Posts

Showing posts with the label Dharmastala samavesha

ಧಾರ್ಮಿಕ ಮುಖ್ಯಸ್ಥರು ಲಾಬಿಕೋರರಾದ ಧರ್ಮಸ್ಥಳದ ಸಮಾವೇಶ

 ಸರ್ಕಾರದ ಮೇಲೆ ಒತ್ತಡ ಹೇರುವ ಸ್ಪಷ್ಟ ಉದ್ದೇಶದೊಂದಿಗೆ ಧರ್ಮಸ್ಥಳದಲ್ಲಿ ಮೊನ್ನೆ ಸಮಾವೇಶದಲ್ಲಿ ನೆರೆದಿದ್ದ ಜೈನ ಧಾರ್ಮಿಕ ಮುಖಂಡರು ಯಾವುದೇ ಅನುಮಾನವಿಲ್ಲದಂತಹ ಗಾಬರಿಯಾಗುವ ಸಂದೇಶವನ್ನು ರವಾನಿಸಿದ್ದು, ಧರ್ಮಸ್ಥಳದ ಪೀಠಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಡನೆ ಐಕ್ಯಮತ ಪ್ರದರ್ಶಿಸಿದ್ದಾರೆ. ಪ್ರಕರಣದಲ್ಲಿ ತಮ್ಮದೇ ಧರ್ಮದ ಹೆಗ್ಗಡೆಗೆ ನ್ಯಾಯ ಒದಗಿಸಬೇಕು (ಅಂದರೆ ಅವರನ್ನು ಬಚಾಯಿಸಬೇಕು), ಇಲ್ಲದಿದ್ದರೆ ತಾವು ಸುಮ್ಮನೆ ಕೂರುವುದಿಲ್ಲ ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ಸರ್ಕಾರಕ್ಕೆ ನೀಡಿದ್ದಾರೆ. ``ಜೈನರು ಯಾರಿಗೂ ತೊಂದರೆ ಕೊಡುವುದಿಲ್ಲ, ತೊಂದರೆ ಕೊಟ್ಟವರನ್ನು ಬಿಡುವುದೂ ಇಲ್ಲ'', ``ಧರ್ಮಸ್ಥಳ ಕೇಸುಗಳಲ್ಲಿ ಹೆಗ್ಗಡೆಯವರಿಗೆ ನ್ಯಾಯ ಸಿಗದಿದ್ದರೆ, ವಿಧಾನಸೌಧದ ಎದುರು `ಉಗ್ರ' ಹೋರಾಟ ನಡೆಸಲಾಗುವುದು'' ಎಂಬ ನಿಖರ ಎಚ್ಚರಿಕೆ ಜೈನ ಸ್ವಾಮಿಗಳ ಸಮಾವೇಶದಿಂದ ಹೊರಟಿದೆ. ಈ ಮಾತುಗಳು ಏನನ್ನು ಧ್ವನಿಸುತ್ತದೆ? ಇದರಲ್ಲಿ ಖಂಡಿತವಾಗಿಯೂ ಬೆದರಿಕೆ ಮತ್ತು ಸಂಘರ್ಷದ ಧ್ವನಿ ಇದೆ. ಈ ಸಮಾವೇಶವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಯಾರೂ ಊಹಿಸಲಾಗದಂತಹ ಭೀಕರ ಅಪರಾಧಗಳ ಬಗ್ಗೆ, ಧರ್ಮಸ್ಥಳದಲ್ಲೇ ಹಲವು ದಶಕಗಳಲ್ಲಿ ನಡೆದಿರುವ ಭೀಕರ ಅತ್ಯಾಚಾರ, ಹತ್ಯೆಗಳ ಬಗ್ಗೆ ವಿಶೇಷ ತನಿಖಾ ದಳ (ಎಸ್‍ಐಟಿ) ತನಿಖೆ ನಡೆಸುತ್ತಿರುವಾಗ, ಜೈನ ಮಠಾಧೀಶರು ರಂಗ ಪ್ರವೇಶಿಸಿರುವುದು ಖಂಡಿತವಾಗಿಯೂ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ...