸಂಘಗಳು ಸಚಿವರ ರಾಜೀನಾಮೆಗೆ ಒತ್ತಾಯಿಸಿವೆ. ಆದಾಗ್ಯೂ, ಕೇಂದ್ರ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆಡಳಿತ ಪಕ್ಷದ ದೃಷ್ಟಿಯಲ್ಲಿ ಕೇವಲ ಆರೋಪಗಳು ಅಥವಾ ಆಡಳಿತಾತ್ಮಕ ವೈಫಲ್ಯಗಳ ಆಧಾರದ ಮೇಲೆ ಸಚಿವರನ್ನು ಬದಲಿಸುವುದು ಸೂಕ್ತವಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ. ಭಾರತೀಯ ರಾಜಕೀಯದಲ್ಲಿ ಒಂದು ಕಾಲದಲ್ಲಿ ನೈತಿಕ ಹೊಣೆಗಾರಿಕೆಯ ಪರಂಪರೆ ಇತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ರೈಲು ಅಪಘಾತದ ಬಳಿಕ ರಾಜೀನಾಮೆ ನೀಡಿದ್ದರು. ಎ ರಾಜಾ, ಅಶೋಕ್ ಚವಾಣ್ ಸೇರಿದಂತೆ ಹಲವು ಸಚಿವರು ತನಿಖೆ ನಡೆಯುವ ಸಂದರ್ಭದಲ್ಲೇ ಹುದ್ದೆ ತೊರೆದ ಉದಾಹರಣೆಗಳಿವೆ. ರಾಜೀನಾಮೆ ಅಪರಾಧ ಸಾಬೀತಾಗಿದೆ ಎಂಬುದರ ಸಂಕೇತವಲ್ಲ; ತನಿಖೆ ನಿರಾತಂಕವಾಗಿ ನಡೆಯಲು ಮತ್ತು ಸರ್ಕಾರದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಕೈಗೊಳ್ಳುವ ...

ದಿಲ್ಲಿ ಗದ್ದುಗೆಯ ಮುಂದೆ ಸಾಷ್ಟಾಂಗವೆರಗಿದ ಕನ್ನಡ ಸ್ವಾಭಿಮಾನ

 ಸಚಿವ ಸಂಪುಟದ ವಿಸ್ತರಣೆಗೆ ಅನುಮತಿ ನೆಪದಲ್ಲಿ ಆಡಳಿತಕ್ಕೇ ಪಕ್ಷವಾತ! ಪ್ರಚಲಿತ * ಬಿವಿಸೀ ಕರ್ನಾಟಕದ ಸಚಿವ ಸಂಪುಟ ವಿಸ್ತರಣೆಯ ಸುತ್ತ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ನಾಟಕವು ಕೇವಲ ಒಂದು ವಾಡಿಕೆಯ ಆಡಳಿತಾತ್ಮಕ ಪ್ರಕ್ರಿಯೆಯಾಗಿ ಉಳಿದಿಲ್ಲ; ಅದೊಂದು ಅತ್ಯಂತ ಕೆಳಮಟ್ಟದ ಹಾಗೂ ಲಜ್ಜೆಗೆಟ್ಟ ಪ್ರಹಸನವಾಗಿ ಮಾರ್ಪಟ್ಟಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯವು ಕೇವಲ ಹದಿಮೂರು ಸಚಿವರನ್ನು ಒಳಗೊಂಡ ಒಂದು ಕುಂಠಿತ ಅಸ್ಥಿಪಂಜರ ಸದೃಶ ಸರ್ಕಾರವನ್ನು ಅತ್ಯಂತ ಕಷ್ಟದಿಂದ ಹೊತ್ತು ಸಾಗುತ್ತಿದೆ. ಮೂವತ್ತಕ್ಕೂ ಹೆಚ್ಚು ಸಚಿವರ ಅಗತ್ಯವಿರುವ ಜಾಗದಲ್ಲಿ ಈ ಅತ್ಯಂತ ಕಿರಿದಾದ ಅಲ್ಪ ಸಂಖ್ಯಾತ ತಂಡ ಇಡೀ ರಾಜ್ಯದ ಹಣೆಬರಹವನ್ನು ಮತ್ತು ಆಡಳಿತ ಯಂತ್ರವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ನೇರ ಪರಿಣಾಮವಾಗಿ ಪ್ರಮುಖ ಸರ್ಕಾರಿ ಇಲಾಖೆಗಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿವೆ, ನೂರಾರು ಮಹತ್ವದ ಆಡಳಿತ ಕಡತಗಳು ಧೂಳು ಹಿಡಿಯುತ್ತಿವೆ, ಮತ್ತು ಒಟ್ಟಾರೆ ಆಡಳಿತ ವ್ಯವಸ್ಥೆಯು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದೆ ಸಂಪೂರ್ಣವಾಗಿ ಲಕ್ವಕ್ಕೆ ತುತ್ತಾಗಿ ನಿಶ್ಚಲವಾಗಿದೆ. ಈ ಗಂಭೀರವಾದ ಜನವಿರೋಧಿ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಬದಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್‍ನ ಉನ್ನತ ನಾಯಕರು ಮತ್ತು ಶಾಸಕರ ದಂಡು ನವದೆಹಲಿಗೆ ಕಡ್ಡಾಯವಾಗಿ ದಂಡಪ್ರಣಾ...

ಮಾಧ್ಯಮ ಸಲಹೆಗಾರರ ಹೊಣೆ ಮತ್ತು ವಾರ್ತಾ ಇಲಾಖೆಯ ಸುಧಾರಣೆ

 * ಬಿವಿಸೀ ಕರ್ನಾಟಕದ ಮುಖ್ಯಮಂತ್ರಿ ಮೂವರು ಮಾಧ್ಯಮ ಸಲಹೆಗಾರರನ್ನು ನೇಮಿಸಿಕೊಂಡ ಬೆನ್ನಲ್ಲೇ ಅವರಲ್ಲೊಬ್ಬರನ್ನು ಹಳೆಯ ಸಾಮಾಜಿಕ ಜಾಲತಾಣದ ಪೆÇೀಸ್ಟ್ ಒಂದರ ಕಾರಣಕ್ಕೆ ಹುದ್ದೆಯಿಂದ ಮುಕ್ತಗೊಳಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಇಬ್ಬರು ಮಾಧ್ಯಮ ಸಲಹೆಗಾರರು ಕಾರ್ಯನಿರ್ವಹಿಸುತ್ತಿದ್ದರೂ, ಸಾರ್ವಜನಿಕ ವಲಯದಲ್ಲಿ ಮುಖ್ಯಮಂತ್ರಿಗಳ ಈ ಕ್ರಮವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವು ಮುಖ್ಯಮಂತ್ರಿಗಳಿಗೆ ಮಾಧ್ಯಮ ಸಲಹೆಗಾರರೇ ಇದ್ದಿರಲಿಲ್ಲ. ಇನ್ನು ಕೆಲವರಿಗೆ ಕೇವಲ ಒಬ್ಬರೇ ಇದ್ದರು. ಆದರೆ ಇಬ್ಬರು ಸಲಹೆಗಾರರಿದ್ದರೂ ಅವರ ಅಧಿಕಾರ ಮತ್ತು ಜವಾಬ್ದಾರಿಗಳ ವ್ಯಾಪ್ತಿ ಏನು ಎಂಬುದು ಜನರಿಗಾಗಲಿ ಅಥವಾ ಮಾಧ್ಯಮ ರಂಗದವರಿಗಾಗಲಿ ಸ್ಪಷ್ಟವಾಗಿಲ್ಲ. ಈ ಇಬ್ಬರಲ್ಲಿ ಯಾರು ಯಾವ ಜವಾಬ್ದಾರಿಯನ್ನು ಹೊರಲಿದ್ದಾರೆ ಎಂಬ ಅಧಿಕೃತ ಮಾಹಿತಿಯನ್ನು ಮುಖ್ಯಮಂತ್ರಿಗಳೂ ನೀಡಿಲ್ಲ. ಈ ನಿಗೂಢತೆ ಮತ್ತು ಅಸ್ಪಷ್ಟತೆಯು ಅನಗತ್ಯ ಗೊಂದಲಗಳಿಗೆ ಕಾರಣವಾಗಿದೆ. ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು (ಡಿಐಪಿ) ಸದ್ಯ ಐಪಿಎಸ್ ಶ್ರೇಣಿಯ ಆಯುಕ್ತರು ಮತ್ತು ಐಎಎಸ್ ದರ್ಜೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇಷ್ಟೊಂದು ದೊಡ್ಡ ವ್ಯವಸ್ಥೆಯನ್ನು ಹೊಂದಿದ್ದರೂ, ಅದರ ಕಾರ್ಯವೈಖರಿ ಮಾತ್ರ ಅಪೇಕ್ಷಿತವೆನಿಸಿದೆ. ಈ ಇಲಾಖೆಯು ಮಾಧ್ಯಮಸ್ನೇಹಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಮಾಧ್ಯಮ ಮಂದಿ ಹೇಳುವ ಮಾತು. ಮಾಧ್ಯಮ ಪ್ರತಿನಿಧಿಗಳು...

ಉಡುಪಿ-ಮಂಗಳೂರು-ಕಾಸರಗೋಡು ಮೆಟ್ರೋ: ಕರಾವಳಿಯ ಬಹುಕಾಲದ ಕನಸು ನನಸಾಗಲಿ

 ಅಭಿವೃದ್ಧಿಗಾಗಿ * ಬಿವಿಸೀ ಮಂಗಳೂರು ಇಂದು ಕೇವಲ ಒಂದು ನಗರವಲ್ಲ; ಅದು ಕರಾವಳಿ ಕರ್ನಾಟಕದ ಆರ್ಥಿಕ ಹೃದಯ. ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ, ಕೈಗಾರಿಕೆ, ವಾಣಿಜ್ಯ, ಬಂದರು ಚಟುವಟಿಕೆ ಮತ್ತು ವಿದೇಶಿ ಉದ್ಯೋಗಗಳ ಮೂಲಕ ವಿಶ್ವದ ಗಮನ ಸೆಳೆದಿರುವ ಈ ನಗರ, ದೇಶದ ಅಭಿವೃದ್ಧಿ ನಕ್ಷೆಯಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದೆ. ಭಾರತದ ವಿವಿಧ ರಾಜ್ಯಗಳಲ್ಲಷ್ಟೇ ಅಲ್ಲ, ಮಧ್ಯಪ್ರಾಚ್ಯ, ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಅನೇಕ ದೇಶಗಳಲ್ಲಿ ಮಂಗಳೂರಿನ ಮೂಲದ ಉದ್ಯಮಿಗಳು, ವೈದ್ಯರು, ಇಂಜಿನಿಯರ್‍ಗಳು ಮತ್ತು ವೃತ್ತಿಪರರು ಯಶಸ್ಸಿನ ಕಥೆಗಳನ್ನು ನಿರ್ಮಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳ ಇತಿಹಾಸದಲ್ಲೂ ಮಂಗಳೂರು ವಿಶಿಷ್ಟ ಸ್ಥಾನ ಪಡೆದಿದೆ. ಪ್ರತಿಷ್ಠಿತ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಆಗಮಿಸುತ್ತಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎರಡು ಪ್ರಮುಖ ರೈಲು ನಿಲ್ದಾಣಗಳು, ನವ ಮಂಗಳೂರು ಬಂದರು, ಮೀನುಗಾರಿಕಾ ಬಂದರು, ಕೈಗಾರಿಕಾ ವಲಯಗಳು ಹಾಗೂ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ಮಂಗಳೂರಿನ ಬೆಳವಣಿಗೆಗೆ ಬಲವಾದ ಅಡಿಪಾಯವಾಗಿವೆ. ಇದರ ಜೊತೆಗೆ ಉಡುಪಿ ಮತ್ತು ಕಾಸರಗೋಡು ನಗರಗಳು ಇಂದು ಮಂಗಳೂರಿನೊಂದಿಗೆ ಆರ್ಥಿಕವಾಗಿ ಒಂದೇ ಜೀವನಾಡಿಯಂತೆ ಬೆಸೆದುಕೊಂಡಿವೆ. ಈ ಮೂರು ನಗರಗಳ ನಡುವಿನ ಸುಮಾರು 140 ಕಿಲೋಮೀಟ...

The Illusion of Indispensability: Why Political Parties Ignore Public Perception at Their Own Peril

  BVSee Perception is the ultimate currency in modern politics, a truth repeatedly demonstrated across both regional and national arenas. Political parties often fall into the trap of assuming electoral mandates are permanent, only to be abruptly corrected by an observant electorate. This lesson was driven home in Karnataka when the previous Bharatiya Janata Party (BJP) administration by lame-duck Basavaraj Bommai, weighed down by public dissatisfaction over perceived maladministration and corruption, was voted out in favor of the Congress party. Yet, history repeats itself with remarkable speed. The current Congress administration, led by former Chief Minister Siddaramaiah and now Chief Minister DK Shivakumar, is finding itself entangled in similar governance crises. For the average citizen, the distinction between alternating regimes is rapidly blurring. Congress’s apparent emphasis on structural caste divisions has increasingly been viewed as a polarizing tactic, alienating vote...

ಮಾತು ಕಡಿಮೆ ಮಾಡಿದರೆ, ನಿಮಗೂ ಗೌರವ, ರಾಜಕೀಯಕ್ಕೂ ಮರ್ಯಾದೆ !

 ಕರ್ನಾಟಕದ ರಾಜಕೀಯದಲ್ಲಿ ಇಂದು ಅತಿ ದೊಡ್ಡ ಮಾಲಿನ್ಯ ಯಾವುದು ಎಂದು ಕೇಳಿದರೆ ಉತ್ತರ ಒಂದೇ - ಮಾತಿನ ಮಾಲಿನ್ಯ. ಧೂಳು, ಹೊಗೆ, ಶಬ್ದ ಮಾಲಿನ್ಯಗಳಂತೆ ಈಗ ರಾಜಕೀಯವೂ ಅತಿಯಾದ ಹೇಳಿಕೆಗಳ ಮಾಲಿನ್ಯದಿಂದ ನರಳುತ್ತಿದೆ. ಯಾರೂ ಕೇಳದ ಪ್ರಶ್ನೆಗೆ ಉತ್ತರ, ಯಾರೂ ಕೇಳದ ವಿಷಯಕ್ಕೆ ಪ್ರತಿಕ್ರಿಯೆ, ತಮ್ಮ ವ್ಯಾಪ್ತಿಗೆ ಸಂಬಂಧಿಸದ ವಿಚಾರಕ್ಕೂ ಅಭಿಪ್ರಾಯ - ಇದೇ ನಮ್ಮ ರಾಜಕಾರಣಿಗಳಿಗೆ ಬಡಿದ ವ್ಯಾಧಿ, ದೈನಂದಿನ ವ್ಯಸನ. ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ಪರಿಸ್ಥಿತಿ ಒಂದೇ. ಬಿಜೆಪಿ-ಜೆಡಿಎಸ್‍ದಲ್ಲಿ ಎಚ್ ಡಿ ಕುಮಾರಸ್ವಾಮಿ, ಬಿಜೆಪಿಯಲ್ಲಿ ಆರ್ ಅಶೋಕ್, ಬಿ ವೈ ವಿಜಯೇಂದ್ರ, ಚಲವಾದಿ ನಾರಾಯಣಸ್ವಾಮಿ, ಪ್ರತಾಪ್ ಸಿಂಹ, ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಹಲವರು ಪ್ರತಿದಿನ ಒಂದಲ್ಲೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಪ್ರತಿಯೊಬ್ಬರೂ ಪಕ್ಷದ ಅಧಿಕೃತ ಧ್ವನಿಯಂತೆ ಮಾತನಾಡುತ್ತಾರೆ. ಪಕ್ಷದ ನಿಲುವು ಯಾವುದು, ವೈಯಕ್ತಿಕ ಅಭಿಪ್ರಾಯ ಯಾವುದು ಎಂಬ ಗಡಿ ಮಸುಕಾಗಿಬಿಟ್ಟಿದೆ. ಇತ್ತ ಆಡಳಿತ ಪಕ್ಷದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕೆಲ ಸಚಿವರು, ಕೆಲ ಶಾಸಕರು, ಕೆಲ ನಾಯಕರು - ಎಲ್ಲರೂ ಕ್ಯಾಮೆರಾ ಕಂಡರೆ ಸಾಕು, ಮೈಕ್ರೊಫೆÇೀನ್ ಕಂಡರೆ ಸಾಕು, ತಕ್ಷಣ ಪ್ರತಿಕ್ರಿಯೆ ನೀಡಲೇಬೇಕು ಎಂಬ ಮನೋಭಾವದಲ್ಲಿ ಬದುಕುತ್ತಿರುವಂತೆ ಕಾಣುತ್ತದೆ. ಮುಖ್ಯಮಂತ್ರಿ ಹೇಳುವ ಮುನ್ನವೇ ಸಚಿವರು ಮಾತನಾಡುತ್ತಾರೆ. ಸಚಿವರು ಹೇಳುವ ಮುನ್ನವೇ ಶಾಸಕರು ವ್ಯಾಖ್ಯಾನ ಕ...

ದುಬಾರೆ: ಆನೆಗಳ ಜಗತ್ತಿನೊಳಗೆ ಒಂದು ಅಪೂರ್ವ ಪಯಣ

 * ಬಿವಿಸೀ ಕೊಡಗು ಜಿಲ್ಲೆಯ ಹಸಿರು ಕಾಡುಗಳ ನಡುವೆ ಕಾವೇರಿ ನದಿಯ ದಡದಲ್ಲಿ ನೆಲೆಸಿರುವ ದುಬಾರೆ ಆನೆ ಶಿಬಿರ ಪ್ರಕೃತಿ, ವನ್ಯಜೀವಿ ಮತ್ತು ಸಾಹಸ ಪ್ರವಾಸವನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಅವಕಾಶ ನೀಡುವ ವಿಶಿಷ್ಟ ತಾಣವಾಗಿದೆ. ಮಡಿಕೇರಿ ಮತ್ತು ಕುಶಾಲನಗರದಿಂದ ಸುಲಭವಾಗಿ ತಲುಪಬಹುದಾದ ಈ ಪ್ರದೇಶವು ವರ್ಷವಿಡೀ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಒಂದು ಕಾಲದಲ್ಲಿ ಅರಣ್ಯ ಇಲಾಖೆಯ ಮರ ಸಾಗಣೆ ಕಾರ್ಯದಲ್ಲಿ ಬಳಸುತ್ತಿದ್ದ ಆನೆಗಳಿಗೆ ತರಬೇತಿ ನೀಡುತ್ತಿದ್ದ ಕೇಂದ್ರವಾಗಿ ದುಬಾರೆ ಪ್ರಸಿದ್ಧವಾಗಿತ್ತು. ಇಂದು ಅದು ಆನೆಗಳ ಸಂರಕ್ಷಣೆ, ಆರೈಕೆ ಮತ್ತು ಪರಿಸರ ಜಾಗೃತಿ ಮೂಡಿಸುವ ಪ್ರಮುಖ ಕೇಂದ್ರವಾಗಿ ರೂಪಾಂತರಗೊಂಡಿದೆ. ಇಲ್ಲಿ ಭೇಟಿ ನೀಡುವವರು ಆನೆಗಳ ದೈನಂದಿನ ಜೀವನವನ್ನು ಹತ್ತಿರದಿಂದ ನೋಡುವ ಅವಕಾಶ ಪಡೆಯುತ್ತಾರೆ. ಬೆಳಗಿನ ವೇಳೆಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ನೀಡುವುದು, ಅವುಗಳ ಆರೈಕೆ ಹೇಗೆ ನಡೆಯುತ್ತದೆ ಎಂಬುದನ್ನು ಮಹಾವತ್‍ಗಳ ಮಾರ್ಗದರ್ಶನದಲ್ಲಿ ವೀಕ್ಷಿಸುವುದು ಪ್ರವಾಸದ ಪ್ರಮುಖ ಆಕರ್ಷಣೆಯಾಗಿದೆ. ಶಿಬಿರದತ್ತ ಸಾಗುವ ಮೊದಲು ಕಾವೇರಿ ನದಿಯನ್ನು ದೋಣಿ ಅಥವಾ ತೆಪ್ಪದ ಮೂಲಕ ದಾಟಬೇಕಾಗುತ್ತದೆ. ಈ ಚಿಕ್ಕ ನದಿಯಾತ್ರೆಯೇ ಪ್ರವಾಸಕ್ಕೆ ವಿಶೇಷ ಮೆರುಗು ನೀಡುತ್ತದೆ. ನದಿಯ ತಂಪಾದ ಗಾಳಿ, ಸುತ್ತಲಿನ ದಟ್ಟ ಹಸಿರು ಕಾಡು ಮತ್ತು ಪಕ್ಷಿಗಳ ಕಲರವ ಮನಸ್ಸಿಗೆ ಹೊಸ ಚೈತನ್ಯ ತುಂಬುತ್ತದೆ. ಮಳೆಗಾಲದ ನಂತರ ...

ನ್ಯಾಯಯುತ ನೇಮಕಾತಿಯೇ ಉತ್ತಮ ಆಡಳಿತದ ಆರಂಭ

 ಕೆಪಿಎಸ್‍ಸಿಗೆ ಪ್ರಭಾವವಲ್ಲ, ಪ್ರತಿಭೆಯೇ ಅಂತಿಮ ಮಾನದಂಡವಾಗಲಿ ಉತ್ತಮ ಪ್ರಭುತ್ವ * ಬಿವಿಸೀ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ರಾಜ್ಯದ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವದ ಸಾಂವಿಧಾನಿಕ ಸಂಸ್ಥೆ. ಈ ಸಂಸ್ಥೆಯ ಮೇಲೆ ಜನರ ವಿಶ್ವಾಸ ಕುಸಿದರೆ, ಕೇವಲ ನೇಮಕಾತಿ ಪ್ರಕ್ರಿಯೆಯಷ್ಟೇ ಅಲ್ಲ, ಇಡೀ ಆಡಳಿತ ವ್ಯವಸ್ಥೆಯ ನೈತಿಕ ನೆಲೆಯೇ ಅಲುಗಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅಕ್ರಮ, ನ್ಯಾಯಾಲಯದ ವ್ಯಾಜ್ಯಗಳು ಮತ್ತು ರಾಜಕೀಯ ಪ್ರಭಾವದ ಆರೋಪಗಳು ಕೆಪಿಎಸ್‍ಸಿಯ ವಿಶ್ವಾಸಾರ್ಹತೆಗೆ ಗಂಭೀರ ಹೊಡೆತ ನೀಡಿವೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯನ್ನು ಸಂಪೂರ್ಣವಾಗಿ ಶುದ್ಧೀಕರಿಸುವ ಅಗತ್ಯ ಎಂದಿಗಿಂತಲೂ ಹೆಚ್ಚಾಗಿದೆ. ಕೆಪಿಎಸ್‍ಸಿ ನಡೆಸುವ ಪ್ರತಿಯೊಂದು ಪರೀಕ್ಷೆಯ ಹಿಂದೆ ಲಕ್ಷಾಂತರ ಯುವಕರ ಕನಸು ಅಡಗಿದೆ. ವರ್ಷಗಳ ಕಾಲ ಶ್ರಮಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವ ಅಭ್ಯರ್ಥಿಗಳು, ಅಂತಿಮವಾಗಿ ಪ್ರತಿಭೆಗಿಂತ ಪ್ರಭಾವವೇ ಮೇಲುಗೈ ಸಾಧಿಸುತ್ತದೆ ಎಂಬ ಭಾವನೆಗೆ ಒಳಗಾದರೆ, ಅದು ಪ್ರಜಾಪ್ರಭುತ್ವದ ಸಮಾನ ಅವಕಾಶದ ತತ್ವಕ್ಕೇ ಧಕ್ಕೆ ತರುತ್ತದೆ. ಆದ್ದರಿಂದ ಕೆಪಿಎಸ್‍ಸಿಯ ಸುಧಾರಣೆ ಎನ್ನುವುದು ಕೇವಲ ಆಡಳಿತಾತ್ಮಕ ಕ್ರಮವಲ್ಲ; ಅದು ಯುವಜನತೆಯ ವಿಶ್ವಾಸವನ್ನು ಮರುಸ್ಥಾಪಿಸುವ ಸಾಮಾಜಿಕ ಹೊಣೆಗಾರಿಕೆಯೂ ಹೌದು. ಸುಧಾರಣೆಗಳು ಕೇವಲ ಅಧ್ಯಕ್ಷರು ಅಥವಾ ಸದಸ್ಯರನ್ನು ಬದಲಿಸುವ...

Stop Sermons, Start Police Reform

  Every year, Police Commemoration Day, Police Flag Day and other ceremonial occasions produce a familiar ritual. The Chief Minister or Home Minister stands before senior police officers, praises their sacrifices and then delivers a stern warning against corruption. The speech is invariably accompanied by a promise of clean governance and strict action against erring personnel. There is nothing objectionable about reminding the police of their duty. The problem is that these annual admonitions have become predictable, mechanical and largely meaningless. They no longer inspire confidence among the public or even within the police force because the message is often delivered by political leaders whose own governments are accused of lacking transparency. Many ministers across the country have faced investigations by enforcement agencies or have had serious allegations of corruption levelled against them. Whether those cases end in conviction or not, the moral authority to lecture othe...

The Delhi Durbar and the Paralysis of Karnataka’s Governance

* BVSee The ongoing political theater surrounding Karnataka’s cabinet expansion has officially crossed the line from a routine political exercise into a deplorable farce. For nearly a month, the state has been saddled with a lame-duck ministry — a skeletal crew of just 13 ministers trying to manage a government meant for a cabinet of over 30. Whole departments sit dormant, administrative files pile up, and governance is effectively in a state of paralysis. Instead of addressing this vacuum, the top tier of Karnataka’s leadership—including former Chief Minister Siddaramaiah, Chief Minister Shivakumar, and KPCC leader Hariprasad — were recently spotted making the mandatory pilgrimage to New Delhi. They flew out to wait for an audience, a "darshan," and the ultimate blessings of the party’s central leadership. When one of the "high priests" of the high command proved too busy to grant an audience, the state’s top executives were forced to return to Bengaluru empty-hand...

ಬರದ ನಾಡಿಗೆ ದಸರಾ ವೈಭವವೇ? ಸರ್ಕಾರ ಮರುಚಿಂತನೆ ಮಾಡಲಿ

 ಕೇವಿಯಟ್ * ಬಿವಿಸೀ ಮೈಸೂರು ದಸರಾ ಕರ್ನಾಟಕದ ಸಾಂಸ್ಕøತಿಕ ಪರಂಪರೆಯ ಒಂದು ಭಾಗ ಎನ್ನುವುದರಲ್ಲಿ ವಿವಾದವಿಲ್ಲ. ಆದರೆ ಪರಂಪರೆ ಎನ್ನುವ ಒಂದೇ ಕಾರಣಕ್ಕೆ ಪ್ರತಿವರ್ಷವೂ ಸಾರ್ವಜನಿಕ ಹಣದ ನೂರಾರು ಕೋಟಿ ರೂ ಭಾರೀ ವೆಚ್ಚದಲ್ಲಿ ಅದನ್ನು ಅದೇ ವೈಭವದಲ್ಲಿ ನಡೆಸಬೇಕೇ ಎಂಬ ಪ್ರಶ್ನೆ ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ರಾಜ್ಯದ ಹಲವು ಭಾಗಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ, ಮಳೆ ಕೊರತೆ ಮತ್ತು ಬರದ ಆತಂಕವನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಜನರ ಒಂದು ವರ್ಗ ಈ ಬಾರಿ ದಸರಾವನ್ನು ಸರಳವಾಗಿ ಆಚರಿಸಿ, ಉಳಿಯುವ ಹಣವನ್ನು ಜನೋಪಯೋಗಿ ಕಾರ್ಯಗಳಿಗೆ ಮೀಸಲಿಡಬೇಕೆಂದು ಆಗ್ರಹಿಸುತ್ತಿದೆ. ಆದರೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ದಸರಾವನ್ನು ನಿಗದಿಯಂತೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರ ವಾದವೆಂದರೆ, ದಸರಾ ಕೇವಲ ಹಬ್ಬವಲ್ಲ; ಅದು ಕರ್ನಾಟಕದ ಸಾಂಸ್ಕೃತಿಕ ಗುರುತು, ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ, ಸಾವಿರಾರು ಮಂದಿಗೆ ಉದ್ಯೋಗ ಮತ್ತು ವ್ಯಾಪಾರ ಅವಕಾಶ ಕಲ್ಪಿಸುವ ಆರ್ಥಿಕ ಚಟುವಟಿಕೆ. ರಾಜ್ಯದ ಪ್ರತಿಷ್ಠೆಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ವೇದಿಕೆಯೂ ಹೌದು ಎನ್ನುವುದು ಅವರ ಸಮರ್ಥನೆ. ಈ ವಾದಕ್ಕೆ ತನ್ನದೇ ಆದ ತೂಕವಿದ್ದರೂ, ಇಂದಿನ ಆರ್ಥಿಕ ವಾಸ್ತವಿಕತೆಯ ಎದುರು ಅದು ಸಾಕಷ್ಟು ಸಮರ್ಥನೆಯಾಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ನೌಕರರಿಗೆ ಪ್ರತಿ ತಿಂಗಳೂ ಸಮಯಕ್...

ಬಾಂಗ್ಲಾ ವಲಸಿಗರ ಹುಡುಕಾಟ: ಉಳಿದ ಜಿಲ್ಲೆಗಳ ಮೌನ ಏಕೆ?

 ಮಂಗಳೂರು ಪೊಲೀಸರು ಕಂಡಿದ್ದು, ಉಳಿದವರು ಕಾಣಲಿಲ್ಲವೇಕೆ? ಇದ್ದುದು ಇದ್ದಹಾಗೆ * ಬಿವಿಸೀ ಮಂಗಳೂರು ನಗರ ಪೆÇಲೀಸರು ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ವಲಸಿಗರನ್ನು ಮತ್ತೊಮ್ಮೆ ಪತ್ತೆಹಚ್ಚಿರುವುದು ಶ್ಲಾಘನೀಯ ಕ್ರಮ. ಇದು ಕೇವಲ ಕಾನೂನು ಜಾರಿಯ ವಿಷಯವಲ್ಲ; ರಾಷ್ಟ್ರದ ಆಂತರಿಕ ಭದ್ರತೆಗೂ ಸಂಬಂಧಿಸಿದ ಪ್ರಶ್ನೆಯಾಗಿದೆ. ಆದರೆ ಈ ಯಶಸ್ಸು ಮತ್ತೊಂದು ಪ್ರಶ್ನೆಯನ್ನು ಸಹ ಎತ್ತಿದೆ. ಅಕ್ರಮ ಬಾಂಗ್ಲಾದೇಶಿ ವಲಸಿಗರು ಕರ್ನಾಟಕದಲ್ಲಿ ಮಂಗಳೂರು ಮತ್ತು ಅದರ ಸುತ್ತಮುತ್ತ ಮಾತ್ರ ಇದ್ದಾರೆಯೇ? ಅಥವಾ ರಾಜ್ಯದ ಇತರ ನಗರಗಳಲ್ಲಿಯೂ ಇದ್ದು, ಅವರನ್ನು ಪತ್ತೆಹಚ್ಚುವ ಪ್ರಯತ್ನಗಳು ಸಮರ್ಪಕವಾಗಿ ನಡೆಯುತ್ತಿಲ್ಲವೇ? ಇದುವರೆಗೆ ಮಂಗಳೂರು ಪೆÇಲೀಸರು ಎರಡು ಕಾರ್ಯಾಚರಣೆಗಳಲ್ಲಿ ಒಟ್ಟು 19 ಮಂದಿಯನ್ನು ಬಂಧಿಸಿದ್ದಾರೆ. ಈ ಸಂಖ್ಯೆ ದೊಡ್ಡದಾಗಿರದಿದ್ದರೂ, ಸಮಸ್ಯೆಯ ವ್ಯಾಪ್ತಿಯನ್ನು ಸೂಚಿಸುವ ಆರಂಭಿಕ ಸೂಚಕವಾಗಿ ಕಾಣಬಹುದು. ಸ್ಥಳೀಯವಾಗಿ ಹಲವು ವರ್ಷಗಳಿಂದ ನಿರ್ಮಾಣ, ಮೀನುಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ಅಸಂಘಟಿತ ಕಾರ್ಮಿಕ ವಲಯಗಳಲ್ಲಿ ಅಕ್ರಮ ವಲಸಿಗರು ಕೆಲಸ ಮಾಡುತ್ತಿರುವ ಕುರಿತು ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಡೆದ ಕಾರ್ಯಾಚರಣೆಗಳು ಇತರ ಜಿಲ್ಲೆಗಳಿಗೂ ಮಾದರಿಯಾಗಬೇಕಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಕಲಬುರಗಿ ಸೇರಿದಂತೆ ವೇಗವಾಗಿ ಬೆಳೆಯುತ್ತಿರುವ...