ಕರ್ನಾಟಕಕ್ಕೆ ಮೊದಲು ಸಾರಾಯಿ ನಿಷೇಧ ಗ್ಯಾರಂಟಿ ಬೇಕಿದೆ
ಸರ್ಕಾರವು ಪಾನನಿಷೇಧವನ್ನು ಘೋಷಿಸಲು ಧೈರ್ಯ ತೋರಿ, ನಿರ್ವಹಿಸಲಾಗದ ಗ್ಯಾರಂಟಿಗಳನ್ನು ನಿಲ್ಲಿಸುವುದಾದರೆ ಅದರಿಂದ ಲಾಭವೇ ಹೊರತು ನಷ್ಟವಿಲ್ಲ. ................ ಖುಲ್ಲಂಖುಲ್ಲಾ * ಬಿವಿಸೀ ಕರ್ನಾಟಕ ಇಂದು ನೈತಿಕ ಹಾಗೂ ರಾಜಕೀಯ ವಿರೋಧಾಭಾಸಗಳ ನಡುವೆ ಸಿಲುಕಿದ್ದು ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದೆ. ರಾಮಮನೋಹರ್ ಲೋಹಿಯಾ ಅವರ ಸಮಾಜವಾದ ಮತ್ತು ಮಹಾತ್ಮ ಗಾಂಧಿಯ ಪರಂಪರೆಯನ್ನು ಅನುಸರಿಸುವ ಸರ್ಕಾರ ತನ್ನ ಮೂಲ ಆದಾಯವಾಗಿ ಸಾರಾಯಿ ಮಾರಾಟವನ್ನೇ ಅವಲಂಬಿಸಿದೆ; ಮತ್ತೊಂದೆಡೆ, ರಾಜ್ಯಾದ್ಯಂತ ಸಾವಿರಾರು ಕುಟುಂಬಗಳು ಸಾರಾಯಿ ಸೇವನೆಯಿಂದ ನಾಶವಾಗುತ್ತಿವೆ. ಇದು ಕೇವಲ ನೀತಿಯ ಅನಿಶ್ಚಿತತೆ ಅಲ್ಲ ನೈತಿಕ ಅಸಂಬದ್ಧತೆಯೂ ಹೌದು. ಸಾರಾಯಿ ನಿಷೇಧಕ್ಕೆ ಪ್ರಮುಖ ಆಗ್ರಹ ಕೇಳಿಬರುತ್ತಿರುವುದು ನೈತಿಕ ಉಪನ್ಯಾಸಗಳಿಂದ ಅಥವಾ ಧಾರ್ಮಿಕ ನಿಬಂಧನೆಗಳಿಂದಲ್ಲ. ಇದು ಮಹಿಳೆಯರಿಂದ ಕೇಳಿಬರುತ್ತಿದೆ. ಕರ್ನಾಟಕದಾದ್ಯಂತ ಮಹಿಳಾ ಗುಂಪುಗಳು, ಸರ್ಕಾರ ಸಾರಾಯಿ ಒಮ್ಮೆಲೆ ನಿಷೇಧಿಸುವುದಾದರೆ, ತಾವು ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿಗಳನ್ನು ಬಿಟ್ಟುಕೊಡುವುದಾಗಿ ಹೇಳುತ್ತಿವೆ. ಇವರ ತರ್ತವೂ ಸರಳವಾಗಿದೆ. ಒಂದು ಕೈಯ್ಯಲ್ಲಿ ನೀಡುವ ಹಣವನ್ನು ಮತ್ತೊಂದರಲ್ಲಿ ಸಾರಾಯಿ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಸಂಪಾದನೆ ಮಾಡಬೇಕಾದ ಗಂಡಸರು ತಮ್ಮ ಕುಟುಂಬಗಳನ್ನು ನಿರ್ವಹಿಸುವ ಬದಲು ಸಂಪಾದನೆಯನ್ನು ಸಾರಾಯಿಗಾಗಿ ಸುರಿಯುತ್ತಿದ್ದಾರೆ. ಇದು ಕುಟುಂ...