Posts

Showing posts with the label Modi

ಮೋದಿ ವ್ಯಕ್ತಿಪೂಜೆ ಮತ್ತು ಬಿಜೆಪಿಯ ಚುನಾವಣಾ ಹಿನ್ನಡೆ

 ಹೇಳಲೇಬೇಕಾಗಿದ್ದು * ಬಿವಿಸೀ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸ್ವಂತ ಬಲದ ಮೇಲೆಯೇ ಸ್ಪಷ್ಟ ಬಹುಮತ ಗಳಿಸಲು ವಿಫಲವಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅತಿಯಾದ ಆತ್ಮರತಿ, ಏಕಪಕ್ಷೀಯ ಆಡಳಿತ ಶೈಲಿ ಮತ್ತು ವ್ಯಕ್ತಿಪೂಜೆಯೇ ಮುಖ್ಯ ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಪ್ರಬಲ ವಾದವಾಗಿದೆ. ಚುನಾವಣಾ ಪ್ರಚಾರದ ವೇಳೆ ತಾವು ಜೈವಿಕವಾಗಿ ಜನಿಸಿದವನಲ್ಲ, ಬದಲಿಗೆ ದೈವಿಕ ಸಂಕಲ್ಪದಿಂದ ಕಳುಹಿಸಲ್ಪಟ್ಟವನು ಎಂಬ ಮೋದಿ ಅವರ ಹೇಳಿಕೆಯು ಅವರ ಅತಿಯಾದ ಅಹಂಕಾರದ ಸಂಕೇತವಾಗಿ ಕಂಡುಬಂದಿತು. ಈ ದೈವಿಕ ಆತ್ಮರತಿಯು ಮತದಾರರಲ್ಲಿ ತೀವ್ರ ಅಸಮಾಧಾನ ಮತ್ತು ಗೊಂದಲವನ್ನು ಉಂಟುಮಾಡಿತು. ಪ್ರಚಾರದ ಪ್ರತಿಯೊಂದು ಜಾಹೀರಾತು, ಬ್ಯಾನರ್ ಮತ್ತು ಕಾರ್ಯಕ್ರಮಗಳಲ್ಲಿ ಪಕ್ಷ ಅಥವಾ ಸಂಪುಟದ ಇತರ ನಾಯಕರನ್ನು ಬದಿಗೊತ್ತಿ ಮೋದಿ ಅವರೊಬ್ಬರನ್ನೇ ಪ್ರದರ್ಶಿಸಲಾಯಿತು. ಜವಾಹರಲಾಲ್ ನೆಹರೂ ಅಥವಾ ಇಂದಿರಾ ಗಾಂಧಿಯವರ ಕಾಲದಲ್ಲಿದ್ದ `ಇಂಡಿಯಾ ಅಂದರೆ ಇಂದಿರಾ' ಮಾದರಿಯ ಧೋರಣೆಯನ್ನು ಪುನರಾವರ್ತಿಸುತ್ತಾ, `ಮೋದಿ ಅಂದರೆ ಭಾರತ' ಎಂಬ ಸಮೀಕರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಹೊಡೆತ ನೀಡಿತು. ಆಡಳಿತ ಶೈಲಿಯಲ್ಲಿಯೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸೂಕ್ತ ಗೌರವ ನೀಡದಿರುವುದು, ಪಕ್ಷದಲ್ಲಿ ತಮಗಿಂತ ಎತ್ತರಕ್ಕೆ ಬೆಳೆಯಬಹುದಾದ ನಾಯಕರನ್ನು ಹತೋಟಿಯಲ್ಲಿಡುವುದು ಮತ್ತು ಯಾ...

2029ರ ಲೋಕಸಭಾ ಚುನಾವಣೆ: ಮೋದಿ ಗೆಲುವಿನ ಹಾದಿ ಸುಲಭವೇ?

 * ಬಿವಿಸೀ 2029ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಈಗಲೇ ಚರ್ಚೆಯಲ್ಲಿದೆ. ಇದಕ್ಕೆ ಒಂದೇ ಮಾತಿನಲ್ಲಿ ಉತ್ತರ ನೀಡುವುದು ಕಷ್ಟ, ಏಕೆಂದರೆ ಅವರ ಮುಂದೆ ಅವಕಾಶಗಳು ಮತ್ತು ಸವಾಲುಗಳು ಎರಡೂ ಇವೆ. ಮೋದಿ ಅವರ ದೊಡ್ಡ ಶಕ್ತಿ ಎಂದರೆ ಅವರ ವೈಯಕ್ತಿಕ ವರ್ಚಸ್ಸು ಮತ್ತು ನಿರಂತರ ಪ್ರಚಾರ. ಕಳೆದ ಹನ್ನೆರಡು ವರ್ಷಗಳಿಂದ ಭಾರತೀಯ ಜನತಾ ಪಕ್ಷವು ಮೋದಿ ಅವರೊಬ್ಬರನ್ನೇ ದೇಶದ ಏಕೈಕ ನಾಯಕನಾಗಿ ಬಿಂಬಿಸಿದೆ. ಇದು 2014, 2019 ಮತ್ತು 2024ರಲ್ಲಿ ಸುಮಾರು ಶೇಕಡ 37ರಷ್ಟು ಮತಗಳನ್ನು ಉಳಿಸಿಕೊಳ್ಳಲು ನೆರವಾಗಿದೆ. ಆದರೆ ಇದೇ ಪಕ್ಷದ ದೊಡ್ಡ ದೌರ್ಬಲ್ಯವೂ ಹೌದು. ಎರಡನೇ ಹಂತದ ನಾಯಕತ್ವವನ್ನು ಬೆಳೆಸದ ಕಾರಣ ಪಕ್ಷ ಸಂಪೂರ್ಣವಾಗಿ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಮತ್ತೊಂದೆಡೆ, ಜನರಲ್ಲಿ ಅಸಮಾಧಾನವೂ ಹೆಚ್ಚಾಗುತ್ತಿದೆ. ಮೊದಲನೆಯದು ಹಣದುಬ್ಬರ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರನ್ನು ಕಂಗೆಡಿಸಿದೆ ಮತ್ತು ಸರ್ಕಾರ ದೊಡ್ಡ ಕೈಗಾರಿಕಾ ಮನೆತನಗಳಿಗೆ ಮಾತ್ರ ನೆರವಾಗುತ್ತಿದೆ ಎಂಬ ಭಾವನೆ ಬಲವಾಗಿದೆ. ಎರಡನೆಯದು ನಿರುದ್ಯೋಗ. 2014ರಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು, ಆದರೆ ಇಂದಿಗೂ ಕೋಟ್ಯಂತರ ಯುವಕರು ಕೆಲಸವಿಲ್ಲದೆ ಇದ್ದಾರೆ. ಮೂರನೆಯದು ಹಳೆಯ ಭರವಸೆಗಳಾದ ಕಪ್ಪುಹಣ ವಾಪಸು ತಂದು ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುವ ಮ...

ಮೋದಿ ಪಟ್ಟು ಸಡಿಲವಾಗುತ್ತಿದೆಯೇ? ಜನ ಏತಕ್ಕಾಗಿ ಆಕ್ರೋಶಗೊಂಡಿದ್ದಾರೆ?

 ಬಿವಿಸೀ ಯಾವುದೇ ಪ್ರಭಾವಿ ರಾಜಕೀಯ ಆಡಳಿತದಲ್ಲಿ ಅಜೇಯತೆಯ ಪ್ರಭಾವವು ತೆರೆಮರೆಯಲ್ಲಿ ಕರಗಿಹೋಗುವ ಒಂದು ಕ್ಷಣ ಬಂದೇ ಬರುತ್ತದೆ. ದಶಕಕ್ಕೂ ಹೆಚ್ಚು ಕಾಲ, ಪ್ರಧಾನಿ ನರೇಂದ್ರ ಮೋದಿ ಅವರು ನಾಯಕನನ್ನು ಪ್ರಶ್ನಿಸುವುದನ್ನೇ ದೇಶವನ್ನೇ ಪ್ರಶ್ನಿಸುವುದು ಎಂಬಂತೆ ಬಿಂಬಿಸುವ ಅಧಿಕಾರದ ಹಿಡಿತ ಹೊಂದಿದ್ದರು. ಆದರೆ ಇಂದು, ರಾಜಕೀಯ ವಾತಾವರಣವು ಗಮನಾರ್ಹವಾಗಿ ಬದಲಾಗಿದೆ. ಹಿಂದೆಲ್ಲಾ ಸದ್ದಿಲ್ಲದೆ ನಡೆಯುತ್ತಿದ್ದ ಅಸಮಾಧಾನದ ಮಾತುಗಳು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ವಿಕಟಹಾಸ್ಯವಾಗಿ ಮತ್ತು ರಸ್ತೆಗಳಲ್ಲಿ ಸಾರ್ವಜನಿಕ ಪ್ರತಿಭಟನೆಗಳಾಗಿ ಮಾರ್ಪಟ್ಟಿವೆ. ಈ ಸಾರ್ವಜನಿಕ ಆಕ್ರೋಶವು ದಿಢೀರನೆ ಅಥವಾ ಪ್ರತ್ಯೇಕವಾಗಿ ಹುಟ್ಟಿಕೊಂಡಿದ್ದಲ್ಲ. ಬದಲಾಗಿ, ಇದು ಪಕ್ಷದ ಆಂತರಿಕ ಶ್ರೇಣಿ, ಆಡಳಿತಶಾಹಿ ಮತ್ತು ಸಾರ್ವಜನಿಕ ನಂಬಿಕೆ ಎಂಬ ಮೂರು ವಿಭಿನ್ನ ಸ್ತಂಭಗಳಲ್ಲಿ ಒಂದೇ ಬಾರಿಗೆ ಸಡಿಲಗೊಳ್ಳುತ್ತಿರುವ ನಿಯಂತ್ರಣವನ್ನು ಪ್ರತಿನಿಧಿಸುತ್ತದೆ. ಭಾರತೀಯ ಜನತಾ ಪಕ್ಷದ ಒಳಗೂ ಕೇಂದ್ರೀಕೃತ ಹಿಡಿತವು ದೀರ್ಘಕಾಲದಿಂದ ಅಸಮಾಧಾನವನ್ನು ಉಂಟುಮಾಡಿದೆ. 2014ರಿಂದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯಂತಹ ಹಿರಿಯ ನಾಯಕರನ್ನು 75 ವರ್ಷಗಳ ನಿವೃತ್ತಿ ವಯಸ್ಸಿನ ಲಿಖಿತವಲ್ಲದ ನಿಯಮದಡಿಯಲ್ಲಿ 'ಮಾರ್ಗದರ್ಶಕ ಮಂಡಲ'ಕ್ಕೆ ಸೀಮಿತಗೊಳಿಸಲಾಯಿತು. ಆದರೆ, ಮೋದಿ ಅವರು 76ನೇ ವರ್ಷಕ್ಕೆ ಕಾಲಿಡುತ್ತಿದ್ದರೂ, ಆ ನಿಯಮವು ಅವರನ್ನು ಹೊರತುಪಡಿಸಿ ಉಳಿದೆಲ್ಲರ...

ಪ್ರತಿಭಟನೆಗಳ ಮೇಲೆ ಮೋದಿ ಸರ್ಕಾರದ ನಿರಂತರ ಕಣ್ಗಾವಲು!

 * ಬಿವಿಸೀ ಭಾರತದಲ್ಲಿ ಸೂಕ್ತ ದತ್ತಾಂಶ ಗೌಪ್ಯತೆ ಹಾಗೂ ಸೈಬರ್ ಭದ್ರತಾ ಕಾಯ್ದೆಗಳ ಕೊರತೆಯ ನಡುವೆ, ಸರ್ಕಾರವು ನಾಗರಿಕರ ಮೇಲೆ ತಂತ್ರಜ್ಞಾನದ ಮೂಲಕ ನಿರಂತರ ಮತ್ತು ನಿಯಂತ್ರಣವಿಲ್ಲದ ಕಣ್ಗಾವಲು ಇಡುತ್ತಿದೆ. ಜಂತರ್ ಮಂತರ್ ಹಾಗೂ ರೈತರ ಪ್ರತಿಭಟನೆಗಳಂತಹ ಸ್ಥಳಗಳಲ್ಲಿ ದೆಹಲಿ ಮತ್ತು ಹರಿಯಾಣ ಪೆÇಲೀಸರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಕ್ಯಾಮೆರಾ ಡ್ರೋನ್‍ಗಳು, ನೈಜ ಸಮಯದಲ್ಲಿ ಮುಖ ಗುರುತಿಸುವ ತಂತ್ರಜ್ಞಾನ, ಸ್ವಯಂಚಾಲಿತ ವಾಹನ ಸಂಖ್ಯೆ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆಯ ಕನ್ನಡಿಗಳನ್ನು ಬಳಸಿ ಪ್ರತಿಭಟನಾಕಾರರ ಮುಖದ ದತ್ತಾಂಶ ಹಾಗೂ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇತ್ತೀಚೆಗೆ ಸೋನಮ್ ವಾಂಗ್ಚುಕ್ ಅವರ ಪ್ರತಿಭಟನೆಯ ಸಂದರ್ಭದಲ್ಲಿ, ಸ್ಥಳದಲ್ಲಿದ್ದ ಹಲವು ವಿದ್ಯಾರ್ಥಿ ನಾಯಕರು ಹಾಗೂ ಹೋರಾಟಗಾರರ ಮೊಬೈಲ್ ಫೆÇೀನ್‍ಗಳನ್ನು ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಬಲವಂತವಾಗಿ ಲಾಕ್ ಮಾಡಿ, ಅವರ ಸಂವಹನವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು ಎಂಬ ಆರೋಪವಿದೆ. ಇದರೊಂದಿಗೆ ಪ್ರತಿಭಟನಾಕಾರರನ್ನು ಬೆಂಬಲಿಸುವ ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತುವ ವಿದ್ಯಾರ್ಥಿ ಸಂಘಟನೆಗಳ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅಮಾನತುಗೊಳಿಸುವುದು, ಪ್ರಸಾರ ತಡೆಯುವುದು ಹಾಗೂ ವಿಡಿಯೋಗಳನ್ನು ಸಂವೇದನಾಶೀಲ ವಿಷಯ ಎಂದು ವಿಭಾಗಿಸಿ ವ್ಯಾಪ್ತಿಯನ್ನು ಕಡಿಮೆ ಮಾಡುವ ಕೆಲಸ ನಡೆಯುತ್ತಿದೆ. ಜವಾಹರಲಾಲ್ ನೆಹರೂ ವಿಶ...

ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆ: ರಾಜಕೀಯ ಲೆಕ್ಕಾಚಾರ ಉಲ್ಟಾ ಹೊಡೆದಿದ್ದೇಕೆ ?

 ಪ್ರಚಲಿತ  * ಬಿವಿಸೀ ನರೇಂದ್ರ ಮೋದಿ ಸರ್ಕಾರವು ರಾಹುಲ್ ಗಾಂಧಿ ವಿರುದ್ಧ ಉದ್ದೇಶಿತ ಹಕ್ಕುಚ್ಯುತಿ ನಿರ್ಣಯದಿಂದ ಹಿಂದೆ ಸರಿದಿರುವುದು ಕೇವಲ ಸೌಜನ್ಯದ ಕಾರಣಕ್ಕಲ್ಲ, ಬದಲಾಗಿ ಬದಲಾದ ರಾಜಕೀಯ ಪರಿಸ್ಥಿತಿಯ ಒತ್ತಡದಿಂದ ಎಂಬುದು ಸ್ಪಷ್ಟವಾಗಿದೆ. ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭಾರತದ ಒಪ್ಪಂದಗಳು ದೇಶದ ಹಿತಾಸಕ್ತಿಗೆ ಧಕ್ಕೆ ತರುತ್ತಿವೆ ಎಂದು ಸಂಸತ್ತಿನಲ್ಲಿ ರಾಹುಲ್ ಮಾಡಿದ ಗಂಭೀರ ಆರೋಪಗಳು ಕೇವಲ ವಿರೋಧ ಪಕ್ಷದ ಸಾಮಾನ್ಯ ಟೀಕೆಯಾಗಿ ಉಳಿಯದೆ, ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವೊದಗಿಸಿವೆ. ಅವರು ಈ ವಿಷಯವನ್ನು ಅತ್ಯಂತ ಭಾವನಾತ್ಮಕವಾಗಿ ಮತ್ತು ಅಷ್ಟೇ ದೃಢವಾಗಿ ಮಂಡಿಸಿದ್ದು, ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳನ್ನೇ ಪ್ರತಿಧ್ವನಿಸಿದಂತೆ ಭಾಸವಾಯಿತು. ಅನಿಶ್ಚಿತ ಮತ್ತು ವ್ಯವಹಾರಿಕ ಮನೋಭಾವದ ನಾಯಕರೊಂದಿಗೆ ನಡೆಯುವ ಪಾರದರ್ಶಕವಲ್ಲದ ಒಪ್ಪಂದಗಳು ಭಾರತಕ್ಕೆ ಅಪಾಯ ತರಬಹುದು ಎಂಬ ಅವರ ಮಾತುಗಳು ಜನರಿಗೆ ತಲುಪಿದವು. ಕಳೆದ ಹಲವು ವರ್ಷಗಳಿಂದ ಮೋದಿ ಸರ್ಕಾರವು `ಆತ್ಮನಿರ್ಭರತೆ'ಯನ್ನು ಸಾರ್ವಭೌಮತ್ವ ಮತ್ತು ಆಯಕಟ್ಟಿನ ಸ್ವಾತಂತ್ರ‍್ಯದ ಸಂಕೇತವಾಗಿ ಬಿಂಬಿಸುತ್ತಾ ಬಂದಿದೆ. ಇಂತಹ ಸನ್ನಿವೇಶದಲ್ಲಿ, ವ್ಯಾಪಾರ ಒಪ್ಪಂದಗಳ ವಿಷಯದಲ್ಲಿ ಭಾರತವು ಪರಕೀಯ ಒತ್ತಡಕ್ಕೆ ಮಣಿಯುತ್ತಿದೆ ಎಂಬ ಸಣ್ಣ ಸಂಶಯವೂ ರಾಜಕೀಯವಾಗಿ ಸರ್ಕಾರಕ್ಕೆ ಮುಜುಗರ ತರುವಂಥದ್ದಾಗಿತ್ತು. ರಾಹುಲ್ ಗಾಂಧಿ ಈ ಸಂಶಯವನ್ನೇ ಒಂದು ನೇರ ರಾ...

ಆತ್ಮನಿರ್ಭರತೆಯನ್ನು ಅವುಡುಗಚ್ಚಿಕೊಂಡು ಅಮೆರಿಕಕ್ಕೆ ಶರಣಾದ ಮೋದಿ

 ರಾಜನೀತಿ * ಬಿವಿಸೀ ಭಾರತದ ಕಚ್ಚಾತೈಲ ಖರೀದಿ ಮತ್ತು ಆಮದು ನೀತಿಯ ಸುತ್ತ ಸೃಷ್ಟಿಯಾಗುತ್ತಿರುವ ಚಿತ್ರಣ ಕೆಲವು ಅಹಿತಕರ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ಕಳೆದ ಕೆಲವು ವರ್ಷಗಳಿಂದ ಮೋದಿ ಸರ್ಕಾರವು ಪಶ್ಚಿಮ ರಾಷ್ಟ್ರಗಳ ಒತ್ತಡ ತಂತ್ರಗಳಿಗೆ ಪ್ರತಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದು, ಜಾಗತಿಕ ಖಂಡನೆಯ ಹೊರತಾಗಿಯೂ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಲೇ ಇದೆ. ಈ ಧೋರಣೆಯನ್ನು ಆಂತರಿಕವಾಗಿ ಕಾರ್ಯತಂತ್ರದ ಸ್ವಾಯತ್ತತೆ ಎಂದೇ ಬಣ್ಣಿಸಲಾಗುತ್ತಿತ್ತು. ಭಾರತ ಮೊದಲು, ಆನಂತರ ಮೈತ್ರಿ ಎನ್ನುವ ಧೋರಣೆ ಅಲ್ಲಿ ಕಾಣಬಹುದಿತ್ತು. ಈಗ ವರದಿಗಳನ್ನು ಗಮನಿಸಿದರೆ, ನಮ್ಮ ರಿಫೈನರಿಗಳಿಗೆ ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಕಡಿಮೆ ಮಾಡಲು ನಿರ್ದೇಶನಗಳನ್ನು ಭಾರತ ಸರಕಾರ ನೀಡುತ್ತಿದೆ ಎನ್ನಲಾಗಿದೆ. ಅಮೆರಿಕ ಮತ್ತು ವೆನೆಜುವೆಲಾದಿಂದ ತೈಲ ಖರೀದಿಸುವಂತೆ ಆದೇಶಿಸಲಾಗುತ್ತಿದೆ. ಇದು ಡೊನಾಲ್ಡ್ ಟ್ರಂಪ್ ಅವರ ದೀರ್ಘ ಕಾಲದ ದುರಾಗ್ರಹಕ್ಕೆ ಪೂರಕವಾಗಿ ಕಾಣುತ್ತದೆ. ಇದು ಕೇವಲ ವಾಣಿಜ್ಯ ಒಪ್ಪಂದದ ಹೊಂದಾಣಿಕೆಯಾಗಿದ್ದಲ್ಲಿ ಸರ್ಕಾರ ಇದನ್ನು ಸ್ಪಷ್ಟವಾಗಿ ಹೇಳಬೇಕು. ಅಥವಾ ಇದು ವಿಶಾಲ ವ್ಯಾಪಾರ ಒಪ್ಪಂದದ ಚೌಕಾಸಿಯ ಭಾಗವಾಗಿದ್ದರೆ, ದೇಶದ ಜನತೆ ಪಾರದರ್ಶಕತೆಯನ್ನು ಅಪೇಕ್ಷಿಸುತ್ತಾರೆ. ಮೌನವಾಗಿದ್ದಷ್ಟೂ ಅನುಮಾನಗಳು ಹೆಚ್ಚಾಗುತ್ತವೆ. ಬದಲಾವಣೆಯಾಗಿರುವುದು ಏನು? ಕೇಂದ್ರ ಸರ್ಕಾರ ಒತ್ತಡವನ್ನು ತಡೆದುಕೊಂಡಿದೆ. ಇಂದು ಯಾವು...

Energy Sovereignty or Strategic Surrender?

  The emerging clarity around India’s crude oil decisions raises uncomfortable questions. For years, the Modi government projected defiance in the face of Western pressure, continuing discounted Russian oil purchases despite global criticism. That posture was sold domestically as strategic autonomy — India first, alliances later. Now, reports indicate instructions to refiners to scale down Russian crude and increase purchases from the United States and Venezuela — a shift that aligns neatly with President Trump’s long-stated demands. If this is purely a commercial recalibration, the government must say so clearly. If it is part of a broader trade bargain, the country deserves transparency. Silence invites suspicion. What changed? Earlier, New Delhi withstood pressure. Today, it appears to have adjusted course without explanation. Energy security is not a minor procurement issue; it is a cornerstone of foreign policy and economic stability. When a long-standing supplier is quietly s...

Secrecy as state policy: why the Modi government fears disclosure

  A troubling impression is gaining ground across the country: the NDA government at the Centre is deliberately withholding vital information from citizens on matters that directly affect livelihoods, national security, and public trust. The unfolding controversy over the India–US trade deal has brought this concern into sharp focus. Commerce Minister Piyush Goyal assured farmers that their interests were fully protected. Yet the United States soon disclosed the deal’s terms, revealing free market access for certain American cereals in India. This contradiction is not technical; it goes to the heart of credibility. When disclosures emerge from Washington instead of New Delhi, anger among farmers is inevitable. Congress president Mallikarjun Kharge’s charge of a “stab in the back” resonates because the facts lend it weight. The pattern extends beyond trade. Russia has openly accused the U.S. of pressuring India to curb Russian oil purchases—an issue the Modi government never acknowl...

Trump claimed India surrendered on Russian oil—and Modi let it stand

  Donald Trump’s claim that India agreed to stop buying Russian oil and switch to American supplies was not a casual boast. It was a deliberate assertion of dominance. What followed exposed a deeper weakness: India chose silence. New Delhi never formally accepted such a condition. Yet when Trump went public, the government failed to rebut him with clarity or conviction. A later, procedural clarification satisfied the record but not the world. In global politics, what is not denied loudly is assumed to be true. By staying quiet, India allowed Trump to define the outcome—and the hierarchy. Russian oil purchases were more than an economic choice. They had become India’s most visible assertion of strategic autonomy after the Ukraine war, signalling that New Delhi could resist Western pressure. Trump’s statement punctured that image in one stroke. The damage was immediate and broad: to India’s credibility with Russia, to its standing in the Global South, and to Modi’s carefully cultivat...

Siddaramaiah’s bold challenge: exposing Modi’s neglect of Karnataka

Image
  Chief Minister Siddaramaiah has once again done what few state leaders have dared to do — speak plainly, directly, and unapologetically to the Prime Minister of India. His recent remarks questioning the so-called “gifts” of GST rebates and the Centre’s selective generosity toward people have struck a chord across the state. Behind the rhetoric lies a deeper truth — the Modi government’s systematic marginalisation of Karnataka, both economically and emotionally. Siddaramaiah’s questions are not merely political jabs. They are rooted in the fiscal experience of the state over the past decade. When he asked why the Centre first imposed a “back-breaking GST” and is now presenting marginal concessions as “gifts to the people,” he was exposing a national hypocrisy. The GST, hailed as a revolutionary reform, has in reality concentrated financial power in the hands of the Centre. States like Karnataka have borne the brunt of revenue shortfalls while being denied their rightful compensati...

ಜಿಎಸ್‍ಟಿ ಸುಲಿಗೆ ಮತ್ತು ಕರ್ನಾಟಕದ ನಿರ್ಲಕ್ಷ್ಯ; ಮೋದಿಗೆ ಸಿದ್ದರಾಮಯ್ಯ ಧೀರೋದಾತ್ತ ಸವಾಲು

Image
  ಕೇಂದ್ರ ಸರ್ಕಾರದ ಠಕ್ಕುತನವನ್ನು, ಹಣಕಾಸು ತಾರತಮ್ಯ, ಭಾವನಾತ್ಮಕ ಅಲಕ್ಷ್ಯವನ್ನು ಬಯಲುಮಾಡುವ ಮೂಲಕ, ನಮ್ಮ ಮುಖ್ಯಮಂತ್ರಿ ಪಕ್ಷಾತೀತವಾಗಿ ಇರುವಂತಹ ಭಾವನೆಗಳಿಗೆ ದನಿ ಕೊಟ್ಟಿದ್ದಾರೆ. ........... ನೇರಾನೇರ * ಬಿವಿಸೀ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಧೈರ್ಯದಿಂದ ಮಾಡದ ಕೆಲಸವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಮೃದುವಾಗಿಯೇ ಆದರೂ, ನೇರವಾಗಿ ಯಾವುದೇ ಮುಜುಗರ ಅಥವಾ ಹಿಂಜರಿಕೆ ಇಲ್ಲದೆ ಪ್ರಧಾನಮಂತ್ರಿ ಮೋದಿಗೆ ಸವಾಲೆಸೆದಿದ್ದಾರೆ. ಇತ್ತೀಚಿನ ಕೇಂದ್ರ ಸರ್ಕಾರದ ಉಡುಗೊರೆಗಳು ಎಂದು ಪ್ರಚಾರ ಪಡೆಯುತ್ತಿರುವ ಜಿಎಸ್‍ಟಿ ರಿಯಾಯಿತಿಯನ್ನು ಪ್ರಶ್ನಿಸಿರುವ ಸಿದ್ದರಾಮಯ್ಯ, ಮೋದಿ ಅವರ ಆಯ್ದ ನೀತಿಗಳು ರಾಜ್ಯದ ಕೆಲವೇ ಜನರ ನಡುವೆ ಜನಪ್ರಿಯತೆ ಪಡೆದಿರುವುದನ್ನೂ ಪ್ರಶ್ನಿಸಿದ್ದಾರೆ. ಈ ಹೇಳಿಕೆಗಳ ಹಿಂದೆ, ಆಳವಾದ ಸತ್ಯ ಅಡಗಿದ್ದು, ಮೋದಿ ಸರ್ಕಾರ ವ್ಯವಸ್ಥಿತವಾಗಿ ಕರ್ನಾಟಕವನ್ನು ಆರ್ಥಿಕವಾಗಿ, ಭಾವನಾತ್ಮಕವಾಗಿ ನಿರ್ಲಕ್ಷಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಸಿದ್ದರಾಮಯ್ಯ ಅವರ ಪ್ರಶ್ನೆಗಳು ಕೇವಲ ರಾಜಕೀಯ ಟೀಕೆಗಳಲ್ಲ. ಅವು ಕಳೆದ ಒಂದು ದಶಕದಲ್ಲಿ ರಾಜ್ಯದ ಹಣಕಾಸು ವಲಯದ ಅನುಭವಗಳಲ್ಲಿ ಅಡಗಿದೆ. ಮೊದಲು ಜನರ ಬೆನ್ನೆಲುಬು ಮುರಿಯುವ ಜಿಎಸ್‍ಟಿ ತೆರಿಗೆಯನ್ನು ಜನರ ಮೇಲೆ ವಿಧಿಸಿ ಈಗ ಅಲ್ಪಸ್ವಲ್ಪ ರಿಯಾಯಿತಿ ನೀಡುತ್ತಿರುವುದನ್ನೇ ಜನರಿಗೆ ಕೊಟ್ಟ ಉಡುಗೊರೆ ಎಂದು ಪ್ರಚಾರ ಮಾಡುತ್ತಿರುವುದು ಮೋದಿ ಸರ್ಕಾರದ ಠ...