ಭಾರತೀಯರ ಎಚ್1 ಬಿ ವೀಸಾ ಮತ್ತು ಗ್ರೀನ್ ಕಾರ್ಡ್ ಭವಿಷ್ಯವೇನು?

 ಅಮೆರಿಕ ಮಧ್ಯಂತರ ಚುನಾವಣೆ ಫಲಶ್ರುತಿ

ಸಕಾಲಿಕ * ಬಿವಿಸೀ

ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ ನವೆಂಬರ್ 4ರಂದು ಹೊರಬಿದ್ದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷವು ಈಗ ಅಮೆರಿಕದ ಕಾಂಗ್ರೆಸ್‍ನ ಎರಡೂ ಸದನಗಳ ನಿಯಂತ್ರಣವನ್ನು ಪಡೆದಿದೆ. ಸೆನೆಟ್‍ನಲ್ಲಿ ಬಹುಮತಕ್ಕೆ ಬೇಕಾದ ಐವತ್ತೊಂದು ಸ್ಥಾನಗಳನ್ನು ಡೆಮಾಕ್ರಟಿಕರು ದಾಟಿದ್ದಾರೆ.  ಪ್ರತಿನಿಧಿ ಸಭೆಯಲ್ಲಿ ಬಹುಮತಕ್ಕೆ ಬೇಕಾದ ಇನ್ನೂರ ಹದಿನೆಂಟು ಸ್ಥಾನಗಳನ್ನು ದಾಟಿ ಇನ್ನೂರ ಇಪ್ಪತ್ತೆಂಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಮೆರಿಕಕ್ಕೆ ಹೋಗಲು ಕಾಯುತ್ತಿರುವ ಲಕ್ಷಾಂತರ ಭಾರತೀಯರಿಗೆ ಈ ಫಲಿತಾಂಶವು ಬಹಳ ಮುಖ್ಯವಾಗಿದೆ.


ಎಚ್1 ಬಿ ವೀಸಾ ಕಾರ್ಯಕ್ರಮವು ಟ್ರಂಪ್ ಅವರ ಎರಡನೇ ಅವಧಿಯ ಆರಂಭದಿಂದಲೇ ತೀವ್ರ ಚರ್ಚೆಗೆ ಒಳಗಾಗಿದೆ. ಈ ವೀಸಾವನ್ನು ಅಮೆರಿಕದಲ್ಲಿ ಸಿಗದ ವಿಶೇಷ ಕೌಶಲದ ಉದ್ಯೋಗಗಳಿಗೆ ಬಳಸಲಾಗುತ್ತಿದೆಯೇ ಅಥವಾ ಅಗ್ಗದ ವಿದೇಶಿ ಕಾರ್ಮಿಕರನ್ನು ತರಲು ಬಳಸಲಾಗುತ್ತಿದೆಯೇ ಎಂಬುದು ಚರ್ಚೆಯ ಕೇಂದ್ರವಾಗಿದೆ. ಸೆಪ್ಟೆಂಬರ್ 2025ರಲ್ಲಿ ಟ್ರಂಪ್ ಅವರು ಹೊಸ ಎಚ್1 ಬಿ ಅರ್ಜಿಗಳ ಮೇಲೆ ಒಂದು ಲಕ್ಷ ಡಾಲರ್ ಶುಲ್ಕವನ್ನು ವಿಧಿಸಿದ್ದರು. ಈ ಕ್ರಮವನ್ನು ಈಗ ಗೃಹ ಭದ್ರತಾ ಇಲಾಖೆಯ ಮೂಲಕ ನಿಯಮ ರೂಪಿಸುವ ಪ್ರಕ್ರಿಯೆಯ ಮೂಲಕ ಜಾರಿಗೆ ತರಲಾಗುತ್ತಿದೆ. 

ಆದರೆ ಮಧ್ಯಂತರ ಚುನಾವಣೆಯ ಫಲಿತಾಂಶದಿಂದ ತಕ್ಷಣದ ಪರಿಹಾರ ಸಿಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ವೀಸಾ ಸ್ಟಾಂಪಿಂಗ್, ವಿಸ್ತರಣೆ ಮತ್ತು ಅರ್ಜಿ ಅನುಮೋದನೆಯಂತಹ ದೈನಂದಿನ ಕೆಲಸಗಳು ಇನ್ನೂ ಟ್ರಂಪ್ ಆಡಳಿತ ಮತ್ತು ವಿದೇಶಾಂಗ ಇಲಾಖೆ, ಪೌರತ್ವ ಮತ್ತು ವಲಸೆ ಸೇವೆಗಳ ನಿಯಂತ್ರಣದಲ್ಲಿಯೇ ಇರುತ್ತವೆ. ಹೊಸದಾಗಿ ಆಯ್ಕೆಯಾದ ಸದಸ್ಯರು ಜನವರಿ 3, 2027ರಂದು ಅಧಿಕಾರ ವಹಿಸಿಕೊಳ್ಳುತ್ತಾರೆ. ಅಲ್ಲಿಯವರೆಗೆ ಹಳೆಯ ಕಾಂಗ್ರೆಸ್ ನವೆಂಬರ್ ಒಂಬತ್ತರಿಂದ ಐದು ವಾರಗಳ ಕಾಲ ನಡೆಯುವ ಅಧಿವೇಶನದಲ್ಲಿ ಕೆಲಸ ಮಾಡಲಿದೆ.

ಕಾಂಗ್ರೆಸ್ ನಿಜವಾಗಿಯೂ ಏನು ಬದಲಾಯಿಸಬಲ್ಲದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಕಾನೂನು ಮಾಡಬಲ್ಲದು, ವೀಸಾ ಮಿತಿಯನ್ನು ಬದಲಾಯಿಸಬಲ್ಲದು, ಹಣಕಾಸು ಅನುಮೋದಿಸಬಲ್ಲದು. ಪ್ರಸ್ತುತ ವರ್ಷಕ್ಕೆ ಅರವತ್ತೈದು ಸಾವಿರ ಸಾಮಾನ್ಯ ಎಚ್1 ಬಿ ವೀಸಾಗಳು ಮತ್ತು ಅಮೆರಿಕದಲ್ಲಿ ಉನ್ನತ ಪದವಿ ಪಡೆದವರಿಗೆ ಇಪ್ಪತ್ತು ಸಾವಿರ ಹೆಚ್ಚುವರಿ ಸ್ಥಾನಗಳಿವೆ. ಈ ಮಿತಿಯನ್ನು ಕಾಂಗ್ರೆಸ್ ಮಾತ್ರ ಬದಲಾಯಿಸಬಲ್ಲದು. ಆದರೆ ಅಧ್ಯಕ್ಷರು ಕಾನೂನಿಗೆ ವೀಟೋ ಹಾಕುವ ಅಧಿಕಾರವನ್ನು ಉಳಿಸಿಕೊಂಡಿರುತ್ತಾರೆ. ಹೀಗಾಗಿ ದೊಡ್ಡ ಬದಲಾವಣೆ ಕಷ್ಟವಾಗಬಹುದು.

ಡೆಮಾಕ್ರಟಿಕ್ ಬಹುಮತವು ವಲಸೆ ನೀತಿಗಳ ಮೇಲೆ ಹೆಚ್ಚಿನ ಪರಿಶೀಲನೆ ನಡೆಸಬಹುದು, ಮತ್ತಷ್ಟು ನಿಬರ್ಂಧಗಳಿಗೆ ಕಾನೂನು ಬೆಂಬಲ ಸಿಗುವುದನ್ನು ಕಷ್ಟಗೊಳಿಸಬಹುದು. ಆದರೆ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶಗಳನ್ನು ಅದು ತಾನಾಗಿಯೇ ರದ್ದುಗೊಳಿಸುವುದಿಲ್ಲ. ಭಾರತೀಯ ವೃತ್ತಿಪರರಿಗೆ ಸದ್ಯದ ಭರವಸೆ ಎಂದರೆ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಕರಣಗಳು ಮತ್ತು ಕಾಂಗ್ರೆಸ್‍ನಲ್ಲಿ ಮುಂದೆ ಬರುವ ಚರ್ಚೆಗಳು. ತಕ್ಷಣದ ಪರಿಹಾರ ನಿರೀಕ್ಷಿಸದೆ, ನಿಯಮಗಳಲ್ಲಿನ ಬದಲಾವಣೆ, ನ್ಯಾಯಾಲಯದ ತೀರ್ಪು ಮತ್ತು ವೀಸಾ ಬುಲೆಟಿನ್ ಅನ್ನು ಗಮನಿಸುತ್ತಿರಬೇಕು.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI