ಎಥೆನಾಲ್ ಇ20 ಹೆಸರಲ್ಲಿ 420 ದಂದೆ: ಮೋದಿ ಸರ್ಕಾರಕ್ಕೆ ಕಾದಿದೆಯೇ ಪೆಟ್ರೋಲ್ ಕಂಟಕ?
* ಬಿವಿಸೀ
ದೇಶದ ಸಾರ್ವಜನಿಕರ ವಾಹನಗಳ ಇಂಧನ ಟ್ಯಾಂಕ್ಗೆ ಕೇಂದ್ರ ಸರ್ಕಾರ ನೇರವಾಗಿ ಕನ್ನ ಹಾಕುತ್ತಿದೆಯೇ? ಇಂತಹದ್ದೊಂದು ಗಂಭೀರವಾದ ಮತ್ತು ಕಳವಳಕಾರಿ ಪ್ರಶ್ನೆ ಈಗ ಭಾರತದ ಪ್ರತಿಯೊಬ್ಬ ವಾಹನ ಸವಾರನ ಮನಸ್ಸಿನಲ್ಲಿಯೂ ಮೂಡಿದೆ. ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ಭಾಗಗಳಿಂದ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ, ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದಾಗ ಬೆಚ್ಚಿಬೀಳಿಸುವ ಸತ್ಯವೊಂದು ಹೊರಬಿದ್ದಿದೆ. ಪೆಟ್ರೋಲ್ನಲ್ಲಿ ನಿಯಮಾನುಸಾರ ಇರಬೇಕಾದ ಎಥನಾಲ್ ಪ್ರಮಾಣ ಗರಿಷ್ಠ ಶೇಕಡಾ ಇಪ್ಪತ್ತು. ಆದರೆ, ಬಂಕ್ಗಳಲ್ಲಿ ಸರಬರಾಜಾಗುತ್ತಿರುವ ಪೆಟ್ರೋಲ್ನಲ್ಲಿ ಶೇಕಡಾ ಮೂವತ್ತೊಂದಕ್ಕಿಂತಲೂ ಹೆಚ್ಚು ಎಥನಾಲ್ ಬೆರೆಸಿರುವುದು ಪತ್ತೆಯಾಗಿದೆ.
ರಾಹುಲ್ ಗಾಂಧಿಯವರು ಇದನ್ನು ``ಇ20 ಅಲ್ಲ, ಇದು ಇ-420 ದಂದೆ'' ಎಂದು ಕರೆದಿರುವುದು ಖಂಡಿತವಾಗಿಯೂ ಅತಿಯಾದ ರಾಜಕೀಯ ಹೇಳಿಕೆಯಲ್ಲ. ಪೆಟ್ರೋಲ್ ಬೆಲೆಯನ್ನು ಲೀಟರ್ಗೆ ನೂರು ರೂಪಾಯಿಗಿಂತಲೂ ಹೆಚ್ಚು ವಸೂಲಿ ಮಾಡುತ್ತಾ, ಅದರೊಳಗೆ ಅಗ್ಗದ ಎಥನಾಲ್ ಅನ್ನು ಅಧಿಕ ಪ್ರಮಾಣದಲ್ಲಿ ಬೆರೆಸಿ ಸಾರ್ವಜನಿಕರಿಗೆ ಮಾರಾಟ ಮಾಡುವುದು ಅತ್ಯಂತ ಗಂಭೀರ ಸ್ವರೂಪದ ಆಡಳಿತಾತ್ಮಕ ವಂಚನೆಯಾಗಿದೆ.
ಸಾಮಾನ್ಯ ನಾಗರಿಕ ತನ್ನ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಂಧನಕ್ಕಾಗಿ ವೆಚ್ಚ ಮಾಡುತ್ತಿದ್ದಾನೆ. ಆದರೆ, ಎಂಜಿನ್ಗಳ ಸಾಮಥ್ರ್ಯಕ್ಕೆ ಮೀರಿದ ಎಥನಾಲ್ ಸಮ್ಮಿಶ್ರಣದಿಂದಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕುಸಿಯುತ್ತಿದೆ ಮತ್ತು ಎಂಜಿನ್ ಭಾಗಗಳು ಬೇಗನೇ ಹಾಳಾಗುತ್ತಿವೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಶೇಕಡಾ ನೂರರಷ್ಟು ಎಥನಾಲ್ ಬಳಸಿದರೂ ವಾಹನಗಳಿಗೆ ತೊಂದರೆಯಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರಬಹುದು. ಆದರೆ, ವಾಹನ ತಯಾರಿಕಾ ಕಂಪನಿಗಳು ಮತ್ತು ತಾಂತ್ರಿಕ ತಜ್ಞರು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ - ತಕ್ಕಂತೆ ಮಾರ್ಪಡಿಸದ ಎಂಜಿನ್ಗಳಿಗೆ ಶೇಕಡಾ ಇಪ್ಪತ್ತಕ್ಕಿಂತ ಹೆಚ್ಚಿನ ಎಥನಾಲ್ ಮಾರಕ.
ಕೇಂದ್ರ ಸರ್ಕಾರದ ತೈಲ ಕಂಪನಿಗಳು ಮತ್ತು ಖಾಸಗಿ ಸಂಸ್ಥೆಗಳು ಈ ರೀತಿಯ ಕಲಬರಕೆಯಲ್ಲಿ ಭಾಗಿಯಾಗಿರುವುದು ತೈಲ ನೀತಿಯಲ್ಲಿ ಪಾರದರ್ಶಕತೆಯ ಅಭಾವವನ್ನು ಎತ್ತಿ ತೋರಿಸುತ್ತದೆ. ಎಥನಾಲ್ ಉತ್ಪಾದಿಸುವ ಬೃಹತ್ ಉದ್ಯಮಿಗಳು ಹಾಗೂ ಕಾಪೆರ್Çರೇಟ್ ಕಂಪನಿಗಳ ಲಾಭಕ್ಕಾಗಿ ಸಾಮಾನ್ಯ ಜನರನ್ನು ಬಲಿಪಶು ಮಾಡಲಾಗುತ್ತಿದೆಯೇ ಎಂಬ ಅನುಮಾನ ತೀವ್ರಗೊಂಡಿದೆ.
Comments
Post a Comment