ಮೀಮ್‍ನಿಂದ ಚಳವಳಿಯಾದ ಜಿರಳೆ ಜನತಾ ಪಕ್ಷ: ಮುಂದಿನ ಹೆಜ್ಜೆ ಏನು?
ಪ್ರಚಲಿತ * ಬಿವಿಸೀ ಮೇ 15, 2026ರಂದು ಸುಪ್ರೀಂಕೋರ್ಟ್‍ನಲ್ಲಿ ನಕಲಿ ಪದವಿ ವಿಷಯದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು "ಕೆಲವು ಯುವಕರು ಜಿರಳೆಯಂತೆ ಉದ್ಯೋಗವಿಲ್ಲದೆ ಮಾಧ್ಯಮ, ಆರ್‍ಟಿಐ ಕಾರ್ಯಕರ್ತರಾಗಿ ಸಿಸ್ಟಂ ಮೇಲೆ ದಾಳಿ ಮಾಡುತ್ತಾರೆ" ಎಂದು ನೀಡಿದ ಮೌಖಿಕ ಟೀಕೆ, ಇಂಟರ್ನೆಟ್‍ನಲ್ಲಿ ಕಿಡಿ ಹೊತ್ತಿಸಿತು. ಟೀಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿಜೆಐ ನಂತರ ಸ್ಪಷ್ಟನೆ ನೀಡಿದರೂ, ಇಂಟರ್ನೆಟ್ ಮುಂದೆ ಸಾಗಿತ್ತು. ಅದರ ಬೆನ್ನಲ್ಲೇ ರಾಜಕೀಯ ಸಂವಹನ ತಂತ್ರಜ್ಞ ಅಭಿಜೀತ್ ದೀಪ್ಕೆ ಅವರು ಮೇ 16ರಂದು ಇನ್‍ಸ್ಟಾಗ್ರಾಮ್‍ನಲ್ಲಿ "ಕಾಕ್ರೋಚ್ ಜನತಾ ಪಕ್ಷ" (ಸಿಜೆಪಿ) ಎಂಬ ವ್ಯಂಗ್ಯ ಖಾತೆ ತೆರೆದರು. "ಅರ್ಹತಾ ಮಾನದಂಡ: ನಿರುದ್ಯೋಗಿ, ಆಲಸಿ, ಕ್ರಾನಿಕಲಿ ಆನ್‍ಲೈನ್, ವೃತ್ತಿಪರವಾಗಿ ರಾಂಟ್ ಮಾಡುವ ಸಾಮಥ್ರ್ಯ" ಎಂದು ಬರೆದ ಮೊದಲ ಪೆÇೀಸ್ಟ್ ವೈರಲ್ ಆಯಿತು. ಮೂರು ವಾರಗಳಲ್ಲಿ ಸಿಜೆಪಿ ಇನ್‍ಸ್ಟಾಗ್ರಾಮ್‍ನಲ್ಲಿ 2 ಕೋಟಿ 200 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳಿಸಿತು. ಎಕ್ಸ್‍ನಲ್ಲಿ ಖಾತೆ ನಿಬರ್ಂಧವಾದರೂ "ಕಾಕ್ರೋಚಸ್ ಡೋಂಟ್ ಡೈ" ಎಂಬ ಟ್ಯಾಗ್‍ಲೈನ್‍ನೊಂದಿಗೆ ಹೊಸ ಖಾತೆ ತೆರೆದು ಮತ್ತೆ ಬೆಳೆಯಿತು. ಆರಂಭದಲ್ಲಿ ಕೇವಲ ಮೀಮ್ ಮತ್ತು ವ್ಯಂಗ್ಯವಾಗಿದ್ದ ಸಿಜೆಪಿ, ಉದ್ಯೋಗ, ಪರೀಕ್ಷಾ ಅಕ್ರಮ, ಪೇಪರ್ ಸೋರಿಕೆ, ಯುವಕರ ನಿರಾಶೆಯ ಸಂಕೇತವಾಯಿತು. ಜೂನ್ 6ರಂದು ದೆಹಲಿಯ ಜಂತರ...