ಕರಾವಳಿ ಅಭಿವೃದ್ಧಿ ಪ್ರಾಧಿಕಾರವೆಂಬ ಗೊಂಬೆ ಮರು ಸ್ಥಾಪನೆ
ಎಮ್ ಎ ಗಫೂರ್ ಪ್ರಾಧಿಕಾರ ಮಾಡಬಹುದಾದ ಎಲ್ಲ ಕೆಲಸಗಳನ್ನೂ ಸರಕಾರದ ಲೋಕೋಪಯೋಗಿ ಇಲಾಖೆ ಮಾಡಬಲ್ಲದು. ............. ಅಲವಾದರಲ್ಲವೆನ್ನಿ* ಬಿವಿಸೀ ಜನರು ಈಗಾಗಲೇ ಮರೆತು ಹೋಗಿರುವ ಉಡುಪಿಯ ಕಾಂಗ್ರೆಸ್ ನಾಯಕ ಎಮ್ ಎ ಗಫೂರ್ ಅವರನ್ನು ಯಾರನ್ನೋ ಮೆಚ್ಚಿಸಲು ಮರಳಿ ಮುನ್ನಲೆಗೆ ತರುವ ಸಲುವಾಗಿ ಕರ್ನಾಟಕ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರ(ಸಿಡಿಎ)ದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿಹಾಕಿದೆ. ಹಲವು ವರ್ಷಗಳ ಕಾಲ ಗಫೂರ್ ಅವರ ಸಾರ್ವಜನಿಕ ಚಟುವಟಿಕೆಗಳ ಬಗ್ಗೆ ಯಾವುದೇ ಸುದ್ದಿ ಕೇಳಿಬಂದಿರಲಿಲ್ಲ. ಹಠಾತ್ತನೆ ಅವರನ್ನು ಮರಳಿ ತಂದಿರುವುದು ಕರಾವಳಿ ಅಭಿವೃದ್ದಿಗಿಂತಲೂ ಹೆಚ್ಚಾಗಿ, ರಾಜಕೀಯ ನಿಷ್ಠಾವಂತರನ್ನು ಆಲಂಕಾರಿಕ ಹುದ್ದೆಗಳ ಮೂಲಕ ಸಮ್ಮಾನಿಸುವ ಕ್ರಮವಾಗಿ ತೋರುತ್ತದೆ. ಹಿಂದೆ ಹಲವು ವರ್ಷಗಳ ಕಾಲ ಕಾರ್ಯೋನ್ಮುಖವಾಗಿದ್ದರೂ ಯಾವುದೇ ಪ್ರಭಾವವನ್ನು ಬೀರುವುದಲ್ಲಿ ...