ಸ್ಟಿಂಗ್ ಆಪರೇಷನ್ ವಿವಾದದಿಂದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ; ತ್ವರಿತ ಮತ್ತು ಪಾರದರ್ಶಕ ತನಿಖೆ ನಡೆಸಿ ಸತ್ಯವನ್ನು ಹೊರತನ್ನಿ
226 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿರುವಾಗ, ಕಬ್ಬು ಬೆಳೆಗಾರರು ಬೀದಿಗಿಳಿದಿರುವಾಗ ಈ ರಾಜಕೀಯ ಜಟಾಪಟಿ ಸರ್ಕಾರದ ಗಮನ ಮತ್ತು ಪ್ರತಿಪಕ್ಷದ ಆದ್ಯತೆಯ ಬಗ್ಗೆ ತಪ್ಪು ಸಂದೇಶ ನೀಡುತ್ತದೆ.
.................
* ವಿಶ್ಲೇಷಣೆ
ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಗುರಿಯಾಗಿಸಿಕೊಂಡಿರುವ ಸ್ಟಿಂಗ್ ಆಪರೇಷನ್ ವಿವಾದವು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಇಮೇಜ್ಗೆ ದೊಡ್ಡ ಪೆಟ್ಟು ನೀಡಿದೆ. ಹಿರಿಯ ನಾಯಕರು, ಹಲವು ಸಚಿವರು ಕೂಡ ಈ ವಿಷಯದಲ್ಲಿ ಸಂಪೂರ್ಣ ಸ್ಪಷ್ಟತೆ ಇಲ್ಲದೆ ಗೊಂದಲಕ್ಕೀಡಾಗಿದ್ದಾರೆ.
ಕಾಂಗ್ರೆಸ್ಗೆ ಇದು ಅತ್ಯಂತ ಕೆಟ್ಟ ಸಮಯದಲ್ಲಿ ಬಂದಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮನ್ನು ಮತ್ತು ಸಂಪುಟ ಸಹೋದ್ಯೋಗಿಗಳನ್ನು ಸ್ಟಿಂಗ್ನಲ್ಲಿ ಸಿಲುಕಿಸುವ ಯತ್ನ ನಡೆದಿದೆ ಎಂದು ಹೇಳುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸುತ್ತುವರಿದ ವಿವಾದ ಸಿಡಿಲಿನಂತೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಟಿಂಗ್ ವಿಡಿಯೋಗೆ ತಮ್ಮ ಹೆಸರು ಜೋಡಿಸಿರುವುದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ತಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ದುರುದ್ದೇಶದ ಪ್ರಚಾರ ಎಂದು ಹೇಳಿದ್ದಾರೆ. ನಗರದ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿ ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ವಿಡಿಯೋ ಪ್ರಕಟಣೆ, ಪ್ರಸಾರಕ್ಕೆ ನಿಬರ್ಂಧ ವಿಧಿಸಿದೆ.
ಅಂದಿನಿಂದ ಪ್ರತಿಪಕ್ಷ, ವಿಶೇಷವಾಗಿ ಜೆಡಿಎಸ್ ನಾಯಕ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನು ಮಾಜಿ ಸಿಎಂ ವಿರುದ್ಧದ ದೊಡ್ಡ ಸಂಚು ಎಂದು ಕರೆದು ಕಾಂಗ್ರೆಸ್ ಹೈಕಮಾಂಡ್ ಅನ್ನು ಎಳೆದು ತಂದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸ್ಟಿಂಗ್ನಲ್ಲಿ ಭಾಗಿಯಾದ ಆರೋಪಿ ವ್ಯಕ್ತಿಯೊಬ್ಬರು ಭೇಟಿಯಾಗಿರುವ ಫೆÇೀಟೋ ಬಿಡುಗಡೆ ಮಾಡಿದ್ದಾರೆ. ರಾಜಕಾರಣಿಗಳೊಂದಿಗೆ ಫೆÇೀಟೋ ತೆಗೆಯುವುದು ಸಾಮಾನ್ಯವಾದರೂ, ಸುರ್ಜೇವಾಲಾ ಜೊತೆಗಿರುವ ವ್ಯಕ್ತಿ ಆರೋಪಿಯೇ ಎಂಬುದು ಸ್ಪಷ್ಟವಿಲ್ಲ. ಕುಮಾರಸ್ವಾಮಿ ಕೆಲವರ ಹೆಸರು ಹೇಳಿದ್ದು, ಕನ್ನಡ ಟಿವಿ ಚಾನೆಲ್ ಪತ್ರಕರ್ತರೊಬ್ಬರ ಹೆಸರನ್ನೂ ಪ್ರಸ್ತಾಪಿಸಿ ಬಂಧಿಸಲು ಸವಾಲು ಹಾಕಿದ್ದಾರೆ.
ಕುತೂಹಲವೆಂದರೆ ಕುಮಾರಸ್ವಾಮಿ ಆಕ್ರಮಣಕಾರಿಯಾಗಿ ವಿಷಯವನ್ನು ಮುಂದುವರಿಸುತ್ತಿರುವಾಗ, ಹಿರಿಯ ಬಿಜೆಪಿ ನಾಯಕರು ಅವರ ಅಭಿಯಾನವನ್ನು ಬೆಂಬಲಿಸುತ್ತಾ ಹಿಂದಿನ ಸಾಲಿನಲ್ಲಿದ್ದಾರೆ. ಎನ್ಡಿಎ ನಾಯಕರು ಸಿದ್ದರಾಮಯ್ಯ ಅವರ ಬಗ್ಗೆ ಸಹಾನುಭೂತಿ ತೋರುತ್ತಾ, ಶಿವಕುಮಾರ್ ವಿರುದ್ಧ ಗುಂಡು ಹಾರಿಸುತ್ತಿದ್ದಾರೆ.
ಈ ವಿವಾದವು ರಾಜಕೀಯ ಚರ್ಚೆಯನ್ನು ಕೆಳಮಟ್ಟಕ್ಕೆ ತಂದಿದೆ. ಕುಮಾರಸ್ವಾಮಿ ಅವರು ಜೆಡಿಎಸ್ ಐಟಿ ವಿಭಾಗದ ಕಾರ್ಯಕರ್ತರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಕ್ಕೆ ಆಕ್ಷೇಪಿಸಿ ಕಮಿಷನರ್ ಕಚೇರಿ ಎದುರು ಧರಣಿ ಕುಳಿತರು. ಪ್ರಿಯಾಂಕ್ ಖರ್ಗೆ ಪೆÇಲೀಸ್ ಕ್ರಮವನ್ನು ಸಮರ್ಥಿಸಿಕೊಂಡರು. ಆದರೆ ಹೆಚ್ಚಿನ ಸಚಿವರು ಈ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿಲ್ಲ.
ತನಿಖೆಯ ದಿಕ್ಕನ್ನು ತನಿಖಾಧಿಕಾರಿಗಳೇ ನಿರ್ಧರಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ನಿಜವೋ, ನಕಲಿಯೋ ಮತ್ತು ಆರೋಪಿತ ಸಂಚುಕೋರರನ್ನು ವಿಚಾರಣೆ ನಡೆಸಲಾಗಿದೆಯೇ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳು ಉತ್ತರವಿಲ್ಲದೆ ಉಳಿದಿವೆ. ಘನ ಪುರಾವೆ ಇಲ್ಲದೆ ರಾಜಕೀಯ ಪಕ್ಷದ ಸದಸ್ಯರನ್ನು ತನಿಖೆಗೆ ಒಳಪಡಿಸುವುದು ನ್ಯಾಯಸಮ್ಮತ ತನಿಖೆಯ ಬಗ್ಗೆ ಪ್ರಶ್ನೆ ಮೂಡಿಸುತ್ತದೆ.
ಹಿರಿಯ ಕಾಂಗ್ರೆಸ್ ನಾಯಕರೇ ಇದು ಸರ್ಕಾರ ಮತ್ತು ಪಕ್ಷದ ಇಮೇಜ್ಗೆ ಧಕ್ಕೆ ತರುತ್ತಿದೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಆದ್ದರಿಂದ ತ್ವರಿತ ಮತ್ತು ಪಾರದರ್ಶಕ ತನಿಖೆ ನಡೆಸಿ ಸತ್ಯವನ್ನು ಹೊರತರುವುದು ರಾಜಕೀಯದ ಘನತೆಗೆ ಒಳ್ಳೆಯದು.
Comments
Post a Comment