ಜಿರಳೆಗಳ ಒತ್ತಡ ನಂತರ ಶಾಲೆಗಳ ಸುಧಾರಣೆಗೆ ರಾಜಸ್ಥಾನದಲ್ಲಿ 12,500 ಕೋಟಿ ರೂ ಯೋಜನೆ

 ಜಿರಳೆಗಳೇ ರಾಮಬಾಣ * ಬಿವಿಸೀ

ರಾಜಸ್ಥಾನದ ಸರ್ಕಾರಿ ಶಾಲೆಗಳ ದುಃಸ್ಥಿತಿಯ ಕುರಿತು ಹೆಚ್ಚುತ್ತಿರುವ ಜಿರಳೆ ಪಕ್ಷದ ಸದಸ್ಯರ  ಒತ್ತಡದ ನಡುವೆಯೇ ಭಜನ್‍ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಮಹತ್ವದ ಮೂರು ವರ್ಷದ ಯೋಜನೆಯನ್ನು ಪ್ರಕಟಿಸಿದೆ. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಬಲಪಡಿಸಲು 12,500 ಕೋಟಿ ರೂಪಾಯಿ ವೆಚ್ಚ ಮಾಡಲು ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಶಾಲೆಗಳ ಸಮಸ್ಯೆ ಕಟ್ಟಡಗಳ ಕೊರತೆಯಲ್ಲಿ ಮಾತ್ರ ಸೀಮಿತವಾಗಿಲ್ಲ. ಅನೇಕ ಶಾಲೆಗಳಲ್ಲಿ ಸಮರ್ಪಕ ತರಗತಿ ಕೊಠಡಿಗಳು, ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಪೀಠೋಪಕರಣಗಳು ಮತ್ತು ಇತರ ಮೂಲಭೂತ ಸೌಲಭ್ಯಗಳ ಕೊರತೆ ಇರುವುದು ಮಕ್ಕಳ ಕಲಿಕೆಯ ಮೇಲೆಯೂ ಪರಿಣಾಮ ಬೀರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಿರುತ್ತದೆ. ಆದ್ದರಿಂದ ಮೂಲಸೌಕರ್ಯ ಸುಧಾರಣೆಗೆ ಮೀಸಲಾದ ಹಣವನ್ನು ಅಗತ್ಯವಿರುವ ಶಾಲೆಗಳಿಗೆ ಆದ್ಯತೆಯ ಆಧಾರದಲ್ಲಿ ತಲುಪಿಸುವುದು ಮುಖ್ಯ.

ಜಿರಳೆ ಪಕ್ಷದ ನಾಗರಿಕರ ಗುಂಪೆÇಂದು ದೇಶವ್ಯಾಪಿ ನಡೆಸುತ್ತಿರುವ ಶಾಲೆಗಳನ್ನು ಸರಿಪಡಿಸುವ ಅಭಿಯಾನದ ಸಂದರ್ಭದಲ್ಲಿ ರಾಜಸ್ಥಾನದ ಒಂದು ಗ್ರಾಮದಲ್ಲಿನ ಶಾಲೆಗೆ ಭೇಟಿ ನೀಡಿದ ಕಾರ್ಯಕರ್ತರ ಮೇಲೆ ಬಿಜೆಪಿ ಪುಂಡರ ಹಲ್ಲೆ ನಡೆದ ಆರೋಪವೂ ಕೇಳಿಬಂದಿತ್ತು. ಬಳಿಕ ಕಾಂಗ್ರೆಸ್ ಕೂಡ ಸರ್ಕಾರಿ ಶಾಲೆಗಳ ಸ್ಥಿತಿಗತಿ ಪರಿಶೀಲನೆಗೆ ಕರೆ ನೀಡಿತ್ತು. ಇದರಿಂದ ಶಾಲೆಗಳ ಮೂಲಸೌಕರ್ಯ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಿ ಪರಿಣಮಿಸಿತು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಘೋಷಣೆಗೆ ರಾಜಕೀಯ ಆಯಾಮವೂ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಕಾರಣ ಏನೇ ಇರಲಿ, ಸರ್ಕಾರಿ ಶಾಲೆಗಳ ಕಟ್ಟಡ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಮತ್ತು ಇತರ ಮೂಲಸೌಕರ್ಯಗಳನ್ನು ಸುಧಾರಿಸುವ ಕ್ರಮ ಸ್ವಾಗತಾರ್ಹ. ರಾಜಕೀಯ ಲಾಭಕ್ಕಾಗಿ ಮಾಡಿದ ಘೋಷಣೆಯಾದರೂ, ಅದರ ಫಲಿತಾಂಶ ಮಕ್ಕಳಿಗೆ ದೊರೆತರೆ ಅದಕ್ಕಿಂತ ಉತ್ತಮವಾದ ರಾಜಕೀಯ ಫಲವೇನಿದೆ?

ಆದರೆ ಹಣ ಘೋಷಿಸುವುದಷ್ಟೇ ಸಾಕಾಗುವುದಿಲ್ಲ. ಕಾಮಗಾರಿಗಳ ಗುಣಮಟ್ಟ, ಗುತ್ತಿಗೆ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಹಣದ ಸಮರ್ಪಕ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಗಾ ಅಗತ್ಯ. ಇಲ್ಲವಾದರೆ ದೊಡ್ಡ ಮೊತ್ತವೂ ಮಧ್ಯವರ್ತಿಗಳು ಮತ್ತು ಗುತ್ತಿಗೆದಾರರ ಪಾಲಾಗುವ ಅಪಾಯವಿದೆ.

ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡುವ ಮೊದಲು ಮಕ್ಕಳಿಗೆ ಸುರಕ್ಷಿತ, ಸ್ವಚ್ಛ ಮತ್ತು ಗೌರವಯುತ ಕಲಿಕಾ ವಾತಾವರಣ ಒದಗಿಸುವುದು ಸರ್ಕಾರಗಳ ಮೊದಲ ಕರ್ತವ್ಯ. ಘೋಷಣೆಗಳು ಕಾಗದದಲ್ಲೇ ಉಳಿಯದೆ, 12,500 ಕೋಟಿ ರೂಪಾಯಿ ನಿಜವಾಗಿ ಶಾಲೆಗಳ ಸ್ಥಿತಿಯನ್ನು ಬದಲಾಯಿಸುವಂತೆ ಬಳಸಲ್ಪಡಬೇಕು. ಆಗ ಮಾತ್ರ ಈ ಯೋಜನೆ ರಾಜಕೀಯ ಘೋಷಣೆಯಿಂದ ಶೈಕ್ಷಣಿಕ ಪರಿವರ್ತನೆಯ ಹೆಜ್ಜೆಯಾಗಿ ರೂಪಾಂತರಗೊಳ್ಳಲಿದೆ.


Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI