ರಾಘವೇಶ್ವರರ ಪೋಕ್ಸೋ ಸೇರಿ 2 ಲೈಂಗಿಕ ಕೇಸುಗಳಲ್ಲಿ ತೀರ್ಪು ಕಾದಿರಿಸಿದ ಸುಪ್ರೀಂ
ಸುದ್ದಿ ವಿಶ್ಲೇಷಣೆ
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಯ ವಿರುದ್ಧ ನಡೆಯುತ್ತಿರುವ ಎರಡು ಕ್ರಿಮಿನಲ್ ಲೈಂಗಿಕ ಮೊಕದ್ದಮೆಗಳಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಕಾದಿರಿಸಿದೆ. ದಶಕಗಳಿಂದ ನಡೆಯುತ್ತಿರುವ ಕಾನೂನು ಹೋರಾಟವು ಹಲವು ಜಿಲ್ಲಾ ನ್ಯಾಯಾಲಯಗಳನ್ನು, ಹೈಕೋರ್ಟ್ ದಾಟಿ ಸುಪ್ರೀಂ ಬಳಿಗೆ ಬಂದಿರುವ ಪ್ರಕರಣಗಳು ಈಗ ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆದಿವೆ. ಬಾಕಿ ಇರುವ ಎರಡೂ ಅರ್ಜಿಗಳು, ಕೆಳಹಂತದ ನ್ಯಾಯಾಲಯಗಳು ನೀಡಿದ್ದ ಬಿಡುಗಡೆಯ ಆದೇಶವನ್ನು ಪ್ರಶ್ನಿಸಿದ್ದು, ಎರಡೂ ಸಹ ಭಿನ್ನ ಲೈಂಗಿಕ ದೌರ್ಜನ್ಯಗಳ ಪ್ರಕರಣಗಳಾಗಿವೆ. ಒಂದು ಪ್ರಕರಣದಲ್ಲಿ ದೂರುದಾರರು ವಯಸ್ಕರಾಗಿದ್ದು, ಮತ್ತೊಂದರಲ್ಲಿ ಅಪ್ರಾಪ್ತ ಬಾಲಕಿ ಪೆÇೀಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದರು.
ಸುಪ್ರೀಂಕೋರ್ಟ್ ವಿಚಾರಣೆ
ಎರಡೂ ಪ್ರಕರಣಗಳಲ್ಲಿ ಕ್ರೋಢೀಕೃತ ವಿಚಾರಣೆಗಳನ್ನು ನಡೆಸಲಾಗಿದ್ದು, ಎರಡರಲ್ಲೂ ಅಂತಿಮ ತೀರ್ಪು ಕಾದಿರಿಸಲಾಗಿದೆ. ದೂರುದಾರರು ಮತ್ತು ರಾಜ್ಯ ಸರಕಾರದ ಪರ ವಾದಿಸಿದ ವಕೀಲರು, ಹೈಕೋರ್ಟ್ ತನಿಖೆಯ ಪ್ರಕ್ರಿಯೆಯನ್ನು `ರಕ್ಷಣಾತ್ಮಕ' ಎಂದು ಪರಿಗಣಿಸಿ ತಪ್ಪು ಮಾಡಿದೆ, ರಾಘವೇಶ್ವರ ಸ್ವಾಮಿಯನ್ನು ಕೇಸುಗಳಿಂದ ಬಿಡುಗಡೆ ಮಾಡಿದ ಆದೇಶವು, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿರ್ಧರಿಸುವ ಸ್ಥಾಪಿತ ತತ್ವಗಳಿಗೆ ವ್ಯತಿರಿಕ್ತವಾಗಿದೆ ಎಂದು ವಾದಿಸಿದ್ದಾರೆ.
ಸ್ವಾಮಿ ಪರ ವಕೀಲರು ಈ ಆರೋಪಗಳೆಲ್ಲವೂ ಕಲ್ಪಿತವಾಗಿದ್ದು, ಸಾಕ್ಷಿಗಳು ನಂಬಲರ್ಹವಾಗಿಲ್ಲ ಮತ್ತು ತನಿಖೆಯು ಮೂಲಭೂತವಾಗಿ ತಪ್ಪು ಹಾದಿಯಲ್ಲಿ ಸಾಗಿದೆ ಎಂದು ವಾದಿಸಿದ್ದಾರೆ. ಈ ವಿಸ್ತøತ ವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಕಾದಿರಿಸಿದ್ದು, ಈ ಪ್ರಕರಣವನ್ನು ಪೂರ್ಣ ಪ್ರಮಾಣದ ವಿಚಾರಣೆಗೆ ಒಳಪಡಿಸಲಾಗುವುದೋ ಅಥವಾ ಬಿಡುಗಡೆಯ ಆದೇಶ ಊರ್ಜಿತವಾಗುವುದೋ ಎಂಬ ನಿರೀಕ್ಷೆ ಉಂಟಾಗಿದೆ.
1. ವಯಸ್ಕ ಗಾಯಕಿಯ ದೂರು (2014-15)
ಆರೋಪ: ಮಠಕ್ಕೆ ಸಂಬಂಧಿಸಿದಂತೆ ಗಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಸ್ವಾಮಿಯು ಪದೇಪದೇ ತನಗೆ ಲೈಂಗಿಕ ಹಲ್ಲೆ ನಡೆಸುತ್ತಿದ್ದುದಾಗಿ ಆರೋಪಿಸಿದ್ದರು.
ಈ ಮೊಕದ್ದಮೆಯಲ್ಲಿ 2014ರಲ್ಲಿ ಎಫ್‍ಐಆರ್ ದಾಖಲಾಗಿದ್ದು, ಸಿಐಡಿ ಇದರ ತನಿಖೆಯನ್ನು ಕೈಗೊಂಡಿತ್ತು. ವಿಚಾರಣಾ ಸೆಷನ್ಸ್ ನ್ಯಾಯಾಲಯವು ಆರೋಪಿಯನ್ನು ಬಿಡುಗಡೆ ಮಾಡಿ, ಹೇಳಿಕೆಗಳಲ್ಲಿ ಸ್ಥಿರತೆ ಇಲ್ಲ, ದೂರು ನೀಡುವುದರಲ್ಲಿ ವಿಳಂಬವಾಗಿದೆ, ಘಟನೆಯನ್ನು ಸಾಬೀತುಪಡಿಸುವ ವಸ್ತುಗಳು ಅನುಮಾನಾಸ್ಪದವಾಗಿವೆ ಎಂದು ಕಾರಣ ನೀಡಿತ್ತು.
2018ರಲ್ಲಿ ಕರ್ನಾಟಕ ಹೈಕೋರ್ಟ್ ಈ ಬಿಡುಗಡೆಯ ಆದೇಶವನ್ನು ಎತ್ತಿಹಿಡಿದಿದ್ದು, ಇಡೀ ಚಾರ್ಜ್‍ಷೀಟ್ ತಪ್ಪುಗಳಿಂದ ಕೂಡಿದ್ದು ಸಾಕ್ಷ್ಯಗಳು ಕನಿಷ್ಠ ಮಿತಿಯನ್ನೂ ಈಡೇರಿಸುವುದಿಲ್ಲ, ವಿಚಾರಣೆಯನ್ನು ನಡೆಸಲು ಪೂರಕವಾಗಿಲ್ಲ ಎಂದು ಹೇಳಿತ್ತು.
ಸುಪ್ರೀಂಕೋರ್ಟ್ ಮುಂದೆ ಸಲ್ಲಿಸಲಾದ ಅರ್ಜಿಯಲ್ಲಿ ದೂರುದಾರರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದು ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಿದ್ದರು. ರಾಜ್ಯ ಸರಕಾರವೂ ದೂರುದಾರರ ಜತೆ ಇತ್ತು. ಸುಪ್ರೀಂಕೋರ್ಟ್ ಈಗ ತೀರ್ಪು ಕಾಯ್ದಿರಿಸಿದೆ.
2. ಎರಡನೆ ಪ್ರಕರಣ. ಅಪ್ರಾಪ್ತ ಬಾಲಕಿಯ ದೂರು (ಪೆÇೀಕ್ಸೋ ಕಾಯ್ದೆ)
ಆರೋಪ : ಆರೋಪಿತ ಘಟನೆ ಸಂಭವಿಸಿದಾಗ 15 ವರ್ಷದವಳಾಗಿದ್ದ ಬಾಲಕಿಯು ಸ್ವಾಮಿ ವಿರುದ್ಧ ಮಠದ ಶಾಲೆಯಲ್ಲೇ ಅತ್ಯಾಚಾರ ಎಸಗಿದ ಆರೋಪ ಮಾಡಿದ್ದರು.
ವಿಚಾರಣಾ ಸೆಷನ್ಸ್ ನ್ಯಾಯಾಲಯವು ಪ್ರಾಸಿಕ್ಯೂಷನ್ ಮಂಡಿಸಿದ ವಾದದಲ್ಲಿ ರಚನಾತ್ಮಕ ಪ್ರಮಾದಗಳನ್ನು ಗುರುತಿಸಿ ಆರೋಪಿ ಸ್ವಾಮಿಯನ್ನು ಬಿಡುಗಡೆ ಮಾಡಿತ್ತು. ಮೇಲ್ನೋಟಕ್ಕೆ ಪುರಾವೆ ನೀಡುವ ವಸ್ತುಗಳು ಲಭ್ಯವಿಲ್ಲ ಎಂದು ಹೇಳಿತ್ತು.
ಈ ಬಿಡುಗಡೆಯ ಆದೇಶವನ್ನು ಹೈಕೋರ್ಟ್ 2023ರ ( ಡಬ್ಲ್ಯು ಪಿ 54575/2015) ಮೊಕದ್ದಮೆಯಲ್ಲಿ ಎತ್ತಿಹಿಡಿದಿದ್ದು, ತನಿಖೆಯು ಶಾಸನಾತ್ಮಕ ಪೆÇೀಕ್ಸೋ ಮಾನದಂಡಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿತ್ತು.
ಸುಪ್ರೀಂಕೋರ್ಟ್ ಮುಂದೆ ದೂರುದಾರರು ಸುಪ್ರೀಂಕೋರ್ಟ್‍ಗೆ ಎಸ್‍ಎಲ್‍ಪಿ ಡೈರಿ ಸಂಖ್ಯೆ 12364/2025 ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಈಗ ತೀರ್ಪನ್ನು ಈ ಮೊಕದ್ದಮೆಯಲ್ಲೂ ಕಾಯ್ದಿರಿಸಿದೆ.
ಮುಂದಿನ ತೀರ್ಮಾನ ಏನು?
ಸುಪ್ರೀಂಕೋರ್ಟ್‍ನ ಕಾಯ್ದಿರಿಸಿದ ಆದೇಶವು ಈಗ ಬಹಳ ಮುಖ್ಯವಾಗಿದೆ. ಒಂದು ವೇಳೆ ಕೋರ್ಟ್ ಬಿಡುಗಡೆಯ ಆದೇಶಗಳನ್ನು ಅಸಿಂಧುಗೊಳಿಸಿದರೆ, ಎರಡೂ ಪ್ರಕರಣಗಳು, ಅದರಲ್ಲೂ ಪೆÇೀಕ್ಸೋ ಪ್ರಕರಣವು, ವಿಚಾರಣೆಯ ಹಂತದಲ್ಲೇ ಪುನಃ ತೆರೆದುಕೊಳ್ಳುತ್ತದೆ. ಹೈಕೋರ್ಟಿನ ಆದೇಶಗಳನ್ನು ಎತ್ತಿಹಿಡಿದಲ್ಲಿ, ದಶಕದ ಹಿಂದಿನ ಆರೋಪಗಳು ಅಧಿಕೃತವಾಗಿ ವಿಚಾರಣೆ ಇಲ್ಲದೆ ಅಂತ್ಯವಾಗುತ್ತವೆ. ಅಂತಿಮ ನಿರ್ಧಾರವು ಮುಂಬರುವ ನ್ಯಾಯಾಲಯಗಳು ಪ್ರಬಲ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ, ವಿಚಾರಣೆಯಲ್ಲಿನ ಲೋಪಗಳನ್ನು ಪರಾಮರ್ಶಿಸಿ ಮುಂದುವರೆಯಲು ಅವಕಾಶ ಕಲ್ಪಿಸುತ್ತದೆ.
Comments
Post a Comment