ಪಿಎಂ ಕೇರ್ಸ್ ನಿಧಿಯ ಅಲ್ಪ ವೆಚ್ಚ ಮತ್ತು ಬೃಹತ್ ಠೇವಣಿ

 ಪಾರದರ್ಶಕತೆಯ ಕುರಿತ ಪ್ರಶ್ನೆಗಳು

* ಬಿವಿಸೀ

ಭಾರತ ಸರ್ಕಾರವು ಪಿಎಂ ಕೇರ್ಸ್ ನಿಧಿಯ 2023-24 ಮತ್ತು 2024-25ರ ಹಣಕಾಸು ವರ್ಷಗಳ ಜಮಾ ಮತ್ತು ಖರ್ಚುಗಳ ಲೆಕ್ಕಪತ್ರ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, 2024-25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಪಿಎಂ ಕೇರ್ಸ್ ನಿಧಿಯಲ್ಲಿ ಒಟ್ಟು 8,452 ಕೋಟಿ ರೂಪಾಯಿ ಸಂಗ್ರಹವಿತ್ತು. ಆದರೆ, ಈ ಪೈಕಿ ಸರ್ಕಾರವು ವೆಚ್ಚ ಮಾಡಿರುವುದು ಕೇವಲ 88 ಲಕ್ಷ ರೂಪಾಯಿ ಮಾತ್ರ. ಅಂದರೆ ಸಂಗ್ರಹವಾದ ಒಟ್ಟು ಮೊತ್ತದ ಶೇಕಡಾ 0.001ರಷ್ಟು ಹಣವನ್ನು ಮಾತ್ರ ಬಳಸಲಾಗಿದ್ದು, ಉಳಿದ ಶೇಕಡಾ 93 ರಷ್ಟು ಬೃಹತ್ ಮೊತ್ತವನ್ನು ಸ್ಥಿರ ಠೇವಣಿಯಲ್ಲಿ ಕಾಯ್ದಿರಿಸಲಾಗಿದೆ.

ಕೊವಿಡ್ ಮಹಾಮಾರಿಯ ಸಮಯದಲ್ಲಿ ಪೆÇೀಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ನೆರವಾಗಲು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಈ ಯೋಜನೆಯಡಿ ಪ್ರತಿಯೊಬ್ಬ ಮಗುವಿಗೆ ವಾರ್ಷಿಕ 20,000 ರೂಪಾಯಿ ಶಿಷ್ಯವೇತನ ಮತ್ತು ಇತರೆ ಸಹಾಯಧನ ನೀಡಲಾಗುವುದು ಎಂದು ಸರ್ಕಾರ ವಾಗ್ದಾನ ಮಾಡಿತ್ತು. ವರದಿಗಳ ಪ್ರಕಾರ, ಸರ್ಕಾರಿ ಪಟ್ಟಿಯಲ್ಲಿ 3,383 ಫಲಾನುಭವಿ ಮಕ್ಕಳಿದ್ದಾರೆ. ಆದರೆ 2024-25ರಲ್ಲಿ ಬಿಡುಗಡೆಯಾದ 88 ಲಕ್ಷ ರೂಪಾಯಿಯನ್ನು ಈ ಮಕ್ಕಳ ಸಂಖ್ಯೆಗೆ ಹಂಚಿಕೆ ಮಾಡಿದರೆ, ಪ್ರತಿ ಮಗುವಿಗೆ ಸಿಗುವುದು ಕೇವಲ 2,596 ರೂಪಾಯಿ ಮಾತ್ರ. ಈ ನಿಧಿಯಿಂದ ನೀಡಲಾಗುವ ವೆಚ್ಚವು ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಾ ಬಂದಿದೆ. 2022-23ರಲ್ಲಿ 346 ಕೋಟಿ ರೂಪಾಯಿ ಮತ್ತು 2023-24ರಲ್ಲಿ 15 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದರೆ, ಪ್ರಸ್ತುತ ವರ್ಷದಲ್ಲಿ ಅದು ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಮತ್ತೊಂದೆಡೆ, ಪಿಎಂ ಕೇರ್ಸ್ ನಿಧಿಯ ಬೃಹತ್ ಭಾಗವನ್ನು ಬ್ಯಾಂಕ್‍ಗಳಲ್ಲಿ ಸ್ಥಿರ ಠೇವಣಿಯಾಗಿ ಇಡಲಾಗಿದೆ. 2024-25ರ ಅಂತ್ಯಕ್ಕೆ 7,847 ಕೋಟಿ ರೂಪಾಯಿಯನ್ನು ಸ್ಥಿರ ಠೇವಣಿಯಲ್ಲಿ ಇಡಲಾಗಿದ್ದು, ಇದರಿಂದ ಬಂದ ಬಡ್ಡಿ ಆದಾಯವೇ 469 ಕೋಟಿ ರೂಪಾಯಿಯಾಗಿದೆ. ದೇಶದ ವಿವಿಧ ರಾಜ್ಯಗಳು ಪ್ರಕೃತಿ ವಿಕೋಪ, ಪ್ರವಾಹ, ಭೂಕುಸಿತ ಮತ್ತು ಅಭಾವದ ಪರಿಸ್ಥಿತಿಗಳನ್ನು ಎದುರಿಸುತ್ತಿರುವಾಗ ಹಾಗೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ಧನವನ್ನು ಕೋರುತ್ತಿರುವ ಸಂದರ್ಭದಲ್ಲಿ, ಈ ನಿಧಿಯ ಶೇಕಡಾ 93 ರಷ್ಟು ಭಾಗವನ್ನು ಯಾವುದೇ ಬಳಕೆಯಿಲ್ಲದೆ ಠೇವಣಿಯಲ್ಲಿಟ್ಟಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಇದರ ಜೊತೆಗೆ, ಅನುಷ್ಠಾನ ಸಂಸ್ಥೆಗಳಿಂದ 325 ಕೋಟಿ ರೂಪಾಯಿ ಹಣವು ಮರುಪಾವತಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಯಾವ ಸಂಸ್ಥೆಗಳು ಮತ್ತು ಯಾವ ಕಾರಣಕ್ಕಾಗಿ ಈ ಹಣವನ್ನು ವಾಪಸ್ ನೀಡಿವೆ ಎಂಬ ವಿವರಗಳನ್ನು ನೀಡಲಾಗಿಲ್ಲ. ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ಈ ನಿಧಿಯನ್ನು ಹೊರಗಿಟ್ಟಿರುವುದು ಮತ್ತು ಕಂಪೆÇ್ಟ್ರೀಲರ್ ಅಂಡ್ ಆಡಿಟರ್ ಜನರಲ್ ತನಿಖೆಗೆ ಒಳಪಡಿಸದಿರುವುದು ಇದರ ಪಾರದರ್ಶಕತೆಯ ಕುರಿತು ದೊಡ್ಡ ಮಟ್ಟದ ಅನುಮಾನಗಳನ್ನು ಹುಟ್ಟುಹಾಕಿದೆ. ಸಾರ್ವಜನಿಕರ ದೇಣಿಗೆಯಿಂದ ರೂಪುಗೊಂಡ ಈ ನಿಧಿಯನ್ನು ತುರ್ತು ಪರಿಸ್ಥಿತಿಗಳಲ್ಲಿ ಸರಿಯಾಗಿ ಬಳಸದೇ ಇರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI