ಸಾಮಾಜಿಕ ನ್ಯಾಯದ ನೈಜ ದನಿ ಉಗ್ರಪ್ಪ ಎಚ್ಚರಿಕೆ

 

ಕುರುಬ ವರ್ಸಸ್ ಪರಿಶಿಷ್ಟ ಬುಡಕಟ್ಟು ಸಮುದಾಯಗಳು

ಪ್ರಚಲಿತ * ಬಿವಿಸೀ

ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಅಸಮಾಧಾನಗಳು ಈಗ ಸಾರ್ವಜನಿಕವಾಗಿ ಬಯಲಾಗಿದೆ. ಇದಕ್ಕೆ ಕಾರಣ ಹಿರಿಯ ನಾಯಕ ವಿ ಎಸ್ ಉಗ್ರಪ್ಪ ಅವರು ಕುರುಬ ಸಮುದಾಯವನ್ನು ಎಸ್‍ಟಿ ವರ್ಗಕ್ಕೆ ಸೇರಿಸುವ ಸರ್ಕಾರದ ಪ್ರಸ್ತಾವನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಎಚ್ಚರಿಕೆ. ಮುಖ್ಯಮಂತ್ರಿ ಉಪಸ್ಥಿತರಿದ್ದ ಸಾರ್ವಜನಿಕ ಸಭೆಯಲ್ಲೇ ಉಗ್ರಪ್ಪ "ನಾವು ಕುರುಬರೊಡನೆ ಹೋರಾಡಲು ಸಿದ್ಧರಾಗಿದ್ದೇವೆ ಆದರೆ ನಿಮ್ಮದೇ ಊಟ ತನ್ನಿ, ನಮ್ಮ ತಟ್ಟೆಗೆ ಕೈಹಾಕಬೇಡಿ " ಎಂದು ಹೇಳಿರುವುದು, ಎಸ್‍ಸಿ ಮತ್ತು ಎಸ್‍ಟಿ ಸಮುದಾಯಗಳಲ್ಲಿ ಉಲ್ಬಣಿಸುತ್ತಿರುವ ಪ್ರತಿರೋಧ, ಅಸಮಾಧಾನಗಳ ಸೂಚನೆಯಾಗಿ ಕಾಣುತ್ತದೆ.

ಈ ವಿಷಯ ಮುನ್ನಲೆಗೆ ಬಂದಿದ್ದು ಬುಡಕಟ್ಟು ಸಂಶೋಧನಾ ಸಂಸ್ಥೆಯು, ಮುಖ್ಯಮಂತ್ರಿಗಳ ಸೂಚನೆಯ ಮೇರೆ ಸಿದ್ಧಪಡಿಸಿದ ವರದಿ ಮತ್ತು ಅದರೊಳಗಿನ ಶಿಫಾರಸುಗಳ ಹಿನ್ನೆಲೆಯಲ್ಲಿ. ಕುರುಬ ಸಮುದಾಯವನ್ನು ಪ್ರಸ್ತುತ 2 ಎ ವರ್ಗಗಳಲ್ಲಿ ಒಳಗೊಳ್ಳಲಾಗಿದ್ದು (ಇತರ ಹಿಂದುಳಿದ ವರ್ಗಗಳು) ಇದನ್ನು ಎಸ್‍ಟಿ ವರ್ಗಕ್ಕೆ ಸೇರಿಸುವಂತೆ ಶಿಫಾರಸು ಮಾಡಲಾಗಿದೆ. ಈ ಉಪಕ್ರಮವು ಚುನಾವಣೆಗಳಿಗೂ ಮುನ್ನ ಸಿದ್ದರಾಮಯ್ಯ ಅವರ ಸ್ವಂತ ಜಾತಿಯನ್ನು ರಾಜಕೀಯವಾಗಿ ಕ್ರೋಢೀಕರಿಸುವ ಒಂದು ಬೆಳವಣಿಗೆ  ಎಂದು ನೋಡಲಾಗುತ್ತಿದ್ದು, ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದ ಮೀಸಲಾತಿ, ಹೆಚ್ಚಿನ ಸೌಲಭ್ಯಗಳ ಫಲಾನುಭವಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಆದರೆ ಸರ್ಕಾರದ ಈ ಕ್ರಮವು ರಾಜಕೀಯ ಲೆಕ್ಕಾಚಾರಗಳನ್ನೂ ದಾಟಿ ಹೋಗುತ್ತದೆ. ಕುರುಬರು ರಾಜ್ಯ ಜನಸಂಖ್ಯೆಯ ಶೇಕಡಾ 16ರಷ್ಟಿದ್ದಾರೆ. ರಾಜ್ಯದಲ್ಲಿ ಅತಿ ದೊಡ್ಡ ಒಬಿಸಿ ಸಮುದಾಯವಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಒಟ್ಟು ಎಸ್‍ಟಿ  ಜನಸಂಖ್ಯೆ - ಸೋಲಿಗರು, ಜೇನು ಕುರುಬರು, ಯರವರರು, ಕೊರಗರು ಮತ್ತಿತರರು - ಶೇಕಡಾ 7ರಷ್ಟಿದ್ದಾರೆ. ಕುರುಬರನ್ನು ಎಸ್‍ಟಿ ಪಟ್ಟಿಯಲ್ಲಿ ಸೇರ್ಪಡಿಸುವುದರಿಂದ ಮೀಸಲಾತಿ ಚೌಕಟ್ಟು ಅಸ್ತವ್ಯಸ್ತವಾಗುವುದಷ್ಟೇ ಅಲ್ಲದೆ ನಿಜವಾಗಿಯೂ ಅವಕಾಶವಂಚಿತರಾಗಿರುವ ಸಮುದಾಯಗಳು, ಸಾಂವಿಧಾನಿಕವಾಗಿ ಗುರುತಿಸಲ್ಪಟ್ಟಿರುವ ಗುಂಪುಗಳು ನಿರ್ಲಕ್ಷ್ಯಕ್ಕೊಳಗಾಗುತ್ತಾರೆ.

ಉಗ್ರಪ್ಪ ಅವರ ಎಚ್ಚರಿಕೆಯ ಮಾತುಗಳು ಕೇವಲ ವೈಯುಕ್ತಿಕವಾಗಿರದೆ, ತಾತ್ವಿಕ ಆಕ್ಷೇಪವಾಗಿ ನೋಡಬೇಕಿದೆ. ಪ್ರಬಲ ಕೃಷಿ ಸಮುದಾಯವಾದ ಕುರುಬರನ್ನು ಒಳಗೊಳ್ಳುವುದರಿಂದ ಮೀಸಲಾತಿಯ ಔಚಿತ್ಯ ಮತ್ತು ಉದ್ದೇಶವೇ ಸಡಿಲವಾಗುತ್ತದೆ ಎಂಬ ಭೀತಿಗೆ ಉಗ್ರಪ್ಪ ದನಿಗೂಡಿಸಿದ್ದಾರೆ. ಎಸ್‍ಟಿ ವರ್ಗವನ್ನು ಸೃಷ್ಟಿಸಿದ್ದು ಸಾಮಾಜಿಕ, ಸಾಂಸ್ಕøತಿಕ, ಆರ್ಥಿಕ ಹಿಂದುಳಿಯುವಿಕೆಯನ್ನು ಎದುರಿಸುತ್ತಿರುವ ಗುಂಪುಗಳನ್ನು ಗುರುತಿಸುವ ಸಲುವಾಗಿ. ಹಾಗಾಗಿ ಕುರುಬರು ಪ್ರಬಲ ರಾಜಕೀಯ ಅಸ್ತಿತ್ವವನ್ನು ಹೊಂದಿರುವುದರಿಂದ, ಆರ್ಥಿಕವಾಗಿ ಸಾಕಷ್ಟು ಚಲನಶೀಲತೆ ಮತ್ತು ಪ್ರಾಬಲ್ಯ ಪಡೆದಿರುವುದರಿಂದ, ಈ ಗುಂಪುಗಳ ನಡುವೆ ಸೇರಿಸುವುದು ಉಚಿತ ಎನಿಸುವುದಿಲ್ಲ.

ವಿಡಂಬನೆ ಎಂದರೆ, ಆಂತರಿಕ ಜಾತಿ ವಿರೋಧಾಭಾಸಗಳನ್ನು ಪರಿಶೀಲಿಸಲು ಸರ್ಕಾರವೇ ರಚಿಸಿರುವ ತಜ್ಞರ ಸಮಿತಿಯ ಶಿಫಾರಸುಗಳು ಬರುವವರೆಗೂ ಕಾಯವುದಕ್ಕೂ ಸರ್ಕಾರ ತಯಾರಿಲ್ಲ. ಈ ಪ್ರಸ್ತಾವನೆಯನ್ನು ಜಾರಿಗೊಳಿಸುವ ಅವಸರ ಬೇರೆಯೇ ಉದ್ದೇಶವನ್ನು ಸೂಚಿಸುವಂತಿದ್ದು, ಜಾತಿ ಅಸ್ಮಿತೆಯನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸುವ ಉದ್ದೇಶ ಕಾಣುತ್ತಿದೆ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ವ್ಯಕ್ತಿತ್ವವನ್ನು ಅಹಿಂದ (ಅಲ್ಪಸಂಖ್ಯಾತರು ಹಿಂದುಳಿದ ಜಾತಿಗಳು ಮತ್ತು ದಲಿತರ ಮೈತ್ರಿಕೂಟ) ಚಿಂತನೆಯಡಿ ರೂಪಿಸಿಕೊಂಡಿದ್ದು, ದಲಿತರು ಮತ್ತು ಬುಡಕಟ್ಟು ಸಮುದಾಯಗಳನ್ನು ದೂರೀಕರಿಸುವ ಮೂಲಕ ಅಹಿಂದ ಚಿಂತನೆಯ ಮೂಲವನ್ನೇ ಭಂಗಗೊಳಿಸುವ ಸಾಧ್ಯತೆಗಳಿವೆ.

ಉಗ್ರಪ್ಪ ಅವರ ಆಕ್ರೋಶ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಹಿತಕರ ಸತ್ಯವನ್ನು ಎದುರಿಸುವಂತೆ ಮಾಡಿದೆ. ಸಾಮಾಜಿಕ ನ್ಯಾಯವನ್ನು ರಾಜಕೀಯ ಮುನ್ನಡೆಗಾಗಿ ತಿರುಚಲಾಗುವುದಿಲ್ಲ. ಉಗ್ರಪ್ಪ ಅವರ ಭಿನ್ನಮತ ಮತ್ತು ಪ್ರತಿರೋಧ ಕಾಂಗ್ರೆಸ್ ಪಕ್ಷದೊಳಗೇ ಇರುವ ಅಸಮಾಧಾನಗಳ ಸೂಚನೆಯಾಗಿದ್ದು, ಸಕಾರಾತ್ಮಕ ನೀತಿಗಳ ಸಾಂವಿಧಾನಿಕ ಮೌಲ್ಯಗಳನ್ನು ನಂಬಿರುವವರಿಗೆ, ಸಾಂವಿಧಾನಿಕ ಸವಲತ್ತುಗಳು ಅಗತ್ಯ ಇದ್ದವರಿಗೆ ತಲುಪಬೇಕೇ ಹೊರತು, ಸಂಘಟಿತ ಸಮುದಾಯಗಳಿಗೆ ಅಲ್ಲ ಎಂಬ ಅಭಿಪ್ರಾಯ ದಟ್ಟವಾಗುತ್ತಿದೆ.

ಅಂತಿಮವಾಗಿ, ಈ ವಿವಾದ ಜಾತಿಯ ಗೌರವದ ನೆಲೆಯಲ್ಲಿ ಸೃಷ್ಟಿಯಾಗಿಲ್ಲ. ಬದಲಾಗಿ ನೈತಿಕ ಸ್ಪಷ್ಟತೆ ಮುಖ್ಯವಾಗಿ ಕಾಣುತ್ತದೆ. ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡುವ ಮೂಲಕ ವಿ ಎಸ್ ಉಗ್ರಪ್ಪ ಕರ್ನಾಟಕದ ರಾಜಕೀಯ ವಲಯಕ್ಕೆ, ಮೀಸಲಾತಿ ಒಂದು ಪರಿಹಾರವೇ ಹೊರತು, ಸೌಕರ್ಯ ಅಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದು ರಾಜಕೀಯ ಕೊಡುಗೆ ಅಲ್ಲವೇ ಅಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again