ಗಾಂಧಿಯನ್ನು ದ್ವೇಷಿಸುವವರು ಯಾರು?
ಇತಿಹಾಸಕಾರ ರಾಮಚಂದ್ರ ಗುಹಾ ಪುಸ್ತಕದಲ್ಲಿ ಮಂಥನ
* ಬಿವಿಸೀ
ಇತಿಹಾಸಕಾರ ರಾಮಚಂದ್ರ ಗುಹಾ ಅವರ ಮೂರನೇ ಗಾಂಧಿ ಪುಸ್ತಕ `ಆಗ್ರ್ಯುಮೆಂಟ್ಸ್ ವಿಥ್ ಗಾಂಧಿ' ಅಕ್ಟೋಬರ್ 2ರಂದು ಬಿಡುಗಡೆಯಾಗಿದ್ದು, ಇಂದು ಗಾಂಧಿ ಏಕೆ ದ್ವೇಷಕ್ಕೆ, ಚರ್ಚೆಗೆ ಗುರಿಯಾಗಿದ್ದಾರೆ ಎಂಬುದನ್ನು ವಿಶ್ಲೇಷಿಸುತ್ತದೆ. ದೆಹಲಿಯ ಇಂಡಿಯಾ ಇಂಟನ್ರ್ಯಾಷನಲ್ ಸೆಂಟರ್ ಮತ್ತು ಬೆಂಗಳೂರು ಇಂಟನ್ರ್ಯಾಷನಲ್ ಸೆಂಟರ್ನಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಗುಹಾ ತಮ್ಮ 30 ವರ್ಷದ ಪಯಣವನ್ನು ಹಂಚಿಕೊಂಡಿದ್ದಾರೆ.
ಪುಸ್ತಕಕ್ಕೆ ಪ್ರೇರಣೆ ದೆಹಲಿ ವಿಶ್ವವಿದ್ಯಾಲಯದ ಒಂದು ವಿಚಿತ್ರ ಪ್ರತಿಮೆ. ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮತ್ತು ವಿ ಡಿ ಸಾವರ್ಕರ್ ಅವರ ಮೂರು ತಲೆಗಳುಳ್ಳ ಪ್ರತಿಮೆ. ಬೋಸ್ ಮಿಲಿಟೆಂಟ್ ರಾಷ್ಟ್ರೀಯವಾದಿ. ಆದರೆ ಹಿಂದೂ-ಮುಸ್ಲಿಂ ಸಾಮರಸ್ಯದ ಪ್ರತಿಪಾದಕ, ಭಗತ್ ಸಿಂಗ್ ಕ್ರಾಂತಿಕಾರಿ ನಾಸ್ತಿಕ, ಸಾವರ್ಕರ್ ಹಿಂದುತ್ವದ ಮೂಲಪುರುಷ. ಮೂವರೂ ಸೈದ್ಧಾಂತಿಕವಾಗಿ ಭಿನ್ನ. ಆದರೆ ಅವರನ್ನು ಒಂದುಗೂಡಿಸುವುದು ಏನು ಎಂದು ಗುಹಾ ಪ್ರಶ್ನಿಸುತ್ತಾರೆ? ಉತ್ತರ: ಗಾಂಧಿ ವಿರೋಧ.
ಗುಹಾ ಪ್ರಕಾರ, ಹಿಂದೂ ಬಲಪಂಥೀಯರ ಪೂರ್ವಿಕರಾದ ಹಿಂದೂ ಮಹಾಸಭಾ ಮತ್ತು ಆರ್ಎಸ್ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಕೆಲವು ನಿರ್ಣಾಯಕ ಕ್ಷಣಗಳಲ್ಲಿ ಬ್ರಿಟಿಷರನ್ನು ಬೆಂಬಲಿಸಿದರು. ಆದ್ದರಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಯಾರನ್ನೇ ಆಗಲಿ, ಗಾಂಧಿಯೊಂದಿಗೆ ಜಗಳವಾಡಿದವರನ್ನು ತಮ್ಮವರೆಂದು ಬಿಂಬಿಸುವ ಪ್ರವೃತ್ತಿ ಎಬಿವಿಪಿಯಲ್ಲಿ ಇದೆ. ಗಾಂಧಿ ಅವರಿಗೆ ಅಸಹನೀಯವಾಗಲು ಎರಡು ಕಾರಣ: ಒಂದು, ಮುಸ್ಲಿಮರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿ ಹಿಂದೂ-ಮುಸ್ಲಿಂ ಸಾಮರಸ್ಯಕ್ಕಾಗಿ ಪ್ರಾಣ ಕೊಟ್ಟರು. ಎರಡು, ಅವರ ಅಹಿಂಸೆಯನ್ನು ದುರ್ಬಲ, ಸ್ತ್ರೀಸಹಜ ಎಂದು ಬಲಪಂಥೀಯರು ಕಾಣುತ್ತಾರೆ.
ಈ ಪುಸ್ತಕ ಹಿಂದಿನ ಎರಡು ಸಂಪುಟಗಳ ಜೀವನಚರಿತ್ರೆಗಿಂತ ಭಿನ್ನ. ಇದು ದಿನ-ತಿಂಗಳ ಕಥೆಯಲ್ಲ, ವಿಚಾರಗಳ ಪುಸ್ತಕ. ಅಹಿಂಸೆ, ಜಾತಿ, ಲಿಂಗ, ಧರ್ಮ, ವರ್ಣಭೇದ, ಆರ್ಥಿಕ ಪ್ರಗತಿ, ಪರಿಸರದ ಬಗ್ಗೆ ಗಾಂಧಿಯ ವಿಚಾರಗಳನ್ನು ಯಾರು ಪ್ರಶ್ನಿಸಿದರು ಎಂಬುದರ ಕುರಿತು.
ಗುಹಾ ಗಾಂಧಿಯ ನಾಲ್ಕು ಪ್ರಮುಖ ವಾದಗಳನ್ನು ಎತ್ತುತ್ತಾರೆ: ಭಗತ್ ಸಿಂಗ್ ಅಹಿಂಸೆಯ ಬಗ್ಗೆ, ಅಂಬೇಡ್ಕರ್ ಜಾತಿಯ ಬಗ್ಗೆ, ಸಾವರ್ಕರ್ ಧರ್ಮದ ಬಗ್ಗೆ, ನೆಹರು ಅರ್ಥವ್ಯವಸ್ಥೆಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು. ನಂತರ ಐನ್ಸ್ಟೀನ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಅವರು ಗಾಂಧಿಯನ್ನು ಹೇಗೆ ಬಳಸಿಕೊಂಡರು ಎಂಬುದನ್ನು ತೋರಿಸುತ್ತಾರೆ.
ಮಹತ್ವದ ಅಂಶವೆಂದರೆ ಗುಹಾ `ರಾಮರಾಜ್ಯ' ಪದದ ಬಗ್ಗೆ ಒಪ್ಪಿಕೊಂಡ ಮಾತು. "ಗಾಂಧಿಯ ಆಚರಣೆ ಸದಾ ಅಂತರಧರ್ಮೀಯವಾಗಿತ್ತು. ಪ್ರಾರ್ಥನಾ ಸಭೆಗಳಲ್ಲಿ ಕುರಾನ್ ಪಠಣ, ವಿವಿಧ ಧರ್ಮಗಳ ಹಾಡು. ಅವರು ಅಯೋಧ್ಯೆಗೆ ಹಲವು ಬಾರಿ ಹೋದರೂ ರಾಮಜನ್ಮಭೂಮಿ ಎಂದು ನಂಬಲಾದ ಸ್ಥಳಕ್ಕೆ ಹೋಗಲಿಲ್ಲ. ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ 1946ರಲ್ಲಿ ದಲಿತರ ಪ್ರವೇಶದ ನಂತರ ಮಾತ್ರ ಹೋದರು. ಆದರೆ `ರಾಮರಾಜ್ಯ' ಪದವು ಹಿಂದೂ ವ್ಯಾಖ್ಯಾನಕ್ಕೆ ಅವಕಾಶ ನೀಡುತ್ತದೆ, 1930-40ರಲ್ಲಿ ಕೆಲವು ಮುಸ್ಲಿಂ ಬುದ್ಧಿಜೀವಿಗಳಿಗೆ ಅದು ಕಿರಿಕಿರಿ ಎನಿಸಿರಬಹುದು" ಎಂದು ಹೇಳಿದ್ದಾರೆ.
ಗಾಂಧಿ-ಅಂಬೇಡ್ಕರ್ ಸಂಬಂಧವನ್ನು ಡಿ ಆರ್ ನಾಗರಾಜ್ ಅವರ `ದಿ ಫ್ಲೇಮಿಂಗ್ ಫೀಟ್' ಮೂಲಕ ಗುಹಾ ವಿವರಿಸುತ್ತಾರೆ. ಗಾಂಧಿ `ಆತ್ಮಶುದ್ಧಿಯ ರಾಜಕಾರಣ' - ಮೇಲ್ಜಾತಿ ಹಿಂದೂಗಳು ಜಾತಿ ಪೂರ್ವಗ್ರಹ ತೊರೆಯಬೇಕು ಎಂದರೆ, ಅಂಬೇಡ್ಕರ್ `ಸ್ವಾಭಿಮಾನದ ರಾಜಕಾರಣ' - ದಲಿತ ವಿಮೋಚನೆ. ಇಬ್ಬರೂ ಪೂರಕ, ವಿರೋಧಿಗಳಲ್ಲ.
1996ರಲ್ಲಿ ಬಕ್ರ್ಲಿಯಲ್ಲಿ `ಆಗ್ರ್ಯುಮೆಂಟ್ಸ್ ವಿಥ್ ಗಾಂಧಿ' ಎಂಬ ಕೋರ್ಸ್ ಕಲಿಸಿದ ಅನುಭವವೇ ಈ ಪುಸ್ತಕದ ಬೀಜ. ಕಪ್ಪು ವಿದ್ಯಾರ್ಥಿ, ಯಹೂದಿ ವಿದ್ಯಾರ್ಥಿ, ಬರ್ಮಾದ ನಿರಾಶ್ರಿತರೊಂದಿಗಿನ ಚರ್ಚೆಗಳು ಗಾಂಧಿಯ ಜಾಗತಿಕ ಪ್ರಸ್ತುತತೆಯನ್ನು ತೋರಿಸಿದವು ಎಂದು ಗುಹಾ ಹೇಳಿದ್ದಾರೆ.
"ಗಾಂಧಿ ಯಾರಿಗೂ ಸೇರಿದವರಲ್ಲ, ಎಲ್ಲರಿಗೂ ಸೇರಿದವರು. ಯಾವುದೇ ಜಾತಿ, ಧರ್ಮ, ಪ್ರದೇಶ, ಭಾಷೆ, ಸಿದ್ಧಾಂತ ಅವರನ್ನು ಸ್ವಂತಕ್ಕೆ ಹೇಳಿಕೊಳ್ಳಲಾಗದು. ಅದಕ್ಕಾಗಿಯೇ ಅವರನ್ನು ಟೀಕಿಸಿದರೂ ಮುಖಕ್ಕೆ ಮಸಿ ಬಳಿಯುವುದಿಲ್ಲ" ಎಂಬ ಗುಹಾ ಮಾತು ಇಂದಿನ ದ್ವೇಷದ ರಾಜಕಾರಣಕ್ಕೆ ಕನ್ನಡಿ ಹಿಡಿಯುತ್ತದೆ.
Comments
Post a Comment