ಅಮೆರಿಕದಲ್ಲಿ ಕಾರ್ಯ-ಕಟ್ಲೆ ನಡೆಸುವ ಪುರೋಹಿತರ ಸಂಪಾದನೆ ಕೇಳಿ

 ಅಮೆರಿಕದಲ್ಲಿ ವಾಸಿಸುವ ಒಬ್ಬ ಭಾರತೀಯ ಮಹಿಳೆ ಅಲ್ಲಿನ ಪಂಡಿತ್‍ಜಿಯೊಬ್ಬರ ಸಂಪಾದನೆ ಬಗ್ಗೆ ಹೇಳಿದ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಹಿಂದೂ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡುವ ಪಂಡಿತ್‍ಗಳು ಅಮೆರಿಕದಲ್ಲಿ ಗಂಟೆಗೆ 200ರಿಂದ 300 ಡಾಲರ್‍ವರೆಗೆ ಶುಲ್ಕ ಪಡೆಯುತ್ತಾರೆ ಎಂಬ ಮಾಹಿತಿಯನ್ನು ಆಕೆ ಹಂಚಿಕೊಂಡಿದ್ದಾರೆ. ಅಂದರೆ ಒಂದು ಮದುವೆ ಅಥವಾ ಗೃಹಪ್ರವೇಶ ಪೂಜೆಗೆ 1500ರಿಂದ 2500 ಡಾಲರ್‍ವರೆಗೆ ಸಂಪಾದನೆ ಆಗುತ್ತದೆ ಎಂದಿದ್ದಾರೆ. ಕೆಲವು ಪ್ರಮುಖ ನಗರಗಳಲ್ಲಿ ಡಿಮಾಂಡ್ ಹೆಚ್ಚಿರುವುದರಿಂದ ಶುಲ್ಕ ಇನ್ನೂ ಹೆಚ್ಚಿರಬಹುದು ಎಂದೂ ಆಕೆ ಹೇಳಿದ್ದಾರೆ.

ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. "ಇಂಜಿನಿಯರಿಂಗ್ ಓದಿ ಸಾಫ್ಟ್‍ವೇರ್ ಕಂಪನಿಯಲ್ಲಿ ಒತ್ತಡದ ಕೆಲಸ ಮಾಡುವುದಕ್ಕಿಂತ ಅಮೆರಿಕದಲ್ಲಿ ಪಂಡಿತ್ ಆಗುವುದು ಬೆಸ್ಟ್" ಎಂದು ಕೆಲವರು ತಮಾಷೆಯಾಗಿ ಬರೆದಿದ್ದಾರೆ. "ಇಂಜಿನಿಯರಿಂಗ್ ಚೋಡ್ನಿ ಪಡೇಗಿ" ಎಂಬ ಕಾಮೆಂಟ್‍ಗಳು ಸಾವಿರಾರು ಲೈಕ್ ಪಡೆದಿವೆ. ಮತ್ತೊಂದೆಡೆ, ಪಂಡಿತ್ ಆಗಲು ಸಂಸ್ಕøತ, ಪುರೋಹಿತ ಶಾಸ್ತ್ರ, ಮಂತ್ರ ಪಠಣದಲ್ಲಿ ವರ್ಷಗಳ ಪರಿಶ್ರಮ ಬೇಕು, ಅದು ಸುಲಭದ ಕೆಲಸವಲ್ಲ ಎಂದೂ ಜನರು ನೆನಪಿಸಿದ್ದಾರೆ. "ಗಂಟೆಗೆ 300 ಡಾಲರ್ ಕೇಳಲು ಕೂಡಾ ಅಷ್ಟು ವಿದ್ಯೆ ಬೇಕು" ಎಂಬ ಕಾಮೆಂಟ್‍ಗಳೂ ಕಾಣಿಸಿಕೊಂಡಿವೆ.

ಅಮೆರಿಕದಲ್ಲಿ ಹಿಂದೂ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳ ಬೇಡಿಕೆ ಕೂಡಾ ಜಾಸ್ತಿಯಾಗಿದೆ. ನ್ಯೂಜೆರ್ಸಿ, ಟೆಕ್ಸಾಸ್, ಕ್ಯಾಲಿಫೆÇೀರ್ನಿಯಾ, ನ್ಯೂಯಾರ್ಕ್‍ನಂತಹ ರಾಜ್ಯಗಳಲ್ಲಿ ದೇವಾಲಯಗಳು, ಸಾಂಸ್ಕೃತಿಕ ಸಂಘಗಳು ಹೆಚ್ಚಾಗಿವೆ. ಸ್ಥಳೀಯವಾಗಿ ಪಂಡಿತ್‍ಗಳ ಕೊರತೆ ಇರುವುದರಿಂದ, ಭಾರತದಿಂದ ಹೋಗುವ ಪುರೋಹಿತರಿಗೆ ಉತ್ತಮ ಅವಕಾಶ ಸಿಗುತ್ತಿದೆ. ವೀಸಾ, ಪ್ರಯಾಣ ಖರ್ಚು ಬಿಟ್ಟರೆ ಉಳಿದ ಹಣ ಉತ್ತಮ ಸಂಪಾದನೆಯಾಗುತ್ತದೆ ಎಂಬುದು ವಿಡಿಯೋದ ಸಾರಾಂಶ. ಕೆಲವು ಪಂಡಿತ್‍ಗಳು ವಾರಾಂತ್ಯಕ್ಕೆ ಮಾತ್ರ ಪೂಜೆ ಮಾಡಿ, ಉಳಿದ ಸಮಯ ಬೇರೆ ಕೆಲಸ ಮಾಡುತ್ತಾರೆ ಎಂಬ ಮಾಹಿತಿಯೂ ಇದೆ.

ಈ ಚರ್ಚೆ ಭಾರತದಲ್ಲೂ ಪ್ರತಿಧ್ವನಿಸಿದ್ದು, ಉದ್ಯೋಗ ಆಯ್ಕೆ, ಶಿಕ್ಷಣದ ಮೌಲ್ಯ, ಸಾಂಸ್ಕೃತಿಕ ಕೆಲಸಗಳ ಗೌರವದ ಬಗ್ಗೆ ಜನ ಮತ್ತೆ ಮಾತನಾಡುತ್ತಿದ್ದಾರೆ. ಯುವಕರು "ಡಿಗ್ರಿ ಬಿಟ್ಟು ಸಂಸ್ಕೃತ ಕಲಿಯೋಣಾ" ಎಂದು ತಮಾಷೆ ಮಾಡಿದರೆ, ಹಿರಿಯರು "ಸಂಪಾದನೆ ಮಾತ್ರ ನೋಡಬೇಡಿ, ಪರಿಶ್ರಮವೂ ನೋಡಿ" ಎಂದು ಪ್ರತಿಕ್ರಿಯಿಸಿದ್ದಾರೆ. ಅಮೆರಿಕದಲ್ಲಿರುವ ಭಾರತೀಯರು ಮಾತ್ರವಲ್ಲ, ದೇಶದಲ್ಲಿರುವವರೂ ಈ ವಿಷಯವನ್ನು ಕುತೂಹಲದಿಂದ ನೋಡುತ್ತಿದ್ದಾರೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again