ಮೋದಿ ಪಟ್ಟು ಸಡಿಲವಾಗುತ್ತಿದೆಯೇ? ಜನ ಏತಕ್ಕಾಗಿ ಆಕ್ರೋಶಗೊಂಡಿದ್ದಾರೆ?

 ಬಿವಿಸೀ


ಯಾವುದೇ ಪ್ರಭಾವಿ ರಾಜಕೀಯ ಆಡಳಿತದಲ್ಲಿ ಅಜೇಯತೆಯ ಪ್ರಭಾವವು ತೆರೆಮರೆಯಲ್ಲಿ ಕರಗಿಹೋಗುವ ಒಂದು ಕ್ಷಣ ಬಂದೇ ಬರುತ್ತದೆ. ದಶಕಕ್ಕೂ ಹೆಚ್ಚು ಕಾಲ, ಪ್ರಧಾನಿ ನರೇಂದ್ರ ಮೋದಿ ಅವರು ನಾಯಕನನ್ನು ಪ್ರಶ್ನಿಸುವುದನ್ನೇ ದೇಶವನ್ನೇ ಪ್ರಶ್ನಿಸುವುದು ಎಂಬಂತೆ ಬಿಂಬಿಸುವ ಅಧಿಕಾರದ ಹಿಡಿತ ಹೊಂದಿದ್ದರು. ಆದರೆ ಇಂದು, ರಾಜಕೀಯ ವಾತಾವರಣವು ಗಮನಾರ್ಹವಾಗಿ ಬದಲಾಗಿದೆ. ಹಿಂದೆಲ್ಲಾ ಸದ್ದಿಲ್ಲದೆ ನಡೆಯುತ್ತಿದ್ದ ಅಸಮಾಧಾನದ ಮಾತುಗಳು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ವಿಕಟಹಾಸ್ಯವಾಗಿ ಮತ್ತು ರಸ್ತೆಗಳಲ್ಲಿ ಸಾರ್ವಜನಿಕ ಪ್ರತಿಭಟನೆಗಳಾಗಿ ಮಾರ್ಪಟ್ಟಿವೆ.

ಈ ಸಾರ್ವಜನಿಕ ಆಕ್ರೋಶವು ದಿಢೀರನೆ ಅಥವಾ ಪ್ರತ್ಯೇಕವಾಗಿ ಹುಟ್ಟಿಕೊಂಡಿದ್ದಲ್ಲ. ಬದಲಾಗಿ, ಇದು ಪಕ್ಷದ ಆಂತರಿಕ ಶ್ರೇಣಿ, ಆಡಳಿತಶಾಹಿ ಮತ್ತು ಸಾರ್ವಜನಿಕ ನಂಬಿಕೆ ಎಂಬ ಮೂರು ವಿಭಿನ್ನ ಸ್ತಂಭಗಳಲ್ಲಿ ಒಂದೇ ಬಾರಿಗೆ ಸಡಿಲಗೊಳ್ಳುತ್ತಿರುವ ನಿಯಂತ್ರಣವನ್ನು ಪ್ರತಿನಿಧಿಸುತ್ತದೆ.

ಭಾರತೀಯ ಜನತಾ ಪಕ್ಷದ ಒಳಗೂ ಕೇಂದ್ರೀಕೃತ ಹಿಡಿತವು ದೀರ್ಘಕಾಲದಿಂದ ಅಸಮಾಧಾನವನ್ನು ಉಂಟುಮಾಡಿದೆ. 2014ರಿಂದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯಂತಹ ಹಿರಿಯ ನಾಯಕರನ್ನು 75 ವರ್ಷಗಳ ನಿವೃತ್ತಿ ವಯಸ್ಸಿನ ಲಿಖಿತವಲ್ಲದ ನಿಯಮದಡಿಯಲ್ಲಿ 'ಮಾರ್ಗದರ್ಶಕ ಮಂಡಲ'ಕ್ಕೆ ಸೀಮಿತಗೊಳಿಸಲಾಯಿತು. ಆದರೆ, ಮೋದಿ ಅವರು 76ನೇ ವರ್ಷಕ್ಕೆ ಕಾಲಿಡುತ್ತಿದ್ದರೂ, ಆ ನಿಯಮವು ಅವರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಅನ್ವಯಿಸುವಂತಿದೆ. ನಿತಿನ್ ಗಡ್ಕರಿಯಿಂದ ಹಿಡಿದು ಶಿವರಾಜ್ ಸಿಂಗ್ ಚೌಹಾಣ್ ಅವರವರೆಗಿನ ಪ್ರಭಾವಿ ಪ್ರಾದೇಶಿಕ ನಾಯಕರ ಪ್ರಭಾವವನ್ನು ಸಡನ್ನಾಗಿ ಕಡಿತಗೊಳಿಸಲಾಗಿದ್ದು, ಇದು ಪಕ್ಷದೊಳಗೆ ಅಸಮಾಧಾನವನ್ನು ಸೃಷ್ಟಿಸಿದೆ.

ಅದೇ ಸಮಯದಲ್ಲಿ, ಆಡಳಿತ ಯಂತ್ರದಲ್ಲೂ ತೀವ್ರ ಹತಾಶೆಯ ಕುರುಹುಗಳು ಕಾಣಿಸುತ್ತಿವೆ. ಜೇಷ್ಠತೆಯನ್ನು ಬದಿಗೊತ್ತುವ ಲ್ಯಾಟರಲ್ ಎಂಟ್ರಿ ಯೋಜನೆಗಳಿಂದಾಗಿ ವೃತ್ತಿಪರ ನಾಗರಿಕ ಸೇವಾಧಿಕಾರಿಗಳು ದೂರವಾಗುತ್ತಿದ್ದಾರೆ. ಇತ್ತೀಚೆಗೆ ನಿವೃತ್ತ ಅಧಿಕಾರಿಯೊಬ್ಬರನ್ನು ಪೆÇಲೀಸರು ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಘಟನೆ ಹಾಗೂ ಜಿಡಿಪಿ ಅಂಕಿಅಂಶಗಳ ತಿದ್ದುಪಡಿಯ ಬಗ್ಗೆ ಉದ್ಭವಿಸಿರುವ ಪ್ರಶ್ನೆಗಳು ಸರ್ಕಾರದ ಪಾರದರ್ಶಕತೆಯನ್ನು ಸವಾಲಿಗೆ ಒಡ್ಡುತ್ತಿವೆ. ರ್ಯಾಪಿಡ್ ಆಕ್ಷನ್ ಫೆÇೀರ್ಸ್ (ಆರ್‍ಎಎಫ್) ಆಂತರಿಕ ತನಿಖಾ ವರದಿಯಂತೆ ಪೆಲೆಟ್ ಗನ್‍ಗಳನ್ನು ಬಳಸಲಾಗಿದೆ ಎಂಬ ಸತ್ಯ ಬಹಿರಂಗಗೊಂಡು, ಸಂಸತ್ತಿನಲ್ಲಿ ಸರ್ಕಾರ ನೀಡಿದ್ದ ಹೇಳಿಕೆಗೂ ಅಧಿಕೃತ ದಾಖಲೆಗಳಿಗೂ ವೈರುಧ್ಯ ಕಂಡುಬಂದಾಗ, ಸರ್ಕಾರದ ಸರ್ವಶ್ರೇಷ್ಠತೆಯ ಮುಖವಾಡ ಕಳಚಿಬೀಳುತ್ತದೆ.

ಆದರೆ, ಆಕ್ರೋಶದ ಅತ್ಯಂತ ಪ್ರಬಲ ಅಲೆ ಹರಿಯುತ್ತಿರುವುದು ಸಾಮಾನ್ಯ ಜನರಿಂದ. ಹನ್ನೆರಡು ವರ್ಷಗಳ ಕಾಲ, ಅಪನಗದೀಕರಣ, ಜಿಎಸ್‍ಟಿ ತೆರಿಗೆ ಸಂಕೀರ್ಣತೆಗಳು ಮತ್ತು ಕಠಿಣ ಲಾಕ್‍ಡೌನ್‍ಗಳ ಮೂಲಕ ಮತದಾರರು ಅಭೂತಪೂರ್ವ ತಾಳ್ಮೆಯನ್ನು ತೋರಿಸಿದರು. ಆದರೆ "ಎಲ್ಲರಿಗೂ ವಸತಿ", ರೈತರ ಆದಾಯ ದ್ವಿಗುಣಗೊಳಿಸುವುದು ಮತ್ತು ಉದ್ಯೋಗ ಸೃಷ್ಟಿಯಂತಹ ಭರವಸೆಗಳು ಈಡೇರದೆ ಗಡುವುಗಳು ಮೀರಿದ್ದು ಅವರ ತಾಳ್ಮೆಯನ್ನು ಕೆಡಿಸಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ತೀವ್ರ ಉದ್ಯೋಗ ಅಭಾವವನ್ನು ಎದುರಿಸುತ್ತಿರುವ ಯುವಜನತೆಗೆ ಈ ಪರಿಸ್ಥಿತಿಯು ಸಹನೆಯ ಗಡಿ ದಾಟುವಂತೆ ಮಾಡಿದೆ.

ಜುಲೈ ಪ್ರತಿಭಟನೆಗಳು ಈ ಅಸಮಾಧಾನವನ್ನು ಹೊಸದಾಗಿ ಸೃಷ್ಟಿಸಲಿಲ್ಲ; ಬದಲಾಗಿ, ವರ್ಷಗಳಿಂದ ಗೂಡುಕಟ್ಟಿದ್ದ ನಿರಾಶೆಗೆ ಒಂದು ರೂಪು ಮತ್ತು ಧ್ವನಿಯನ್ನು ನೀಡಿದವು. ನರೇಂದ್ರ ಮೋದಿ ಅವರು ಒಮ್ಮೆ ತಮ್ಮ ಮಾತನ್ನು ಮಾತ್ರ ನಂಬುವಂತೆ ಭಾರತೀಯರಲ್ಲಿ ಕೋರಿದ್ದರು. ಆದರೆ ಇಂದು, ಪಕ್ಷದ ಮಿತಿಗಳನ್ನು ಮೀರಿ, ದೇಶವು ಅವರಿಂದ ಉತ್ತರ ಹಾಗೂ ಹೊಣೆಗಾರಿಕೆಯನ್ನು ಕೇಳುತ್ತಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI