ದುಬಾರಿ ಗಿಫ್ಟ್, ಡಿಸಿಎಂ ಮೌನ ಮತ್ತು ತಪ್ಪು ಸಂದೇಶ
ಅಧಿಕಾರವು ಕಳಂಕಿತರನ್ನು ಪೆÇ್ರೀತ್ಸಾಹಿಸುತ್ತಿರುವುದು ಸತೀಶ್ ಸೈಲ್ ಪ್ರಕರಣದಲ್ಲಿ ಸ್ಪಷ್ಟವಾಗಿದೆ. ಲಜ್ಜೆಗೆಟ್ಟ ಶಾಸಕ ತನ್ನ ಸಂಪತ್ತಿನಿಂದ ಎಲ್ಲವನ್ನೂ ಕೊಳ್ಳಬಹುದು ಎಂದುಕೊಳ್ಳುವುದು ಪ್ರಜಾಪ್ರಭುತ್ವದ ಅಣಕ. ಇದ್ದುದು ಇದ್ದ ಹಾಗೆ * ಬಿವಿಸೀ ಕಾರವಾರದ ಸತೀಶ್ ಸೈಲ್ ಪ್ರಕರಣವು ಕಾಂಗ್ರೆಸ್ ಪಕ್ಷಕ್ಕೆ ಉಂಟುಮಾಡಿರುವ ಮುಜುಗರ ಬೇಗನೇ ಮಾಸುವುದಲ್ಲ. ಸಾರ್ವಜನಿಕರ ನಡುವೆ ಆ ಒಂದು ಗಳಿಗೆಯೇ, ಭಿನ್ನ ಆಡಳಿತ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ದಾರಿ ತಪ್ಪುತ್ತಿರುವುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಅಕ್ರಮ ಆಸ್ತಿ ಮತ್ತು ಆದಾಯ ಮೀರಿದ ಸಂಪತ್ತು ಹೊಂದಿರುವ ಪ್ರಕರಣದಲ್ಲಿ ಸಿಲುಕಿದ್ದು, ಇ ಡಿ ಮತ್ತು ಸಿಬಿಐ ತನಿಖೆಗೂ ಒಳಗಾಗಿರುವ, ಹಲವು ಬಾರಿ ಜೈಲು ವಾಸ ಕಂಡಿರುವ ಆಡಳಿತಾರೂಢ ಪಕ್ಷದ ಕಾರವಾರದ ಶಾಸಕ ಸತೀಶ ಸೈಲ್ ಈಗ ಉಪಮುಖ್ಯಮಂತ್ರಿಗೆ 16 ಲಕ್ಷ ರೂ ಮೌಲ್ಯದ ಉಡುಗೊರೆಯನ್ನು ಕೊಟ್ಟಿರುವುದು ಮತ್ತು ಹೀಗೆ ಸಾರ್ವಜನಿಕವಾಗಿ ಕೊಡುವಾಗ ತನಗೆ ನೀಡಿದ ಭರವಸೆಯನ್ನು ಈಡೇರಿಸಲು ಕೋರಿರುವುದು ಅಚ್ಚರಿದಾಯಕವಾಗಿದೆ. ಈ ಮಾತುಗಳನ್ನು ಪಿಸುಮಾತಿನಲ್ಲಿ, ಕಚೇರಿಯ ಒಳಗೆ ಹೇಳಿಲ್ಲ, ಬದಲಾಗಿ ಸಾರ್ವಜನಿಕ ವೇದಿಕೆಯಲ್ಲಿ ಹೇಳಲಾಗಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದು ಈ ಉಡುಗೊರೆಯನ್ನು ತಿರಸ್ಕರಿಸಲೂ ಇಲ್ಲ ಅಥವಾ ತಮಗೆ ಲಂಚ ನೀಡಲಾಗುತ್ತಿದೆ ಎಂದು ಶಾಸಕರನ್ನು ಖಂಡಿಸಲೂ ಮುಂದ...