ರಕ್ಷಿತ್ ಶಿವರಾಮ್ ಬೆಳ್ತಂಗಡಿ ಮತದಾರರಿಗೆ ಹತ್ತಿರವಾಗದ ಅಭ್ಯರ್ಥಿ

ಮತದಾರರು ರಕ್ಷಿತ್ ಅವರು ತಮ್ಮನ್ನು ಪ್ರತಿಬಿಂಬಿಸುತ್ತಾರೆ ಎಂದು ಭಾವಿಸಲಿಲ್ಲ.


 

ವಿಶ್ಲೇಷಣೆ * ಬಿವಿಸೀ

2023ರ ವಿಧಾನಸಭಾ ಚುನಾವಣೆಗಳಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಸ್ಪರ್ಧಿಸಿದ ರಕ್ಷಿತ್ ಶಿವರಾಮ್ ಕಾಂಗ್ರೆಸ್ ಪಕ್ಷದ ಯುವ ಅಭ್ಯರ್ಥಿಯಾಗಿ, ಭರವಸೆ ಮೂಡಿಸುವ ವಕೀಲರಾಗಿ ಪ್ರವೇಶಿಸಿದ್ದರು. ವೃತ್ತಿಪರ ಹಿನ್ನೆಲೆ ಮತ್ತು ಬಲವಾದ ರಾಜಕೀಯ ಪರಂಪರೆಯನ್ನೂ ಹೊಂದಿದ್ದರು.  ಆದರೂ ಆರಂಭದಿಂದಲೂ ಸಹ ಸಾಮಾನ್ಯವಾಗಿ ಮೇಲ್ಮಟ್ಟದಿಂದ ಹೇರಲ್ಪಟ್ಟ ಅಭ್ಯರ್ಥಿ ಸಹಜವಾಗಿ ಹೊಂದಿರುವ ಹೊರೆಗಳನ್ನು ಹೊತ್ತುಕೊಂಡೇ ಬಂದಿದ್ದರು. ಅವರ ಪ್ರಚಾರವು ವಿಶ್ವಾಸಾರ್ಹತೆ ಅಥವಾ ದಕ್ಷತೆಯ ಕೊರತೆಯಿಂದ ಬಳಲಿತು. ಬೆಳ್ತಂಗಡಿಯ ವ್ಯಕ್ತಿಯಾಗಿದ್ದರೂ ಸ್ಥಳೀಯ ಮತದಾರರ ಮನವೊಲಿಸಲು ಅವರು ವಿಫಲರಾದರು.

ಬೆಳ್ತಂಗಡಿ ಕ್ಷೇತ್ರದ ವಿಶೇಷತೆ ಎಂದರೆ ಅದು ದೀರ್ಘಕಾಲದ ಉಪಸ್ಥಿತಿಯನ್ನು ಹೆಚ್ಚು ಗೌರವಿಸುತ್ತದೆ, ಜನರೊಡನೆ ನಿಕಟ ಸಂಬಂಧ, ನಿತ್ಯ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ ಬಯಸುತ್ತದೆ. ಹಾಲಿ ಶಾಸಕ ಹರೀಶ್ ಪೂಂಜಾ ಶಾಶ್ವತವಾಗಿ ಜನರ ನಡುವೆ ಕಾಣಿಸಿಕೊಳ್ಳುವ ಸೌಲಭ್ಯ ಹೊಂದಿದ್ದಾರೆ. ಅವರು ಆಗೀಗ ಬಂದುಹೋಗುವ ಆದ್ಮಿ ಅಲ್ಲ.  ತಳಮಟ್ಟದಲ್ಲಿ ಸಕ್ರಿಯರಾಗಿರುತ್ತಿದ್ದವರು, ಐದು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಜನಮನ್ನಣೆ ಗಳಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ರಕ್ಷಿತ್ ಜನರಿಗೆ ಪರಿಚಯವೇ ಇರಲಿಲ್ಲ, ಚುನಾವಣೆಗಳ ಸಮಯದಲ್ಲಿ ಮಾತ್ರ ಎಲ್ಲರಿಗೂ ಪರಿಚಿತರಾಗಿದ್ದರು. ಹಲವು ವರ್ಷಗಳ ಸಮಾಜ ಸೇವೆಯ ದಾಖಲೆ ಇಲ್ಲದೆ, ಕ್ಷೇತ್ರದಲ್ಲಿ ತಳಮಟ್ಟದ ಕೆಲಸಗಳನ್ನು ಮಾಡದೆ, ಹಠಾತ್ತನೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಮತದಾರರ ನಡುವೆ, ಇವರು ಮೇಲ್ಮಟ್ಟದಿಂದ ಬಂದವರು ಎಂಬ ಅಭಿಪ್ರಾಯವನ್ನು ಮೂಡಿಸಿತ್ತು. ಬೆಳ್ತಂಗಡಿಯ ನೆಲದಲ್ಲಿ ಬೆಳೆದವರಲ್ಲ ಎಂಬ ಅಭಿಪ್ರಾಯ ಸ್ಪಷ್ಟವಾಗಿತ್ತು.

ರಕ್ಷಿತ್ ಶ್ರೀಮಂತ ಸಮೃದ್ಧ ಕುಟುಂಬದಿಂದ ಬಂದವರಾಗಿದ್ದು, ಕೋಟ್ಯಾಧೀಶ್ವರ ಎನ್ನುವ ಪುಕಾರೂ ಸಹ ಇತ್ತು. ಸರಿಯೋ ತಪೆÇ್ಪೀ, ಅನೇಕರು ರಕ್ಷಿತ್ ಅವರನ್ನು ಒಬ್ಬ ಶ್ರೀಮಂತ, ನಗರವಾಸಿ ವೃತ್ತಿಪರ ವ್ಯಕ್ತಿ, ಗ್ರಾಮೀಣ ಆದ್ಯತೆಗಳನ್ನು ಅರ್ಥಮಾಡಿಕೊಳ್ಳದ ವ್ಯಕ್ತಿ ಎಂದೇ ಭಾವಿಸುತ್ತಾರೆ. ಬೆಂಗಳೂರಿನಲ್ಲಿ ಹಿರಿಯ ಪೆÇಲೀಸ್ ಅಧಿಕಾರಿಯಾಗಿರುವ ಅವರ ತಂದೆಯ ವೃತ್ತಿ ಮತ್ತು ಇದೇ ನಗರದಲ್ಲಿ ರಕ್ಷಿತ್ ಅವರ ವಕೀಲ ವೃತ್ತಿಯ ತರಬೇತಿ, ವಿರೋಧಿಗಳ ದೃಷ್ಟಿಯಲ್ಲಿ ಇವರನ್ನು ಹೊರಗಿನವರೆಂದು ಭಾವಿಸಲು ಕಾರಣವಾಗಿತ್ತು. ಗ್ರಾಮೀಣ ರಾಜಕೀಯದಲ್ಲಿ, ಭೌಗೋಳಿಕವಾಗಿ ಅಥವಾ ಭಾವನಾತ್ಮಕವಾಗಿ ದೂರ ಇರುವುದು ಹಾನಿಕಾರಕವಾಗುವ ಸಾಧ್ಯತೆಗಳೇ ಹೆಚ್ಚು.

ಇದಕ್ಕೆ ಪೂರಕವಾದ ಮತ್ತೊಂದು ಅಂಶ ಎಂದರೆ, ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರಿಗೆ ರಕ್ಷಿತ್ ಸಂಬಂಧಿಕರಾಗಿರುವುದು. ಈ ಸಂಪರ್ಕವು ರಕ್ಷಿತ್ ಅವರಿಗೆ ಟಿಕೆಟ್ ದೊರೆಯಲು ನಿಶ್ಚಿತವಾಗಿ ನೆರವಾಗಿದ್ದರೂ  ಅದು ಮತದಾರರ ವಿಶ್ವಾಸವನ್ನು ಗಳಿಸಲು ಉಪಯುಕ್ತವಾಗಲಿಲ್ಲ. ಸ್ವತಃ ಹರಿಪ್ರಸಾದ್ ಐದು ದಶಕಗಳ ಕಾಲ ಸಾರ್ವಜನಿಕ ವಲಯದಲ್ಲಿ ಸಕ್ರಿಯವಾಗಿದ್ದರೂ, ನೇರವಾಗಿ ಒಂದೇ ಒಂದು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಅವರ ಖ್ಯಾತಿಯು ತೀಕ್ಷ್ಣ ಮಾತುಗಳು, ಸಾರ್ವಜನಿಕರನ್ನು ಧೃವೀಕರಿಸುವ ಅವರ ಶೈಲಿ ರಕ್ಷಿತ್‍ಗೆ ಮತಗಳಿಸಲು ನೆರವಾಗಲಿಲ್ಲ. ವಾಸ್ತವ ಎಂದರೆ ಈ ಸಂಬಂಧವೇ ರಕ್ಷಿತ್ ಅಭ್ಯರ್ಥಿಯಾಗಲು ಪಕ್ಷದ ಅಧಿಕಾರ ಸಂರಚನೆಯ ಕೃಪೆ ಎಂಬ ಅಭಿಪ್ರಾಯವನ್ನೂ ಮೂಡಿಸಿತ್ತು. ರಕ್ಷಿತ್ ಸ್ಥಳೀಯ ಆಕಾಂಕ್ಷೆಗಳೊಂದಿಗೆ ಸ್ವಾಭಾವಿಕವಾಗಿ ಬೆಳೆದ ನಾಯಕ ಅಲ್ಲ ಎಂಬ ಅಭಿಪ್ರಾಯ ದಟ್ಟವಾಗಿತ್ತು.

ಅಂತಿಮವಾಗಿ, ರಕ್ಷಿತ್ ಅವರ ಪರಾಜಯ ಅವರ ಸಾಮಥ್ರ್ಯಗಳ ತಿರಸ್ಕಾರ ಅಲ್ಲ, ಬದಲಾಗಿ ಅವರ ರಾಜಕೀಯ ಸ್ಥಾನಮಾನಗಳ ತಿರಸ್ಕಾರವಾಗಿತ್ತು. ಮತದಾರರು ರಕ್ಷಿತ್ ಅವರು ತಮ್ಮನ್ನು ಪ್ರತಿಬಿಂಬಿಸುತ್ತಾರೆ ಎಂದು ಭಾವಿಸಲಿಲ್ಲ. ಆಳವಾದ ಸ್ಥಳೀಯ ಉಪಸ್ಥಿತಿ, ಅಸ್ತಿತ್ವ ಇಲ್ಲದೆ, ಭಾವನಾತ್ಮಕ ನಿರ್ವಹಣೆ ಇಲ್ಲದೆ, ತಳಮಟ್ಟದ ವಿಶ್ವಾಸಾರ್ಹತೆ ಇಲ್ಲದೆ, ಉತ್ತಮ ಬೆಂಬಲ ಇರುವ ಅಭ್ಯರ್ಥಿಯೂ ಸಹ ಬೇರೂರಿರುವ ಜನರ ಕಲ್ಪನೆಗಳನ್ನು ಬುಡಮೇಲು ಮಾಡಲಾಗುವುದಿಲ್ಲ. ಬೆಳ್ತಂಗಡಿಯಂತಹ  ಕ್ಷೇತ್ರಗಳಲ್ಲಿ ಜನತೆಯಲ್ಲಿ ಬೆರೆಯುವುದು ಮುಖ್ಯವಾಗುವುದೇ ಹೊರತು ವಂಶಾವಳಿ ನೆರವಾಗುವುದಿಲ್ಲ, ಜನಸಂಪರ್ಕ ಮುಖ್ಯವೇ ಹೊರತು, ವೈಯುಕ್ತಿಕ ಅರ್ಹತೆಗಳಲ್ಲ ಎಂಬ ವಾಸ್ತವವನ್ನು ರಕ್ಷಿತ್ ಅವರ ಕತೆ ಸೂಚಿಸುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again