ಬಂಗಾಳದಲ್ಲಿ ಅಸೆಂಬ್ಲಿ ಚುನಾವಣೆಗೆ ಬಿಜೆಪಿಯಿಂದ ರೂ 286 ಕೋಟಿಗೂ ಅಧಿಕ ವೆಚ್ಚ: ಕೇವಲ ಜಾಹೀರಾತಿಗೇ ಹರಿದುಬಂತು ರೂ 88.48 ಕೋಟಿ!

 * ಬಿವಿಸೀ

ಚುನಾವಣೆ ಎಂಬುದು ಪ್ರಜಾಸತ್ತಾತ್ಮಕ ಮೌಲ್ಯಗಳು, ವಿಚಾರಧಾರೆಗಳು ಹಾಗೂ ಸಿದ್ಧಾಂತಗಳ ನಡುವೆ ನಡೆಯಬೇಕಾದ ಆರೋಗ್ಯಕರ ಸ್ಪರ್ಧೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಮಾದರಿಗಿಂತ ಪ್ರಚಾರದ ಬಲಾಬಲವೇ ಮತಗಳನ್ನು ನಿರ್ಣಯಿಸುವ ಹಂತಕ್ಕೆ ತಲುಪಿದೆ. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಅಂಕಿಸಂಖ್ಯೆಗಳನ್ನು ಗಮನಿಸಿದಾಗ, ಈ ವಾಸ್ತವ ಬರಿ ಕಲ್ಪನೆಯಲ್ಲ, ಬದಲಿಗೆ ಆತಂಕಕಾರಿ ಸತ್ಯ ಎಂಬುದು ಸ್ಪಷ್ಟವಾಗುತ್ತದೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಈ ಒಂದು ಚುನಾವಣೆಯಲ್ಲೇ ಮಾಡಿದ ಬೃಹತ್ ವೆಚ್ಚದ ವಿವರಗಳು ಪ್ರಜಾಪ್ರಭುತ್ವದ ಆಂತರ್ಯವನ್ನು ಪರೀಕ್ಷೆಗೊಡ್ಡುತ್ತಿವೆ.

ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿರುವ ಅಧಿಕೃತ ದಾಖಲೆಗಳ ಪ್ರಕಾರ, ಬಿಜೆಪಿ ಪಶ್ಚಿಮ ಬಂಗಾಳ ಒಂದರಲ್ಲೇ ಬರೋಬ್ಬರಿ ರೂ 286.99 ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಕೇವಲ ಮಾಧ್ಯಮ ಹಾಗೂ ಡಿಜಿಟಲ್ ಜಾಹೀರಾತುಗಳಿಗಾಗಿ ಸುರಿದ ಹಣವೇ ರೂ 88.48 ಕೋಟಿ. 2026ರ ಆರಂಭದಲ್ಲಿ ನಡೆದ ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ಒಟ್ಟು ವೆಚ್ಚ ರೂ 529.38 ಕೋಟಿಯಾಗಿದ್ದರೆ, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಶೇಕಡಾ 54ರಷ್ಟು ಭಾಗ ಬಂಗಾಳದ ಅಂಗಳದಲ್ಲೇ ವಿನಿಯೋಗವಾಗಿದೆ. ಈ ಭಾರಿ ಪ್ರಮಾಣದ ಹಣಕಾಸಿನ ಹರಿವು ಕೇವಲ ಒಂದು ಪಕ್ಷದ ತಂತ್ರಗಾರಿಕೆಯನ್ನು ಮಾತ್ರವಲ್ಲದೆ, ಇಡೀ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲಾಗುತ್ತಿರುವ ಪರಿಣಾಮವನ್ನೂ ಬಿಂಬಿಸುತ್ತದೆ.

ವಿಶೇಷವಾಗಿ, ಮಾರ್ಚ್ 15ರಿಂದ ಏಪ್ರಿಲ್ 27ರವರೆಗಿನ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ಗೂಗಲ್ ಹಾಗೂ ಮೆಟಾ (ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್) ವೇದಿಕೆಗಳಲ್ಲಿ ಬಿಜೆಪಿ ರೂ 16.98 ಕೋಟಿ ವಿನಿಯೋಗಿಸಿದೆ. ಎದುರಾಳಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಹ ರೂ 14.59 ಕೋಟಿ ವೆಚ್ಚ ಮಾಡಿ ಸ್ಪರ್ಧೆಯಲ್ಲಿದ್ದರೂ, ಡಿಜಿಟಲ್ ಜಾಗವನ್ನು ನಿಯಂತ್ರಿಸುವಲ್ಲಿ ಬಿಜೆಪಿ ಮುಂಚೂಣಿಯಲ್ಲಿತ್ತು. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, ಕೇಂದ್ರ ಮಟ್ಟದ ಪ್ರಚಾರ ವೆಚ್ಚದ ಶೇಕಡಾ 89ರಷ್ಟು ಭಾಗವು ಡಿಜಿಟಲ್ ಹಾಗೂ ಕೇಂದ್ರೀಕೃತ ಮಾಧ್ಯಮಗಳಿಗೇ ಹರಿದುಬಂದಿದೆ. ಮುದ್ರಣ ಮತ್ತು ಟಿವಿ ಮಾಧ್ಯಮಗಳಿಗೆ ಪ್ರಚಾರ ಸಂಸ್ಥೆಗಳ ಮೂಲಕ ಕೋಟಿಗಟ್ಟಲೆ ಹಣ ಪಾವತಿಸಲಾಗಿದೆ.

ಈ ಸನ್ನಿವೇಶವು ಕೆಲವು ಮೂಲಭೂತ ಪ್ರಶ್ನೆಗಳನ್ನು ನಮಗೆ ಎದುರಾಗಿಸುತ್ತದೆ. ಮೊದಲನೆಯದಾಗಿ, ಬೃಹತ್ ಮಟ್ಟದ ಹಣಕಾಸಿನ ಸಂಪನ್ಮೂಲ ಹೊಂದಿರುವ ರಾಜಕೀಯ ಪಕ್ಷಗಳಿಗೆ ಇದು ಚುನಾವಣಾ ಕಣದಲ್ಲಿ ಅಸಮಾನ ಲಾಭವನ್ನು ತಂದುಕೊಡುತ್ತದೆ. ಪ್ರಾದೇಶಿಕ ಅಥವಾ ಸಣ್ಣ ಮಟ್ಟದ ಪಕ್ಷಗಳು ಇಷ್ಟೊಂದು ಭಾರಿ ಪ್ರಮಾಣದ ಜಾಹೀರಾತು ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದಿರುವುದರಿಂದ, ಸ್ಪರ್ಧೆಯ ಮೂಲತತ್ವವೇ ಪ್ರಶ್ನೆಗೆ ಒಳಗಾಗುತ್ತದೆ.

ಎಡನೆಯದಾಗಿ, ಸಾಂಪ್ರದಾಯಿಕವಾಗಿ ಮನೆಮನೆಗೆ ತೆರಳಿ ಜನರನ್ನು ಭೇಟಿಯಾಗುವ ಮತ್ತು ನೇರ ಸಂವಾದ ನಡೆಸುವ ರಾಜಕೀಯ ಸಂಸ್ಕøತಿಯ ಜಾಗವನ್ನು, ತಾಂತ್ರಿಕವಾಗಿ ನಿಯಂತ್ರಿಸಲ್ಪಡುವ ಜಾಹೀರಾತುಗಳು ಆಕ್ರಮಿಸಿಕೊಳ್ಳುತ್ತಿವೆ. ಮೋದಿ ಬಿಜೆಪಿ ಪಕ್ಷದ ಮಹಾನಾಯಕ ವಾಜಪೇಯಿ ಪಾರ್ಲಿಮೆಂಟಿನಲ್ಲಿ ಖಂಡಾಪಟ್ಟೆ ದುಂದು ವೆಚ್ಚ ಮಾಡಿ ಚುನಾವಣೆ ಗೆಲ್ಲುವುದರ ವಿರುದ್ಧ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ವಿರುದ್ಧವಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ನಡೆಯಬೇಕಾದರೆ ಪ್ರಚಾರ ವೆಚ್ಚಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ನಿಯಂತ್ರಣ ಅತ್ಯಗತ್ಯ.


ಕೊನೆಯದಾಗಿ, ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ವೆಚ್ಚ ಮಾಡುವ ಪ್ರತಿಯೊಂದು ರೂಪಾಯಿಯ ಮೂಲ ಮತ್ತು ಉದ್ದೇಶ ಪಾರದರ್ಶಕವಾಗಿರಬೇಕು. ಪಶ್ಚಿಮ ಬಂಗಾಳದ ಈ ಚುನಾವಣಾ ವೆಚ್ಚವು, ಮುಂಬರುವ ದಿನಗಳಲ್ಲಿ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ತುರ್ತು ಸುಧಾರಣೆಗಳ ಅಗತ್ಯವಿದೆ ಎಂಬುದನ್ನು ಸ್ಪಷ್ಟವಾಗಿ ಸಾರುತ್ತಿದೆ. ಮತದಾರರ ನಿರ್ಧಾರವು ಧನಬಲ ಮತ್ತು ಜಾಹೀರಾತುಗಳಿಂದ ಪ್ರಭಾವಿತಗೊಳ್ಳದೆ, ಸಿದ್ಧಾಂತ ಮತ್ತು ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ರೂಪುಗೊಂಡಾಗ ಮಾತ್ರ ಪ್ರಜಾಪ್ರಭುತ್ವವು ನಿಜವಾದ ಅರ್ಥದಲ್ಲಿ ಗಟ್ಟಿಗೊಳ್ಳಲು ಸಾಧ್ಯ.


ಡಿಜಿಟಲ್ ರಣತಂತ್ರ: ಗೂಗಲ್ 

ಮತ್ತು ಮೆಟಾ ಸಿಂಹಪಾಲು


2026ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಡಿಜಿಟಲ್ ಜಾಹೀರಾತುಗಳಿಗಾಗಿ ಕೋಟಿಗಟ್ಟಲೆ ಹಣ ಸುರಿದಿದೆ. ಮಾರ್ಚ್ 15ರಿಂದ ಏಪ್ರಿಲ್ 27ರ ನಡುವೆ ಗೂಗಲ್ ಮತ್ತು ಮೆಟಾ ಪ್ಲಾಟ್‍ಫಾರ್ಮ್‍ಗಳಲ್ಲಿ ಮಾತ್ರ ಬಿಜೆಪಿ ?16.98 ಕೋಟಿ ವಿನಿಯೋಗಿಸಿದ್ದು, ಎದುರಾಳಿ ಟಿಎಂಸಿ ಪಕ್ಷವನ್ನು (ರೂ 14.59 ಕೋಟಿ) ಹಿಂದಿಕ್ಕಿ ಡಿಜಿಟಲ್ ಪ್ರಚಾರದಲ್ಲಿ ಮುಂಚೂಣಿ ಸಾಧಿಸಿದೆ.

.....


5 ರಾಜ್ಯಗಳ ಚುನಾವಣೆಯಲ್ಲಿ 

ಬಂಗಾಳಕ್ಕೆ ಅತೀ ಹೆಚ್ಚು ವೆಚ್ಚ


2026ರ ಆರಂಭದಲ್ಲಿ ನಡೆದ ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳದ ಒಟ್ಟು ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಒಟ್ಟು ವೆಚ್ಚ ರೂ 529.38 ಕೋಟಿ. ಇದರಲ್ಲಿ ಬಂಗಾಳ ಒಂದರಲ್ಲೇ ರೂ .99 ಕೋಟಿ ವೆಚ್ಚವಾಗಿದ್ದು, ಇದು ಒಟ್ಟು ಚುನಾವಣಾ ಖರ್ಚಿನ ಶೇಕಡಾ 54ರಷ್ಟನ್ನು ಹೊಂದಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI