ಜನಪ್ರತಿನಿಧಿಗೆ ಶಿಸ್ತು ಮತ್ತು ತಾಳ್ಮೆ ಎರಡೂ ಇಲ್ದದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಉಡುಪಿ ಎಂಎಲ್‍ಎ ಯಶಪಾಲ್ ಸುವರ್ಣ ನಿದರ್ಶನ

 ಇವರಿಗೆ ಪ್ರಜ್ಞಾವಂತ ಉಡುಪಿ ನಾಗರಿಕರನ್ನು ಅಸೆಂಬ್ಲಿಯಲ್ಲಿ ಪ್ರತಿನಿಧಿಸಲು ಯಾವ ಅರ್ಹತೆಯೂ ಇಲ್ಲ


......................


 


ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಉಡುಪಿಯ ಬಿಜೆಪಿ ಶಾಸಕ ಸೃಷ್ಟಿಮಾಡಿದ ರಾದ್ಧಾಂತ ಅವರ ಘಾಸಿಗೊಂಡ ಭಾವನೆಗಳನ್ನಾಗಲೀ, ಸ್ಪೀಕರ್ ಅವರಿಗೆ ಮಾಡಿದರೆನ್ನಲಾದ ಸಾಂಸ್ಕøತಿಕ ಅಗೌರವವನ್ನಾಗಲೀ ಸೂಚಿಸಲಿಲ್ಲ. ಇದು ಸುವರ್ಣರ ಮನೋಧರ್ಮವನ್ನು ತೋರಿಸುತ್ತದೆ. ಸಭಾಧ್ಯಕ್ಷರು ನೇರವಾಗಿ, ``ಹರಿಕಥೆಯನ್ನು ನಿಲ್ಲಿಸಿ, ವಿಷಯಕ್ಕೆ ಬನ್ನಿ'' ಎಂದು ನೇರವಾಗಿ ಹೇಳಿರುವುದು ಸಾಮಾನ್ಯ ಪ್ರಕ್ರಿಯೆಯನ್ನು ಸರಿಪಡಿಸುವ ವಿಧಾನವೇ ಹೊರತು, ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ. ಶಾಸನಸಭೆಯ ಅಧ್ಯಕ್ಷರು ಇದನ್ನು ನಿತ್ಯವೂ ಸಮಯ ವ್ಯರ್ಥವನ್ನು ತಪ್ಪಿಸಲು ಮಾಡುತ್ತಲೇ ಇರುತ್ತಾರೆ. ಸುವರ್ಣ ಈ ಮಾತುಗಳನ್ನು ತನಗೆ ವೈಯಕ್ತಿಕವಾಗಿ ಅವಮಾನ ಎಂದು ಭಾವಿಸುವುದು, ಉಡುಪಿಯ ಜನತೆ ಹೇಳುವ ಹಾಗೆ ಅವರಲ್ಲಿ ಸಂಯಮ, ಇತಿಮಿತಿಗಳ ಅರಿವು ಮತ್ತು ಅಧಿಕಾರದ ಲಕ್ಷಣಗಳಿಲ್ಲ ಎನ್ನುವುದನ್ನು ನಿರೂಪಿಸಿದೆ. ಕುದುರೆ ಕುದುರೆಯೇ, ಕತ್ತೆ ಕತ್ತೆಯೇ ಎನ್ನುವ ಮಾತಿದೆ. ಹಾಗೆ ಸುವರ್ಣ ಸುವರ್ಣರೇ.

ಇದು ಪ್ರಮುಖ ನೀತಿಯ ವಿಚಾರದಲ್ಲಿ ನಡೆದ ಚರ್ಚೆಯಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ಕಾರದ ನಿಯಮಿತ ಅನುದಾನವನ್ನು ಕುರಿತಾದದ್ದು. ಇದನ್ನು ದೀರ್ಘ ಭಾಷಣವನ್ನಾಗಿ ಮಾಡಿ, ಸ್ಪೀಕರ್ ತಡೆಗಟ್ಟಿದಾಗ ಅರಚಾಡುವುದು ಶಾಸನಸಭೆಯ ಶಿಸ್ತು ನಡವಳಿಕೆಗೆ ತದ್ವಿರುದ್ಧವಾದುದು. ಸ್ಪೀಕರ್ ಅವರ ಕರ್ತವ್ಯ ಮಾಡಿದ್ದಾರೆ, ಆದರೆ ಸುವರ್ಣ ಎಡವಿದ್ದಾರೆ.

ದುರಾದೃಷ್ಟವಶಾತ್, ಈ ಪ್ರಸಂಗವು ಚಾಲ್ತಿಯಲ್ಲಿರುವ ಸುವರ್ಣರ ವ್ಯಕ್ತಿತ್ವದ ಮಾದರಿಯನ್ನೇ ಹೋಲುತ್ತದೆ. ಸುವರ್ಣ ಅವರ ಸಾರ್ವಜನಿಕ ಜೀವನವು ಪ್ರತಿಭಟನೆ, ಸಂಘರ್ಷ, ಮತ್ತು ಸಾಂಸ್ಥಿಕ ನಿಯಮಗಳ ಉಲ್ಲಂಘನೆಗಳಿಗೆ ಕುಪ್ರಸಿದ್ಧಿಯಾಗಿದೆ. ಜಿಲ್ಲಾ ಅಧಿಕಾರಿಗಳೊಂದಿಗಿನ ಅವರ ಹಿಂದಿನ ವರ್ತನೆಗಳು, ಆಡಳಿತದೊಡನೆ ಪದೇಪದೇ ಸಂಘರ್ಷಕ್ಕೆ ಇಳಿಯುವುದು ಮತ್ತು ಗೋವು ಸಾಗಾಣಿಕೆದಾರರನ್ನು ಸಾರ್ವಜನಿಕವಾಗಿ ಬೆತ್ತಲೆ ಮಾಡಿ ಅವಮಾನಿಸುವುದು - ಇವೆಲ್ಲವೂ ಅವರಿಗೂ, ಪಕ್ಷಕ್ಕೂ ರಾಷ್ಟ್ರಮಟ್ಟದಲ್ಲಿ ಮುಜುಗರ ಉಂಟುಮಾಡಿವೆ. ಗೋರಕ್ಷಣೆಯ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಒಲವು ಇರುವವರೂ ಸಹ, ಸುವರ್ಣ ಅವರ ವರ್ತನೆ ಮತ್ತು ಆ ಪ್ರಸಂಗವು ಸಾಮಾಜಿಕ ಕ್ರಿಯಾಶೀಲತೆಯನ್ನು ಸಾಮೂಹಿಕ ಗೂಂಡಾಗಿರಿಯಾಗಿ ಪರಿವರ್ತಿಸಿದಂತೆ ನೋಡುತ್ತಾರೆ.

ಉಡುಪಿಯ ಮಹಾಲಕ್ಷ್ಮಿ ಸಹಕಾರ ಬ್ಯಾಂಕಿನ ಹಗರಣವನ್ನು ಅವರು ನಿರ್ವಹಿಸಿದ ರೀತಿ ಸದಾ ಸಂಘರ್ಷದ ಹಾದಿಯಲ್ಲೇ ಇರುವ ವ್ಯಕ್ತಿಯಂತೆ ಅವರನ್ನು ಬಿಂಬಿಸಿತ್ತು. ಅವರ ಪಕ್ಷದ ಸಹೋದ್ಯೋಗಿಗಳೂ ಸಹ ಹೀಗೆಯೇ ಭಾವಿಸಿದ್ದರು. ಶಾಸಕ ರಘುಪತಿ ಭಟ್ ಅವರೊಡನೆ ಮುಕ್ತ ಕಲಹದ ವಿಚಾರದಲ್ಲಿ ಅದು ಚಿಂತನೆಗಳ ಸಂಘರ್ಷವಾಗಿರದೆ, ವೈಯುಕ್ತಿಕ ದ್ವೇಷ ರಾಜಕಾರಣವಾಗಿತ್ತು, ಇದು ಪಕ್ಷದ ಕಾರ್ಯಕರ್ತರಲ್ಲಿ, ಸಾಮಾನ್ಯ ನಾಗರಿಕರಲ್ಲಿ ಗೊಂದಲ ಮೂಡಿಸಿತ್ತು.

ಇವರನ್ನು ಶಾಸಕರಾಗಿ ಮೇಲ್ದರ್ಜೆಗೆ ತಂದಿರುವುದೇ ಪ್ರಮಾದವಾಗಿ ಕಾಣುತ್ತದೆ. ಸುವರ್ಣ ಅವರನ್ನು ಆಯ್ಕೆಮಾಡಿದ್ದು ಅವರಲ್ಲಿ ಆಡಳಿತ ಕ್ಷಮತೆ, ಪ್ರಬುದ್ಧತೆ ಅಥವಾ ಸಾರ್ವಜನಿಕ ವಿಶ್ವಾಸ ಇದೆ ಎಂದಲ್ಲ. ಬದಲಾಗಿ ಬಿಜೆಪಿಯ ಆಂತರಿಕ ಪವರ್ ಪಾಲಿಟಿಕ್ಸ್ ಫಲವಾಗಿ, ಕೇಸರಿ ಪಕ್ಷಕ್ಕೆ ಸುರಕ್ಷಿತ ಕ್ಷೇತ್ರ ಎಂದೇ ಭಾವಿಸಲಾಗಿದ್ದ ಉಡುಪಿಗೆ ಹಾಕಲಾಯಿತು. ಈ ಆಯ್ಕೆಯ ಹಟಮಾರಿತನಕ್ಕೆ ಉಡುಪಿ ಬೆಲೆ ತೆರುತ್ತಿದೆ.

ಇದು ಸಿದ್ಧಾಂತದ ವಿಚಾರವಲ್ಲ, ಸುಸ್ಥಿರತೆಯ ಸಮಸ್ಯೆ. ರಾಜಕೀಯಕ್ಕೆ ಪರಸ್ಪರ ಮಾತುಕತೆ, ತಾಳ್ಮೆ ಮತ್ತು ಸಂಸ್ಥೆಗಳ ಬಗ್ಗೆ ಗೌರವ ಇರುವುದು ಮುಖ್ಯ. ಸುವರ್ಣ ಇದರಲ್ಲಿ ಯಾವುದನ್ನೂ ತೋರಿಲ್ಲ. ತನಗೆ ತಾನೇ ಕಾನೂನು ಎನ್ನುವಂತೆ ವರ್ತಿಸುವ ಈ  ಶಾಸಕ, ತನ್ನ  ಭಾವನೆಗಳಿಗೆ ಮಾತ್ರ ತಾನು ಉತ್ತರದಾಯಿ ಎಂಬಂತೆ ವರ್ತಿಸುತ್ತಾರೆ.

ಉಡುಪಿಯ ಜನತೆ ಈಗ ಪಕ್ಷ ವಿಫಲವಾದ ಕ್ರಮದಲ್ಲಿ ತಾವು ಕ್ರಮ ಕೈಗೊಳ್ಳಬೇಕಿದೆ. ಆಕ್ರಮಣಕಾರಿ ಧೋರಣೆಯನ್ನು ನಾಯಕತ್ವ ಎಂದು ಗೊಂದಲ ಮೂಡಿಸುವುದನ್ನು ನಿರಾಕರಿಸಬೇಕಿದೆ. ನಾಟಕೀಯ ವರ್ತನೆಯನ್ನು ಧೈರ್ಯ ಎಂದು, ಅಶಿಸ್ತನ್ನು ಬದ್ಧತೆ ಎಂದು ತೋರಿಸಿಕೊಳ್ಳುವುದನ್ನು ತಿರಸ್ಕರಿಸಬೇಕಿದೆ. ಸುಭದ್ರ ಕ್ಷೇತ್ರಗಳು ಸಾಮಾನ್ಯವಾಗಿ ಅಸಡ್ಡೆ ಉಂಟುಮಾಡುತ್ತವೆ, ಆದರೆ ಮತದಾರರು ಅಸಹಾಯಕರಲ್ಲ.

ಉಡುಪಿಗೆ ಸಾರ್ವಜನಿಕರ ಗೌರವ ಸಂಪಾದಿಸಿರುವ ಪ್ರಾತಿನಿಧಿತ್ವ ಬೇಕೇ ಹೊರತು ಕುಖ್ಯಾತಿ ಪಡೆದಿರುವವರು ಅಲ್ಲ. ಇದೇ ಮಾದರಿ ಮುಂದುವರೆದರೆ ಮತದಾರರ ನಿರ್ಧಾರ ಸ್ಪಷ್ಟವಾಗಿರಲಿದೆ. ಯಾವುದೇ ವ್ಯಕ್ತಿ, ಎಷ್ಟೇ ಆಕ್ರಮಣಶಾಲಿಯಾದರೂ, ಸಾರ್ವಜನಿಕ ಹುದ್ದೆಯನ್ನು ಶಾಶ್ವತವಾಗಿ ಪಡೆಯಲಾಗುವುದಿಲ್ಲ ಎಂಬ ನಿರ್ಧಾರ ಅನಿವಾರ್ಯವಾಗಲಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again