ಹೊಸ ಗಾಳಿ: ಭಯದ ವಾತಾವರಣ ಸಡಿಲ
ಮತದಾರರ ಸಂದೇಶಕ್ಕೆ ಮನ್ನಣೆ ಕಂಡಿದ್ದು * ಬಿವಿಸೀ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ರಾಜಕೀಯ ಮನಸ್ಥಿತಿ ಕಾಣುತ್ತಿದೆ. ಅದು ಸಂಕೀರ್ಣವಾಗಿದ್ದರೂ ಕೆಲವು ಸ್ಪಷ್ಟ ಸೂಚನೆಗಳನ್ನು ನೀಡುತ್ತಿದೆ. ಜನರು ಈಗ ಹಿಂದಿನಷ್ಟು ಹೆದರುತ್ತಿಲ್ಲ. ಮುಕ್ತವಾಗಿ ಮಾತನಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಮಹತ್ವದ ಬೆಳವಣಿಗೆ. ಈ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಇತ್ತೀಚಿನ ರಾಜಕೀಯ ಹಿನ್ನೆಲೆಯನ್ನು ಗಮನಿಸಬೇಕು. ಒಂದು ಕಾಲದಲ್ಲಿ ಸಮಾಜವಾದಿ ಮಾದರಿಯ ಆರ್ಥಿಕತೆಯಲ್ಲಿ ಸಕ್ಕರೆ, ಹಾಲು, ಬ್ರೆಡ್‍ನಿಂದ ಹಿಡಿದು ಅಡುಗೆ ಅನಿಲ, ದೂರವಾಣಿ ಸಂಪರ್ಕದವರೆಗೆ ಎಲ್ಲದಕ್ಕೂ ಕೊರತೆ ಇತ್ತು. ಪಡಿತರ ಅಂಗಡಿ ಮುಂದೆ ಸರತಿ ಸಾಲು ಸಾಮಾನ್ಯವಾಗಿತ್ತು. ಸರ್ಕಾರದ ಕೆಲಸ ವ್ಯಾಪಾರ ಮಾಡುವುದಲ್ಲ ಎಂಬ ಘೋಷಣೆಯೊಂದಿಗೆ ಮುಕ್ತ ಮಾರುಕಟ್ಟೆಯ ಭರವಸೆ ನೀಡಿದ ನಾಯಕತ್ವಕ್ಕೆ ಅದಕ್ಕಾಗಿಯೇ ದೊಡ್ಡ ಬೆಂಬಲ ಸಿಕ್ಕಿತ್ತು. ಆದರೆ ನಂತರ ಸರ್ಕಾರಿ ಸ್ವಾಮ್ಯದ ದೊಡ್ಡ ವ್ಯವಸ್ಥೆಯನ್ನೇ ಮುಂದುವರಿಸಿದ್ದು ಅನೇಕರಲ್ಲಿ ನಿರಾಸೆ ಮೂಡಿಸಿತು. ಇತ್ತೀಚಿನ ಲೋಕಸಭೆ ಚುನಾವಣೆಯ ಫಲಿತಾಂಶ ಮಹತ್ವದ ತಿರುವು ನೀಡಿತು. ನಾನೂರಕ್ಕೂ ಹೆಚ್ಚು ಸ್ಥಾನಗಳ ನಿರೀಕ್ಷೆ ಮತ್ತು ದೈವಿಕ ನಿಯೋಜನೆಯಂತಹ ಹೇಳಿಕೆಗಳ ನಡುವೆ ಬಂದ ಫಲಿತಾಂಶದಲ್ಲಿ ಸರಳ ಬಹುಮತವೂ ದೊರೆಯಲಿಲ್ಲ. ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಬೇಕಾಯಿತು. ಆ ಹಂತದಲ್ಲಿ ನಾಯಕತ್ವದ ನಡೆಯಲ್ಲಿ ವಿನಮ್ರತೆ ಕಾಣಿಸಿಕೊಂಡ...