ಬೆಳ್ತಂಗಡಿ: ಸೌಜನ್ಯಗೆ ನ್ಯಾಯ ಹೋರಾಟ ಉಲ್ಬಣ; ಸರ್ಕಾರದ ನಿಶ್ಚಲತೆ, ಎಸ್‍ಐಟಿ ಋಜುತ್ವಕ್ಕೆ ಸವಾಲು

 


ಅಗ್ನಿ ಪರೀಕ್ಷೆ * ಬಿವಿಸೀ


ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಮತ್ತೆ `ಸೌಜನ್ಯಗೆ ನ್ಯಾಯ' ಹೋರಾಟ ಕಿಡಿಕಾರುತ್ತಿದೆ. ಮೊನ್ನೆ ಪಟ್ಟಣದ ತಹಶೀಲ್ದಾರ್ ಕಚೇರಿಯ ಎದುರು ನಾಗರಿಕರು ಮನವಿ ಸಲ್ಲಿಸಲು ಪ್ರಯತ್ನಿಸಿದಾಗ, ಪೆÇಲೀಸರು ಒಡ್ಡಿದ ತಡೆಯಿಂದಾಗಿ ಪರಿಸ್ಥಿತಿ ವಿಷಮಗೊಂಡಿತು. ಕ್ಷಣಾರ್ಧದಲ್ಲಿ ವಾತಾವರಣ ಕದಡಿ, ಪೆÇಲೀಸರು ಮತ್ತು ಪ್ರತಿಭಟನಾಕಾರರು ಮುಖಾಮುಖಿಯಾಗುವಂತಾಯಿತು. ``ನಿಮಗೆ ತಹಶೀಲ್ದಾರರನ್ನು ಭೇಟಿಯಾಗಲು ಅನುಮತಿಯಿಲ್ಲ'' ಎಂದು ಪೊಲೀಸ್ ಅಧಿಕಾರಿ ಅಬ್ಬರಿಸಿದಾಗ, ಹೋರಾಟಗಾರರ ನಾಯಕಿ ಪ್ರಸನ್ನ ರವಿ ಸ್ವತಃ ಯಾರೊಂದಿಗೋ ಫೋನಿನಲ್ಲಿ ಮಾತನಾಡಿ ಆ ನಿಟ್ಟಿನಲ್ಲಿ ಅನುಮತಿ ಪಡೆದುಕೊಂಡರೂ, ಪ್ರತಿಭಟನಾಕಾರರಿಂದ ಮನವಿ ಪಡೆಯಲು ತಹಶೀಲ್‍ದಾರರಾಗಲೀ ಅವರಿಂದ ಅಧಿಕಾರ ಪಡೆದವರಾಗಲೀ ಯಾರೂ ಕಚೇರಿಯಲ್ಲಿ ಇರಲಿಲ್ಲ.

2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮತ್ತು ಇತರ ಅನೇಕ ರೇಪ್ ಎಂಡ್ ಮರ್ಡರ್ ಪ್ರಕರಣಗಳಲ್ಲಿ ನಿಜವಾದ ಅಪರಾಧಿಗಳು ಯಾರೆಂಬುದು ಇನ್ನೂ ಬೆಳಕಿಗೆ ಬಂದಿಲ್ಲ. ವರ್ಷಗಳ ತನಿಖೆ, ಬದಲಾದ ಅಧಿಕಾರಿಗಳು, ರಾಜಕೀಯ ಬದಲಾವಣೆಗಳು - ಎಲ್ಲವೂ ನಡೆದರೂ ಸತ್ಯ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಜನರು ಸರ್ಕಾರದ ವಾಗ್ದಾನಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. "ನ್ಯಾಯ ತಡವಾದರೆ ಅದು ಅನ್ಯಾಯ" ಎನ್ನುವ ಮಾತು ಇಲ್ಲಿ ನಿಜವಾಗುತ್ತಿದೆ.

ಈ ಪ್ರಕರಣ ಮಾತ್ರವಲ್ಲದೆ ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಿನ ಪ್ರದೇಶಗಳಲ್ಲಿ ನಡೆದಿದ್ದೆಂದು ಹೇಳಲಾಗಿರುವ ಸರಣಿ ಅತ್ಯಾಚಾರ ಮತ್ತು ಮಹಿಳಾ ಹತ್ಯೆಗಳ ಕುರಿತು ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ದಳ (ಎಸ್‍ಐಟಿ) ಈಗ ಹೊಸ ವಿವಾದದ ಕೇಂದ್ರವಾಗಿದೆ. ಮೊದಲಿಗೆ ಸತ್ಯ ಅನಾವರಣವಾಗುವುದರ ಬಗ್ಗೆ ಭರವಸೆ ಮೂಡಿಸಿದ್ದ ಈ ದಳದ ಕೆಲಸ ಇದೀಗ ಸಂಶಯಕ್ಕೊಳಗಾಗಿದೆ.

ಮಾಹಿತಿಯ ಪ್ರಕಾರ, ಎಸ್‍ಐಟಿ ತನ್ನ ತನಿಖೆಯಲ್ಲಿ "ಯಾವುದೇ ಖಚಿತ ಸಾಕ್ಷ್ಯ ದೊರಕಿಲ್ಲ" ಎಂಬ ಅರ್ಥದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಹರಡಿಸುತ್ತಿದೆ. ಕೆಲವು ಮಾಧ್ಯಮಗಳು "ಸಾಮೂಹಿಕ ಸಮಾಧಿಗಳ ಆರೋಪಕ್ಕೆ ಸಾಕ್ಷಿ ಸಿಕ್ಕಿಲ್ಲ" ಎಂಬ ಶೀರ್ಷಿಕೆಗಳಲ್ಲಿ ವರದಿಗಳು ನೀಡಿವೆ. ಇದನ್ನು ಜನಸಾಮಾನ್ಯರು "ಸತ್ಯ ಮುಚ್ಚಿಹಾಕುವ ಪ್ರಯತ್ನ"ವೆಂದು ಭಾವಿಸುತ್ತಿದ್ದಾರೆ. ಸ್ಥಳೀಯ ಹೋರಾಟಗಾರರು ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರು "ಈ ರೀತಿಯ ಮಾಧ್ಯಮ ಕಥನಗಳು ನಿಜವಾದ ಅಪರಾಧಿಗಳನ್ನು ರಕ್ಷಿಸÀಲು ಉದ್ದೇಶಿತ ಕ್ರಮಗಳು" ಎಂದು ಆರೋಪಿಸಿದ್ದಾರೆ.

ಇದಕ್ಕಿಂತ ಭಯಾನಕ ಸಂಗತಿ ಎಂದರೆ, ಈಗ ಎಸ್‍ಐಟಿ "ರಿವರ್ಸ್ ತನಿಖೆ" ಕೈಗೊಳ್ಳಬಹುದು ಎಂಬ ವರದಿಗಳು. ಅಂದರೆ, "ಸೌಜನ್ಯಗೆ ನ್ಯಾಯ" ಚಳುವಳಿಯನ್ನು ಮುನ್ನಡೆಸುತ್ತಿರುವವರ ಮೇಲೆ ತನಿಖೆ ಮಾಡುವ, ಅಥವಾ ಅವರನ್ನು ಕಾನೂನು ಕುಣಿಕೆಗೆ ಸಿಕ್ಕಿಸುವ  ಯೋಜನೆಗಳಿವೆ ಎನ್ನುವುದು. ಈ ಸುದ್ದಿಯು ಚಳುವಳಿಯ ಬೆಂಬಲಿಗರಲ್ಲಿ ಭಯ ಮತ್ತು ಕೋಪ ಮೂಡಿಸಿದೆ. "ನ್ಯಾಯ ಕೇಳಿದವರನ್ನೇ ಆರೋಪಿಗಳನ್ನಾಗಿಸುವ ಪ್ರಯತ್ನ ನಡೆಯುತ್ತಿದೆ" ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ನಿಲುವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸರಕಾರದ ಉದ್ದೇಶ ನಿಜವಾದ ಅಪರಾಧಿಗಳನ್ನು ರಕ್ಷಿಸುವುದಾಗಿದೆಯೇ ಎಂದು ಜನರು ಕೇಳುತ್ತಿದ್ದಾರೆ. ಒಂದು ಕಡೆ ತನಿಖಾ ದಳದ ಹೇಳಿಕೆಗಳು ಅಸ್ಪಷ್ಟ, ಮತ್ತೊಂದೆಡೆ ಸರ್ಕಾರದ ಮೌನ - ಇದು ನ್ಯಾಯದ ಮಾರ್ಗದಲ್ಲಿನ ಅತ್ಯಂತ ಅಪಾಯಕರ ಹಂತ. ಜನರ ವಿಶ್ವಾಸ ಕುಸಿಯುತ್ತಿರುವ ಈ ಸಂದರ್ಭದಲ್ಲಿ, "ಸೌಜನ್ಯಗೆ ನ್ಯಾಯ" ಹೋರಾಟವು ಕೇವಲ ಒಂದು ಪ್ರಕರಣದ ವಿಚಾರವಲ್ಲ, ಅದು ಸತ್ಯಕ್ಕಾಗಿ ಹೋರಾಟವಾಗಿದೆ.

ಮೊನ್ನೆಯ ಬೆಳ್ತಂಗಡಿ ಘಟನೆಯು ಇದರ ನಿದರ್ಶನ. ತಹಶೀಲ್ದಾರ್ ಕಚೇರಿಯ ಮುಂದೆ ಮನವಿ ಸಲ್ಲಿಸಲು ಬಂದ ಶಾಂತ ನಾಗರಿಕರನ್ನು ತಡೆಯಲು ಪೆÇಲೀಸರು ಬಲಪ್ರಯೋಗಕ್ಕೆ ಮುಂದಾದದ್ದು ಸರ್ಕಾರದ ಆತಂಕವನ್ನು ತೋರಿಸುತ್ತದೆ. ವಿಡಿಯೊ ದೃಶ್ಯಗಳಲ್ಲಿ ಜನರ ಆಕ್ರೋಶ, ಪೆÇಲೀಸರ ಜೋರಿನ ಪ್ರತಿಕ್ರಿಯೆ ಎಲ್ಲವೂ ಉಲ್ಬಣಗೊಂಡ ಚಿತ್ರಣವನ್ನು ನೀಡುತ್ತವೆ.

ಇದೀಗ ಹೋರಾಟವು ಕೇವಲ ಒಂದು ಜಿಲ್ಲೆಗೆ ಸೀಮಿತವಲ್ಲ. "ಸೌಜನ್ಯಗೆ ನ್ಯಾಯ" ಹೋರಾಟ ದಕ್ಷಿಣ ಕನ್ನಡದಿಂದ ರಾಜ್ಯದಾದ್ಯಂತ ಪ್ರತಿಧ್ವನಿಸುತ್ತಿದೆ. ಸರ್ಕಾರ ಮತ್ತು ತನಿಖಾ ದಳಗಳು ಈ ಆಕ್ರೋಶದ ಅರ್ಥವನ್ನು ಅರಿತು ಪಾರದರ್ಶಕ, ನ್ಯಾಯಸಮ್ಮತ ಕ್ರಮ ಕೈಗೊಳ್ಳುವುದು ಅಗತ್ಯ. ಇಲ್ಲದಿದ್ದರೆ, ಈ ಮೌನವೇ ಮತ್ತಷ್ಟು ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡುವುದು ಖಚಿತ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again