Posts

ಮೋದಿ ವ್ಯಕ್ತಿಪೂಜೆ ಮತ್ತು ಬಿಜೆಪಿಯ ಚುನಾವಣಾ ಹಿನ್ನಡೆ

 ಹೇಳಲೇಬೇಕಾಗಿದ್ದು * ಬಿವಿಸೀ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸ್ವಂತ ಬಲದ ಮೇಲೆಯೇ ಸ್ಪಷ್ಟ ಬಹುಮತ ಗಳಿಸಲು ವಿಫಲವಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅತಿಯಾದ ಆತ್ಮರತಿ, ಏಕಪಕ್ಷೀಯ ಆಡಳಿತ ಶೈಲಿ ಮತ್ತು ವ್ಯಕ್ತಿಪೂಜೆಯೇ ಮುಖ್ಯ ಕಾರಣ ಎಂಬುದು ರಾಜಕೀಯ ವಿಶ್ಲೇಷಕರ ಪ್ರಬಲ ವಾದವಾಗಿದೆ. ಚುನಾವಣಾ ಪ್ರಚಾರದ ವೇಳೆ ತಾವು ಜೈವಿಕವಾಗಿ ಜನಿಸಿದವನಲ್ಲ, ಬದಲಿಗೆ ದೈವಿಕ ಸಂಕಲ್ಪದಿಂದ ಕಳುಹಿಸಲ್ಪಟ್ಟವನು ಎಂಬ ಮೋದಿ ಅವರ ಹೇಳಿಕೆಯು ಅವರ ಅತಿಯಾದ ಅಹಂಕಾರದ ಸಂಕೇತವಾಗಿ ಕಂಡುಬಂದಿತು. ಈ ದೈವಿಕ ಆತ್ಮರತಿಯು ಮತದಾರರಲ್ಲಿ ತೀವ್ರ ಅಸಮಾಧಾನ ಮತ್ತು ಗೊಂದಲವನ್ನು ಉಂಟುಮಾಡಿತು. ಪ್ರಚಾರದ ಪ್ರತಿಯೊಂದು ಜಾಹೀರಾತು, ಬ್ಯಾನರ್ ಮತ್ತು ಕಾರ್ಯಕ್ರಮಗಳಲ್ಲಿ ಪಕ್ಷ ಅಥವಾ ಸಂಪುಟದ ಇತರ ನಾಯಕರನ್ನು ಬದಿಗೊತ್ತಿ ಮೋದಿ ಅವರೊಬ್ಬರನ್ನೇ ಪ್ರದರ್ಶಿಸಲಾಯಿತು. ಜವಾಹರಲಾಲ್ ನೆಹರೂ ಅಥವಾ ಇಂದಿರಾ ಗಾಂಧಿಯವರ ಕಾಲದಲ್ಲಿದ್ದ `ಇಂಡಿಯಾ ಅಂದರೆ ಇಂದಿರಾ' ಮಾದರಿಯ ಧೋರಣೆಯನ್ನು ಪುನರಾವರ್ತಿಸುತ್ತಾ, `ಮೋದಿ ಅಂದರೆ ಭಾರತ' ಎಂಬ ಸಮೀಕರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಹೊಡೆತ ನೀಡಿತು. ಆಡಳಿತ ಶೈಲಿಯಲ್ಲಿಯೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸೂಕ್ತ ಗೌರವ ನೀಡದಿರುವುದು, ಪಕ್ಷದಲ್ಲಿ ತಮಗಿಂತ ಎತ್ತರಕ್ಕೆ ಬೆಳೆಯಬಹುದಾದ ನಾಯಕರನ್ನು ಹತೋಟಿಯಲ್ಲಿಡುವುದು ಮತ್ತು ಯಾ...

2029ರ ಲೋಕಸಭಾ ಚುನಾವಣೆ: ಮೋದಿ ಗೆಲುವಿನ ಹಾದಿ ಸುಲಭವೇ?

 * ಬಿವಿಸೀ 2029ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಈಗಲೇ ಚರ್ಚೆಯಲ್ಲಿದೆ. ಇದಕ್ಕೆ ಒಂದೇ ಮಾತಿನಲ್ಲಿ ಉತ್ತರ ನೀಡುವುದು ಕಷ್ಟ, ಏಕೆಂದರೆ ಅವರ ಮುಂದೆ ಅವಕಾಶಗಳು ಮತ್ತು ಸವಾಲುಗಳು ಎರಡೂ ಇವೆ. ಮೋದಿ ಅವರ ದೊಡ್ಡ ಶಕ್ತಿ ಎಂದರೆ ಅವರ ವೈಯಕ್ತಿಕ ವರ್ಚಸ್ಸು ಮತ್ತು ನಿರಂತರ ಪ್ರಚಾರ. ಕಳೆದ ಹನ್ನೆರಡು ವರ್ಷಗಳಿಂದ ಭಾರತೀಯ ಜನತಾ ಪಕ್ಷವು ಮೋದಿ ಅವರೊಬ್ಬರನ್ನೇ ದೇಶದ ಏಕೈಕ ನಾಯಕನಾಗಿ ಬಿಂಬಿಸಿದೆ. ಇದು 2014, 2019 ಮತ್ತು 2024ರಲ್ಲಿ ಸುಮಾರು ಶೇಕಡ 37ರಷ್ಟು ಮತಗಳನ್ನು ಉಳಿಸಿಕೊಳ್ಳಲು ನೆರವಾಗಿದೆ. ಆದರೆ ಇದೇ ಪಕ್ಷದ ದೊಡ್ಡ ದೌರ್ಬಲ್ಯವೂ ಹೌದು. ಎರಡನೇ ಹಂತದ ನಾಯಕತ್ವವನ್ನು ಬೆಳೆಸದ ಕಾರಣ ಪಕ್ಷ ಸಂಪೂರ್ಣವಾಗಿ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಮತ್ತೊಂದೆಡೆ, ಜನರಲ್ಲಿ ಅಸಮಾಧಾನವೂ ಹೆಚ್ಚಾಗುತ್ತಿದೆ. ಮೊದಲನೆಯದು ಹಣದುಬ್ಬರ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರನ್ನು ಕಂಗೆಡಿಸಿದೆ ಮತ್ತು ಸರ್ಕಾರ ದೊಡ್ಡ ಕೈಗಾರಿಕಾ ಮನೆತನಗಳಿಗೆ ಮಾತ್ರ ನೆರವಾಗುತ್ತಿದೆ ಎಂಬ ಭಾವನೆ ಬಲವಾಗಿದೆ. ಎರಡನೆಯದು ನಿರುದ್ಯೋಗ. 2014ರಲ್ಲಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು, ಆದರೆ ಇಂದಿಗೂ ಕೋಟ್ಯಂತರ ಯುವಕರು ಕೆಲಸವಿಲ್ಲದೆ ಇದ್ದಾರೆ. ಮೂರನೆಯದು ಹಳೆಯ ಭರವಸೆಗಳಾದ ಕಪ್ಪುಹಣ ವಾಪಸು ತಂದು ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುವ ಮ...

ಸವಣೂರು: ಐದು ಶತಮಾನಗಳ ಬೃಹತ್ ಬಾವಾಬ್ ಮರಗಳ ನಾಡು

Image
  ಹಾವೇರಿ ಜಿಲ್ಲೆಯ ಸವಣೂರು ಪಟ್ಟಣವು ಕರ್ನಾಟಕದ ಇತಿಹಾಸ ಮತ್ತು ವಾಸ್ತುಶಿಲ್ಪದ ಜೊತೆಗೆ ಅಪರೂಪದ ನೈಸರ್ಗಿಕ ವೈಶಿಷ್ಟ್ಯವೊಂದನ್ನೂ ತನ್ನೊಳಗೆ ಕಾಪಾಡಿಕೊಂಡಿದೆ. ಆಫ್ರಿಕಾ ಮೂಲದ ಬಾವಾಬ್ ಮರಗಳು ಇಲ್ಲಿ ಶತಮಾನಗಳಿಂದ ಬೆಳೆದು ನಿಂತಿದ್ದು, ಸವಣೂರಿಗೆ ವಿಶಿಷ್ಟ ಗುರುತನ್ನು ನೀಡಿವೆ. ಸಾಮಾನ್ಯವಾಗಿ ಆಫ್ರಿಕಾ ಖಂಡದ ಒಣ ಪ್ರದೇಶಗಳೊಂದಿಗೆ ಗುರುತಿಸಿಕೊಳ್ಳುವ ಈ ಮರಗಳು ಕರ್ನಾಟಕದ ನೆಲದಲ್ಲಿ ಕಾಣಿಸಿಕೊಳ್ಳುವುದು ಕುತೂಹಲ ಮೂಡಿಸುವ ಸಂಗತಿ. ಬಾವಾಬ್ ಮರದ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅದರ ದಪ್ಪವಾದ ಕಾಂಡ. ದೂರದಿಂದ ನೋಡಿದಾಗ ಮರದ ಕೊಂಬೆಗಳಿಗೆ ಹೋಲಿಸಿದರೆ ಕಾಂಡವೇ ಅಸಾಧಾರಣವಾಗಿ ದೊಡ್ಡದಾಗಿ ಕಾಣುತ್ತದೆ. ನೀರನ್ನು ಸಂಗ್ರಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಮರಗಳು ಪ್ರತಿಕೂಲ ಹವಾಮಾನದಲ್ಲಿಯೂ ಬದುಕಬಲ್ಲವು. ದಪ್ಪ ಕಾಂಡ, ವಿಚಿತ್ರ ಆಕಾರ ಮತ್ತು ವಿಶಾಲವಾಗಿ ಹರಡುವ ಕೊಂಬೆಗಳು ಅವುಗಳಿಗೆ ವಿಶಿಷ್ಟ ರೂಪ ನೀಡುತ್ತವೆ. ವರ್ಷಗಳು ಕಳೆದಂತೆ ಮರದ ಗಾತ್ರ ಹೆಚ್ಚುತ್ತಾ ಹೋಗುವುದರಿಂದ ಅತ್ಯಂತ ಹಳೆಯ ಬಾವಾಬ್‌ಗಳು ಜೀವಂತ ಸ್ಮಾರಕಗಳಂತೆ ಕಾಣುತ್ತವೆ. ಸವಣೂರಿನ ಬಾವಾಬ್ ಮರಗಳ ಇತಿಹಾಸದ ಬಗ್ಗೆ ಸ್ಥಳೀಯವಾಗಿ ಹಲವು ಕಥೆಗಳು ಮತ್ತು ನಂಬಿಕೆಗಳು ಪ್ರಚಲಿತದಲ್ಲಿವೆ. ವ್ಯಾಪಾರಿಗಳು, ಪ್ರವಾಸಿಗರು ಮತ್ತು ಆಡಳಿತಗಾರರ ಸಂಚಾರದ ಮೂಲಕ ಇಂತಹ ವಿದೇಶಿ ಮರಗಳ ಬೀಜಗಳು ಅಥವಾ ಸಸಿಗಳು ಭಾರತಕ್ಕೆ ಬಂದಿರಬಹುದು ಎಂಬ ಅಭಿಪ್ರಾಯವಿದೆ. ಆದರೆ ಸವಣೂರಿನ ನಿರ್ದ...

ಸೌಜನ್ಯ ಪ್ರಕರಣಕ್ಕೆ ಮರುಜೀವ: 14 ವರ್ಷಗಳ ಬಳಿಕ ಸತ್ಯಕ್ಕೆ ಮತ್ತೊಂದು ಅವಕಾಶ

 * ವಿಶೇಷ ಸಂಪಾದಕೀಯ ...... ಸೌಜನ್ಯ ಪ್ರಕರಣಕ್ಕೆ ಮತ್ತೊಮ್ಮೆ ಬಾಗಿಲು ತೆರೆದಿದೆ. ಆದರೆ ಈ ಬಾರಿ ಆ ಬಾಗಿಲು ಕೇವಲ ಮತ್ತೊಂದು ತನಿಖೆಯ ಹೆಸರಿನಲ್ಲಿ ತೆರೆದು, ಮತ್ತೆ ಕಡತಗಳೊಳಗೆ ಮುಚ್ಚಿಹೋಗಬಾರದು. ಹದಿನಾಲ್ಕು ವರ್ಷಗಳ ಕಾಲ ಉತ್ತರ ಸಿಗದ ಪ್ರಶ್ನೆಗಳಿಗೆ ಈಗ ಉತ್ತರ ನೀಡಲೇಬೇಕು. ಮೂರು ತಿಂಗಳ ಗಡುವು ಮುಗಿದಾಗ ಜನರ ಮುಂದೆ ಮತ್ತೊಂದು ಕಾರಣಗಳ ಪಟ್ಟಿಯಲ್ಲ, ತನಿಖೆಯ ಸ್ಪಷ್ಟ ಫಲಿತಾಂಶ ಇರಬೇಕು. ಸಾಕ್ಷ್ಯ ಯಾರತ್ತ ಬೆರಳು ತೋರಿಸುತ್ತದೆಯೋ ಅದನ್ನು ಮುಚ್ಚಿಡದೆ ಹೇಳುವ ಧೈರ್ಯ ತನಿಖಾ ಸಂಸ್ಥೆಗೆ ಇರಬೇಕು. ಈ ಪ್ರಕರಣದಲ್ಲಿ ಇನ್ನು 'ತನಿಖೆ ನಡೆಯುತ್ತಿದೆ' ಎಂಬ ಉತ್ತರ ಸಾಕಾಗುವುದಿಲ್ಲ. ಹದಿನಾಲ್ಕು ವರ್ಷಗಳ ವಿಳಂಬದ ನಂತರ ಸತ್ಯವನ್ನು ಮತ್ತೆ ಮುಂದೂಡುವ ಅವಕಾಶವೂ ಇಲ್ಲ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ನೆಪವೂ ಇರಬಾರದು. ತನಿಖೆ ವಿಫಲವಾದರೆ ಅದು ಕೇವಲ ಒಂದು ಪ್ರಕರಣದ ವಿಫಲತೆಯಾಗುವುದಿಲ್ಲ - ನ್ಯಾಯಕ್ಕಾಗಿ ಕಾಯುತ್ತಿರುವ ಕುಟುಂಬದ ವಿಶ್ವಾಸದ ಮೇಲಿನ ಮತ್ತೊಂದು ಹೊಡೆತವಾಗುತ್ತದೆ. ಸೌಜನ್ಯಗೆ ಮರಳಿ ಬರುವ ಅವಕಾಶವಿಲ್ಲ. ಆದರೆ ಆಕೆಯ ಸಾವಿನ ಸತ್ಯವನ್ನು ಹುಡುಕುವ ಅವಕಾಶ ಇನ್ನೂ ಇದೆ. ಆ ಅವಕಾಶವನ್ನು ಈ ಬಾರಿ ಕಳೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಹದಿನಾಲ್ಕು ವರ್ಷಗಳ ಮೌನಕ್ಕೆ ಮತ್ತೊಂದು ವರ್ಷ, ಮತ್ತೊಂದು ನೆಪ, ಮತ್ತೊಂದು ಮುಚ್ಚಿದ ಕಡತ - ಇನ್ನು ಒಪ್ಪಲಾಗದು. ಈ ಬಾರಿ ತನಿಖೆ ಮುಗಿಯಬೇಕು. ಸತ್ಯ ಹೊರಬರಬೇಕು. ತಪ್ಪಿತಸ್ಥ...

ಪ್ರವಾಸೋದ್ಯಮದ ಹೆಸರಿನಲ್ಲಿ ಕರಾವಳಿ-ಮಲೆನಾಡಿನ ಪ್ರಕೃತಿಗೆ ಬೆಲೆ ತೆರಬೇಕೇ?

Image
 ಎಚ್ಚರ ಲೇಸು * ಬಿವಿಸೀ ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026 ಈ ಭಾಗದ ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಕಡಲತೀರಗಳು, ದ್ವೀಪಗಳು, ಜಲಮಾರ್ಗಗಳು, ಜಲಪಾತಗಳು, ಕಾಡುಗಳು ಮತ್ತು ಐತಿಹಾಸಿಕ ತಾಣಗಳನ್ನು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಸ್ವಾಗತಾರ್ಹ. ಆದರೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವುದೇ ಯಶಸ್ಸಿನ ಏಕೈಕ ಮಾನದಂಡವಾದರೆ, ಅದರ ಬೆಲೆ ಪ್ರಕೃತಿಯೇ ತೆರಬೇಕಾಗುತ್ತದೆ. ಈಗಾಗಲೇ ಕರಾವಳಿಯಲ್ಲಿ ಕಡಲತೀರಗಳ ಮೇಲೆ ಒತ್ತಡ, ತ್ಯಾಜ್ಯ ನಿರ್ವಹಣೆಯ ಕೊರತೆ, ನೀರಿನ ಸಮಸ್ಯೆ, ಸಂಚಾರ ದಟ್ಟಣೆ ಮತ್ತು ಸಿಆರ್‍ಝಡ್ ನಿಯಮಗಳ ಉಲ್ಲಂಘನೆಯಂತಹ ಆತಂಕಗಳಿವೆ. ಮಲೆನಾಡಿನಲ್ಲಿ ಪರಿಸ್ಥಿತಿ ಇನ್ನೂ ಸೂಕ್ಷ್ಮ. ಕಾಡು, ಜಲಪಾತ, ನದಿ, ಗುಡ್ಡ ಮತ್ತು ವನ್ಯಜೀವಿ ಪ್ರದೇಶಗಳಿಗೆ ಹೆಚ್ಚುತ್ತಿರುವ ಪ್ರವಾಸಿಗರ ಒತ್ತಡವನ್ನು ನಿಯಂತ್ರಿಸದಿದ್ದರೆ ಪ್ರವಾಸೋದ್ಯಮವೇ ಪರಿಸರ ಹಾನಿಗೆ ಕಾರಣವಾಗಬಹುದು. ವಿಶೇಷವಾಗಿ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನಪ್ರಿಯ ತಾಣಗಳ ಸ್ಥಿತಿ ಎಚ್ಚರಿಕೆಯ ಗಂಟೆ ಮೊಳಗಿಸುತ್ತಿದೆ. ವಾಹನಗಳ ದಟ್ಟಣೆ, ಪ್ಲಾಸ್ಟಿಕ್ ತ್ಯಾಜ್ಯ, ಅಕ್ರಮ ಪಾಕಿರ್ಂಗ್, ಶಬ್ದ ಮಾಲಿನ್ಯ ಮತ್ತು ನದಿಗಳಲ್ಲಿ ಪ್ರವಾಸಿಗರ ಅಸಡ್ಡೆಯ ವರ್ತನೆಗಳು ಪರಿಸರದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಕೆಲವು ಜಲಪಾತಗಳು ಮತ್ತು ಕಾಡು ಪ್ರದೇಶಗಳಿಗೆ ಪ್ರವಾಸಿಗರ ನಿಯಂತ್ರಣ ಅಗತ್ಯವಾಗಿರುವುದೂ ಇದೇ ಕಾರಣಕ್ಕೆ. ಆದ್ದರಿಂದ ...

ಬಿಜೆಪಿ ಸರ್ಕಾರದಲ್ಲಿ ತೀವ್ರ ನಿರ್ಬಂಧಕ್ಕೆ ಒಳಗಾದ ಶೈಕ್ಷಣಿಕ ಸ್ವಾತಂತ್ರ್ಯ

 ವಿಶ್ಲೇಷಣೆ * ಬಿವಿಸೀ ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಬಿಜೆಪಿ ಸರ್ಕಾರದ ಅಡಿಯಲ್ಲಿ ತೀವ್ರವಾಗಿ ನಿರ್ಬಂಧಿಸಲ್ಪಟ್ಟಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ `ಸ್ಕಾಲರ್ಸ್ ಅಟ್ ರಿಸ್ಕ್'ನ `ಫ್ರೀ ಟು ಥಿಂಕ್' 2026 ವರದಿ ಹೇಳಿದೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಸ್ಥೆಯು 40 ದೇಶಗಳ 650ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಜಾಲವಾಗಿದ್ದು ಅಪಾಯದಲ್ಲಿರುವ ವಿದ್ವಾಂಸರನ್ನು ರಕ್ಷಿಸುವ ಕೆಲಸ ಮಾಡುತ್ತದೆ. ವರದಿಯ ಪ್ರಕಾರ ಭಾರತದ ಅಕಾಡೆಮಿಕ್ ಫ್ರೀಡಮ್ ಇಂಡೆಕ್ಸ್ ಅಂಕ 2024ರಲ್ಲಿ 0.16 ಇದ್ದದ್ದು 2026ರಲ್ಲಿ 0.14ಕ್ಕೆ ಕುಸಿದಿದೆ. ಎರಡೂ ಅಂಕಗಳು ತೀವ್ರವಾಗಿ ನಿಬರ್ಂಧಿತ ವಿಭಾಗಕ್ಕೆ ಸೇರಿವೆ. ಈ ವಿಭಾಗದಲ್ಲಿ ಭಾರತದ ಜೊತೆಗೆ ಚೀನಾ 0.07 ಮತ್ತು ಅಫ್ಘಾನಿಸ್ತಾನ 0.09 ಅಂಕ ಹೊಂದಿವೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅಂಕ 2015ರಲ್ಲಿ 0.41 ಇದ್ದದ್ದು ಈಗ 0.14ಕ್ಕೆ ಕುಸಿದಿದೆ. ಈ ಸೂಚ್ಯಂಕವನ್ನು 0 ರಿಂದ 1ರವರೆಗೆ ಅಳೆಯಲಾಗುತ್ತದೆ. ಕ್ಯಾಂಪಸ್ ಸಮಗ್ರತೆ, ಶೈಕ್ಷಣಿಕ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಶೋಧನೆ ಮತ್ತು ಬೋಧನಾ ಸ್ವಾತಂತ್ರ್ಯ, ಸಾಂಸ್ಥಿಕ ಸ್ವಾಯತ್ತತೆ ಮುಂತಾದ ಮಾನದಂಡಗಳ ಆಧಾರದಲ್ಲಿ ಅಂಕ ನೀಡಲಾಗುತ್ತದೆ. 2025ರ ಜುಲೈ 1ರಿಂದ 2026ರ ಜೂನ್ 30ರವರೆಗೆ 59 ದೇಶಗಳಲ್ಲಿ 321 ಪರಿಶೀಲಿತ ಘಟನೆಗಳಿಂದ 382 ದಾಳಿಗಳು ನಡೆದಿವೆ ಎಂದು ವರದಿ ದಾಖಲಿಸಿದೆ. ಇದರಲ್ಲಿ ಅತಿ ಹೆಚ್ಚು ದಾಳಿ ಭಾ...

ಯುಪಿಐ ಶುಲ್ಕ - ಭಾರತ ಮತ್ತೆ ನಗದು ಯುಗಕ್ಕೆ ಹೋಗುತ್ತದೆಯೇ?

 ಅಭಿಮತ   ಬಿವಿಸೀ .............. ಯುಪಿಐ ಭಾರತದ ಡಿಜಿಟಲ್ ಕ್ರಾಂತಿಯ ಹೆಮ್ಮೆ. 2016ರಲ್ಲಿ ಆರಂಭವಾದ ಯುಪಿಐ ಇಂದು ವರ್ಷಕ್ಕೆ ರೂ 24 ಸಾವಿರ ಕೋಟಿಗೂ ಹೆಚ್ಚು ವಹಿವಾಟು, 314 ಲಕ್ಷ ಕೋಟಿ ರೂ ಮೌಲ್ಯದ ವ್ಯವಹಾರ ನಡೆಸುತ್ತಿದೆ. 44 ಬ್ಯಾಂಕ್‍ಗಳಿಂದ 703 ಬ್ಯಾಂಕ್‍ಗಳಿಗೆ ವಿಸ್ತರಣೆಯಾಗಿದೆ. 2020ರಿಂದ ಶೂನ್ಯ ಎಂಡಿಆರ್ ನೀತಿ ಜಾರಿಯಲ್ಲಿತ್ತು. ಸಣ್ಣ ಅಂಗಡಿಯಿಂದ ಹಿಡಿದು ಬೀದಿ ಬದಿ ವ್ಯಾಪಾರಿಯವರೆಗೆ ಎಲ್ಲರೂ ಕ್ಯೂಆರ್ ಕೋಡ್ ಅಳವಡಿಸಿಕೊಂಡಿದ್ದರು. ಇದೇ ಡಿಜಿಟಲ್ ಇಂಡಿಯಾದ ಯಶಸ್ಸು. ಆದರೆ ಕೇಂದ್ರ ಸರ್ಕಾರ ಈಗ ಆ ಯಶಸ್ಸಿಗೆ ಹೊಡೆತ ಬೀಳಿಸುವ ನಿರ್ಧಾರ ತೆಗೆದುಕೊಂಡಿದೆ. ಅಕ್ಟೋಬರ್ 15ರಿಂದ 2,000 ರೂ ಮೇಲ್ಪಟ್ಟ ಪರ್ಸನ್-ಟು-ಮಚೆರ್ಂಟ್ ಯುಪಿಐ ವಹಿವಾಟಿಗೆ ಶೇ 0.4 ಎಂಡಿಆರ್ ವಿಧಿಸಲು ನಿರ್ಧರಿಸಿದೆ. 75 ಸಾವಿರ ರೂ ಮೇಲ್ಪಟ್ಟ ವಹಿವಾಟಿಗೆ ಗರಿಷ್ಠ 300 ರೂ ಮಿತಿ. ರೈಲ್ವೆ, ಟೆಲಿಕಾಂ, ವಿಮೆ, ಇಂಧನಕ್ಕೆ 5 ರೂ ಫ್ಲಾಟ್ ಶುಲ್ಕ. ಬಂಡವಾಳ ಮಾರುಕಟ್ಟೆ ವಹಿವಾಟಿಗೆ ಶೇ 0.02. ಗ್ರಾಹಕರಿಗೆ ನೇರ ಶುಲ್ಕವಿಲ್ಲ, ವ್ಯಾಪಾರಿಗಳೇ ಭರಿಸಬೇಕು. ಸರ್ಕಾರದ ಸಮರ್ಥನೆ ಸಣ್ಣ ವ್ಯಾಪಾರಿಗಳಿಗೆ ವಿನಾಯಿತಿ ಇದೆ. ತಿಂಗಳಿಗೆ 1 ಲಕ್ಷ ರೂ.ವರೆಗೆ ಯುಪಿಐ ಮೂಲಕ ಪಡೆಯುವ ವ್ಯಾಪಾರಿಗಳಿಗೆ ಶೂನ್ಯ ಎಂಡಿಆರ್ ಮುಂದುವರಿಯುತ್ತದೆ. ಇದರಿಂದ ಶೇ 96ರಷ್ಟು ವ್ಯಾಪಾರಿ ವಹಿವಾಟಿಗೆ ಪರಿಣಾಮ ಇಲ್ಲ. ಗ್ರಾಮೀಣ ಮತ್ತು ಅರೆ ನಗರ ಪ್ರದೇಶದ ಕ್ಯೂಆರ್ ಪಾವತಿಗ...