ಕರ್ನಾಟಕ ಆಳ್ವಿಕೆಯ ವೈಫಲ್ಯದಿಂದ ಹೊರಬರಬೇಕು

 ಕರ್ನಾಟಕದಲ್ಲಿ ಪ್ರತಿಭೆ-ಸಾಮಥ್ರ್ಯಗಳ ಕೊರತೆ ಇಲ್ಲ. ಕೊರತೆ ಇರುವುದು, ಸರ್ಕಾರದ ಆಳ್ವಿಕೆಯ ಇಚ್ಛಾಶಕ್ತಿಯಲ್ಲಿ.

.......................

ಸಾಧ್ಯಾಸಾಧ್ಯತೆ * ಬಿವಿಸೀ

ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನಗೆ ದೊರೆತ ಅಭೂತಪೂರ್ವ ಜನಮನ್ನಣೆಯನ್ನು ವ್ಯರ್ಥ ಮಾಡುವ ಅಪಾಯವನ್ನು ಎದುರಿಸುತ್ತಿದೆ. ಮತದಾರರು 2023ರಲ್ಲಿ ಪಕ್ಷವನ್ನು ಸುಮ್ಮನೆ ಆಯ್ಕೆ ಮಾಡಲಿಲ್ಲ, ಐದು ವರ್ಷಗಳ ಬಿಜೆಪಿ ಆಳ್ವಿಕೆಯು ಭ್ರಷ್ಟಾಚಾರ, ಆಡಳಿತ ವ್ಯತ್ಯಯಗಳಿಂದ ಕೂಡಿದ್ದು, ಆಳ್ವಿಕೆಗೆ ಮರಳಿ ಬರಲು ಜನ ಅವಕಾಶ ಕೊಡಲಿಲ್ಲ. ಕೇಸರಿ ಪಕ್ಷವನ್ನು ಸಾರಾಸಗಟು ತಿರಸ್ಕರಿಸಿದ್ದರು. ಬೊಮ್ಮಾಯಿ ಆಡಳಿತವು ಪಕ್ಷಾಂತರಗಳನ್ನೇ ಅವಲಂಬಿಸಿದ್ದು ಆರಂಭದಿಂದಲೇ ಸರ್ಕಾರದ ನ್ಯಾಯೋಚಿತತೆ ಪ್ರಶ್ನಾರ್ಹವಾಗಿತ್ತು, ಕಳಂಕಿತವಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ಸ್ಪಷ್ಟವಾದ, ಸಹಾನುಭೂತಿಯಿಂದ ಕೂಡಿದ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಿ ಸರ್ಕಾರ ರಚಿಸಿತ್ತು. ಇದು ರಾಜ್ಯದ ಆಡಳಿತದ ಸಂಸ್ಕøತಿಯನ್ನು ಮರುಸ್ಥಾಪಿಸಲು ಉತ್ತಮ ಅವಕಾಶವಾಗಿತ್ತು.

ಆದರೂ ತನ್ನ ಆಡಳಿತಾವಧಿಯ ಮಧ್ಯದಲ್ಲೇ ಕಾಂಗ್ರೆಸ್ ಸರ್ಕಾರವು ಹಿಂದಿನ ಸರ್ಕಾರದಂತೆಯೇ ಪಲ್ಲಟಗಳನ್ನು ಎದುರಿಸುತ್ತಿದೆ. ಇನ್ನೂ ಹೆಚ್ಚಿನ ಗೊಂದಲ, ಹತಾಶೆ ಎದುರಿಸುತ್ತಿದೆ. ವಿಶ್ಲೇಷಕರು ಗಮನಿಸುವಂತೆ, ಕರ್ನಾಟಕವು ಬಿಜೆಪಿಯ ಕೆಟ್ಟ ಆಳ್ವಿಕೆಯಿಂದ ಆಡಳಿತವೇ ಇಲ್ಲದ ಶೂನ್ಯದತ್ತ ಸಾಗುತ್ತಿದೆ.

ಆಡಳಿತದ ಕುಸಿತ ಎಲ್ಲ ವಲಯಗಳಲ್ಲೂ ಎದ್ದು ಕಾಣುತ್ತಿದೆ. ಹಲವಾರು ಇಲಾಖೆಗಳ ಸರ್ಕಾರಿ ನೌಕರರು ಹಲವು ತಿಂಗಳುಗಳಿಂದ ವೇತನ ಪಡೆದಿಲ್ಲ, ಹಾಗಾಗಿ ಪ್ರಜ್ಞಾವಂತಿಕೆಯಿಂದ ಕೆಲಸ ಮಾಡುತ್ತಿಲ್ಲ. ಗುತ್ತಿಗೆದಾರರ ಬಿಲ್‍ಗಳು ಅನಿರ್ದಿಷ್ಟ ಕಾಲದಿಂದ ಬಾಕಿ ಉಳಿದಿವೆ, ಅನೇಕ ಪ್ರಸಂಗಗಳಲ್ಲಿ ಸರ್ಕಾರದ ಚೆಕ್ಕುಗಳು ಪಾವತಿಯಾಗದೆ ಹಿಂದಿರುಗಿವೆ. ಇದು ಒಂದು ಪ್ರಮುಖ ರಾಜ್ಯದ ಆರ್ಥಿಕತೆಯಲ್ಲಿ ಊಹಿಸಲಾಗದ ವಿಷಯ. ರಸ್ತೆಗಳು ಸಂಚರಿಸಲಾಗದಷ್ಟು ದುರವಸ್ಥೆಯಲ್ಲಿವೆ, ಆಸ್ಪತ್ರೆಗಳು ಸಿಬ್ಬಂದಿ ಮತ್ತು ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿವೆ. ನಿರ್ಣಾಯಕ ಮೂಲ ಸೌಕರ್ಯ ಕಾಮಗಾರಿಗಳು ನಿಂತು ಹೋಗಿವೆ. ರಾಜ್ಯದ ಆಡಳಿತ ಯಂತ್ರವು ದಣಿದಂತೆ ಕಾಣುತ್ತಿದ್ದು, ಹಣಕಾಸು ಇಲ್ಲದೆ, ನಾಯಕನಿಲ್ಲದೆ ಪರದಾಡುತ್ತಿದೆ.

ಮೂಲಭೂತ ಕಾರ್ಯನಿರ್ವಹಣೆಯ ವೈಫಲ್ಯಗಳನ್ನು ಸರಿಪಡಿಸುವ ಬದಲು ಆಡಳಿತಾರೂಢ ಪಕ್ಷವು ತನ್ನದೇ ಆದ ಹಾದಿಯಲ್ಲಿ ದಿಕ್ಕು ತಪ್ಪಿದಂತಿದೆ. ಸಚಿವರು ಪ್ರಮುಖ ವಿಚಾರಗಳಲ್ಲಿ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಲ್ಯಾಣ ಯೋಜನೆಗಳ ಭರವಸೆಗಳನ್ನು ಹಣಕಾಸು ಪೂರೈಕೆ ಯೋಜನೆ ಇಲ್ಲದೆಯೇ ಘೋಷಿಸಲಾಗಿದೆ. ಅಭಿವೃದ್ಧಿ ಅನುದಾನಗಳು ಸ್ಥಗಿತಗೊಂಡಿವೆ. ಅಧಿಕಾರಿಗಳು ಹೇಳುವಂತೆ, ಕಡತಗಳು ಆಮೆ ಗತಿಯಲ್ಲಿ ಸಾಗುತ್ತಿದ್ದು, ಇದಕ್ಕೆ ಮೇಲಿನ ನಿಯಂತ್ರಣ ಇಲ್ಲದಿರುವುದು ಕಾರಣವಾಗಿದೆ. ಎಲ್ಲವನ್ನೂ ಮೀರಿ ಕಾಣುವ ಸಮಸ್ಯೆ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಡುವಿನ ಶೀತಲ ಸಮರ. ಅದು ಆಡಳಿತವನ್ನು ಎರಡು ಬಣಗಳಾಗಿ ವಿಂಗಡಿಸಿದೆ.

ಭ್ರಷ್ಟಾಚಾರ, ಈ ಗೊಂದಲದ ನಡುವೆ ಹೆಚ್ಚಾಗುತ್ತಿರುವುದು ದುರದೃಷ್ಟಕರ. ವ್ಯವಸ್ಥೆಯನ್ನು ಸ್ವಚ್ಚಗೊಳಿಸುವ ಬದಲು ಕಾಂಗ್ರೆಸ್ ಸರ್ಕಾರವು, ಗುತ್ತಿಗೆದಾರರಿಂದ ಲಂಚ ಪಡೆಯುವ ಆರೋಪಗಳಿಗೆ ಈಡಾಗಿದ್ದು, ಸ್ಥಳೀಯ ಸಂಸ್ಥೆಗಳ ಅನುದಾನಗಳೂ ಕುಸಿಯುತ್ತಿವೆ. ಪಾರದರ್ಶಕತೆ ಇಲ್ಲವಾಗಿದೆ. ಸಿದ್ದರಾಮಯ್ಯ ಅಹಿಂದ ಸೈದ್ದಾಂತಿಕ ನಿಲುವನ್ನು ಮುನ್ನಲೆಗೆ ತರಲು ಉತ್ಸುಕರಾಗಿದ್ದಾರೆ. ಆದರೆ ಸಿದ್ದಾಂತ ಉತ್ತಮ ಆಳ್ವಿಕೆಗೆ ಪರ್ಯಾಯವಾಗಲಾರದು. ಮತದಾರರು ಈಗಾಗಲೇ ಹತಾಶರಾಗಿದ್ದು, ಬಿಜೆಪಿ ಸರ್ಕಾರದ ವೈಫಲ್ಯಗಳಿಗೂ, ಈ ಸರ್ಕಾರದ ವೈಖರಿಗೂ ವ್ಯತ್ಯಾಸವನ್ನು ಗುರುತಿಸಲಾಗದ ಸ್ಥಿತಿಯಲ್ಲಿದ್ದಾರೆ.

ಇದು ದುರಂತ. ಕರ್ನಾಟಕ ಈ ರಾಜಕೀಯ ನಿರ್ವಾತವನ್ನು ಎದುರಿಸುತ್ತಿದ್ದು, ಸ್ಪಷ್ಟ ಬಹುಮತದ ಪಕ್ಷ ಮತ್ತು ಸರಕಾರ ವಿಶ್ವಾಸವನ್ನು ಉಂಟುಮಾಡುತ್ತಿಲ್ಲ. ಸಾಧಾರಣ ಜನತೆಗೆ, ಆಯ್ಕೆಯು ಎರಡು ಕೆಟ್ಟ ಆಳ್ವಿಕೆಗಳ ನಡುವೆ ನಿಂತಿದೆ. ಬಿಜೆಪಿ ಈಗಾಗಲೇ ಸಂಘಟನಾತ್ಮಕವಾಗಿ ವಿಫಲವಾಗಿದ್ದು, ಯಾವುದೇ ಪರ್ಯಾಯವನ್ನು ಸೂಚಿಸುತ್ತಿಲ್ಲ. ಕಾಂಗ್ರೆಸ್ ಸಹ ಒಳಜಗಳ ಮತ್ತು ಹಣಕಾಸು ನಿರ್ವಹಣೆಯ ವೈಫಲ್ಯಗಳಿಂದ ತಲ್ಲಣಗೊಂಡಿದ್ದು, ತನ್ನ ಆಡಳಿತ ಕಲ್ಪನೆಯನ್ನೇ ಕಳೆದುಕೊಳ್ಳುತ್ತಿದೆ. ಅದು ನಿಂತ ನೆಲೆಯೇ ಕುಸಿಯುತ್ತಿದೆ. ಈ ಎರಡು ಮಸುಕಾಗುತ್ತಿರುವ ಪಕ್ಷಗಳ ನಡುವೆ, ರಾಜ್ಯವು ದಿಕ್ಕು ದೆಸೆಯಿಲ್ಲದೆ ಸಾಗುವಂತಾಗಿದೆ. 

ಮುಂದೆ ಯಾವುದಾದರೂ ಪರಿಹಾರದ ಮಾರ್ಗ ಇದೆಯೇ? ಈ ಸರಿಪಡಿಸುವ ವಿಧಾನಗಳನ್ನು ಅಳವಡಿಸಿದರೆ ಮಾತ್ರ ಇದು ಸಾಧ್ಯ.

ಮೊದಲನೆಯದಾಗಿ, ಕಾಂಗ್ರೆಸ್ ಆಂತರಿಕವಾಗಿ ಕಟ್ಟುನಿಟ್ಟಾದ ಶಿಸ್ತು ಕಾಪಾಡಿಕೊಳ್ಳಬೇಕು. ಎರಡೂ ಅಧಿಕಾರ ಕೇಂದ್ರಗಳ ನಡುವೆ ಶಿಸ್ತು ಇರಬೇಕು, ಆಡಳಿತಾತ್ಮಕ ಆದ್ಯತೆಗಳು ಸ್ಪಷ್ಟವಾಗಿರಬೇಕು. ಹಣಕಾಸು ಮತ್ತು ಭ್ರಷ್ಟಾಚಾರವನ್ನು ಕೂಡಲೇ ಸರಿಪಡಿಸಬೇಕು. ಎರಡನೆಯದಾಗಿ, ನಾಗರಿಕ ಸಮಾಜ ಮತ್ತು ಮಾಧ್ಯಮಗಳ ಒತ್ತಡ ಹೆಚ್ಚಾಗಬೇಕು. ಕರ್ನಾಟಕದ ಕ್ರಿಯಾಶೀಲತೆಯ ಪರಂಪರೆಯಲ್ಲಿ ಇನ್ನೂ ಉತ್ತರದಾಯಿತ್ವ ಕಾಣಬೇಕಿದೆ. ಮೂರನೆಯದಾಗಿ, ರಾಜ್ಯಕ್ಕೆ ಅಗತ್ಯವಾಗಿ ತೃತೀಯ ಪರ್ಯಾಯ ರಾಜಕೀಯ ಶಕ್ತಿ ಬೇಕಿದೆ. ಪ್ರಾದೇಶಿಕವಾದ, ವಿಷಯಾಧಾರಿತ, ಸಿನಿಕತನ ಇಲ್ಲದ ಹಾಗೂ ಪ್ರಸ್ತುತ ರಾಜಕೀಯವನ್ನು ನಿರ್ಧರಿಸುವ ಪರ್ಯಾಯ ಬೇಕಿದೆ.

ಕರ್ನಾಟಕದಲ್ಲಿ ಪ್ರತಿಭೆ-ಸಾಮಥ್ರ್ಯಗಳ ಕೊರತೆ ಇಲ್ಲ. ಕೊರತೆ ಇರುವುದು, ಸರ್ಕಾರದ ಆಳ್ವಿಕೆಯ ಇಚ್ಛಾಶಕ್ತಿಯಲ್ಲಿ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again