ಮಾನನಷ್ಟ ಕಾನೂನು ರಾಜಕೀಯ ಅಸ್ತ್ರವಾದಾಗ
ಪೆÇಲೀಸರು ಮತ್ತು ನ್ಯಾಯಾಲಯಗಳು ದುರ್ಬಳಕೆಗೆ ತೆರೆದುಕೊಂಡರೆ, ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ಬಂಧನವು ಕಾನೂನನ್ನು ಹೇಗೆ ರಾಜಕೀಯ ಸೇವೆಗೆ ಬಗ್ಗಿಸಬಹುದು ಎನ್ನುವುದಕ್ಕೆ ಒಂದು ಪ್ರತ್ಯಕ್ಷ ನಿದರ್ಶನವಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಮತ್ತು ಧರ್ಮಸ್ಥಳದ ಡಿ ಗ್ಯಾಂಗನ್ನು ಕಟುವಾಗಿ ಟೀಕಿಸಿದ್ದ ತಿಮರೋಡಿ ಆಳುವ ವ್ಯವಸ್ಥೆಯ ದೃಷ್ಟಿಯಲ್ಲಿ ಅಹಿತಕರವಾಗಿ ಕಾಣಬಹುದು. ಆದರೆ ಸಂವಿಧಾನವು ಪ್ರತಿರೋಧದ ಹಕ್ಕನ್ನೂ ನೀಡಿದೆ. ಮೆಲ್ನೋಟಕ್ಕೆ ಮಾನನಷ್ಟ ಮೊಕದ್ದಮೆಯು ಜಾಮೀನುರಹಿತ ಬಂಧನಕ್ಕೆ ಒಳಗಾಗುವಂತಹುದಲ್ಲ; ಹಾಗಾಗಿ ಮ್ಯಾಜಿಸ್ಟ್ರೇಟ್ ನಿರ್ದೇಶನವಿಲ್ಲದೆ ಪೆÇಲೀಸರು ಕ್ರಮ ಜರುಗಿಸುವುದನ್ನು ಸರ್ಕಾರವು ಸಮರ್ಥಿಸಲಾಗುವುದಿಲ್ಲ. ಆದಾಗ್ಯೂ ತಿಮರೋಡಿ ಅವರನ್ನು ಧರ್ಮಸ್ಥಳದ ಸಮೀಪ ಇರುವ ಅವರ ಮನೆಯಿಂದ ಎಳೆದುಕೊಂಡು ಹೋಗಿ, 150 ಕಿಲೋಮೀಟರ್ ದೂರದಲ್ಲಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದು ಹೇಗೆ ಸಾಧ್ಯವಾಯಿತು? ಇದಕ್ಕೆ ಉತ್ತರ ಬಳಸಲಾಗಿರುವ ಕಾನೂನಿನ ಸೆಕ್ಷನ್‍ಗಳಲ್ಲಿದೆ. ಮಾನನಷ್ಟದ ಜೊತೆಗೇ ಬ್ರಹ್ಮಾವರ ಪೆÇಲೀಸರು ಜಾಮೀನುರಹಿತ ಅಪರಾಧದ ಗಂಭೀರ ಆರೋಪವನ್ನು ಹೊರಿಸಿದ್ದು, ಸಮಾಜದಲ್ಲಿ ವೈರತ್ವ ಸೃಷ್ಟಿಸುವ ಮತ್ತು ಸಾರ್ವಜನಿಕ ದುಷ್ಕøತ್ಯ ಎಸಗುವ ಆರೋಪಗಳನ್ನು ಹೊರಿಸಿದ್ದಾರೆ. ಈ ಸೆಕ್ಷನ್‍ಗಳನ್ನು ಸೇರಿಸುವುದರ ಮೂಲಕ ಒಂದು ದುರ್ಬಲ ಖಾಸಗಿ ದೂರನ...