ಪ್ರಕಾಶ್ ರಾಜ್‍ಗೆ ರಾಜ್ಯೋತ್ಸವ ಪ್ರಶಸ್ತಿ! - ಅನುಕೂಲಕ್ಕೆ ತಕ್ಕಂತೆ ಪ್ರತಿರೋಧ

 

ಬದ್ಧತೆ ಎನ್ನುವುದು ಸುಲಭವಾಗಿ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಸರಕಾಗಬಾರದು

............

ಚಿತ್ರ ನಟ ಪ್ರಕಾಶ್ ರಾಜ್ ತಮ್ಮ ದಿಟ್ಟ, ನಿರ್ಭೀತ ದನಿಗೆ ಹೆಸರಾಗಿದ್ದಾರೆ. ಪಕ್ಷಾತೀತವಾಗಿ ಸತ್ಯ, ನ್ಯಾಯದ ಪರ ಮಾತನಾಡುವ ಖ್ಯಾತಿ ಪಡೆದಿದ್ದಾರೆ. ಆದರೂ ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸುವುದು, ಮತ್ತೊಂದೆಡೆ ಬಲಒಪಂಥೀಯ ಸಿನಿಮಾ ನಿರ್ಮಾಪಕರನ್ನು ಗೌರವಿಸುವ ಮೋದಿ ಸರ್ಕಾರದ ನಡೆಯನ್ನು ಟೀಕಿಸುವುದು, ಅವರ ಘೋಷಿತ ತಾತ್ವಿಕತೆ ಮತ್ತು ರಾಜಕೀಯ ವರ್ತನೆಯ ನಡುವಿನ ವಿರೋಧಾಭಾಸವನ್ನು ಸೂಚಿಸುತ್ತದೆ.

ಇತ್ತೀಚೆಗಷ್ಟೇ ಪ್ರಕಾಶ್ ರಾಜ್ ತಮ್ಮನ್ನು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವ ರಾಜ್ಯ ಸರ್ಕಾರದ ನಡೆಗೆ ಮುನ್ನ ಅದನ್ನು ತೀವ್ರವಾಗಿ ವಿರೋಧಿಸಿದ್ದರು. ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ರೈತರ ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಕಾಶ್ ರಾಜ್ ಕರ್ನಾಟಕದಲ್ಲಿ ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದ್ದರು. ಅವರ ಭಾಷಣಗಳು ತೀಕ್ಷ್ಣವಾಗಿದ್ದು ವೈಯುಕ್ತಿಕ ನೆಲೆಯಲ್ಲಿ ವ್ಯಕ್ತವಾಗಿದ್ದವು. ಈ ಮಾತುಗಳು ಅವರ ಮತ್ತು ಸಿದ್ದರಾಮಯ್ಯ ನಡುವಿನ ಸ್ನೇಹ ಬಾಂಧವ್ಯಗಳು ಕುಸಿದಿವೆ ಎಂಬ ಸಂದೇಶವನ್ನು ನೀಡಿದ್ದವು. ಯಾಕೆಂದರೆ ಇದೇ ಸಿದ್ದರಾಮಯ್ಯ ಇದಕ್ಕೂ ಮೊದಲು ಪ್ರಕಾಶ ರಾಜ್ ಅವರನ್ನು ರಾಜ್ಯ ಸರಕಾರದ ಸಾಂಸ್ಕøತಿಕ ಸಮಿತಿಯೊಂದರ ಅಧ್ಯಕ್ಷನಾಗಿ ನೇಮಿಸಿದ್ದೂ ಉಂಟು.

ಆಶ್ಚರ್ಯಕರವಾಗಿ ಕಾಣುವುದು ಅವರಿಗೆ ನೀಡಲಾಗಿರುವ ಪ್ರಶಸ್ತಿ ಅಲ್ಲ, ಬದಲಾಗಿ ಪ್ರಕಾಶ್ ರಾಜ್ ಇದನ್ನು ಒಪ್ಪಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಖುದ್ದು ಕರೆ ಮಾಡಿ ಖಚಿತಪಡಿಸಿಕೊಂಡಿರುವುದು. ಸಿದ್ದರಾಮಯ್ಯ ಅವರಂತಹ ಉನ್ನತ ವರ್ಚಸ್ಸಿನ ನಾಯಕರಿಗೆ ಇದು ಆತಂಕದ ಸೂಚನೆಯಾಗಿ ಕಾಣುತ್ತದೆ. ಪ್ರಕಾಶ್ ಒಂದೊಮ್ಮೆ ಸಾರ್ವಜನಿಕವಾಗಿ ಪ್ರಶಸ್ತಿ ನಿರಾಕರಿಸಿದರೆ ಎಂಬ ಆತಂಕದಲ್ಲಿ ಸಂಭಾವ್ಯ ಮುಜುಗರವನ್ನು ತಪ್ಪಿಸುವ ಕ್ರಮವಾಗಿ ಕಾಣುತ್ತದೆ. ಇದರಲ್ಲಿ ರಾಜಕೀಯ ಲೆಕ್ಕಾಚಾರವೂ ಕಾಣಬಹುದು. ಟೀಕಾಕಾರರನ್ನು ಗೌರವಿಸುವುದು, ಅವರು ಹೊರಗಿನ ಸಮಾಜದಲ್ಲಿ ಆರೋಪಗಳನ್ನು ಹೊರಿಸುವುದರಿಂದ ತಪ್ಪಿಸುವ ಒಂದು ತಂತ್ರ.

ಪ್ರಕಾಶ್ ರಾಜ್ ಅವರಿಗೆ ಐದು ಬಾರಿ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದು, ಸರ್ಕಾರಗಳು ಅವರನ್ನು ಗುರುತಿಸಿವೆ. ಈ ದೃಷ್ಟಿಯಿಂದ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಬಹುದಿತ್ತು. ಸೌಜನ್ಯಯುತವಾಗಿ ನಿರಾಕರಿಸುವ ಮೂಲಕ ಯುವ ಕಲಾವಿದರನ್ನು ಪೆÇ್ರೀತ್ಸಾಹಿಸುವ ರೀತಿಯಲ್ಲಿ ನಡೆದುಕೊಂಡಿದ್ದರೆ, ಅವರ ರಾಜಿಯಿಲ್ಲದ ಪ್ರತಿರೋಧದ ದನಿ ಎಂಬ ವಿಶ್ವಾಸ ಇನ್ನೂ ಇಮ್ಮಡಿಯಾಗುತ್ತಿತ್ತು. ಬದಲಾಗಿ ಇದನ್ನು ಕೃತಜ್ಞತೆಯಿಂದ ಸ್ವೀಕರಿಸುವ ಮೂಲಕ ಮತ್ತು ಅದೇ ವೇದಿಕೆಯಲ್ಲಿ ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಮುಂತಾದ ಚಿತ್ರಗಳನ್ನು ರಾಷ್ಟ್ರ ಪ್ರಶಸ್ತಿ ನೀಡುವುದರ ಮೂಲಕ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಆರೋಪವನ್ನು ಮೋದಿ ವಿರುದ್ಧ ಹೊರಿಸುವುದು ವಿಡಂಬನೆಯಾಗಿ ಕಾಣುತ್ತದೆ. ಸೈದ್ಧಾಂತಿಕ ಪಕ್ಷಪಾತದ ವಿರುದ್ಧ ಮಾತನಾಡುವ ವ್ಯಕ್ತಿ ಅದೇ ಮಾದರಿಯ ಮತ್ತೊಂದು ಪ್ರಶಸ್ತಿಯನ್ನು ಸ್ವೀಕರಿಸಿದಂತಾಗುತ್ತದೆ.

ಸತ್ಯಾಂಶ ಎಂದರೆ, ಎಲ್ಲಾ ಸರಕಾರಗಳೂ ಮಾಡುವುದು ಒಂದೇ. ಬಲಪಂಥೀಯ ಸರ್ಕಾರಗಳು ರಾಷ್ಟ್ರೀಯವಾದಿ ಕತೆಗಾರರನ್ನು ಪೆÇ್ರೀತ್ಸಾಹಿಸುವಂತೆಯೇ, ಎಡ ಪಂಥೀಯ ಪಕ್ಷಗಳು ಉದಾರವಾದಿಗಳನ್ನು ಸಮ್ಮಾನಿಸುತ್ತವೆ. ಪ್ರತಿಯೊಂದು ಸರ್ಕಾರವೂ ಸಹ ತಮ್ಮ ಬೆಂಬಲಿಗರಿಗೆ ಪ್ರಶಸ್ತಿಗಳನ್ನು ನೀಡುತ್ತದೆ. ಆದರೆ ಉನ್ನತ ನೈತಿಕ ಮಾನದಂಡಗಳನ್ನು ಇತರರಿಂದ ಅಪೇಕ್ಷಿಸುವ ಕಲಾವಿದ ಪ್ರಕಾಶ್ ರಾಜ್‍ಗೆ ಈ ರೀತಿಯ ಆಯ್ಕೆಯ ನಡೆ ಸಮರ್ಥನೀಯವಾಗಿ ಕಾಣುವುದಿಲ್ಲ. ಪ್ರಶಸ್ತಿಯನ್ನು ಸ್ವೀಕರಿಸಿರುವುದು ಅವರು ಇತರರಿಂದ ಅಪೇಕ್ಷಿಸುವ ನೈತಿಕ ಸ್ಪಷ್ಟತೆಯನ್ನು ಮಸುಕಾಗಿಸಿದೆ.

ಸಿದ್ದರಾಮಯ್ಯ ಜಾಣ್ಮೆಯ ನಾಯಕರಾಗಿ ಇಲ್ಲಿ ಕಾಣುತ್ತಾರೆ. ಪ್ರತಿರೋಧವನ್ನು ಮೌನವಾಗಿಸಲು ಅನುಕೂಲಕರ ಅವಕಾಶಗಳನ್ನು ಕಲ್ಪಿಸುವ ಈ ರಾಜಕೀಯ ನಡೆ ಸರ್ಕಾರವನ್ನು ಉದಾರಿ ಎಂದು ಸೂಚಿಸುತ್ತದೆ ಆದರೆ ಆಂತರಿಕವಾಗಿ, ಈ ನಟನಿಗೆ ತನ್ನ ಪ್ರತಿರೋಧಗಳು ಇತಿಮಿತಿಯಲ್ಲಿರಲಿ ಎಂದು ನೆನಪಿಸುತ್ತದೆ.

ಪ್ರಕಾಶ್ ರಾಜ್ ಭಾರತೀಯ ಸಿನಿಮಾ ರಂಗದ ಅತ್ಯಂತ ಶ್ರೇಷ್ಠ ಕಲಾವಿದರಾಗಿದ್ದು ತಮ್ಮ ನಟನಾ ಕೌಶಲ್ಯಕ್ಕೆ ಹೆಸರಾಗಿದ್ದಾರೆ. ಆದರೆ ಈ ಪ್ರಸಂಗವು ಇಂತಹ ಸ್ವಘೋಷಿತ ಪ್ರತಿರೋಧದ ದನಿಗಳೂ ಸಹ ಹೇಗೆ ಗೌರವ ಸಮ್ಮಾನಗಳಿಗೆ ಸುಲಭವಾಗಿ ಶರಣಾಗುತ್ತವೆ ಎನ್ನುವುದನ್ನು ಸೂಚಿಸುತ್ತದೆ. ಅವರ ದನಿ ಇಂದಿಗೂ ಸಹ ಮಾನ್ಯತೆ ಪಡೆದಿದೆ, ಆದರೆ ಅವರ ನೈತಿಕ ಅಧಿಕಾರ, ರಾಜೀ ಸೂತ್ರದ ಛಾಯೆಯಲ್ಲಿ ಅಡಗಿರುವುದು ಕಾಣುತ್ತದೆ. ಬದ್ಧತೆ ಎನ್ನುವುದು ಸುಲಭವಾಗಿ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಸಂಕೇತವನ್ನು ನೀಡುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again