ಆರೆಸ್ಸೆಸ್ ಮರೆತ ವಾಗ್ದಾನ: ಸಂವಿಧಾನಕ್ಕೆ ದ್ರೋಹ

 

                                                            ವಲ್ಲಭಭಾಯಿ ಪಟೇಲ್


ಈಗ ಸಂಘವನ್ನು ಉತ್ತರದಾಯಿಯಾಗಿ ನಿಲ್ಲಿಸುವ ಸಮಯ ಎದುರಾಗಿದೆ.

............

ಅಹುದಾದರಹುದೆನ್ನಿ * ಬಿವಿಸೀ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮೊಟ್ಟಮೊದಲ ಸಲ 1948ರಲ್ಲಿ ನಿಷೇಧಕ್ಕೊಳಗಾದಾಗ ಅದು ಸೇಡಿನ ಕ್ರಮ ಆಗಿರಲಿಲ್ಲ. ಮಹಾತ್ಮ ಗಾಂಧಿ ಹತ್ಯೆಗೆ ಪ್ರತಿಕ್ರಿಯೆಯಾಗಿ, ರಾಷ್ಟ್ರೀಯ ನೈತಿಕತೆಯ ಒಂದು ಕ್ರಮವಾಗಿತ್ತು. ನೆಹರೂ-ಪಟೇಲ್ ಸರ್ಕಾರವು ಆರೆಸ್ಸೆಸ್ ಕೋಮು ದ್ವೇಷವನ್ನು ಪೆÇೀಷಿಸುವ ಮೂಲಕ ವಿಮೋಚನೆಗೊಂಡ ಸ್ವತಂತ್ರ ಭಾರತದ ದುರ್ಬಲ ಸೌಹಾರ್ದತೆಗೆ ಭಂಗ ತಂದಿದೆ ಎಂದು ಆರೋಪಿಸಿತ್ತು. ಸಂಘಟನೆಯು ಆಗ ತಾನೇ ಅಂಗೀಕರಿಸಲ್ಪಟ್ಟಿದ್ದ ಸಂವಿಧಾನಕ್ಕೆ ಬದ್ಧತೆಯನ್ನು ಪ್ರಮಾಣೀಕರಿಸುವವರೆಗೂ ನಿಷೇಧ ಜಾರಿಯಲ್ಲಿತ್ತು.

1949ರಲ್ಲಿ ಸಂಘಟನೆಯೊಳಗೆ ಮತ್ತು ಹೊರಗೆ ತೀವ್ರ ಒತ್ತಡಕ್ಕೊಳಗಾಗಿ, ಆರೆಸ್ಸೆಸ್ ಮುಖ್ಯಸ್ಥ ಎಮ್ ಎಸ್ ಗೋಲ್ವಾಲ್‍ಕರ್ ನಿಷೇಧವನ್ನು ತೆರವುಗೊಳಿಸಲು ಕೋರಿದ್ದರು. ಇದಕ್ಕೆ ಸರ್ಕಾರವು ಕೆಲವು ಕಠಿಣ ಷರತ್ತುಗಳನ್ನು ಮುಂದಿಟ್ಟಿತ್ತು. ಮುಖ್ಯವಾಗಿ, ಆರೆಸ್ಸೆಸ್ ಸಂವಿಧಾನವನ್ನು ಗೌರವಿಸಬೇಕು,  ತ್ರಿವರ್ಣ ಧ್ವಜವನ್ನು ಗೌರವಿಸಬೇಕು, ಮತ ಧರ್ಮ ಜಾತಿಗಳನ್ನು ಮೀರಿ ಎಲ್ಲ ಪ್ರಜೆಗಳ ಕಲ್ಯಾಣಕ್ಕಾಗಿ ದುಡಿಯಬೇಕು. ಈ ಮೂರು ಷರತ್ತುಗಳಿಗೆ ಸಮ್ಮತಿ ನೀಡಿದ ಗೋಲ್ವಾಲ್‍ಕರ್ ಲಿಖಿತ ಪ್ರಮಾಣ ಪತ್ರವನ್ನು ಸಲ್ಲಿಸಿ, ಮೊಟ್ಟಮೊದಲ ಬಾರಿಗೆ ಆರೆಸ್ಸೆಸ್ ತನ್ನ ಸಂಘಟನೆಯನ್ನು ರಾಜಕೀಯೇತರ, ಸಾಂಸ್ಕøತಿಕ ಸಂಘಟನೆ ಎಂದು ಹೊಸ ಸಂವಿಧಾನವನ್ನು ರೂಪಿಸಿಕೊಂಡಿತ್ತು. ಈ ಆಧಾರದ ಮೇಲೆ ಗೃಹ ಸಚಿವಾಲಯವು 1949ರ ಜುಲೈನಲ್ಲಿ ನಿಷೇಧವನ್ನು ಹಿಂಪಡೆದಿತ್ತು.

ಈ ವಾಗ್ದಾನವು ಗಣತಂತ್ರದೊಡನೆ ಸಮ್ಮತಿ ಪತ್ರವಾಗಿತ್ತು. ಆದಾಗ್ಯೂ ಆರೆಸ್ಸೆಸ್ ಅಂದಿನಿಂದಲೂ ಸಹ ತನ್ನದೇ ಸಾಂವಿಧಾನಿಕ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ತನ್ನದೇ ಆದ ನೈತಿಕ ನೆಲೆಯನ್ನೂ ಉಲ್ಲಂಘಿಸುತ್ತಾ ಬಂದಿದೆ. ಹಲವು ವರ್ಷಗಳ ಕಾಲ ಆರೆಸ್ಸೆಸ್ ನಾಗಪುರದ ಮುಖ್ಯ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿರಲಿಲ್ಲ. ಬದಲಾಗಿ ತನ್ನದೇ ಆದ ಕೇಸರಿ ಭಗವಾ ಧ್ವಜವನ್ನು ಗೌರವಿಸುತ್ತಾ ಬಂದಿತ್ತು. ಸಂಘದ ತತ್ವಗಳು, ಭಾರತದ ಸಾಂವಿಧಾನಿಕ ಅಸ್ಮಿತೆಯ ಆಧಾರ ಸ್ತಂಭಗಳಾದ ಸೆಕ್ಯುಲರ್ ಮತ್ತು ಸಮಾಜವಾದಿ ತತ್ವಗಳನ್ನು ಅಪಹಾಸ್ಯ ಮಾಡುತ್ತಲೇ ಬಂದಿತ್ತು. ಬದಲಾಗಿ ಹಿಂದೂಗಳನ್ನು ಪ್ರತಿನಿಧಿಸುವ ರಾಷ್ಟ್ರದ ಪ್ರತಿಪಾದನೆ ಮಾಡುತ್ತಲೇ ಬಂದಿತು. ಈ ಕಲ್ಪನೆಯಲ್ಲಿ ಬಹುಸಂಖ್ಯಾತ ಭಾರತೀಯರನ್ನು ಹೊರಗಿಡಲಾಗಿತ್ತು.

ಇಷ್ಟೇ ಗಂಭೀರವಾದ ಮತ್ತೊಂದು ಸಂಗತಿ ಎಂದರೆ, ಸಂಘಟನೆಯು ಮಹಿಳೆಯರ ಸುರಕ್ಷತೆ ಮತ್ತು ಘನತೆಯನ್ನು ನಿರ್ಲಕ್ಷಿಸುತ್ತಲೇ ಬಂದಿದ್ದು. ಆರೆಸ್ಸೆಸ್ ಪದೇಪದೇ ಸಂಸ್ಕೃತ ಶ್ಲೋಕ `ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ...'  ಪುನರುಚ್ಚರಿಸುತ್ತಾ, ಮಹಿಳೆಯರನ್ನು ಎಲ್ಲಿ ಗೌರವಿಸಲಾಗುವುದೋ ಅಲ್ಲಿ ದೈವತ್ವ ನೆಲೆಸಿರುತ್ತದೆ ಎಂದು ಹೇಳುತ್ತಲೇ ಬಂದಿದೆ. ಆದರೆ ಸಾಮಾಜಿಕ ವಾಸ್ತವಿಕ ನೆಲೆಯಲ್ಲಿ ಆರೆಸ್ಸೆಸ್ ಆಗಲೀ, ಅದರ ಸಹ ಸಂಘಟನೆಗಳಾಗಲೀ ಹಿಂದೂ ಧರ್ಮದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು, ಕಿರುಕುಳಗಳು, ಶೋಷಣೆ ಮತ್ತು ಹಿಂಸೆಗಳ ವಿರುದ್ಧ ಸ್ಥಿರವಾದ ನಿಲುವು ವ್ಯಕ್ತಪಡಿಸಿಯೇ ಇಲ್ಲ. ಮಹಿಳೆಯರು ಆಧ್ಯಾತ್ಮಿಕ ನೇತಾರರಿಂದ, ದೇವಸ್ಥಾನದ ನಿರ್ವಹಣೆಕಾರರಿಂದ, ಸಂಘಪರಿವಾರದೊಡನೆ ನಿಕಟ ಸಂಬಂಧ ಹೊಂದಿರುವವರಿಂದ ದೌರ್ಜನ್ಯ, ಹಿಂಸೆಗೊಳಗಾದಾಗಲೆಲ್ಲಾ, ಆರೆಸ್ಸೆಸ್ ದಿವ್ಯ ಮೌನ ವಹಿಸಿದೆ. ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ ಚಳುವಳಿಯಾಗಿ ಆರೆಸ್ಸೆಸ್ ತನ್ನ ಇಚ್ಚೆಗನುಸಾರವಾಗಿ ಈ ಅನ್ಯಾಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ತನ್ನದೇ ಆದ ಸಾಮಾಜಿಕ ವಲಯದಲ್ಲೂ ಸಹ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ವಿಮುಖವಾಗಿರುವುದು ಆಳವಾದ ನೈತಿಕ ನಿರ್ವಾತವನ್ನು ಸೃಷ್ಟಿಸಿದೆ.

ಈ ವಿರೋಧಾಭಾಸವು ಇನ್ನೂ ಆಳಕ್ಕಿಳಿಯುತ್ತದೆ. ಕೆಲವು ನಾಯಕರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯನ್ನು ಕೂಗುತ್ತಿರುವಾಗಲೇ, ಸಂಘಟನೆಯ ನಡವಳಿಕೆಯಲ್ಲಿ ಅಲ್ಪಸಂಖ್ಯಾತರನ್ನು, ವಿರೋಧಿಸುವವರನ್ನು, ಪಿತೃಪ್ರಧಾನತೆಯನ್ನು ಪ್ರಶ್ನಿಸುವ ಮಹಿಳೆಯರನ್ನೂ ಹೊರಗಿಡುವ ಧೋರಣೆ ಕಂಡುಬರುತ್ತಿದೆ. ಇದು 1949ರಲ್ಲಿ ಗೋಲ್ವಾಲ್‍ಕರ್ ಪ್ರಮಾಣಿಸಿದ ಹಾಗೆ ಸಮಸ್ತ ಪ್ರಜೆಗಳ ಕಲ್ಯಾಣ, ಯೋಗಕ್ಷೇಮ ಎನಿಸುವುದಿಲ್ಲ; ಬದಲಾಗಿ, ಪೌರತ್ವವನ್ನು ನಿರ್ದಿಷ್ಟ ಸಿದ್ಧಾಂತದ ಚೌಕಟ್ಟಿಗೆ ಒಳಪಡುವವರಿಗೆ ಮಾತ್ರ ನಿಬರ್ಂಧಿಸಿದಂತಾಗುತ್ತದೆ.

ಇಂದು ಕರ್ನಾಟಕ ಸರ್ಕಾರವು ಸಂಘಟನೆಯ ಚಟುವಟಿಕೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಬರ್ಂಧಿಸುವ ತೀರ್ಮಾನ ಕುರಿತು ಚರ್ಚಿಸುತ್ತಿರುವಾಗ ಅದನ್ನು ಆರೆಸ್ಸೆಸ್ ವಿರೋಧಿಸುತ್ತಿರುವ ಸಂದರ್ಭದಲ್ಲಿ, ಸಂಘಟನೆಗೆ ಅದು ನೀಡಿದ ಆಶ್ವಾಸನೆಗಳನ್ನು ನೆನಪು ಮಾಡಬೇಕಿದೆ. 1949ರ ವಾಗ್ದಾನ ಭಾರತದ ಜನತೆಗೆ ನೀಡಿದ ಆಶ್ವಾಸನೆಯೇ ಹೊರತು ತಾತ್ಕಾಲಿಕ ಹೊಂದಾಣಿಕೆಯಲ್ಲ. ಸಾಂವಿಧಾನಿಕ ತತ್ವಗಳಾದ ಸಮಾನತೆಯನ್ನು ನಿರಾಕರಿಸುವ ಮೂಲಕ ಆರೆಸ್ಸೆಸ್ ತನ್ನದೇ ಸಾಂಸ್ಕೃತಿಕ ಆದರ್ಶ ಎಂದು ಹೇಳಿಕೊಳ್ಳುವ ಮಹಿಳೆಯನ್ನು ಗೌರವಿಸುವುದನ್ನು ಅವಗಣನೆ ಮಾಡುತ್ತಿದೆ. ಆರೆಸ್ಸೆಸ್ ಸ್ಪಷ್ಟವಾಗಿ ನ್ಯಾಯಯುತ ಸ್ಥಾನ ನೀಡಿದ ಸ್ಫೂರ್ತಿಯನ್ನು ಉಲ್ಲಂಘಿಸುತ್ತಿದೆ. ಈಗ ಸಂಘವನ್ನು ಉತ್ತರದಾಯಿಯಾಗಿ ನಿಲ್ಲಿಸುವ ಸಮಯ ಎದುರಾಗಿದೆ. ಅದನ್ನು ದಮನಿಸುವ ಸಲುವಾಗಿ ಅಲ್ಲ; ಬದಲಾಗಿ, ತನಗೆ ಮರುಜೀವ ಕೊಟ್ಟ ಸಂವಿಧಾನಕ್ಕೆ ಬದ್ಧತೆ ತೋರುವುದಕ್ಕಾಗಿ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again