ಕರ್ನಾಟಕದ ಬಿಜೆಪಿ - ಅಹಂಕಾರ, ಭ್ರಷ್ಟಾಚಾರ, ವಂಶಾಡಳಿತದ ಸಿಕ್ಕುಗಳಲ್ಲಿ
ಅಹುದಾದರಹುದೆನ್ನಿ * ಬಿವಿಸೀ
ಕರ್ನಾಟಕದಲ್ಲಿ ಬಿಜೆಪಿ ಇಂದು ನೈತಿಕವಾಗಿ ಹಾಗೂ ರಾಜಕೀಯವಾಗಿ ಅಧಃಪತನದ ಹಾದಿಯಲ್ಲಿದೆ. ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ - ಮೂರು ಸಲ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ದಕ್ಷಿಣ ಭಾರತದಲ್ಲಿ ಪಕ್ಷದ ಏಳಿಗೆಗೆ ಕಾರಣರಾದವರು - ಈಗ ಹೈಕೋರ್ಟ್‍ನಲ್ಲಿ ಪೆÇೀಕ್ಸೋ ಮೊಕದ್ದಮೆ ಎದುರಿಸುತ್ತಿದ್ದು ಕಳಂಕ ಹೊತ್ತಿದ್ದಾರೆ. ಕರ್ನಾಟಕದ ಜನತೆ, ಆರೋಪಿಯಂತೆಯೇ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುತ್ತಿದ್ದು, ವಿಚಾರಣೆ ಮುಂದುವರೆಯುವುದೋ ಇಲ್ಲವೋ ಎಂದು ಎದುರುನೋಡುತ್ತಿದ್ದಾರೆ. ಆದರೆ ನ್ಯಾಯಾಧೀಶರ ಆರಂಭಿಕ ಮಾತುಗಳು ಈ ನಾಯಕನಿಗೆ ಹಿತಕರವಾಗೇನೂ ಕಾಣುವುದಿಲ್ಲ. ತಮ್ಮ ಪ್ರಶ್ನಾರ್ಹ ನೈತಿಕ ನಡೆಗೆ ಈಗಾಗಲೆ ಯಡಿಯೂರಪ್ಪ ಹೆಸರಾಗಿದ್ದಾರೆ.
ಇದು ಕಾನೂನಿನೊಂದಿಗೆ ಯಡಿಯೂರಪ್ಪ ಅವರ ಮೊದಲ ಘರ್ಷಣೆ ಏನಲ್ಲ. ಲೋಕಾಯುಕ್ತದ ಮೂಲಕ ಬಯಲಾದ ಭ್ರಷ್ಟಾಚಾರದ ಹಗರಣದಲ್ಲಿ ಅವರು ಈಗಾಗಲೇ ಜೈಲು ವಾಸ ಅನುಭವಿಸಿದ್ದಾರೆ. ಲಂಚದ ಪ್ರಕರಣದಲ್ಲಿ ಚೆಕ್ ಸಮೇತ ಸಿಕ್ಕಿಬಿದ್ದಿದ್ದಾರೆ. ಅವರು ಮರಳಿ ಅಧಿಕಾರಕ್ಕೆ ಬಂದಿದ್ದು ಬಿಜೆಪಿಯ ಕೇಂದ್ರ ನಾಯಕತ್ವದ ಕೃಪೆಯಿಂದ - ಏಕೆಂದರೆ ಪಕ್ಷಕ್ಕೆ ನೈತಿಕತೆಗಿಂತಲೂ ಅಂದಿನ ಸನ್ನಿವೇಶದ ಅನಿವಾರ್ಯತೆ ಮುಖ್ಯವಾಗಿತ್ತು. ಈ ರಾಜಿ ಸೂತ್ರವೇ ಪಕ್ಷವನ್ನು ಮುಳುಗಿಸುತ್ತಿದೆ. ತನ್ನ ಚುನಾವಣಾ ಸಾಮಥ್ರ್ಯದ ಹೊರತಾಗಿಯೂ ಯಡಿಯೂರಪ್ಪ ಪಕ್ಷದ ಇಬ್ಬಗೆ ನಡೆ, ಠಕ್ಕುತನದ ವರ್ತನೆಗೆ ಸಾಕ್ಷಿಯಾಗಿದ್ದಾರೆ. ಒಂದೆಡೆ ರಾಜಕೀಯವಾಗಿ ನೈತಿಕತೆ ಬೋಧಿಸುತ್ತಲೇ ಮತ್ತೊಂದೆಡೆ ನೈತಿಕವಾಗಿ ಅಧಃಪತನದತ್ತ ಸಾಗುತ್ತಿದ್ದಾರೆ.
ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಇದೇ ಇಬ್ಬಗೆ ನೀತಿಯ ಸಂಕೇತವಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ವಂಶಾಡಳಿತದ ಆರೋಪ ಹೊರಿಸಲು ಎಂದೂ ಹಿಂಜರಿಯುವುದಿಲ್ಲ, ಆದರೆ ಸ್ವತಃ ಬಿಜೆಪಿ ಇಂದು ಕುಟುಂಬದ ಕಪಿಮುಷ್ಠಿಯಲ್ಲಿರುವ ಪಕ್ಷವಾಗಿದೆ. ವಿಜಯೇಂದ್ರ ಸ್ಪಷ್ಟವಾಗಿ ಮಾತನಾಡುತ್ತಾರೆ ಆದರೆ ಅನುಭವ ಸಾಲದು. ಅಥವಾ ಭಿನ್ನಮತದಿಂದ ಜರ್ಝರಿತವಾದ ಪಕ್ಷವನ್ನು ಐಕ್ಯತೆಯಿಂದ ಮುನ್ನಡೆಸುವ ವರ್ಚಸ್ಸನ್ನೂ ಹೊಂದಿಲ್ಲ. ಅದನ್ನು ಮುನ್ನಡೆಸುವ ನೈತಿಕತೆಯನ್ನೂ ಪಡೆದಿಲ್ಲ. ತಮ್ಮ ಸುತ್ತಲೂ ತನ್ನ ಬೆಂಬಲಿಗರನ್ನೇ ಕೂಡಿಹಾಕಿಕೊಂಡಿರುವ ವಿಜಯೇಂದ್ರ, ತಳಮಟ್ಟದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ದೂರ ಮಾಡಿದ್ದಾರೆ. ಒಂದು ಒಗ್ಗಟ್ಟಿನ ಸಂಘಟನೆಯನ್ನು ರೂಪಿಸುವಲ್ಲಿ, ಜಿಲ್ಲಾ ಮಟ್ಟದಲ್ಲಿ ಸುಸ್ಥಿರ ಪ್ರಚಾರವನ್ನು ಕೈಗೊಳ್ಳುವಲ್ಲಿ ವಿಫಲರಾಗಿರುವುದು, ಪಕ್ಷವನ್ನು ದಿಕ್ಕಿಲ್ಲದಂತೆ ಮಾಡಿದೆ.
ಏತನ್ಮಧ್ಯೆ, ಕರ್ನಾಟಕದಲ್ಲಿ ರೈತರ ಮುಷ್ಕರ, ಸಾರ್ವಜನಿಕರ ಭ್ರಮನಿರಸನವೂ ಮುಂದುವರೆದಿದ್ದು ಈ ನಡುವೆ ಬಿಜೆಪಿಯ ವಿಶ್ವಾಸಾರ್ಹತೆಯೂ ಕುಸಿಯುತ್ತಿದೆ. ಮುಷ್ಕರ ನಿರತ ರೈತರಿಗೆ ವಿಜಯೇಂದ್ರ ಅವರ ಸಾಂಕೇತಿಕ ಬೆಂಬಲ ಪಕ್ಷವನ್ನು ಕಾಡುತ್ತಿರುವ ಆಳವಾದ ವ್ಯಾಧಿಯಿಂದ ಮುಕ್ತಗೊಳಿಸುವುದಿಲ್ಲ. ಏಕೆಂದರೆ ಪಕ್ಷಕ್ಕೆ ಉದ್ದೇಶವಾಗಲೀ, ನೈತಿಕ ಸ್ಪಷ್ಟತೆಯಾಗಲೀ ಇಲ್ಲ. ಬಿಜೆಪಿ ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ಜನಪ್ರಿಯತೆಯನ್ನು ಆಧರಿಸಿ ಮುನ್ನಡೆ ಸಾಧಿಸಿತ್ತು. ಈಗ ಅದೇ ಪಕ್ಷಕ್ಕೆ ಹೊರೆಯಾಗಿದೆ. ಪೆÇೀಕ್ಸೋ ವಿಚಾರಣೆ ಆರಂಭವಾದಲ್ಲಿ ಹಳೆಯ ಹಗರಣಗಳ ನೆನಪುಗಳು ಕಾಡುತ್ತವೆ - ಭೂ ಹಗರಣಗಳು, ಲೈಂಗಿಕ ದುರ್ವರ್ತನೆ, ಅಧಿಕಾರ ದುರ್ಬಳಕೆ, ವೈಯುಕ್ತಿಕ ಹಿತಾಸಕ್ತಿ ಮೊದಲಾದ ಅಪರಾಧಗಳು ಮುನ್ನಲೆಗೆ ಬರುತ್ತವೆ. ಪ್ರತಿಯೊಂದು ಹೆಡ್ ಲೈನ್, ಪ್ರತಿಯೊಂದು ನ್ಯಾಯಾಲಯದ ಹಾಜರಾತಿ ಪಕ್ಷದ ನೈತಿಕ ನೆಲೆಯನ್ನು ಶಿಥಿಲಗೊಳಿಸುತ್ತದೆ.
ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಈ ದ್ವಂದ್ವ ಹೆಚ್ಚು ಕಾಡುತ್ತದೆ. ಯಡಿಯೂರಪ್ಪ ಅವರಿಂದ ದೂರ ಸರಿಯುವುದು ರಾಜ್ಯದ ಲಿಂಗಾಯತರ ಮತಬ್ಯಾಂಕಿಗೆ ಧಕ್ಕೆ ಉಂಟುಮಾಡುತ್ತದೆ. ಅವರನ್ನು ರಕ್ಷಿಸಿದರೆ ನೈತಿಕತೆಯನ್ನು ಕಳೆದುಕೊಳ್ಳುತ್ತದೆ. ಏನೇ ಆದರೂ ಬಿಜೆಪಿ ಅಧಃಪತನಗೊಂಡ ಪೆÇೀಷಕ ವ್ಯಕ್ತಿಯ ಛಾಯೆಯಲ್ಲಿ ಸಿಲುಕಿರುವುದು ಸ್ಪಷ್ಟ. ಮೂಲತಃ, ರಾಜ್ಯದ ದಕ್ಷಿಣ ಭಾರತದ ಪ್ರಬಲ ನಾಯಕ ವ್ಯಕ್ತಿತ್ವವನ್ನು ಆಧರಿಸಿ ಬೆಳೆದಿದ್ದಾರೆಯೇ ಹೊರತು ತಾತ್ವಿಕವಾದ ನೈತಿಕ ನೆಲೆಯಲ್ಲಿ ಅಲ್ಲ ಎನ್ನುವುದನ್ನು ಪೆÇೀಕ್ಸೋ ಮೊಕದ್ದಮೆ ಸಾಬೀತುಪಡಿಸುತ್ತದೆ. ಇಂದು ಕಾಣುತ್ತಿರುವುದು ರಾಜಕೀಯ ರಾಜಿಗಳ ಮೂಲಕ ಬೆಳೆದ ನಾಯಕನ, ಅನಿಶ್ಚಿತತೆಯ ಮಗನ ಮಾದರಿಯನ್ನು ಅವಲಂಬಿಸಿರುವ ಪಕ್ಷ. ಇದು ಪಕ್ಷ ಸ್ವಯಂಕೃತ ಅಪರಾಧವಾಗಿ ನೈತಿಕ ಅವನತಿಯತ್ತ ಸಾಗಿರುವುದನ್ನು ಸೂಚಿಸುತ್ತದೆ.
Comments
Post a Comment