ರಾಘವೇಶ್ವರಸ್ವಾಮಿ ಪೆÇೀಕ್ಸೋ ಪ್ರಕರಣ ಯಾಕೆ ನಿರ್ಲಕ್ಷಿಸಲಾಗದು?

 ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ವಿರುದ್ಧ ಹೂಡಲಾಗಿರುವ ಪೆÇೀಕ್ಸೋ ಮೊಕದ್ದಮೆ ರಾಷ್ಟ್ರದ ಗಮನ ಸೆಳೆದಿದ್ದಕ್ಕೆ ಕಾರಣ, ಆರೋಪಿಯ ಸ್ಥಾನಮಾನ ಮಾತ್ರವೇ ಅಲ್ಲ; ಬದಲಾಗಿ, ದುರ್ಬಲ ಮಕ್ಕಳಿಗೆ ನ್ಯಾಯ ದೊರಕಿಸುವಲ್ಲಿ ನಡೆಯುವ ಸುದೀರ್ಘ ಕದನದಲ್ಲಿ ಈ ಪ್ರಕರಣವು ಏನನ್ನು ಸೂಚಿಸುತ್ತದೆ ಎಂಬ ಕಾರಣಕ್ಕೆ. ಒಬ್ಬ ಪ್ರಬಲ ಧಾರ್ಮಿಕ ವ್ಯಕ್ತಿ, ತಾನು ನಡೆಸುವ ಶಿಕ್ಷಣ ಸಂಸ್ಥೆಯಲ್ಲೇ ವ್ಯಾಸಂಗ ಮಾಡುವ ಬಾಲಕಿಯ ಮೇಲೆ ಒತ್ತಡ ಹೇರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಆರೋಪಗಳು ಪೆÇೀಕ್ಸೋ ಕಾಯ್ದೆಯ ಮೂಲ ತತ್ವವನ್ನೇ ಪ್ರತಿನಿಧಿಸುತ್ತವೆ.

ಮಕ್ಕಳನ್ನು ಅಧಿಕಾರಸ್ಥರು, ಪ್ರಭಾವಶಾಲಿಗಳು ಮತ್ತು ಸಾಮಾಜಿಕ ಸ್ಥಾನಮಾನ ಇರುವವರು ಶೋಷಣೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ರೂಪಿಸಲಾಗಿರುವ ಪೆÇೀಕ್ಸೋ ಕಾಯ್ದೆಯ ಪ್ರಕರಣಗಳು ಉನ್ನತ ಮಟ್ಟದ ನ್ಯಾಯಾಂಗ ಸೂಕ್ಷ್ಮತೆಯನ್ನು ಅಪೇಕ್ಷಿಸುತ್ತದೆ.

ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ರದ್ದುಪಡಿಸಿರುವುದು, ಮೊಕದ್ದಮೆಯ ವಿಳಂಬ, ಚಾರ್ಜ್ ಷೀಟ್ ಸಲ್ಲಿಕೆಯಲ್ಲಾಗಿರುವ ಲೋಪಗಳು ಮತ್ತು ವಿಚಾರಣೆಯನ್ನು ನಡೆಸುವಾಗ ಮ್ಯಾಜಿಸ್ಟ್ರೇಟರು ಘಟನೆಯ ಕಾರಣಗಳನ್ನು ದಾಖಲಿಸದೆ ಇರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ವಿಳಂಬ ಸಾಮಾನ್ಯವಾಗಿದ್ದು, ವಿಶೇಷವಾಗಿ ಆರೋಪಿಯು ವಿನಮ್ರತೆಯನ್ನು ಅಪೇಕ್ಷಿಸುವ, ಭಯ-ಭೀತಿಯನ್ನು ಉಂಟುಮಾಡುವ ವ್ಯಕ್ತಿಯಾಗಿದ್ದಾಗ ವಿಳಂಬವಾಗುವುದು ಸಾಮಾನ್ಯ ಸಂಗತಿ. ಪ್ರಕ್ರಿಯೆಯಲ್ಲಿನ ಲೋಪಗಳು, ಕಾನೂನಾತ್ಮಕವಾಗಿ ಪ್ರಸ್ತುತವಾದರೂ ಇದು ಅಪ್ರಾಪ್ರ ಬಾಲಕಿಯ ರಕ್ಷಣೆಯನ್ನೊಳಗೊಂಡ ಆರೋಪಗಳ ಮೂಲ ಸತ್ವವನ್ನು ಮರೆಮಾಚುವಂತೆ ಇರಕೂಡದು. ಆರೋಪಿಯು ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಥಿಕ ಅಧಿಕಾರವನ್ನು ಹೊಂದಿರುವಾಗ, ಮೌನವಹಿಸುವುದು ನಿರೀಕ್ಷಿತ ಪರಿಣಾಮವಾಗಿ ಕಾಣುತ್ತದೆ. ಅಪ್ರಾಪ್ತಳು ಗೌರವಯುತರನ್ನು ರಕ್ಷಿಸುವ ವ್ಯವಸ್ಥೆಯ ವಿರುದ್ಧ ಸೆಣಸಾಡುವ ಶಕ್ತಿ ಹೊಂದಿರುವುದು ಅಪರೂಪದ ಸಂಗತಿ.

ಇಲ್ಲಿಯೇ ಸುಪ್ರೀಂ ಕೋರ್ಟ್ ನಿರ್ವಹಿಸಲಿರುವ ಪಾತ್ರ ಮುಖ್ಯವಾಗುತ್ತದೆ. ಸುಪ್ರೀಂ ಕೋರ್ಟ್ ಕೇವಲ ತಾಂತ್ರಿಕ ವಿವರಗಳನ್ನು ಪರಿಶೀಲಿಸುತ್ತಿಲ್ಲ, ನ್ಯಾಯ ವ್ಯವಸ್ಥೆಯು ಧಾರ್ಮಿಕ ಸಂಸ್ಥೆಯ  ಪ್ರಾಬಲ್ಯ ಅಡ್ಡಿ ಬರದಂತೆ ಒಂದು ಹೆಣ್ಣು ಮಗುವಿನ ಆರೋಪಗಳನ್ನು ಆಲಿಸುವ ಸಾಮಥ್ರ್ಯ ಹೊಂದಿದೆಯೇ ಎಂದು ಪರಿಶೀಲಿಸಲಿದೆ. ಈ ಹಂತದಲ್ಲಿ ಮೊಕದ್ದಮೆಯನ್ನು ರದ್ದುಪಡಿಸುವುದು ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ; ಅಧಿಕಾರ, ಪ್ರತಿಷ್ಠೆ ಮತ್ತು ಪ್ರಕ್ರಿಯೆಯಲ್ಲಿನ ತಪ್ಪು ಹೆಜ್ಜೆಗಳು ಒಂದು ಮಗು ನ್ಯಾಯಕ್ಕಾಗಿ ಆಗ್ರಹಿಸುವುದನ್ನು ತಪ್ಪಿಸುತ್ತದೆ ಎಂಬ ಸಂದೇಶ ರವಾನೆಯಾಗುತ್ತದೆ.

ಪೆÇೀಕ್ಸೋ ಮೊಕದ್ದಮೆಗಳು ಸಾಮಾಜಿಕ ಪ್ರಜ್ಞೆಯನ್ನು ಒಳಗೊಂಡಿರುತ್ತವೆ. ವಿಚಾರಣೆಯನ್ನೇ ನಡೆಸದೆ ಇದು ಮರೆಯಾಗುವುದರಿಂದ ಕಾನೂನು ಉಲ್ಲಂಘನೆಯಾಗುವುದಷ್ಟೇ ಅಲ್ಲದೆ, ದುರ್ಬಲ ಮಗುವೊಂದನ್ನು ರಕ್ಷಿಸಬೇಕಾದ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನೇ ಹಾಳು ಮಾಡುತ್ತದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI