Posts

Showing posts with the label BJP-JDS aliance

ಕೂಸು ಹುಟ್ಟುವ ಮುನ್ನವೇ ಕುಲಾವಿ

 ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿಯ ಅಸಲಿಯತ್ತು ಖುಲ್ಲಂಖುಲ್ಲಾ * ಬಿವಿಸೀ "ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು" ಎಂಬ ಕನ್ನಡದ ಪ್ರಸಿದ್ಧ ಗಾದೆ ಪ್ರಸ್ತುತ ಜನತಾದಳ (ಜಾತ್ಯತೀತ) ಪಕ್ಷದ ಭ್ರಮೆಯ ರಾಜಕಾರಣಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಕರ್ನಾಟಕ ವಿಧಾನಸಭೆಯಲ್ಲಿ ಹತ್ತನೇ ಒಂದು ಭಾಗದಷ್ಟು ಬಲವೂ ಇಲ್ಲದ, ಲೋಕಸಭೆಯಲ್ಲೂ ಕೇವಲ ಬೆರಳೆಣಿಕೆಯಷ್ಟು ಸ್ಥಾನಗಳನ್ನು ಹೊಂದಿರುವ ದೇವೇಗೌಡರ ಕುಟುಂಬವು, 2029ರ ಚುನಾವಣೆಯ ನಂತರ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಪೀಠದ ಮೇಲೆ ಕುಳ್ಳಿರಿಸುವ ಹಗಲುಗನಸು ಕಾಣುತ್ತಿದೆ. ಕಲ್ಪನಾ ಲೋಕದಲ್ಲಿ ತೇಲಲು ಯಾವುದೇ ಹಣ ನೀಡಬೇಕಾಗಿಲ್ಲ ನಿಜ, ಆದರೆ ಜೆಡಿಎಸ್‍ನ ಈ ಲೆಕ್ಕಾಚಾರವು ಅತ್ಯಂತ ವಿಚಿತ್ರವಾದ ರಾಜಕೀಯ ವಿರೋಧಾಭಾಸವನ್ನು ಅವಲಂಬಿಸಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಲಿಷ್ಠ ರಾಷ್ಟ್ರೀಯ ಪಕ್ಷವಾದ ಬಿಜೆಪಿಯು, ಪ್ರಾದೇಶಿಕವಾಗಿ ಕ್ಷೀಣಿಸುತ್ತಿರುವ ಒಂದು ನಿರ್ದಿಷ್ಟ ಜಾತಿ ಆಧಾರಿತ ಮತ್ತು ಕೇವಲ ಕುಟುಂಬ ಕೇಂದ್ರಿತ ಸಂಸ್ಥೆಗೆ ಮಣಿಯಲು ಸಿದ್ಧವಾಗಿರುವಂತೆ ತೋರುತ್ತಿರುವುದು ಈ ವಿರೋಧಾಭಾಸಕ್ಕೆ ಪ್ರಮುಖ ಕಾರಣವಾಗಿದೆ. ಅವಕಾಶವಾದಿ ರಾಜಕಾರಣ ಜೆಡಿಎಸ್ ಪಕ್ಷವು ತಾನು ಹೊಂದಿದ್ದ 'ಜಾತ್ಯತೀತ' ಅಥವಾ ಸಮಾಜವಾದಿ ಸಿದ್ಧಾಂತದ ಮುಖವಾಡವನ್ನು ಕಳಚಿ ಬಹಳ ದಿನಗಳೇ ಕಳೆದಿವೆ. ಪ್ರಸ್ತುತ ಅದು ಕೇವಲ ದೇವೇಗೌಡರ ಕುಟುಂಬದ ಒಂದು 'ಪ್ರ...

NOISE WITH A PURPOSE: DEVE GOWDA RATTLES THE BJP–JD(S) EQUATION

  Deve Gowda has done what he has always done best—disturb a settled political script with a single, well-timed signal. At a moment when most assumed the Janata Dal (Secular) had irreversibly tied itself to the Bharatiya Janata Party, the JD(S) patriarch has introduced doubt, discomfort, and strategic noise. In Karnataka politics, that alone is an achievement. For months, the JD(S) behaved like an extension of the BJP. It backed the Modi government on virtually every issue, inside Parliament and outside. H. D. Kumaraswamy’s induction into the Union Cabinet reinforced the perception that the party had traded autonomy for survival. The unspoken expectation was clear: a gradual merger, or at least permanent subordination, was inevitable. Gowda himself appeared to play the role of a bulwark for the BJP, even taking on Congress critics of Modi with unusual vigour. Then came the disruption. Gowda’s declaration that JD(S) would not go with the BJP in forthcoming local body elections—and p...

ಬಿಜೆಪಿ-ಜೆಡಿಎಸ್ ಮೈತ್ರಿ ಸಮೀಕರಣ ಧ್ರತಿಗೊಳಿಸಿದ ದೇವೇಗೌಡ

 ದೇವೇಗೌಡರ ಒಂದು ಲಕ್ಷಣವನ್ನು ಮೊದಲಿನಿಂದಲೂ ಗುರುತಿಸಬಹುದು. ಅದು ಏನೆಂದರೆ, ಸ್ಥಾಪಿತವಾಗಿರುವ ರಾಜಕೀಯ ಚಿತ್ರಣವನ್ನು ಒಂದೇ ಏಟಿನಲ್ಲಿ, ಸಕಾಲದಲ್ಲಿ ಪ್ರಕ್ಷುಬ್ಧಗೊಳಿಸುವುದು. ಅವರ ಜೆಡಿಎಸ್ ಪಕ್ಷವು ಬಿಜೆಪಿಯೊಡನೆ ಶಾಶ್ವತವಾದ ಮತ್ತು ಬೇರ್ಪಡಿಸಲಾಗದ ಮೈತ್ರಿಯನ್ನು ಸಾಧಿಸಿದೆ ಎಂಬ ಅಭಿಪ್ರಾಯವು ರಾಜಕೀಯ ವಲಯದಲ್ಲಿ ಗಟ್ಟಿಯಾಗಿರುವ ಹೊತ್ತಿನಲ್ಲೇ, ಪಕ್ಷದ ಧುರೀಣ ಮತ್ತು ಸಂಸ್ಥಾಪಕ ದೇವೇಗೌಡರು ಅನುಮಾನಗಳನ್ನು ಸೃಷ್ಟಿಸಿದ್ದಾರೆ. ಇದು ಹಲವು ರೀತಿಯ ಅಹಿತಕರ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಬಿಜೆಪಿಯು ಮುಂದಿನ ತನ್ನ ಕಾರ್ಯತಂತ್ರದ ಬಗ್ಗೆ ಯೋಚಿಸುವಂತಾಗಿದೆ. ಕರ್ನಾಟಕದ ರಾಜಕಾರಣದಲ್ಲಿ ಇದೇ  ಒಂದು ಸಾಧನೆಯಾಗಿ ಕಾಣುತ್ತದೆ! ಹಲವು ವರ್ಷಗಳಿಂದ ಬಿಜೆಪಿಯ ಬಾಲಂಗೋಚಿಯಂತೆ ಅಥವಾ ವಿಸ್ತರಣೆಯಂತೆ ಜೆಡಿಎಸ್ ವರ್ತಿಸುತ್ತಾ ಬಂದಿದೆ. ಪ್ರತಿಯೊಂದು ವಿಷಯದಲ್ಲೂ ಸಹ ಮೋದಿ ಸರ್ಕಾರವನ್ನು ಬೆಂಬಲಿಸುವುದೇ ಅಲ್ಲದೆ ಸಂಸತ್ತಿನಲ್ಲೂ ಸಹ ಕೇಸರಿ ಪಕ್ಷಕ್ಕೆ ಒತ್ತಾಸೆಯಾಗಿ ನಿಂತಿದೆ.  ಎಚ್ ಡಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿದ್ದು, ಜೆಡಿಎಸ್ ಪಕ್ಷವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಎಂಬ ಅಭಿಪ್ರಾಯ ತಪ್ಪೇನಲ್ಲ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಕ್ರಮೇಣ ಬಿಜೆಪಿಯಲ್ಲಿ ಲೀನವಾಗಲಿದೆ ಎಂಬ ರಾಜಕೀಯ ವಿಶ್ಲೇಷಕರ ಅಭಿಪ್ರಾಯವೂ ಮೂಡಿತ್ತು. ಈ ಪಕ್ಷವು ಶಾಶ್ವತವಾಗಿ ಬಿಜೆಪ...