ದ್ವೇಷ ಭಾಷಣ ನಿಯಂತ್ರಿಸಲು ಸಮತೋಲಿತ ಕಾನೂನು ಅಗತ್ಯ

 ಈಗಿರುವ ಕಾನೂನುಗಳೇ (153 ಎ, ಬಿ) ಮತ್ತು 295 ಐಪಿಸಿ) ದ್ವೇಷ ಭಾಷಣಗಳನ್ನು ನಿಯಂತ್ರಿಸಲು ಸಾಕಿತ್ತು, ಅದಕ್ಕೋಸ್ಕರ ವಿಶೇಷ ಕಾನೂನು ಬೇಕೇ ಇರಲಿಲ್ಲ ಎನ್ನುವವರೂ ಇದ್ದಾರೆ. ಇದೂ ಕೂಡ ನಿರ್ಲಕ್ಷಿಸಲಾಗದ ಪಾಯಿಂಟೇ.

......................

ಕರ್ನಾಟಕ ವಿಧಾನಸಭೆಯಲ್ಲಿ ದ್ವೇಷ ಭಾಷಣ ನಿಯಂತ್ರಣದ ಕಾಯ್ದೆಯನ್ನು ಅನುಮೋದಿಸಿರುವುದು ಸಹಜವಾಗಿಯೇ ರಾಜಕೀಯ ಬಿರುಗಾಳಿ ಎಬ್ಬಿಸಿದೆ.  ಬಿಜೆಪಿಯ ಸಭಾತ್ಯಾಗ ಮತ್ತು ಇದು ಕರಾಳ ಕಾನೂನು ಎಂಬ ವ್ಯಾಖ್ಯಾನ ಹಾಗೂ ತುರ್ತುಪರಿಸ್ಥಿತಿಯನ್ನು ಹೋಲುತ್ತದೆ ಎಂದು ಆರೋಪಿಸಿರುವುದು ಸಿದ್ಧ ಮಾದರಿಯ ವ್ಯಾಖ್ಯಾನವನ್ನು ಸೂಚಿಸುತ್ತದೆ. ರಾಜಕೀಯ ದ್ವೇಷ ಭಾಷಣವನ್ನು ನಿಯಂತ್ರಿಸುವ ಯಾವುದೇ ಪ್ರಯತ್ನಗಳನ್ನು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಆದಾಗ್ಯೂ ಈ ಚರ್ಚೆಯನ್ನು ಸಾಂವಿಧಾನಿಕ ಸಂಯಮ ಮತ್ತು ಸಾಮಾಜಿಕ ನಿಷ್ಠೆಯಿಂದ ಮುಂದುವರೆಸಬೇಕಿದೆ. ಸಂಘಟಿತ ಕೋಮುವಾದಿ ಪ್ರಚೋದನೆಯಿಂದ ಸಾಕಷ್ಟು ಬವಣೆ ಅನುಭವಿಸಿರುವ ರಾಜ್ಯದಲ್ಲಿ ಇದು ಅತ್ಯವಶ್ಯವಾಗಿದೆ.

ದ್ವೇಷ ಭಾಷಣಗಳು, ವಿಶೇಷವಾಗಿ ಚುನಾವಣೆಗಳ ಸಮಯದಲ್ಲಿ, ಉದ್ದೇಶಿತ ರಾಜಕೀಯ ಅಸ್ತ್ರವಾಗಿರುವುದನ್ನು ಅಲ್ಲಗಳೆಯಲಾಗದು. ಎಲ್ಲ ಸಿದ್ಧಾಂತಗಳ ವೇದಿಕೆಗಳಲ್ಲೂ ನಾಯಕರು ಮತ್ತು ಕಾರ್ಯೋನ್ಮುಖ ಗುಂಪುಗಳು - ಆರೆಸ್ಸೆಸ್, ಬಜರಂಗದಳ ಮತ್ತು ಎಸ್‍ಡಿಪಿಐ ಒಳಗೊಂಡಂತೆ - ಸಾಂವಿಧಾನಿಕ ಲಕ್ಷ್ಮಣ ರೇಖೆಯನ್ನು ಮೀರಿ ಮತದಾರರನ್ನು ಕ್ರೋಢೀಕರಿಸಲು ಯತ್ನಿಸಿದ್ದು, ಕೋಮುವಾದಿ ಅಸ್ಮಿತೆಗಳನ್ನು ಬಳಸಿಕೊಳ್ಳುತ್ತವೆ. ಕರಾವಳಿ ಕರ್ನಾಟಕದಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡದಲ್ಲಿ ಈ ರಾಜಕಾರಣವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕೋಮುವಾದಿ ಹತ್ಯೆಗಳು ಮತ್ತು ಪ್ರತಿಕ್ರಿಯಾತ್ಮಕ ಹಿಂಸೆಯಲ್ಲಿ ಈ ಪ್ರದೇಶದ ಚರಿತ್ರೆಯು ಇಲ್ಲಿನ ಸಾಮಾಜಿಕ ಚೌಕಟ್ಟನ್ನೇ ಛಿದ್ರಗೊಳಿಸಿದ್ದು, ಇಡೀ ಪ್ರದೇಶವು ತನ್ನ ಶೈಕ್ಷಣಿಕ, ಔದ್ಯಮಿಕ ಹಾಗೂ ಬಂಡವಾಳ ಹೂಡಿಕೆಯ ಕೇಂದ್ರವಾಗಿದ್ದರೂ ಸಹ, ಹೊರಜಗತ್ತಿನಲ್ಲಿ ತನ್ನ ಗೌರವವನ್ನು ಕಳೆದುಕೊಂಡಿದೆ. ಪ್ರಚೋದನಕಾರಿ ಭಾಷಣಗಳನ್ನು ಮಾಡಿದವರು ರಾಜಕೀಯ ಲಾಭ ಗಳಿಸುತ್ತಿದ್ದರೆ, ಈ ಪ್ರದೇಶವು ಅದರ ನಷ್ಟವನ್ನು ಭರಿಸುತ್ತಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ದ್ವೇಷ ಭಾಷಣವನ್ನು ನಿಯಂತ್ರಿಸುವ ಕಾನೂನಾತ್ಮಕ ನಿಯಮವನ್ನು ಅತಿರೇಕದ ಕ್ರಮ ಎನ್ನಲಾಗುವುದಿಲ್ಲ, ಇದು ಪ್ರಜಾಸತ್ತಾತ್ಮಕವಾಗಿ ಅವಶ್ಯ ಎನಿಸುತ್ತದೆ. ಸಂವಿಧಾನವು ಮುಕ್ತ ವಾಕ್ ಸ್ವಾತಂತ್ರ್ಯವನ್ನು ಅನಿಬರ್ಂಧಿತ ಎಂದು ಪರಿಗಣಿಸುವುದಿಲ್ಲ. ಅನುಚ್ಛೇದ 19 (2)ರಲ್ಲಿ ಸಾರ್ವಜನಿಕ ಸುವ್ಯವಸ್ಥೆ, ಘನತೆ ಮತ್ತು ನೈತಿಕತೆಯ ಆಧಾರದಲ್ಲಿ ತರ್ಕಬದ್ಧವಾದ ನಿಬರ್ಂಧಗಳನ್ನು ಹೇರಲು ಅವಕಾಶ ನೀಡಿದೆ. ನ್ಯಾಯಾಲಯಗಳೂ ಸಹ ಹಿಂಸೆಯನ್ನು ಪ್ರಚೋದಿಸುವ, ಅನ್ಯ ಗುಂಪುಗಳ ವಿರುದ್ದ ದ್ವೇಷ ಹರಡುವ ಭಾಷಣಗಳನ್ನು ನಿಯಂತ್ರಿಸುವ ಸರ್ಕಾರದ ಅಧಿಕಾರವನ್ನು ಎತ್ತಿಹಿಡಿದಿವೆ. ಇಲ್ಲಿರುವ ನಿಜವಾದ ಸಾಂವಿಧಾನಿಕ ಪ್ರಶ್ನೆ ಎಂದರೆ, ರಾಜ್ಯ ಸರ್ಕಾರವು ದ್ವೇಷ ಭಾಷಣವನ್ನು ನಿಯಂತ್ರಿಸುವ ಬಗ್ಗೆ ಅಲ್ಲ, ಬದಲಾಗಿ ನೂತನ ಕಾನೂನನ್ನು ಬಳಸಿಕೊಂಡು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎನ್ನುವುದು.

ಈ ಕಾನೂನಿನ ವಿಮರ್ಶಕರು ವ್ಯಕ್ತಪಡಿಸಿರುವ ಕಾಳಜಿಯನ್ನು ಈ ದೃಷ್ಟಿಯಿಂದ ನೋಡಬೇಕಿದೆ. ಅಸ್ಪಷ್ಟ ವ್ಯಾಖ್ಯಾನಗಳು, ಅತಿರೇಕದ ಶಿಕ್ಷೆ ಮತ್ತು ಅನಿಬರ್ಂಧಿತ ಪೆÇಲೀಸ್ ವಿವೇಚನೆ ಇವೆಲ್ಲವೂ ಸಹ ಸದುದ್ದೇಶದ ಕಾನೂನನ್ನೂ ಸಹ ರಾಜಕೀಯ ವಿರೋಧಿಗಳ ವಿರುದ್ಧ ಅಥವಾ ಅಹಿತಕರ ಅಸಮಾಧಾನಗಳ ವಿರುದ್ಧ ಬಳಸುವ ಅಸ್ತ್ರವನ್ನಾಗಿ ಮಾಡಿಬಿಡುತ್ತದೆ. ಭಾರತದ ನ್ಯಾಯಾಲಯಗಳು ಈ ಹಿಂದೆ ಇಂತಹ ಕಾನೂನುಗಳನ್ನು ತಿರಸ್ಕರಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ ಮತ್ತು ರಾಜದ್ರೋಹ ಕಾಯ್ದೆಯನ್ನೂ ಸಹ ಇದೇ ಕಾರಣಕ್ಕಾಗಿ ತಿರಸ್ಕರಿಸಿವೆ. ಕರ್ನಾಟಕ ಇದೇ ತಪ್ಪುಗಳನ್ನು ಮಾಡಕೂಡದು. ಹಾಗೆ ನೋಡಿದರೆ, ಈಗಿರುವ ಕಾನೂನುಗಳೇ (153 ಎ, ಬಿ) ಮತ್ತು 295 ಐಪಿಸಿ) ದ್ವೇಷ ಭಾಷಣಗಳನ್ನು ನಿಯಂತ್ರಿಸಲು ಸಾಕಿತ್ತು, ಅದಕ್ಕೋಸ್ಕರ ವಿಶೇಷ ಕಾನೂನು ಬೇಕೇ ಇರಲಿಲ್ಲ ಎನ್ನುವವರೂ ಇದ್ದಾರೆ. ಇದೂ ಕೂಡ ನಿರ್ಲಕ್ಷಿಸಲಾಗದ ಪಾಯಿಂಟೇ.

ಕಾನೂನಿನ ದುರ್ಬಳಕೆಯನ್ನು ಸಾಧ್ಯವಾಗಿಸದ ರಕ್ಷಣಾ ಕ್ರಮಗಳು ಅತ್ಯವಶ್ಯ. ಮೊದಲನೆಯದಾಗಿ ಕಾನೂನು ಶತ್ರುತ್ವ ಅಥವಾ ಹಿಂಸೆಯನ್ನು ಪ್ರಚೋದಿಸುವ, ಗುರುತಿಸಬಹುದಾದ ಗುಂಪುಗಳ ದ್ವೇಷ ಭಾಷಣಕ್ಕೂ ಸರ್ಕಾರದ ನೀತಿಗಳ ಕಠಿಣ ವಿಮರ್ಶೆಗೂ ಇರುವ ವ್ಯತ್ಯಾಸವನ್ನು ಗುರುತಿಸಬೇಕಿದೆ. ಸಾರ್ವಜನಿಕ ವ್ಯಕ್ತಿಗಳ ಮತ್ತು ಸಿದ್ದಾಂತಗಳ ವಿರುದ್ಧದ ವಿಮರ್ಶೆಗಳನ್ನೂ ಸಹ ಪರಿಗಣಿಸಬೇಕಿದೆ. ಅಭಿಪ್ರಾಯ, ವ್ಯಂಗ್ಯ, ಬೌದ್ಧಿಕ ವಿಶ್ಲೇಷಣೆ, ಮತ್ತು ಪತ್ರಿಕಾ ವರದಿಗಳು ಇವುಗಳನ್ನು ನಿಬರ್ಂಧಿಸಕೂಡದು. ಸಾರ್ವಜನಿಕ ವಿಷಯಗಳನ್ನು ಕುರಿತ ಮಾಧ್ಯಮಗಳ ವಿಶ್ಲೇಷಣಾತ್ಮಕ ವರದಿಗಳು ಮತ್ತು ಅಭಿಪ್ರಾಯಗಳನ್ನು ರಕ್ಷಿಸಬೇಕಿದೆ. ಮಾಧ್ಯಮವನ್ನು ಹೆದರಿಸುವ ಕಾನೂನು ಪ್ರಜಾಪ್ರಭುತ್ವವನ್ನೇ ಅಲ್ಲಗಳೆಯುವಂತಾಗುತ್ತದೆ.

ಎರಡನೆಯದಾಗಿ, ಶಿಕ್ಷೆಯನ್ನು ಅಪರಾಧಕ್ಕೆ ಅನುಗುಣವಾಗಿ ವಿಧಿಸಬೇಕು. ಭಾಷಣಗಳಿಗೆ ಸಂಬಂಧಿಸಿದ ಅಪರಾಧಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ಅತಿಯಾಗಿದ್ದು, ಸಾಂವಿಧಾನಿಕವಾಗಿ ದುರ್ಬಳಕೆಗೊಳಗಾಗಬಹುದು. ತಡೆಗಟ್ಟುವುದೆಂದರೆ ಅತಿಯಾದ ಶಿಕ್ಷೆಯನ್ನು ವಿಧಿಸುವುದಲ್ಲ. ನಿಖರತೆ ಮತ್ತು ನ್ಯಾಯಯುತವಾದ, ನಿಶ್ಚಿತ ನಿಯಮಗಳು ಬೇಕಾಗುತ್ತವೆ. ಸ್ತರೀಯವಾಗಿ ಪ್ರತಿಕ್ರಿಯಿಸುವುದು ಪ್ರಜಾತಂತ್ರವನ್ನು ಗಟ್ಟಿಗೊಳಿಸುತ್ತದೆ. ಒಂದು ಬಾರಿ ಅಲ್ಲ ಎರಡು ಬಾರಿ ಸದಾ ಪ್ರಚೋದನೆಯನ್ನು ಮಾಡುವವರಿಗೆ ಕಡ್ಡಾಯ ಪೆÇಲೀಸ್ ಎಚ್ಚರಿಕೆಯ ನೋಟೀಸುಗಳು ಉಪಯುಕ್ತವಾಗುತ್ತವೆ. ಆರಂಭಿಕ ಉಲ್ಲಂಘನೆಗಳಿಗೆ ಹಣಕಾಸು ದಂಡ ವಿಧಿಸುವುದು ಸೂಕ್ತವಾಗುತ್ತದೆ. ಅಪರಾಧಿಯು ತನ್ನ ಚಟುವಟಿಕೆಯನ್ನು ನಿಲ್ಲಿಸದೆ ಇದ್ದಾಗ,  ನೇರವಾಗಿ ಸಾರ್ವಜನಿಕ ಸುವ್ಯವಸ್ಥೆಯನ್ನು ಭಂಗಗೊಳಿಸಿದಾಗ ಸೆರೆವಾಸದ ಶಿಕ್ಷೆ ಸೂಕ್ತ ಎನಿಸುತ್ತದೆ.

ಮೂರನೆಯದಾಗಿ, ಕಾನೂನುಗಳು ಮಾತ್ರವೇ ಮುಖ್ಯವಲ್ಲ. ಮೊಕದ್ದಮೆಯನ್ನು ದಾಖಲಿಸುವ ಮುನ್ನ ಹಿರಿಯ ಸ್ವತಂತ್ರ ಅಧಿಕಾರಿಯ ಮಂಜೂರಾತಿ ಪಡೆಯುವುದು ಮುಖ್ಯವಾಗುತ್ತದೆ ಮತ್ತು ನ್ಯಾಯಾಲಯಗಳಿಗೆ ತ್ವರಿತಗತಿಯಲ್ಲಿ ಅನಗತ್ಯ ಮೊಕದ್ದಮೆಗಳನ್ನು ವಿಲೇವಾರಿ ಮಾಡುವ ಅಧಿಕಾರ ನೀಡುವುದು ಮುಖ್ಯವಾಗುತ್ತದೆ. ಇದು ರಾಜಕೀಯ ದುರ್ಬಳಕೆಯನ್ನು ಕಡಿಮೆ ಮಾಡುವುದೇ ಅಲ್ಲದೆ, ಕಾನೂನಿನ ಮೂಲ ಉದ್ದೇಶವನ್ನು ಈಡೇರಿಸುತ್ತದೆ.

ಕೊನೆಯದಾಗಿ, ಕಾನೂನು ಮಾತ್ರವೇ ಸೌಹಾರ್ದತೆಯನ್ನು ಸೃಷ್ಟಿಸಲಾಗುವುದಿಲ್ಲ.  ಸರ್ಕಾರವು ನಿಯಂತ್ರಣದ ಹಾದಿಯಲ್ಲಿ ದಿಕ್ಕುತಪ್ಪಲು ಸಾಧ್ಯವಿಲ್ಲ. ಶಾಂತಿ ಬಯಸುವ ನಾಗರಿಕರಿಗೆ ಕಾನೂನು ದ್ವೇಷದ ಮುಖವಾಡ ಹೊತ್ತ ರಾಜಕೀಯ ಭಾಷಣಗಳಿಂದ ಅವರನ್ನು ರಕ್ಷಿಸುತ್ತದೆ ಎಂಬ ನ್ಯಾಯಯುತವಾದ ನಿರೀಕ್ಷೆ ಇರುತ್ತದೆ. ಇದನ್ನು ಎಚ್ಚರಿಕೆಯಿಂದ ಜಾರಿಗೊಳಿಸಿದರೆ, ನಿಯಮಬದ್ಧವಾಗಿ ಪರಾಮರ್ಶಿಸಿದರೆ, ಕರ್ನಾಟಕದ ದ್ವೇಷ ಭಾಷಣ ವಿರೋಧಿ ನಿಯಮವು ಪೂರ್ಣ ನಿಬರ್ಂಧಕವಾಗದೆ ತಡೆಗಟ್ಟುವ ಸಾಧನವಾಗುತ್ತದೆ.

ಆಯ್ಕೆ ಇರುವುದು ಸ್ವಾತಂತ್ರ್ಯ ಮತ್ತು ಸುವ್ಯವಸ್ಥೆಯ ನಡುವೆ ಅಲ್ಲ. ನೈಜ ಸಾಮಾಜಿಕ ಹಾನಿ ಉಂಟುಮಾಡುವುದರ ವಿರುದ್ಧ ಎಚ್ಚರಿಕೆಯ ಸಾಂವಿಧಾನಿಕ ಪ್ರತಿಕ್ರಿಯೆ ಮತ್ತು ಯಥಾಸ್ಥಿತಿಯನ್ನು ಕಾಪಾಡುವ ಮೂಲಕ ವಿಭಜನೆಯ ಲಾಭ ಗಳಿಸುವ ಉದ್ದೇಶದ ನಡುವೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again