ಕರ್ನಾಟಕದ ನಷ್ಟ, ಆಂಧ್ರಕ್ಕೆ ಲಾಭ - ಗೂಗಲ್ ಹೂಡಿಕೆ


 

                                            ಸಿದ್ದರಾಮಯ್ಯ, ಚಂದ್ರಬಾಬು ನಾಯ್ಡು

 ದೇಶದ ಪ್ರಮುಖ ಐಟಿ ಮತ್ತು ನವೋದ್ಯಮದ ಕೇಂದ್ರ ಎಂದೇ ಗುರುತಿಸಲ್ಪಟ್ಟಿದ್ದ ಕರ್ನಾಟಕ ಈಗ ವಾಸ್ತವಿಕ ಅಗ್ನಿಪರೀಕ್ಷೆ ಎದುರಿಸಬೇಕಿದೆ.

ಇರೋ ವಿಚಾರ * ಬಿವಿಸೀ


ಮಹತ್ತರ ಬೆಳವಣಿಗೆಯೊಂದರಲ್ಲಿ ಆಂಧ್ರ ಪ್ರದೇಶ ಸರ್ಕಾರವು ಗೂಗಲ್ ಕಂಪನಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ವಿಶಾಖಪಟ್ಟಣಂ ಬಂದರು ನಗರದಲ್ಲಿ ಎಐ ದತ್ತಾಂಶ ಕೇಂದ್ರದ ಹೂಡಿಕೆಗೆ ಸಮ್ಮತಿ ನೀಡಿದೆ. ಆರಂಭಿಕ ಬಂಡವಾಳವಾಗಿ 1.3 ಲಕ್ಷ ಕೋಟಿ ರೂ ಹೂಡಲಾಗುತ್ತದೆ. ಆಂಧ್ರ ಪ್ರದೇಶದ ಸಚಿವ ನರೇಶ್ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು ಈ ಯೋಜನೆಯನ್ನು ಪಡೆಯಲು ಹಲವು ರಾಜ್ಯಗಳು ಪ್ರಯತ್ನಿಸಿದ್ದರೂ ಆಂಧ್ರ ಪ್ರದೇಶ ಅಂತಿಮ ಗೆಲುವು ಸಾಧಿಸಿದೆ ಎಂದು ಹೇಳಿದ್ದಾರೆ. ವೀಕ್ಷಕರ ಅನುಸಾರ ಇದರ ಶ್ರೇಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಲ್ಲುತ್ತದೆ. ನಗರ ಮೂಲ ಸೌಕರ್ಯಗಳನ್ನು ಉನ್ನತೀಕರಿಸುವ ತಮ್ಮ ನಿರಂತರ ಪ್ರಯತ್ನದಲ್ಲಿ ನಾಯ್ಡು ಮಾಹಿತಿ ತಂತ್ರಜ್ಞಾನ ಮತ್ತು ಬಯೋಟೆಕ್ ಉದ್ಯಮಗಳಿಗೆ ವಾಣಿಜ್ಯ ಸ್ನೇಹಿ ವಾತಾವರಣವನ್ನು ಸೃಷ್ಟಿಸಿದ್ದು, ಇದು ಈಗ ಲಾಭ ತರುತ್ತಿದೆ ಎನ್ನಲಾಗಿದೆ.

ದೇಶದ ಪ್ರಮುಖ ಐಟಿ ಮತ್ತು ನವೋದ್ಯಮದ ಕೇಂದ್ರ ಎಂದೇ ಗುರುತಿಸಲ್ಪಟ್ಟಿದ್ದ ಕರ್ನಾಟಕ ಈಗ ವಾಸ್ತವಿಕ ಅಗ್ನಿಪರೀಕ್ಷೆ ಎದುರಿಸಬೇಕಿದೆ. ತಜ್ಞರು ಸಲಹೆ ನೀಡುವಂತೆ, ಕರ್ನಾಟಕ ಸಕಾಲದಲ್ಲಿ ಪ್ರಯತ್ನ ಪಟ್ಟು, ಗೂಗಲ್ ಕಂಪನಿಯ ಸುಂದರ್‍ಪಿಚೈ ಅವರನ್ನು ಒಪ್ಪಿಸಿದ್ದರೆ ರಾಜ್ಯವು ಪ್ರತಿಭೆಯ ಕೇಂದ್ರ ಬಿಂದು ಆಗುತ್ತಿದ್ದುದೇ ಅಲ್ಲದೆ, ಅನುಕೂಲಕರ ವಾತಾವರಣ ಸೃಷ್ಟಿಸಬಹುದಿತ್ತು. ಆದರೆ ತಂತ್ರಜ್ಞಾನದ ದೈತ್ಯ ಕಂಪನಿ ಗೂಗಲ್ ಬೆಂಗಳೂರಿನ ಕೆಟ್ಟ ಮೂಲ ಸೌಕರ್ಯಗಳಿಂದ ಅಸಮಾಧಾನ ಹೊಂದಿದ್ದು, ರಸ್ತೆಯ ಅಡೆತಡೆಗಳು, ಅಸಮರ್ಪಕ ನೀರಿನ ಸರಬರಾಜು, ಸಂಚಾರ ದಟ್ಟಣೆ ಇವೆಲ್ಲವೂ ಇತ್ತೀಚೆಗೆ ಅಂತಾರಾಷ್ಟ್ರೀಯ ಸುದ್ದಿಗಳಾಗಿವೆ.

ತುರ್ತಾಗಿ ರಸ್ತೆಗಳನ್ನು ದುರಸ್ತಿ ಮಾಡಿ, ನಗರದ ಅನುಕೂಲತೆಗಳನ್ನು ಉನ್ನತೀಕರಿಸುವ ಬದಲು ಕರ್ನಾಟಕದ ರಾಜಕೀಯ ನಾಯಕತ್ವವು ಈ ಕೊರತೆಗಳ ಬಗ್ಗೆ ಐಟಿ ಮತ್ತು ಬಯೋಟೆಕ್ ಉದ್ಯಮಗಳ ದೂರುಗಳಿಗೆ ಕ್ಯಾತೆ ತೆಗೆದು ರಕ್ಷಣಾತ್ಮಕವಾಗಿ ಉತ್ತರ ನೀಡಿರುವುದು ರಾಜ್ಯಕ್ಕೆ ನಷ್ಟವಾಗಿದೆ. ಕೆಲವು ಪ್ರಸಂಗಗಳಲ್ಲಿ ಮೂಲ ಸೌಕರ್ಯ ಕೊರತೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಉದ್ಯಮಗಳು ಆಕ್ಷೇಪ, ಟೀಕೆ, ಅನಗತ್ಯ ನಿಂದನೆ ಮತ್ತು ವಿಚಾರಣೆಗಳನ್ನೂ, ಪೆÇ್ರೀತ್ಸಾಹದ ಕೊರತೆಯನ್ನೂ ಎದುರಿಸಬೇಕಾಗಿದೆ. ರಾಜ್ಯ ಸರ್ಕಾರದ ಈ ಉದ್ಯಮ ವಿರೋಧಿ ವರ್ತನೆಯು ಹೊಸ ಬಂಡವಾಳ ಹೂಡಿಕೆಯನ್ನು ಬಾಧಿಸುವುದಷ್ಟೇ ಅಲ್ಲದೆ ಈಗ ಇರುವ ಉದ್ಯಮಗಳನ್ನು ಉಳಿಸಿಕೊಳ್ಳುವುದೂ ಕಷ್ಟವಾಗುತ್ತದೆ. ಈ ಉದ್ದಿಮೆಗಳು ಇನ್ನೂ ವಾಣಿಜ್ಯ ಸ್ನೇಹಿ ವಾತಾವರಣ ಇರುವ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತವೆ.

ಈ ಪರಿಸ್ಥಿತಿಯು ಕರ್ನಾಟಕದಲ್ಲಿ ಆಳವಾದ ವ್ಯಾಧಿಯ ಸೂಚಕವಾಗಿದೆ. ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ದುಬಾರಿ ಅಂತಾರಾಷ್ಟ್ರೀಯ ನಿಯೋಗಗಳನ್ನು ಭೇಟಿ ಮಾಡುವುದರ ಹೊರತಾಗಿಯೂ, ಕರ್ನಾಟಕದ ಹಾಲಿ ಸರ್ಕಾರವು ಕೈಗಾರಿಕಾ ಉದ್ದಿಮೆಯ ನಿರ್ವಹಣೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಸರ್ಕಾರದ ಆಳ್ವಿಕೆಯು ಗ್ರಾಮ ಕೇಂದ್ರಿತವಾಗಿ ಕಾಣುತ್ತಿದ್ದು, ಉದ್ಯಮಗಳ ವಿರುದ್ಧ ತಾರತಮ್ಯ ಎದ್ದು ಕಾಣುವಂತಿದೆ. ಕೈಗಾರಿಕೋದ್ಯಮಿಗಳನ್ನು ಸಹಭಾಗಿಗಳಾಗಿ ಕಾಣದೆ, ಅನಪೇಕ್ಷಿತರಂತೆ ಕಾಣಲಾಗುತ್ತಿದೆ. ತತ್ಪರಿಣಾಮವಾಗಿ, ವಾಣಿಜ್ಯ ಬೆಳವಣಿಗೆ ನಿಬರ್ಂಧಿತವಾಗಿದ್ದು, ಅವಕಾಶಗಳನ್ನು ಕಳೆದುಕೊಳ್ಳಲಾಗುತ್ತಿದೆ. ರಾಜ್ಯದ ಕೈಗಾರಿಕಾ ವಾತಾವರಣ ಸ್ಥಗಿತಗೊಂಡಂತಾಗಿದೆ.

ಆಂಧ್ರ ಪ್ರದೇಶದಲ್ಲಿ ಹೂಡಿಕೆ ಮಾಡುವ ಗೂಗಲ್ ಕಂಪನಿಯ ನಿರ್ಧಾರ ಪ್ರತ್ಯೇಕ ಪ್ರಸಂಗವೇನಲ್ಲ. ಇದು ಕರ್ನಾಟಕದ ಆಳ್ವಿಕೆ ವೈಫಲ್ಯದ ಒಂದು ಉದಾಹರಣೆಯಾಗಿದೆ. ಆಂಧ್ರ ಪ್ರದೇಶವು ಕ್ರಿಯಾಶೀಲವಾಗಿ ಮೂಲ ಸೌಕರ್ಯಗಳನ್ನು ವೃದ್ಧಿಪಡಿಸಿ, ನಗರ ಸೌಕರ್ಯಗಳನ್ನು ಉನ್ನತೀಕರಿಸಿ, ಹೂಡಿಕೆದಾರರಿಗೆ ಉತ್ತೇಜನ ನೀಡುತ್ತಿದ್ದರೆ, ಕರ್ನಾಟಕದ ಅಧಿಕಾರಿಗಳು ಪ್ರತಿಕ್ರಿಯಾತ್ಮಕವಾಗಿ ವರ್ತಿಸುತ್ತಿದ್ದು, ಉನ್ನತ ಮಟ್ದದ ಹೂಡಿಕೆಗಳನ್ನು ಆಕರ್ಷಿಸುವುದರಲ್ಲಿ ವಿಫಲವಾಗುತ್ತಿದ್ದಾರೆ. ಈ ವೈರುಧ್ಯವು ಮೂಲ ಸೌಕರ್ಯಗಳು ಸಿದ್ಧವಾಗಿರುವುದರ, ಆಡಳಿತಾತ್ಮಕ ಒಳನೋಟದ, ಕೈಗಾರಿಕಾ ಸ್ನೇಹಿ ನೀತಿಗಳ ಕೊರತೆಯು ಹೇಗೆ ಬಂಡವಾಳ ಹೂಡಿಕೆಯನ್ನು ಪ್ರಭಾವಿಸುತ್ತದೆ ಎನ್ನುವುದನ್ನು ನಿರೂಪಿಸುತ್ತದೆ.

ಕರ್ನಾಟಕದ ಮಟ್ಟಿಗೆ ಸಂದೇಶ ಸ್ಪಷ್ಟವಾಗಿದೆ. ಪ್ರತಿಭೆ, ಹವಾಮಾನ ಮತ್ತು ಚಾರಿತ್ರಿಕ ಪ್ರಸಿದ್ಧಿ ಇವುಗಳು ಮಾತ್ರವೇ ಸುಸ್ಥಿರ ಆರ್ಥಿಕ ಮುಂದಾಳತ್ವವನ್ನು ಕಾಪಾಡುವುದಿಲ್ಲ. ನಗರ ಮೂಲ ಸೌಕರ್ಯಗಳಲ್ಲಿ, ಹೂಡಿಕೆದಾರರೊಡನೆ ಸಮಾಲೋಚನೆ ನಡೆಸವುದರಲ್ಲಿ ತುರ್ತು ಸುಧಾರಣೆ ಆಗದಿದ್ದರೆ ಕ್ಷಿಪ್ರ ಗತಿಯ, ಉತ್ತಮವಾದ, ಹೆಚ್ಚು ವಾಣಿಜ್ಯ ಸ್ನೇಹಿ ಪರಿಸರ ಹೊಂದಿರುವ ನೆರೆ ರಾಜ್ಯಗಳು ಲಾಭ ಗಳಿಸುತ್ತವೆ.

ಕರ್ನಾಟಕದ ಆಳುವ ಪಕ್ಷಗಳು ಇದರಿಂದ ಪಾಠ ಕಲಿತು, ತಮ್ಮ ನೀತಿಗಳನ್ನು ಪರಿಷ್ಕರಿಸುತ್ತಾರೆಯೇ ಕಾದು ನೋಡಬೇಕಿದೆ. ಆದರೆ ಜಾಗತಿಕ ದಿಗ್ಗಜ ಉದ್ದಿಮೆಗಳು ದಕ್ಷತೆ ಮತ್ತು ಸುಗಮ ವ್ಯಾಪಾರದ ಮಾರ್ಗಗಳನ್ನು, ಪ್ರದೇಶಗಳನ್ನು ಅರಸುತ್ತಿರುವಾಗ, ರಾಜ್ಯದ ದೀರ್ಘಕಾಲಿಕ ಕೈಗಾರಿಕಾ ಭವಿಷ್ಯವು ಗಂಭೀರವಾದ, ಸುಸ್ಥಿರವಾದ, ಹೂಡಿಕೆದಾರ ಸ್ನೇಹಿ ಆಳ್ವಿಕೆ ಅತ್ಯವಶ್ಯವಾಗಿರುತ್ತದೆ. ಕೇವಲ ರಾಜಕೀಯ ಪ್ರದರ್ಶನ ಅಥವಾ ರಕ್ಷಣಾತ್ಮಕ ಧೋರಣೆ ಉಪಯುಕ್ತವಾಗುವುದಿಲ್ಲ. ಗೂಗಲ್ ನಿರ್ಧಾರವು ಇತ್ತೀಚಿನ ಎಚ್ಚರಿಕೆಯಾಗಿದ್ದು, ನಿಜವಾದ ಪರೀಕ್ಷೆ ಇರುವುದು ಕರ್ನಾಟಕವು ಉಳಿದ ಅವಕಾಶಗಳು ಕೈತಪ್ಪಿ ಹೋಗುವ ಮುನ್ನ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಅವಲಂಬಿಸಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again