Posts

Showing posts with the label Service to Country

ದೇಶಕ್ಕಾಗಿ ನೀವು ಏನು ಮಾಡುವಿರಿ ಎಂಬ ಪ್ರಶ್ನೆ ಕೇಳುವ ಮುನ್ನ ಸರ್ಕಾರ ತನ್ನ ಹೊಣೆಗೇಡಿತನಕ್ಕೆ ಉತ್ತರ ನೀಡಲಿ

 ಬಿವಿಸೀ ದೇಶದ ಹಣಕಾಸು ಸಚಿವೆಯವರು ದೇಶದ ಯುವಶಕ್ತಿಗೆ ಕರೆ ನೀಡಿದ್ದಾರೆ, ``ದೇಶ ನಿಮಗಾಗಿ ಏನು ಮಾಡಿತು ಎಂದು ಕೇಳಬೇಡಿ, ನೀವು ದೇಶಕ್ಕಾಗಿ ಏನು ಮಾಡಬಲ್ಲಿರಿ ಎಂದು ಹೇಳಿ'' ಎಂದು. ಮಾತು ಕೇಳಲು ಚೆನ್ನಾಗಿದೆ, ಆದರೆ ಇದು ವಾಸ್ತವದಿಂದ ಸಂಪೂರ್ಣ ಕಳಚಿಕೊಂಡ, ಅತ್ಯಂತ ಬೇಜವಾಬ್ದಾರಿ ಮತ್ತು ಆಡಂಬರದ ಹೇಳಿಕೆ. ಇಂದು ದೇಶದ ಯುವಜನತೆ ಯಾವ ಸ್ಥಿತಿಯಲ್ಲಿದೆ? ಬದುಕಲು ಉದ್ಯೋಗವಿಲ್ಲ, ಕಲಿಯಲು ಸರಿಯಾದ ಶಿಕ್ಷಣವಿಲ್ಲ, ಕೈಯಲ್ಲಿ ದುಡ್ಡಿಲ್ಲ, ಮನಸ್ಸಿನಲ್ಲಿ ಭರವಸೆಯಿಲ್ಲ. ಇಂತಹ ಬಡತನದಲ್ಲಿ, ನಿರುದ್ಯೋಗದಲ್ಲಿ ನರಳುತ್ತಿರುವ ಕೋಟ್ಯಂತರ ಯುವಕರಿಗೆ ತ್ಯಾಗದ ಪಾಠ ಹೇಳುವುದು ಎಷ್ಟು ಸುಲಭದ ಕೆಲಸ! ಇದು ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು, ತನ್ನ ಜವಾಬ್ದಾರಿಯನ್ನು ಜನರ ಹೆಗಲಿಗೆ ವರ್ಗಾಯಿಸಲು ಮಾಡುತ್ತಿರುವ ಕುತಂತ್ರವೇ ಆಗಿದೆ. ದೇಶದಲ್ಲಿ ನಿರುದ್ಯೋಗದ ಪ್ರಮಾಣ ಭಯಾನಕ ಮಟ್ಟ ತಲುಪಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಓದಿದ ಲಕ್ಷಾಂತರ ಯುವಕ ಯುವತಿಯರು ಜವಾನ, ಪ್ಯೂನ್ ಹುದ್ದೆಗಳಿಗೂ ಅರ್ಜಿ ಸಲ್ಲಿಸುತ್ತಿರುವ ದುಃಸ್ಥಿತಿ ಇದೆ. ಅಂಕಿಅಂಶಗಳ ಪ್ರಕಾರ ಅತಿ ಹೆಚ್ಚು ನಿರುದ್ಯೋಗ ಇರುವುದು ಇಪ್ಪತ್ತರಿಂದ ಮೂವತ್ತು ವರ್ಷದೊಳಗಿನ ಯುವಕರಲ್ಲೇ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂಬ ಭರವಸೆ ನೀಡಿದ್ದ ಸರ್ಕಾರ ಇಂದು ಉದ್ಯೋಗ ಕೇಳಿದವರನ್ನೇ ಅಪರಾಧಿಗಳಂತೆ ನೋಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಕರು ದೇಶ...