ಹಿರಿಯಣ್ಣ ತೋರಿದ `ಪೇಡ್ ನ್ಯೂಸ್' ದಾರಿ

 ಸುದ್ದಿ ಪ್ರಕಟಿಸಲು ಕಾಸು ಬಿಚ್ಚಿ, ಬೇಡದ ಸುದ್ದಿ ಮುಚ್ಚಿಡಲೂ ಸಹ



ಕಾಪೆರ್Çರೇಟ್‍ಗಳು ಮತ್ತು ಧರ್ಮೋದ್ಯಮಿಗಳ ಓಲೈಕೆ: ಪತ್ರಿಕೋದ್ಯಮದ ಮತ್ತಷ್ಟು ಅಧೋಗತಿಗೆ ಇಳಿಯದಂತೆ ರಕ್ಷಣಾ ಕವಚವಾಗಲು ಬೇಕಿದೆ ಮಾಧ್ಯಮ ಆಯೋಗ

ಕೇಳು ಜನಮೇಜಯ * ಬಿವಿಸೀ

ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ಇಂದು ಕಂಡುಬರುತ್ತಿರುವ ಮೌಲ್ಯಗಳ ಕುಸಿತವು ಆತಂಕಕಾರಿ ಮಟ್ಟವನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ, ಮುದ್ರಣ ಮಾಧ್ಯಮಗಳು ಅನುಸರಿಸಬೇಕಾದ ನೈತಿಕತೆಯ ಮೇಲ್ವಿಚಾರಣೆಗಾಗಿ ರಾಜ್ಯ ಮಟ್ಟದಲ್ಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ `ಮಾಧ್ಯಮ ಆಯೋಗ' ರಚಿಸಬೇಕೆಂಬ ಹಿರಿಯ ಪತ್ರಕರ್ತರ ಸಲಹೆಯನ್ನು ಮುಖ್ಯಮಂತ್ರಿಗಳು ತಕ್ಷಣವೇ ಪರಿಶೀಲಿಸಬೇಕಾಗಿದೆ.

ಜಿಲ್ಲಾಮಟ್ಟದ ಪತ್ರಿಕೆಗಳಿಗೆ ಮಾರ್ಗದರ್ಶಿಯಾಗಬೇಕಿದ್ದ ರಾಜ್ಯಮಟ್ಟದ ಪ್ರಮುಖ ಪತ್ರಿಕೆಗಳು ಇಂದು ಕಾಪೆರ್Çರೇಟ್ ಮನೆತನಗಳು ಮತ್ತು ಧರ್ಮೋದ್ಯಮಿಗಳ ಕರಪತ್ರಗಳಂತೆ ವರ್ತಿಸುತ್ತಿರುವುದು ಅತ್ಯಂತ ಶೋಚನೀಯ ಮಾತ್ರವಲ್ಲ, ನಾಚಿಕೆಗೇಡಿನ ವರ್ತನೆ.  ಪ್ರಮುಖ ಉದ್ಯಮಿಗಳ (ಉದಾಹರಣೆಗೆ ಅಂಬಾನಿ ಕುಟುಂಬದಂತಹ) ವೈಯಕ್ತಿಕ ಹಾಗೂ ರಾಯಲ್ ಜೀವನಶೈಲಿಯ ಕುರಿತಾದ ಸುದ್ದಿಗಳನ್ನು ಪ್ರಥಮ ಪುಟದಲ್ಲೇ ಅರ್ಧ ಅಥವಾ ಕಾಲು ಪುಟದಷ್ಟು ಪ್ರಕಟಿಸಲಾಗುತ್ತಿದೆ. ವಾಸ್ತವವಾಗಿ ಇವು ಜಾಹೀರಾತು ರೂಪದ ಲೇಖನಗಳು (ಅಡ್ವರ್ಟೋರಿಯಲ್ಸ್). ಆದರೆ, ಇವು `ಪ್ರಾಯೋಜಿತ ಸುದ್ದಿಗಳು' ಎಂಬ ಯಾವುದೇ ಸಣ್ಣ ಸುಳಿವು ಅಥವಾ ಎಚ್ಚರಿಕೆಯನ್ನೂ ಓದುಗರಿಗೆ ನೀಡಲಾಗುತ್ತಿಲ್ಲ. ಹಿಂದೆ ಆಗಿಹೋದ ಪತ್ರಿಕೋದ್ಯಮದ ಸುವರ್ಣ ಯುಗದಲ್ಲಿ ಊಹಿಸಲೂ ಸಾಧ್ಯವಾಗದ ಇಂತಹ ಆಚರಣೆಗಳು ಸ್ಪಷ್ಟವಾಗಿ `ಹಣ ನೀಡಿ ಪ್ರಕಟಿಸುವ ಪೇಡ್ ನ್ಯೂಸ್' ಆಗಿದೆ.

ಇದಕ್ಕಿಂತಲೂ ಗಂಭೀರವಾದ ಮತ್ತೊಂದು ಅನೈತಿಕ ಆಚರಣೆಯೆಂದರೆ `ಸುದ್ದಿ ಪ್ರಕಟಿಸದಿರಲು ಹಣ ಪಡೆಯುವುದು'. ಉದ್ಯಮಿಗಳು, ರಾಜಕಾರಣಿಗಳು ಹಾಗೂ ಧರ್ಮವನ್ನು ವ್ಯಾಪಾರ ಮಾಡಿಕೊಂಡಿರುವ ಧರ್ಮೋದ್ಯಮಿಗಳಿಗೆ ಮುಜುಗರ ತರುವ ಅಥವಾ ಅವರ ಕ್ರಿಮಿನಲ್ ಕೃತ್ಯಗಳ ಕುರಿತಾದ ಸುದ್ದಿಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಮಾಧ್ಯಮಗಳಿಗೆ ಭಾರಿ ಪ್ರಮಾಣದ ಹಣ ಹರಿಯುತ್ತಿದೆ. ಕುಬೇರರು ಪತ್ರಿಕೆಗಳಲ್ಲಿ ತಮ್ಮ  ಸುದ್ದಿ ಪ್ರಕಟಿಸಲು ಮತ್ತು ಪ್ರಕಟಿಸದೇ ಇರಲು - ಎರಡಕ್ಕೂ ಬಜೆಟ್ ಕಾಯ್ದಿರಿಸುವ ಸಂಸ್ಕøತಿ ಬೆಳೆದಿದೆ. ಸುಪ್ರೀಂ ಕೋರ್ಟ್ ಸೌಜನ್ಯಾ ಹತ್ಯೆ ವಿಚಾರದಲ್ಲಿ  ಕಣ್ತೆರುಸುವ ತೀರ್ಪು ಕೊಟ್ಟರೂ ಅದು ಈ ಪತ್ರಿಕೆಗಳಿಗೆ ಸುದ್ದಿಯಾಗುವುದಿಲ್ಲ; ಯಾಕೆಂದರೆ ಅವು ಧರ್ಮೋದ್ಯಮಿಗಳಿಗೆ ಅಪ್ರಿಯವಾಗಿವೆಯಾದ್ದರಿಂದ. ಕರಾವಳಿಯ ಉದ್ಯಮಿಗಳ ಲೌಡ್ ಸ್ಪೀಕರ್ ಪತ್ರಿಕೆಯೊಂದು ಒಬ್ಬ ಸಾಮಾನ್ಯ ಹೋಟೆಲಿಗನ ಜತೆ ಒಪ್ಪಂದ ಮಾಡಿಕೊಂಡು ಪ್ರತಿ ದಿನ ವರ್ಷಗಟ್ಟಲೆ ಜಾಹೀರಾತು ಪಡೆದು ಆತನಿಗೆ ವಾರ್ಸಿಟಿಯಿಂದ ಗೌ ಡಾ ಕೊಡಿಸುವವರೆಗೆ ಆತನ ಪರ ಸುದ್ದಿ ಅಭಿಯಾನ ನಡೆಸಿತು. ಕೋಳಿ ಕೂಗಿದರೆ ಮಾತ್ರ ಬೆಳಗಾಗುತ್ತದೆ ಎಂದು ಉದ್ಯಮಿಗಳು ನಡೆಸುವ ಪತ್ರಿಕೆಗಳು ನಂಬಿವೆ. ಸಣ್ಣ ಪತ್ರಿಕೆಗಳು ಮತ್ತು ಸೋಷಿಯಲ್ ಮೀಡಿಯಾ ಇರದಿದ್ದರೆ, ಅದು ಹಾಗೆಯೇ ನಡೆಯುತ್ತಿತ್ತೇನೋ.

ಸರ್ಕಾರಿ ಜಾಹೀರಾತುಗಳ ಹಂಚಿಕೆಯಲ್ಲೂ ಯಾವುದೇ ನೀತಿ-ನ್ಯಾಯ ಉಳಿದಿಲ್ಲ. ಸರ್ಕಾರದ ಓಲೈಕೆ ಮಾಡುವ ದೊಡ್ಡ ಮಾಧ್ಯಮಗಳಿಗೆ ಭಾರಿ ಪ್ರಮಾಣದ ಜಾಹೀರಾತುಗಳನ್ನು ನೀಡಿ, ಸ್ಥಳೀಯ ಸಮಸ್ಯೆಗೆ ಸ್ಪಂದಿಸುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಲಿ ಅಥವಾ ವಾರ್ತಾ ಇಲಾಖೆಯಾಗಲಿ ಈ ಬಗ್ಗೆ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ.

ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಮಾಧ್ಯಮಗಳು ಈ ಹಂತಕ್ಕೆ ಕುಸಿದಿರುವುದು ಪ್ರಜಾಸತ್ತೆಗೆ ಮಾರಕ. ಹೀಗಾಗಿ, ಈ ಎಲ್ಲಾ ಅಕ್ರಮಗಳನ್ನು ತಡೆದು, ಮಾಧ್ಯಮ ರಂಗದಲ್ಲಿ ಪಾರದರ್ಶಕತೆ ಮತ್ತು ನೈತಿಕತೆಯನ್ನು ಮರುಸ್ಥಾಪಿಸಲು ಮಾಧ್ಯಮ ಆಯೋಗವು ಅತ್ಯಗತ್ಯವಾಗಿದೆ. ರಾಷ್ಟ್ರ ಮಟ್ಟದಲ್ಲಿ ಒಂದು ಪ್ರೆಸ್ ಕೌನ್ಸಿಲ್ ಎನ್ನುವುದು ಇದೆಯಾದರೂ, ಅದೊಂದು ಆರ್ನಮೆಂಟಲ್ ಬಾಡಿಯಾಗಿದೆ. ಅದರ ವ್ಯಾಪ್ತಿ ದೇಶವ್ಯಾಪಿಯಾಗಿರುವುದರಿಂದ ಅದು ಯಾರನ್ನೂ ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ರಾಜ್ಯ ಮಟ್ಟದ ಮಾಧ್ಯಮ ಆಯೋಗದ ನೇಮಕಕ್ಕೆ ಇರುವ ಸಮರ್ಥನೆ. ಇದು ಮಾಧ್ಯಮಗಳ ನೆಕ್ಕುವ ನೀತಿಯನ್ನು ನಿಗ್ರಹಿಸುವ ಮತ್ತು ಗುಪ್ತ್ ಗುಪ್ತ್ ಕಾರ್ಯಾಚರಣೆಗೆ ಕಡಿವಾಣ ಹಾಕುವ ಮತ್ತು ಮಾದರಿ ನಡೆವಳಿಕೆ ಕಲಿಸುವ ಉದ್ದೇಶದ್ದಾಗಿರಬೇಕು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ