ಪಾಕಿಸ್ತಾನದಲ್ಲಿ ವಿದೇಶಿ ಮಾಧ್ಯಮಗಳ ಮೇಲೆ ಹೊಸ ನಿರ್ಬಂಧ: ವರದಿಗೆ ಸರ್ಕಾರಿ ಮೂಲವೇ ಕಡ್ಡಾಯ

 ಇಣುಕು ನೋಟ * ಬಿವಿಸೀ


ಪಾಕಿಸ್ತಾನ ಸರ್ಕಾರ ವಿದೇಶಿ ಮತ್ತು ಸ್ಥಳೀಯ ಮಾಧ್ಯಮಗಳ ಮೇಲೆ ಕಠಿಣ ನಿಯಂತ್ರಣ ಹೇರಿದೆ. ಇತ್ತೀಚಿನ ನಿಯಮಗಳ ಪ್ರಕಾರ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸುದ್ದಿ ಪ್ರಸಾರಕ್ಕೆ ಕೇವಲ ಅಧಿಕೃತ ಮೂಲಗಳನ್ನು ಮಾತ್ರ ಬಳಸಬೇಕು. ರಾಷ್ಟ್ರೀಯ ಭದ್ರತೆ, ರಾಜತಾಂತ್ರಿಕ ಸಂಬಂಧಗಳು ಮತ್ತು ಅಂತಾರಾಷ್ಟ್ರೀಯ ಮಾತುಕತೆಗಳ ಕುರಿತು ವರದಿ ಮಾಡುವಾಗ ತಪ್ಪು ಮಾಹಿತಿ ತಡೆಯುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ.

ಕಾನೂನು ಸಚಿವ ಅಜಮ್ ನಜೀರ್ ತಾರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವಾಗ ಸಂವಿಧಾನದ "ರೆಡ್ ಲೈನ್" ದಾಟಬಾರದು ಎಂದು ಎಚ್ಚರಿಸಿದರು. 

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಂಬಲವಿದೆ ಆದರೆ ಅದು ಸಂವಿಧಾನದ 19ನೇ ವಿಧಿಯ ಮಿತಿಯಲ್ಲಿರಬೇಕು ಎಂದರು. ವಿಶೇಷವಾಗಿ ಗಲ್ಫ್ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ಊಹಾಪೆÇೀಹದ ಕಾಮೆಂಟರಿ ಮಾಡಿದರೆ ತಪ್ಪು ತಿಳುವಳಿಕೆ ಉಂಟಾಗಬಹುದು ಎಂದು ಹೇಳಿದರು. 

ರಾಷ್ಟ್ರೀಯ ಭದ್ರತೆ ಅಥವಾ ವಿದೇಶಾಂಗ ಸಂಬಂಧಗಳಿಗೆ ಸಂಬಂಧಿಸಿದ ಮಿತಿಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಕೆ ನೀಡಿದರು.

ಇದರೊಂದಿಗೆ ಪಾಕಿಸ್ತಾನ ಸರ್ಕಾರ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳನ್ನು ಸಹ ಅನುಮೋದಿಸಿದೆ. ಈ ನಿಯಮಗಳ ಪ್ರಕಾರ ಸಾಮಾಜಿಕ ಮಾಧ್ಯಮ ಕಂಪನಿಗಳು ಕಾನೂನುಬಾಹಿರ ಎಂದು ಪರಿಗಣಿಸಲಾದ ವಿಷಯವನ್ನು 24 ಗಂಟೆಗಳ ಒಳಗೆ ತೆಗೆದುಹಾಕಬೇಕು. ತುರ್ತು ಸಂದರ್ಭದಲ್ಲಿ 6 ಗಂಟೆಯೊಳಗೆ ತೆಗೆದುಹಾಕಬೇಕು. ಕಂಪನಿಗಳು ಪಾಕಿಸ್ತಾನದಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಭೌತಿಕ ಕಚೇರಿ ಹೊಂದಿರಬೇಕು. ಅಗತ್ಯ ಬಿದ್ದಾಗ ಚಂದಾದಾರರ ಮಾಹಿತಿ, ಟ್ರಾಫಿಕ್ ಡೇಟಾ ಮತ್ತು ವಿಷಯ ಡೇಟಾವನ್ನು ಕಾನೂನು ಜಾರಿ ಸಂಸ್ಥೆಗಳಿಗೆ ನೀಡಬೇಕು. ಈ ನಿಯಮಗಳನ್ನು ಪಾಲಿಸದಿದ್ದರೆ ಕಂಪನಿಗಳನ್ನು ಬ್ಲಾಕ್ ಮಾಡಬಹುದು.

ಈ ನಿಯಮಗಳು ಮಾನವ ಹಕ್ಕುಗಳ ಅಭ್ಯಾಸ ಮತ್ತು ಬಳಕೆದಾರರ ಗೌಪ್ಯತೆಗೆ ವಿರುದ್ಧವಾಗಿವೆ ಎಂದು ಫೇಸ್‍ಬುಕ್, ಗೂಗಲ್, ಟ್ವಿಟರ್ ಸೇರಿದಂತೆ ಏಷ್ಯಾ ಇಂಟರ್ನೆಟ್ ಕೋಯಲಿಷನ್ ಆಕ್ಷೇಪಿಸಿದೆ. ಯಾವುದೇ ಸಮಾಲೋಚನೆ ಇಲ್ಲದೆ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿದೆ.

ಪಾಕಿಸ್ತಾನ ಪ್ರೆಸ್ ಫೌಂಡೇಶನ್, ಹ್ಯೂಮನ್ ರೈಟ್ಸ್ ಕಮಿಷನ್, ಪಾಕಿಸ್ತಾನ ಫೆಡರಲ್ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಸೇರಿದಂತೆ ಹಲವು ಹಕ್ಕು ಸಂಸ್ಥೆಗಳು ಈ ನಿಯಮಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸರ್ಕಾರದೊಂದಿಗಿನ ಮಾತುಕತೆಯನ್ನು ಬಹಿಷ್ಕರಿಸಿವೆ. 

ಜೊತೆಗೆ ಇಮ್ರಾನ್ ಖಾನ್ ಅವರ ಮುಚ್ಚಿದ ವಿಚಾರಣೆಯ ವರದಿಯನ್ನು ಮಾಧ್ಯಮಗಳು ಪ್ರಕಟಿಸದಂತೆ ನ್ಯಾಯಾಲಯ ನಿಷೇಧ ಹೇರಿದೆ. ಉಲ್ಲಂಘಿಸಿದರೆ ಅಧಿಕೃತ ರಹಸ್ಯ ಕಾಯ್ದೆಯಡಿ ಕಠಿಣ ಕ್ರಮ ಎಚ್ಚರಿಕೆ ನೀಡಲಾಗಿದೆ. 

ಒಟ್ಟಾರೆಯಾಗಿ ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ಭದ್ರತೆ ಮತ್ತು ತಪ್ಪು ಮಾಹಿತಿ ತಡೆ ಹೆಸರಿನಲ್ಲಿ ಮಾಧ್ಯಮಗಳ ಮೇಲೆ ಹಿಡಿತ ಬಿಗೊಳಿಸಿದೆ. ಇದರಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಮಾಧ್ಯಮ ಮತ್ತು ಮಾನವ ಹಕ್ಕು ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI