Posts

Showing posts with the label Sangha Parivar

ಯುವಜನರ ಆಕ್ರೋಶ ಮತ್ತು ಸಂಘ ಪರಿವಾರದ ವೈಫಲ್ಯ

 ನೇರಾನೇರ * ಬಿವಿಸೀ ದೆಹಲಿಯ ಜಂತರ್ ಮಂತರ್‍ನಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಯುವಕರ ಹಾಗೂ ವಿದ್ಯಾರ್ಥಿಗಳ ಸುದೀರ್ಘ ಪ್ರತಿಭಟನೆಯು ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಯಿತು. ಆದರೆ, ಈ ಮಹತ್ವದ ವಿದ್ಯಮಾನವು ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಮತ್ತು ಅದರ ಸೈದ್ಧಾಂತಿಕ ಮಾತೃಸಂಸ್ಥೆಯಾದ ಸಂಘ ಪರಿವಾರದ ಆಂತರಿಕ ದುರ್ಬಲತೆಗಳನ್ನು ಹಾಗೂ ಸಾಂಸ್ಥಿಕ ಬಿಕ್ಕಟ್ಟುಗಳನ್ನು ಬಹಿರಂಗಪಡಿಸಿದೆ. ದೇಶದ ಅತಿದೊಡ್ಡ ರಾಜಕೀಯ ಪಕ್ಷವಾಗಿ, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಯುವ ಮೋರ್ಚಾದಂತಹ ವಿಶಾಲ ಸಾಮಾಜಿಕ ಹಾಗೂ ಸಾಂಸ್ಥಿಕ ಜಾಲವನ್ನು ಹೊಂದಿದ್ದರೂ ಸಹ, ದೇಶದ ಯುವಜನರಲ್ಲಿ ಬುಸುಗುಡುತ್ತಿದ್ದ ತೀವ್ರ ಅಸಮಾಧಾನವನ್ನು ಮುಂಚಿತವಾಗಿ ಗ್ರಹಿಸಲು ಆಡಳಿತ ಪಕ್ಷ ಸಂಪೂರ್ಣವಾಗಿ ವಿಫಲವಾಗಿದ್ದು ಏಕೆ ಎಂಬ ಸವಾಲಿನ ಪ್ರಶ್ನೆ ಈಗ ತೀವ್ರವಾಗಿ ಉದ್ಭವಿಸಿದೆ. ಸುದೀರ್ಘ ಅವಧಿಯ ಅಧಿಕಾರ ಮತ್ತು ಅತಿಯಾದ ಕೇಂದ್ರೀಕರಣವು ಬಿಜೆಪಿಯ ಸಾಂಪ್ರದಾಯಿಕ ಕಾರ್ಯಕರ್ತರ ಸಂವಹನ ವ್ಯವಸ್ಥೆಯನ್ನು ತೀವ್ರವಾಗಿ ದುರ್ಬಲಗೊಳಿಸಿದೆ. ಕಾರ್ಯಕರ್ತರು ಸರ್ಕಾರದ ಆಡಳಿತ ಯಂತ್ರದ ಭಾಗವಾಗುತ್ತಿದ್ದಂತೆ, ಸಾರ್ವಜನಿಕರ ನೈಜ ಭಾವನೆಗಳನ್ನು ಮತ್ತು ಆಕ್ರೋಶವನ್ನು ಮೇಲಿನ ನಾಯಕತ್ವಕ್ಕೆ ತಲುಪಿಸುವ ಅವರ ಸಾಮಥ್ರ್ಯ ಕ್ಷೀಣಿಸಿದೆ. ಕೇವಲ ಮೇಲಿಂದ ಬರುವ ಆದೇಶಗಳನ್ನು ಅನುಷ್...