ರಾಜ್ಯದಲ್ಲಿ ಜನಿವಾರದ ಮೇಲೆ ಎಂದಿಗೂ ಅಧಿಕೃತ ನಿಷೇಧವಿರಲಿಲ್ಲ, ಅದಕ್ಕೆ ಅವಕಾಶ ಕೊಡುವ ಪ್ರಶ್ನೆಯೆಲ್ಲಿ?
ಸಮಾನತೆಯ ಮರೀಚಿಕೆ: ಕರ್ನಾಟಕ ಸರ್ಕಾರದ ಸಮತೋಲನದ 'ತಂತ್ರ' ಅಧಿಕಾರಿಗಳ ಉದ್ಧಟತನವನ್ನು ಶಿಕ್ಷಿಸುವ ಧೈರ್ಯ ತೋರದ ಸರ್ಕಾರ, ಈಗ ಸುಳ್ಳು ನಿರೂಪಣೆಗಳ ಮೂಲಕ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದೆ .................. ಖರೇ ಹೇಳಬೇಕಂದ್ರ * ಬಿವಿಸೀ ಬ್ರಹ್ಮಚಾರಿಗಳ ಜನಿವಾರ ಮತ್ತು ಶಾಲಾ ವಿದ್ಯಾರ್ಥಿನಿಯರ ಹಿಜಾಬ್ ಎರಡನ್ನೂ ಒಂದೇ ಉಸಿರಿನಲ್ಲಿ ಪ್ರಸ್ತಾಪಿಸಿ, ಅವುಗಳ ಮೇಲಿನ 'ನಿಷೇಧ'ವನ್ನು ಹಿಂಪಡೆಯುವುದಾಗಿ ಘೋಷಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವು ರಾಜಕೀಯ ಚಾಣಾಕ್ಷತನದ ಪರಮಾವಧಿಯಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಇದು `ಸರ್ವಧರ್ಮ ಸಮಭಾವ'ದ ಉನ್ನತ ನಡೆ ಎಂಬಂತೆ ಬಿಂಬಿತವಾಗುತ್ತಿದ್ದರೂ, ಇದರ ಆಳದಲ್ಲಿ ಅಡಗಿರುವುದು ಕೇವಲ ಮತಬ್ಯಾಂಕ್ ರಾಜಕಾರಣದ ಲೆಕ್ಕಾಚಾರ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕುವ ತಂತ್ರವಷ್ಟೇ. ಸುದೀರ್ಘ ಚರ್ಚೆಗೆ ಗ್ರಾಸವಾಗಿರುವ ಈ ಬೆಳವಣಿಗೆಯು ಆಡಳಿತದ ನೈಜ ಮುಖಕ್ಕೆ ಕನ್ನಡಿ ಹಿಡಿಯುವಂತಿದೆ. ಇಲ್ಲಿನ ಅತ್ಯಂತ ದೊಡ್ಡ ವಂಚನೆಯೆಂದರೆ, ಕರ್ನಾಟಕದಲ್ಲಿ ಜನಿವಾರದ ಮೇಲೆ ಎಂದಿಗೂ ಅಧಿಕೃತ ನಿಷೇಧವಿರಲಿಲ್ಲ. ಹಿಜಾಬ್ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿ, ಸರ್ಕಾರದ ಆದೇಶಗಳ ಮೂಲಕ ಸಮವಸ್ತ್ರ ಸಂಹಿತೆಯ ಭಾಗವಾಗಿ ವಿವಾದಕ್ಕೀಡಾಗಿತ್ತು. ಆದರೆ ಜನಿವಾರವು ವ್ಯಕ್ತಿಯ ನಂಬಿಕೆಯ ಖಾಸಗಿ ಸಂಕೇತವಾಗಿ ಬಟ್ಟೆಯ ಒಳಗೆ ಧರಿಸುವಂಥದ್ದು. ಅಸ್ತಿತ್ವದಲ್ಲೇ ಇಲ್ಲದ ನಿಷೇಧವನ್ನು 'ತ...