ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

 


ಅಪರಾಧಗಳನ್ನು ಮುಚ್ಚಿಹಾಕಬಹುದು, ಸಾಕ್ಷಿಗಳನ್ನು ತೆಪ್ಪಗಾಗಿಸಬಹುದು, ರಾಜಕೀಯ ಪಕ್ಷಗಳು ಪಿತೂರಿ ಮಾಡಬಹುದು ಆದರೆ ಇತಿಹಾಸ ತನ್ನದೇ ಆದ ರೀತಿಯಲ್ಲಿ ನೆನಪಿಟ್ಟುಕೊಳ್ಳುತ್ತದೆ. ಸೌಜನ್ಯ ಪ್ರಕರಣ ಅಷ್ಟು ಸುಲಭವಾಗಿ ಮರೆಯಾಗುವುದಿಲ್ಲ.

......................

ಕೇಳ್ರಪ್ಪೋ ಕೇಳಿ * ಬಿವಿಸೀ

ಹಲವು ದಶಕಗಳ ಕಾಲ ಧರ್ಮಸ್ಥಳದಲ್ಲಿ ನಡೆದಂತಹ ಅತ್ಯಾಚಾರ ಮತ್ತು ಕೊಲೆಗಳ ಪ್ರಕರಣಗಳನ್ನು ಮುಚ್ಚಿಹಾಕಲಾಗಿದ್ದು, ಘಟನೆಯನ್ನು ತಿರುಚುವ ಮೂಲಕ, ದಾರಿತಪ್ಪಿಸಿ ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳೂ ಸಹ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ, ತಮ್ಮದೇ ಆದ ರೀತಿಯಲ್ಲಿ ಸತ್ಯವನ್ನು ಮುಚ್ಚಿಹಾಕಲು ಕೊಡುಗೆ ಸಲ್ಲಿಸಿವೆ. ಈ ಪಕ್ಷಗಳ ವ್ಯಾಖ್ಯಾನಗಳು ವಿಭಿನ್ನವಾಗಿದ್ದರೂ, ಅವುಗಳ ಗುರಿ ಒಂದೇ ಆಗಿದ್ದು, ಧರ್ಮಸ್ಥಳದ ಗುಂಪಿನ ಹಿತಾಸಕ್ತಿಗಳನ್ನು ರಕ್ಷಿಸುವುದೇ ಆಗಿದೆ. ಆದಾಗ್ಯೂ, ಎಷ್ಟೇ ವಿಳಂಬವಾದರೂ, ಸತ್ಯ ಸಾಯುವುದಿಲ್ಲ.

ಸರ್ಕಾರವು ರಚಿಸಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ಈ ಪ್ರಕರಣಗಳು ವಿರಮಿಸುವ ತಾಣವಾಗುತ್ತದೆ ಎಂದು ಭಾವಿಸಲಾಗಿತ್ತು. ಸಾರ್ವಜನಿಕರ ಆಕ್ರೋಶವನ್ನು ತಣಿಸಲು ಸರ್ಕಾರವು ಅನುಸರಿಸಿದ ತಾಂತ್ರಿಕ ಕಸರತ್ತು ಎಂದೂ, ಧರ್ಮಸ್ಥಳ ರಿಪಬ್ಲಿಕ್ ಸಂಸ್ಥಾನಕ್ಕೆ ಯಾವುದೇ ಹಾನಿಕಾರಕ ಸಾಕ್ಷಿಗಳು ಲಭ್ಯವಾಗುವುದಿಲ್ಲವೆಂದೂ ಭಾವಿಸಲಾಗಿತ್ತು. ಆದರೆ ಇತ್ತೀಚಿನ ಹೊಸ ಬೆಳವಣಿಗೆಗಳು ದೀರ್ಘಕಾಲ ಮುಚ್ಚಿಹೋಗಿದ್ದ ದುರಂತಗಳ, ಸೌಜನ್ಯಳ ಭೀಕರ ಅತ್ಯಾಚಾರ, ಹತ್ಯೆ, ಅಪಹರಣ ಮತ್ತು ಇತರ ಕೊಲೆ ಪ್ರಕರಣಗಳ ಕುರುಹುಗಳನ್ನು ಹೊರತರುತ್ತಿದೆ. ಸೌಜನ್ಯ ಪ್ರಕರಣ ಕರ್ನಾಟಕದ ಸಮಕಾಲೀನ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿದೆ.

ಮಂಡ್ಯದ ಮಹಿಳೆಯೊಬ್ಬರು ಎಸ್‍ಐಟಿಯನ್ನು ಸಂಪರ್ಕಿಸಿದ್ದು, ತಾನು ಮತ್ತು ತನ್ನ ಗೆಳತಿಯೊಬ್ಬರು 13 ವರ್ಷಗಳ ಹಿಂದೆ ಸೌಜನ್ಯಾಳನ್ನು ಅಪಹರಿಸಿದ್ದಕ್ಕೆ ಪ್ರತ್ಯಕ್ಷ ಸಾಕ್ಷಿಗಳು ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಈ ಸಾಕ್ಷ್ಯವು ಬಹಳ ಎಚ್ಚರಿಕೆಯಿಂದ ರೂಪಿಸಿದ್ದ ಡಿ-ಗ್ಯಾಂಗ್ ಪರ ನಿರಾಕರಣೆಯ ನಿರೂಪಣೆಯನ್ನು ಒಮ್ಮೆಲೆ ಅಸ್ಥಿರಗೊಳಿಸುತ್ತದೆ. ಈಕೆಯ ಮಾತುಗಳು ನಿಜವೇ ಆದರೆ, ಅದು ಕೇವಲ ಸಾಕ್ಷಿಯಾಗದೆ, ಒಂದು ದಶಕದಿಂದಲೂ ರಾಜಕೀಯ ವರ್ಗಗಳು ಸಮರ್ಥಿಸುತ್ತಿರುವ ಮತ್ತು ಮೌನ ವಹಿಸಿರುವ ಭದ್ರಕೋಟೆಯನ್ನು ಧ್ವಂಸಗೊಳಿಸುತ್ತದೆ.

ಇದರೊಂದಿಗೆ, ಮಾಹಿತಿದಾರ ಚಿನ್ನಯ್ಯ ಮತ್ತೊಮ್ಮೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು ಸೌಜನ್ಯಾ ಹತ್ಯೆಯ ಮಾಹಿತಿ ಇರುವುದಾಗಿ ಹೇಳಿದ್ದಾರೆ. ಇವರ ವಿವರಣೆಗಳು ಭೀಕರವಾಗಿದ್ದು, ಗೆಳೆಯ ರವಿ ಪೂಜಾರಿ ಅತ್ಯಾಚಾರ ಮತ್ತು ಹತ್ಯೆಯನ್ನು ನೇರವಾಗಿ ನೋಡಿರುವುದನ್ನು ತಮ್ಮ ಬಳಿ ಹೇಳಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಆ ಸ್ನೇಹಿತನು ಅದಕ್ಕೆ ಬೆಲೆ ತೆರಬೇಕಾಗಿ, ಕೊಲೆಗೀಡಾಗಬೇಕಾಯಿತು. ಚಿನ್ನಯ್ಯ ಹೇಳುವಂತೆ, ಅತ್ಯಾಚಾರ ನಡೆಸಿದ ಗುಂಪೇ ಮುಖ್ಯ ಸಾಕ್ಷಿಯನ್ನೂ ಮುಗಿಸಿದೆ ಮತ್ತು ಡಿ-ಗ್ಯಾಂಗಿನ ಮುಂದಿನ ಆಸ್ಥಾನ ಉಸ್ತುವಾರಿ ಎನಿಸಿಕೊಂಡಾತನೇ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಹಿಂದಿನ ಪ್ರೇರಕ ವ್ಯಕ್ತಿ. ದೂರುದಾರ ಚಿನ್ನಯ್ಯನ ಬಾಯಿ ಬಿಡಿಸಿದರೆ ಸತ್ಯ ಹೊರಬಾರದಿರಲು ಸಾಧ್ಯವಿಲ್ಲ. 

ಈ ಎರಡು ನಿರೂಪಣೆಗಳು, ಪ್ರತ್ಯಕ್ಷ ಸಾಕ್ಷಿಯ ವಿವರಣೆ ಮತ್ತು ಮಾಹಿತಿದಾರನ ಸಾಕ್ಷ್ಯ ಹೇಳಿಕೆಯು, ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಮರೆಮಾಚಲು ಯತ್ನಿಸಿದ ಎಲ್ಲ ವಿವರಗಳನ್ನೂ . ಸ್ವತಂತ್ರ ತಾಣಗಳು, ಯು ಟ್ಯೂಬರ್‍ಗಳು, ಸಿಟಿಜನ್ ಪತ್ರಕರ್ತರು, ಹೊರಗೆಡಹುತ್ತಿದ್ದಾರೆ. ಇದರ ಪರಿಣಾಮ ಗಂಭೀರವಾಗಿದ್ದು, ಧರ್ಮಸ್ಥಳ ಪರವಾದ ವ್ಯವಸ್ಥಿತ ಲಾಬಿಯು ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಧಾನವಾಗಿ ಕಂಡರೂ ಸಹ ಈಗ ಎಲ್ಲವೂ ಭಗ್ನವಾಗಿದೆ

ಮುಖ್ಯವಾಹಿನಿಯ ಸುದ್ದಿಮನೆಗಳು, ಕೃತಕ ನಿರಾಕರಣೆಯ ನಿರೂಪಣೆಯನ್ನೇ ಬಿಂಬಿಸುತ್ತಿದ್ರೂ, ಈಗ ರಕ್ಷಣಾತ್ಮಕ ನಿಲುವು ತಳೆಯುತ್ತಿವೆ. ಇವರ ಮೌನವೂ ಸಹ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ರಾಜಕೀಯ ಪಕ್ಷಗಳು, ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು, ತಮ್ಮ ಇಚ್ಛಾನುಸಾರವಾಗಿ ಕೆಲವು ಪ್ರಕರಣಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದು, ಈಗ ಹಠಾತ್ತನೆ ಮೌನವಾಗಿದ್ದಾರೆ. ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆಗಳ ಬಗ್ಗೆ ಅಬ್ಬರಿಸಿದ್ದ ಕೇಸರಿ ನಾಯಕರು, ತಮ್ಮದೇ ಅಂಗಳದಲ್ಲಿ ಹಿಂದೂ ಹೆಣ್ಣು ಮಕ್ಕಳು ಹತ್ಯೆಗೀಡಾದಾಗ ನ್ಯಾಯಕ್ಕಾಗಿ ಆಗ್ರಹಿಸದೆ, ಖತರನಾಕ್ ಧರ್ಮಸ್ಥಳದ ಕ್ರಿಮಿನಲ್ ಗುಂಪಿನ ರಕ್ಷಣೆಗೆ ನಿಂತಿದ್ದಾರೆ.

ಡಿ-ಗ್ಯಾಂಗ್ ಸಮರ್ಥಕರ ಮೌನವು ಅವರು ಮಾನವವಿರೋಧಿ ಹತ್ಯಾಚಾರಗಳಲ್ಲಿ ಶಾಮೀಲಾಗಿರುವ ಸಂಕೇತವನ್ನೇ ನೀಡುತ್ತದೆ. ಇದು ಸಾರ್ವಜನಿಕ ವಿಶ್ವಾಸಕ್ಕೆ ದ್ರೋಹ ಬಗೆದಂತಾಗಿದೆ. ಕರ್ನಾಟಕದ ಜನತೆ ಇದನ್ನು ಗಮನಿಸುತ್ತಿದ್ದಾರೆ. ಅಧಿಕಾರ, ಹಣ, ಪ್ರಭಾವ ಇವೆಲ್ಲವೂ ಸತ್ಯಕ್ಕಿಂತಲೂ ಹೆಚ್ಚು ಪ್ರಾಬಲ್ಯ ಪಡೆದಿದ್ದು, ರಾಜಕೀಯ ಸಂಸ್ಕøತಿಯಲ್ಲಿ ನ್ಯಾಯವನ್ನೂ ನುಂಗಿ ಹಾಕಿರುವುದನ್ನು ಜನರು ಗಮನಿಸುತ್ತಾರೆ. ಅಷ್ಟೇ ಅಲ್ಲದೆ, ಸತ್ಯ ಎಂದಾದರೂ ಸಹ ಹೊರಬರುತ್ತದೆ ಮತ್ತು ಉಳಿದುಕೊಳ್ಳುತ್ತದೆ ಎಂಬ ವಾಸ್ತವವನ್ನು ಗುರುತಿಸಿದ್ದು, ಸತ್ಯವನ್ನು ಅಳಿಸಿಹಾಕಲು ಯತ್ನಿಸುವವರನ್ನು ಕಾಡುತ್ತಿದೆ.

ಧರ್ಮಸ್ಥಳದ ಪ್ರಕರಣವು ಕ್ರಿಮಿನಲ್ ತನಿಖೆಯನ್ನೂ ಮೀರಿ ಹೋಗಿದೆ. ಇದು ಕರ್ನಾಟಕದ ಪ್ರಜ್ಞೆಯ ಪ್ರಶ್ನೆಯಾಗಿದ್ದು, ಸಾಧಾರಣ ಜನತೆ ಸಾಮಾಜಿಕ ಮಾಧ್ಯಮ ಮತ್ತು ಸಾಮೂಹಿಕ ನೆನಪುಗಳ ಸಹಕಾರದಿಂದ, ಸತ್ಯದ ಬಾಗಿಲುಗಳನ್ನು ತೆರೆದು, ಬಲಾಢ್ಯ ಅಧಿಕಾರ ಕೇಂದ್ರಗಳನ್ನು ಭಗ್ನಗೊಳಿಸುವ ಸಾಧ್ಯತೆಗಳಿವೆ.

ಈ ಪ್ರಕರಣಗಳು ಪುರಾತನ ಸತ್ಯ ವಾಕ್ಯವನ್ನು ನೆನಪಿಸುತ್ತದೆ. ಅಪರಾಧಗಳನ್ನು ಮುಚ್ಚಿಹಾಕಬಹುದು, ಸಾಕ್ಷಿಗಳನ್ನು ತೆಪ್ಪಗಾಗಿಸಬಹುದು, ರಾಜಕೀಯ ಪಕ್ಷಗಳು ಪಿತೂರಿ ಮಾಡಬಹುದು ಅದರೆ ಇತಿಹಾಸ ತನ್ನದೇ ಆದ ರೀತಿಯಲ್ಲಿ ನೆನಪಿಟ್ಟುಕೊಳ್ಳುತ್ತದೆ. ಸೌಜನ್ಯ ಪ್ರಕರಣ ಅಷ್ಟು ಸುಲಭವಾಗಿ ಮರೆಯಾಗುವುದಿಲ್ಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again