ಆರೆಸ್ಸೆಸ್ ಬಗ್ಗೆ ತಪ್ಪು ಕಲ್ಪನೆಯಲ್ಲ, ನಂಬಲಾರದ ಸತ್ಯಗಳಿವೆ
* ಬಿವಿಸೀ ಆರೆಸ್ಸೆಸ್ ಬಗ್ಗೆ ತಪ್ಪು ನಿರೂಪಣೆ ಇದೆ ಎಂಬ ವಾದವನ್ನು ಮಾಡಲಾಗುತ್ತಿದೆ. ಆದರೆ ಸಾರ್ವಜನಿಕ ದಾಖಲೆಗಳಲ್ಲಿ ಇರುವ ಇತಿಹಾಸ, ಸಂಘದ ಸ್ವಂತ ಪ್ರಕಟಣೆಗಳು ಮತ್ತು ಸಂವಿಧಾನಬದ್ಧ ಸಂಸ್ಥೆಗಳ ವರದಿಗಳನ್ನೇ ನೋಡಿದರೆ, ಆರೆಸ್ಸೆಸ್ ಬಗ್ಗೆ ಇರುವ ಆತಂಕ ತಪ್ಪು ಕಲ್ಪನೆಯಲ್ಲ, ಸತ್ಯದ ಆಧಾರದ ಮೇಲೆ ಹುಟ್ಟಿದ್ದು ಎಂದು ಪ್ರಜಾಪ್ರಭುತ್ವವಾದಿಗಳು, ಇತಿಹಾಸ ತಜ್ಞರು ಮತ್ತು ಸಂವಿಧಾನ ಪ್ರೇಮಿಗಳು ವಾದಿಸುತ್ತಾರೆ. ತ್ರಿವರ್ಣ ಧ್ವಜ, ಸಂವಿಧಾನದ ಬಗೆಗಿನ ನಿಲುವು ಏನಾಗಿತ್ತು? ಸಂಘದ ಮುಖವಾಣಿ `ಆರ್ಗನೈಸರ್' 1947ರ ಆಗಸ್ಟ್ 14ರಂದು ತ್ರಿವರ್ಣ ಧ್ವಜವನ್ನು ಮೂರು ಬಣ್ಣಗಳಿಂದ ಕೆಟ್ಟದಾಗಿ ತಯಾರಿಸಲಾಗಿದೆ ಎಂದು ಬರೆದಿತ್ತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಾಗಲೂ ಆರ್ಗನೈಸರ್, ಭಾರತದ ಹೊಸ ಸಂವಿಧಾನದಲ್ಲಿ ಭಾರತೀಯತೆ ಏನೂ ಇಲ್ಲ, ಮನುಸ್ಮೃತಿಯಿಂದ ಏನನ್ನೂ ತೆಗೆದುಕೊಂಡಿಲ್ಲ ಎಂದು ಟೀಕಿಸಿತ್ತು. ಇದು ಸಾರ್ವಜನಿಕ ದಾಖಲೆಯಲ್ಲಿ ಇರುವ ಸತ್ಯ. ಸಂಘದ ಸಿದ್ಧಾಂತವಾದಿ ಗೋಲ್ವಾಲ್ಕರ್ ಅವರು ಬರೆದಿರುವ `ಬಂಚ್ ಆಫ್ ಥಾಟ್ಸ್' ಪುಸ್ತಕದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂಯುಕ್ತತೆಯ ಬಗ್ಗೆ ಇರುವ ವಿಚಾರಗಳು ಇಂದಿನ ಸಂವಿಧಾನದ ಆಶಯಕ್ಕೆ ತದ್ವಿರುದ್ಧವಾಗಿವೆ. ಗಾಂಧಿ ಹತ್ಯೆ ನಂತರ ನಿಷೇಧ ಏಕೆ ಆಯಿತು? ಮಹಾತ್ಮ ಗಾಂಧಿ ಹತ್ಯೆಯ ನಂತರ 1948ರ ಫೆಬ್ರವರಿ 4ರಂದು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ...