ಮಾನನಷ್ಟ ಕಾನೂನು ರಾಜಕೀಯ ಅಸ್ತ್ರವಾದಾಗ

 ಪೆÇಲೀಸರು ಮತ್ತು ನ್ಯಾಯಾಲಯಗಳು ದುರ್ಬಳಕೆಗೆ ತೆರೆದುಕೊಂಡರೆ, ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತದೆ.

ಮಹೇಶ್ ಶೆಟ್ಟಿ ತಿಮರೋಡಿ ಅವರ ಬಂಧನವು ಕಾನೂನನ್ನು ಹೇಗೆ ರಾಜಕೀಯ ಸೇವೆಗೆ ಬಗ್ಗಿಸಬಹುದು ಎನ್ನುವುದಕ್ಕೆ ಒಂದು ಪ್ರತ್ಯಕ್ಷ ನಿದರ್ಶನವಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಮತ್ತು ಧರ್ಮಸ್ಥಳದ ಡಿ ಗ್ಯಾಂಗನ್ನು ಕಟುವಾಗಿ ಟೀಕಿಸಿದ್ದ ತಿಮರೋಡಿ ಆಳುವ ವ್ಯವಸ್ಥೆಯ ದೃಷ್ಟಿಯಲ್ಲಿ ಅಹಿತಕರವಾಗಿ ಕಾಣಬಹುದು. ಆದರೆ ಸಂವಿಧಾನವು ಪ್ರತಿರೋಧದ ಹಕ್ಕನ್ನೂ ನೀಡಿದೆ. ಮೆಲ್ನೋಟಕ್ಕೆ ಮಾನನಷ್ಟ ಮೊಕದ್ದಮೆಯು ಜಾಮೀನುರಹಿತ ಬಂಧನಕ್ಕೆ ಒಳಗಾಗುವಂತಹುದಲ್ಲ; ಹಾಗಾಗಿ ಮ್ಯಾಜಿಸ್ಟ್ರೇಟ್ ನಿರ್ದೇಶನವಿಲ್ಲದೆ ಪೆÇಲೀಸರು ಕ್ರಮ ಜರುಗಿಸುವುದನ್ನು ಸರ್ಕಾರವು ಸಮರ್ಥಿಸಲಾಗುವುದಿಲ್ಲ. ಆದಾಗ್ಯೂ ತಿಮರೋಡಿ ಅವರನ್ನು ಧರ್ಮಸ್ಥಳದ ಸಮೀಪ ಇರುವ ಅವರ ಮನೆಯಿಂದ ಎಳೆದುಕೊಂಡು ಹೋಗಿ, 150 ಕಿಲೋಮೀಟರ್ ದೂರದಲ್ಲಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 

ಇದು ಹೇಗೆ ಸಾಧ್ಯವಾಯಿತು? ಇದಕ್ಕೆ ಉತ್ತರ ಬಳಸಲಾಗಿರುವ ಕಾನೂನಿನ ಸೆಕ್ಷನ್‍ಗಳಲ್ಲಿದೆ. ಮಾನನಷ್ಟದ ಜೊತೆಗೇ ಬ್ರಹ್ಮಾವರ ಪೆÇಲೀಸರು ಜಾಮೀನುರಹಿತ ಅಪರಾಧದ ಗಂಭೀರ ಆರೋಪವನ್ನು ಹೊರಿಸಿದ್ದು, ಸಮಾಜದಲ್ಲಿ ವೈರತ್ವ ಸೃಷ್ಟಿಸುವ ಮತ್ತು ಸಾರ್ವಜನಿಕ ದುಷ್ಕøತ್ಯ ಎಸಗುವ ಆರೋಪಗಳನ್ನು ಹೊರಿಸಿದ್ದಾರೆ. ಈ ಸೆಕ್ಷನ್‍ಗಳನ್ನು ಸೇರಿಸುವುದರ ಮೂಲಕ ಒಂದು ದುರ್ಬಲ ಖಾಸಗಿ ದೂರನ್ನು ಪೆÇಲೀಸರು ಕ್ರಿಮಿನಲ್ ಪ್ರಕರಣದ ಪ್ರಭಲ ಅಸ್ತ್ರವಾಗಿ ಪರಿವರ್ತಿಸಿದ್ದಾರೆ. ಇದು ಎಫ್‍ಐಆರ್ ದಾಖಲಿಸಲು ಅವಕಾಶ ಮಾಡಿಕೊಟ್ಟಿದ್ದು, ತಿಮರೋಡಿಯನ್ನು ಬಂಧಿಸಿ ನಂತರ ಮ್ಯಾಜಿಸ್ಟೇಟ್ ಮುಂದೆ ಹಾಜರುಪಡಿಸಲಾಗಿದೆ. ಇವೆಲ್ಲವೂ ಕೇವಲ ಒಂದೆರಡು ದಿನಗಳಲ್ಲಿ ನಡೆದ ಬೆಳವಣಿಗೆಗಳು.

ದಾಖಲೆಗಳಲ್ಲಿ ಈ ಪ್ರಕ್ರಿಯೆ ಶಿಸ್ತುಬದ್ಧವಾಗಿ ಕಾಣುತ್ತದೆ. ಆದರೆ ಇದರ ಹಿಂದಿನ ಉದ್ದೇಶ ಪಾರದರ್ಶಕವಾಗಿಲ್ಲ ಮೂರನೆ ವ್ಯಕ್ತಿಯೊಬ್ಬರ ದೂರನ್ನು ಆಧರಿಸಿ ಬಂಧನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಾನನಷ್ಟ ಮುಕದ್ದಮೆ ಬಾಧಿತ ವ್ಯಕ್ತಿಯು ದೂರು ಸಲ್ಲಿಸಿದರೆ ಮಾತ್ರವೇ ಕಾನೂನು ಜಾರಿ ಪ್ರಕ್ರಿಯೆ ಪಡೆದುಕೊಳ್ಳುತ್ತದೆ. ಇಲ್ಲಿ ನಿಜವಾದ ಅಪರಾಧ ಹಿಂಸೆಯನ್ನು ಪ್ರಚೋದಿಸುವುದಲ,್ಲ ಬದಲಾಗಿ ರಾಜಕೀಯ ವಲಯಗಳಲ್ಲಿ ಅಹಿತಕರ ಸನ್ನಿವೇಶವನ್ನು ಪ್ರಚೋದಿಸುವುದಾಗಿದೆ. ಟೀಕೆಯನ್ನು ಕೋಮು ಪ್ರಚೋದನೆ ಎಂದು ಪರಿಗಣಿಸುವುದರ ಮೂಲಕ ಪೆÇಲೀಸರು ಜಾಮೀನುರಹಿತ ಅಪರಾಧವೊಂದನ್ನು ಸೃಷ್ಟಿಸಿದ್ದಾರೆ. ಮ್ಯಾಜಿಸ್ಟ್ರೇಟರು ಇದನ್ನು ಅನುಮೋದಿಸಿದ್ದಾರೆ. ಪ್ರಜೆಗಳನ್ನು ರಕ್ಷಿಸಲು ಇರುವ ರಕ್ಷಣಾ ಕಾನೂನುಗಳನ್ನು ಕೇವಲ ಔಪಚಾರಿಕ ಮಟ್ಟಕ್ಕೆ ಇಳಿಸಲಾಗಿದೆ.

ಇದು ಕಾನೂನು ಲೋಪಕ್ಕಿಂತಲೂ ದೊಡ್ಡ ಪ್ರಮಾದ. ಯೋಜಿತ ದಾಳಿ ಆಗಿದೆ. ತಿಮರೋಡಿ ತಮ್ಮ ಟೀಕೆಯನ್ನು ಕೇವಲ ಆರೆಸ್ಸೆಸ್ ಅಥವಾ ಬಿಜೆಪಿಗೆ ಸೀಮಿತಗೊಳಿಸಿಲ್ಲ, ಕಾಂಗ್ರೆಸ್ ನಾಯಕರನ್ನೂ ಧರ್ಮಸ್ಥಳದ ಅವ್ಯವಸ್ಥೆಯ ಬಗ್ಗೆ ಟೀಕಿಸಿದ್ದಾರೆ. ಹಾಗಾಗಿ ಅವರನ್ನು ತೆಪ್ಪಗಾಗಿಸುವುದು ಎರಡೂ ಬದಿಗಳಲ್ಲಿ ತೃಪ್ತಿ ತರುತ್ತದೆ. ಇಲ್ಲಿ ರಹಸ್ಯ ಒಪ್ಪಂದ ಇರುವುದನ್ನು ಊಹಿಸುವುದು ಕಷ್ಟವಲ್ಲ, ಪರಸ್ಪರ ವಿರೋಧಿಗಳು ತಮಗೆ ಅಹಿತಕರ ಎನಿಸುವ ಟೀಕಾಕಾರನನ್ನು ಬಾಯಿಮುಚ್ಚಿಸಿದ್ದಾರೆ.

ಇದರ ಪರಿಣಾಮಗಳು ಕರಾವಳಿ ಕರ್ನಾಟಕವನ್ನೂ ದಾಟಿ ಹೋಗುತ್ತದೆ. ಪೆÇಲೀಸರು ಇಂದು ಪ್ರತಿರೋಧ ವ್ಯಕ್ತಪಡಿಸಿದ ಒಬ್ಬ ವ್ಯಕ್ತಿಯನ್ನು ಬಂಧಿಸಲು ಕಾನೂನನ್ನು ಬಳಸಿದರೆ, ನಾಳೆ ಇದೇ ಸೂತ್ರವನ್ನು ರಕ್ಷಿತ ಶಕ್ತಿ ಕೇಂದ್ರಗಳ ವಿರುದ್ಧ ಮಾತನಾಡುವ ಯಾರನ್ನಾದರೂ ಬಂಧಿಸಬಹುದಾಗಿದೆ.  ಇಲ್ಲಿ ಕಲಿಯಬೇಕಾದ ನೇರವಾದ ಪಾಠ ಎಂದರೆ ಅಪರಾಧ ಮುಖ್ಯವಾಗುವುದಿಲ್ಲ, ಯಾರ ಹೆಸರನ್ನು ಬಳಸಲಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ. 

ಮಾನನಷ್ಟ ಕಾನೂನು ವ್ಯಕ್ತಿ ಗೌರವದ ರಕ್ಷಣೆಯಾಗಿ ರಚಿಸಲ್ಪಟ್ಟಿದೆ. ಇದನ್ನು ಜಾಮೀನುರಹಿತ ಸೆಕ್ಷನ್‍ಗಳನ್ನು ಬಳಸುವ ಮೂಲಕ ತಿರುಚಿದರೆ ಪ್ರಬಲ ವ್ಯಕ್ತಿಗಳನ್ನು ವಿಚಾರಣೆಯಿಂದ ಬಚಾವ್ ಮಾಡುತ್ತದೆ. ಪೆÇಲೀಸರು ಮತ್ತು ನ್ಯಾಯಾಲಯಗಳು ದುರ್ಬಳಕೆಗೆ ತೆರೆದುಕೊಂಡರೆ, ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again