ಧರ್ಮಸ್ಥಳದ ಪ್ರಭಾವಿಗಳ ರಕ್ಷಣೆಗೆ ನಿಂತಿದ್ದ ರಾಜಕಾರಣಿಗಳ ಗಂಟಲು ಕಟ್ಟಿಹಾಕಿದ ಸುಪ್ರೀಂ ಕೋರ್ಟ್ ಖಡಕ್ ಆದೇಶ
ಸೌಜನ್ಯ ಹತ್ಯೆ ಪ್ರಕಟಣೆಯಲ್ಲಿ ಇನ್ಮುಂದೆ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುವುದೇ?
* ಬಿವಿಸೀ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸುತ್ತ ಹೆಣೆದುಕೊಂಡಿದ್ದ ಧರ್ಮಸ್ಥಳದ ಪ್ರಭಾವಿ ಶಕ್ತಿಗಳನ್ನು ಹಾಗೂ ಅವರ ಸುತ್ತಲಿನ ಬೆಂಬಲಿಗರನ್ನು ರಕ್ಷಿಸಲು ಕರ್ನಾಟಕದ ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕಾರಣಿಗಳು ತೋರಿದ ಶ್ರಮ ಅಸಹ್ಯಕರವಾಗಿತ್ತು. ಎಲ್ಲಾ ಪಕ್ಷಗಳ ನಾಯಕರು ಯಾವುದೇ ಪಕ್ಷಭೇದವಿಲ್ಲದೆ, ಈ ಪ್ರಕರಣದಲ್ಲಿ ಧರ್ಮಸ್ಥಳದ ಪ್ರಭಾವಿಗಳ ಹಿತಾಸಕ್ತಿಯನ್ನು ಕಾಪಾಡಲು ಪೈಪೆÇೀಟಿಗೆ ಬಿದ್ದಂತೆ ವರ್ತಿಸಿದ್ದರು. ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಅನೇಕ ಪ್ರಮುಖ ನಾಯಕರು, ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಿದಾಗಲೂ ಅತ್ಯಂತ ನಿರ್ಲಜ್ಜ ರೀತಿಯಲ್ಲಿ "ಇದೆಲ್ಲವೂ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ" ಎಂದು ಬಣ್ಣಿಸಿದ್ದರು.
ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು, ಅಧಿಕಾರದಲ್ಲಿದ್ದವರು ಮತ್ತು ವಿಪಕ್ಷಗಳಲ್ಲಿದ್ದವರು ಈ ಧರ್ಮಸ್ಥಳದ ಸಾಮ್ರಾಜ್ಯದ ರಕ್ಷಣೆಗೆ ನಿಂತು ಕರುನಾಡಿನ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು.
ಆದರೆ, ಸುಪ್ರೀಂ ಕೋರ್ಟ್ ಈ ಪ್ರಕರಣದ ಮರುತನಿಖೆಗೆ ಆದೇಶ ನೀಡುತ್ತಿದ್ದಂತೆಯೇ, ಇಷ್ಟೂ ದಿನ ಪ್ರಭಾವಿಗಳ ಪರವಾಗಿ ಗಂಟಲು ಹರಿದುಕೊಂಡು ಅಬ್ಬರಿಸುತ್ತಿದ್ದ ನಾಯಕರ ಕಿರುಚಾಟ ಒಂದೇ ಕ್ಷಣದಲ್ಲಿ ಬಂದ್ ಆಗಿದೆ. ಅಪರಾಧಿಗಳನ್ನು ಮತ್ತು ಪ್ರಕರಣವನ್ನು ಮುಚ್ಚಿಹಾಕಿದ ಸೂತ್ರಧಾರರನ್ನು ರಕ್ಷಿಸಲು ಪೈಪೆÇೀಟಿ ನಡೆಸುತ್ತಿದ್ದ ನಾಯಕರೆಲ್ಲರೂ ಸುಪ್ರೀಂ ಕೋರ್ಟ್‍ನ ಈ ಕಟ್ಟುನಿಟ್ಟಿನ ಆದೇಶದಿಂದಾಗಿ ತಟಸ್ಥರಾಗಿದ್ದಾರೆ. ಸುಪ್ರೀಂ ಕೋರ್ಟ್ ತನಿಖೆಗೆ ಆದೇಶಿಸಿರುವುದು ರಾಜಕೀಯ ಶಕ್ತಿಗಳ ಬಾಯಿಗೆ ಬೀಗ ಜಡಿದಂತಾಗಿದ್ದು, ನ್ಯಾಯಾಲಯದ ಈ ನಿರ್ಧಾರವನ್ನು ಇಡೀ ನಾಡಿನ ಜನತೆ ಸ್ವಾಗತಿಸಿದ್ದಾರೆ.
ಈಗ ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾಗುವ ಮರುತನಿಖಾ ತಂಡವು ತನಿಖೆಯನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತದೆ ಮತ್ತು ದಶಕಗಳಿಂದ ರಕ್ಷಣೆ ಪಡೆಯುತ್ತಾ ಬಂದಿರುವ ನಿಜವಾದ ಅಪರಾಧಿಗಳನ್ನು ಕಂಬಿ ಹಿಂದೆ ತಳ್ಳುತ್ತದೆಯೇ ಎಂಬ ಪ್ರಶ್ನೆಯನ್ನು ರಾಜ್ಯದ ನಾಗರಿಕರು ಅತ್ಯಂತ ಹತ್ತಿರದಿಂದ ಗಮನಿಸುತ್ತಿದ್ದಾರೆ. ಆದರೆ, ಸರ್ಕಾರದ ನಡೆ ಮತ್ತು ಹಿನ್ನೆಲೆಯನ್ನು ಬಲ್ಲ ಸಾರ್ವಜನಿಕರಲ್ಲಿ ಮತ್ತೊಂದು ದೊಡ್ಡ ಆತಂಕ ಕಾಡುತ್ತಿದೆ. ತಮಗೆ ಬೇಕಾದ, ಮಾತು ಕೇಳುವ ಹಾಗೂ ತನಿಖೆಯನ್ನು ಹಳಿ ತಪ್ಪಿಸಲು ನೆರವಾಗುವ `ಹೊಂದಾಣಿಕೆಯ' ಪೆÇೀಲಿಸ್ ಅಧಿಕಾರಿಗಳನ್ನು ಈ ಮರುತನಿಖಾ ತಂಡಕ್ಕೆ ನೇಮಿಸುವ ಮೂಲಕ ಸರ್ಕಾರವು ತನಿಖೆಯನ್ನು ಮತ್ತೆ ಹಳ್ಳ ಹಿಡಿಸಲು ಮತ್ತು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂಬ ಸಂಶಯ ಪ್ರತಿಯೊಬ್ಬರಲ್ಲೂ ವ್ಯಕ್ತವಾಗುತ್ತಿದೆ.
ಜನಸಾಮಾನ್ಯರಲ್ಲಿ ವ್ಯಕ್ತವಾಗುತ್ತಿರುವ ಈ ಆತಂಕ ಸಂಪೂರ್ಣವಾಗಿ ಸಮರ್ಥನೀಯವಾಗಿದೆ. ಏಕೆಂದರೆ ಈ ಹಿಂದೆ ನಡೆದ ತನಿಖೆಗಳಲ್ಲೂ ಸಾಕ್ಷ್ಯಾಧಾರಗಳನ್ನು ನಾಶಪಡಿಸಿ, ತನಿಖಾ ಸಂಸ್ಥೆಗಳನ್ನೇ ದಾರಿ ತಪ್ಪಿಸಿದ ಇತಿಹಾಸ ನಮ್ಮ ಕಣ್ಣ ಮುಂದಿದೆ. ಒಂದು ವೇಳೆ ಸರ್ಕಾರವು ಮತ್ತೆ ಮೃದು ಧೋರಣೆಯ ಅಧಿಕಾರಿಗಳನ್ನು ನೇಮಿಸಿ, ಪ್ರಭಾವಿಗಳಿಗೆ ರಕ್ಷಣೆ ನೀಡುವ ಹಳೆಯ ಚಾಳಿಯನ್ನೇ ಮುಂದುವರಿಸಿದರೆ, ಅದು ನ್ಯಾಯಾಂಗ ವ್ಯವಸ್ಥೆಗೆ ಮತ್ತು ಸೌಜನ್ಯಳ ಆತ್ಮಕ್ಕೆ ಎಸಗುವ ಮಹಾದ್ರೋಹವಾಗುತ್ತದೆ. ಈ ಮರುತನಿಖೆಯು ಕೇವಲ ಕಣ್ಣೊರೆಸುವ ತಂತ್ರವಾಗದೆ, ನಿಜವಾದ ಅಪರಾಧಿಗಳಿಗೆ ಗಲ್ಲಿನ ಶಿಕ್ಷೆಯಾಗುವವರೆಗೆ ನಾಡಿನ ಜನತೆಯ ಹೋರಾಟ ನಿಲ್ಲುವುದಿಲ್ಲ.
Comments
Post a Comment