ತನ್ನದೇ ದ್ವೇಷಕ್ಕೆ ಬಲಿಯಾದ ಪಾಕಿಸ್ತಾನ ಅವಸಾನದತ್ತ

 ದ್ವೇಷವನ್ನೇ ಆದರಿಸಿದ ದೇಶ ಉಳಿಯವುದಿಲ್ಲ ಎಂಬ ವಾಸ್ತವವನ್ನು ಪಾಕಿಸ್ತಾನ ನಿರೂಪಿಸಿದೆ.

..............

ವಿದ್ಯಮಾನ * ಬಿವಿಸೀ

ಪಾಕಿಸ್ತಾನ ಅವಸಾನದತ್ತ ಸಾಗುತ್ತಿದೆ. ಇದು ವಿದೇಶಿ ಶತ್ರುಗಳಿಂದ ಆಗುತ್ತಿಲ್ಲ ತನ್ನದೇ ಆದ ಮಾದರಿಯಲ್ಲಿ ನಡೆಯುತ್ತಿದೆ. ದೇಶದ ಉಗಮವಾದ ಕ್ಷಣದಿಂದಲೂ, ಪಾಕಿಸ್ತಾನ ಸೌಹಾರ್ದತೆಗಿಂತಲೂ ದ್ವೇಷಕ್ಕೆ, ಮಾನವೀಯತೆಗಿಂತಲೂ ಕ್ರೌರ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಪಾಕಿಸ್ತಾನದ ಮೂಲ ಅಸ್ಮಿತೆಯೇ ಭಾರತವನ್ನು ವಿರೋಧಿಸುವ ನೆಲೆಯಲ್ಲಿ ಸೃಷ್ಟಿಯಾಗಿದ್ದು, ಹಲವು ದಶಕಗಳು ಕಳೆದರೂ ಸಹ, ಈ ದ್ವೇಷ ಯಥಾಸ್ಥಿತಿಯಲ್ಲಿದೆ ಅಥವಾ ಹೆಚ್ಚಾಗಿದೆ. ತತ್ಪರಿಣಾಮವಾಗಿ ದೇಶದ ರಾಜಕೀಯ, ನೈತಿಕ ಹಾಗೂ ಸಾಮಾಜಿಕ ಚೌಕಟ್ಟು ಛಿದ್ರಗೊಂಡಿದೆ. ಪವಿತ್ರ ಭೂಮಿ (`ಪಾಕಿಸ್ತಾನ') ಎಂಬ ಹೆಮ್ಮೆಯಿಂದ ಉಗಮಿಸಿದ ದೇಶವು ವಿಭಜನೆಯ, ಉಗ್ರಗಾಮಿತ್ವದ, ದಿವಾಳಿತನದ ರಾಷ್ಟ್ರವಾಗಿ ರೂಪುಗೊಂಡಿದೆ.

ಪಾಕಿಸ್ತಾನದ ಅಡಿಪಾಯವೇ ಒಂದು ಭ್ರಮೆಯ ಮೇಲೆ ನಿಂತಿದೆ. ಧರ್ಮ ಮಾತ್ರವೇ ದೇಶವನ್ನು ಒಗ್ಗಟ್ಟಿನಿಂದ ಕಾಪಾಡಬಲ್ಲದು ಎಂಬ ಭ್ರಮೆ ಇನ್ನೂ ಕಾಡುತ್ತಿದೆ. ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬಾಳಲು ಸಾಧ್ಯವಿಲ್ಲ ಎಂಬ ಆಧಾರದಲ್ಲಿ ರೂಪುಗೊಂಡ ಎರಡು ರಾಷ್ಟ್ರಗಳ ಕಲ್ಪನೆ ಸೃಷ್ಟಿಸಿದ್ದು, ಭಾರತವನ್ನು ತಿರಸ್ಕರಿಸುವ ಮೂಲಕವೇ ತನ್ನ ಅಸ್ತಿತ್ವವನ್ನು ಕಂಡುಕೊಂಡ ಪಾಕಿಸ್ತಾನ ಎಂಬ ದೇಶವನ್ನು. ಪಾಕಿಸ್ತಾನದ ಆಳುವ ವರ್ಗಗಳು ಇದನ್ನು ತಡೆಗಟ್ಟುವುದು ಅಸಾಧ್ಯ ಎಂದು ಅರಿತಿವೆ. ಭಾರತದ ವಿರುದ್ದ ಇದ್ದ ದ್ವೇಷ ಕ್ರಮೇಣ ಆಂತರಿಕವಾಗಿ ಪರಿಣಮಿಸಿದ್ದು, ತನ್ನದೇ ವೈವಿಧ್ಯತೆಯನ್ನು ನಾಶಪಡಿಸುತ್ತಿದೆ. 1971ರ ಬಂಗಾಳಿಗಳ ನರಮೇಧ ಬಾಂಗ್ಲಾದೇಶದ ಉಗಮಕ್ಕೆ ಕಾರಣವಾಗಿದ್ದು, ಇದು ಧಾರ್ಮಿಕ ಶ್ರದ್ಧೆಯು ಭ್ರಾತೃತ್ವದ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ನಿರೂಪಿಸಿತ್ತು.

ಆಗಿನಿಂದಲೂ ಪಾಕಿಸ್ತಾನ ಆಂತರಿಕವಾಗಿ ಹಾಗೂ ಬಾಹ್ಯ ರೂಪದಲ್ಲಿ ನಿರಂತರವಾದ ಸಂಘರ್ಷಗಳಲ್ಲೇ ತೊಡಗಿದೆ. ಅದರ ಸೇನೆ ಒಂದೇ ಪ್ರಬಲ ಸಂಸ್ಥೆಯಾಗಿದ್ದು, ಭಾರತದೊಡನೆ ಶಾಶ್ವತ ಶತ್ರುತ್ವವನ್ನು ಸಾಧಿಸುವುದನ್ನೇ ನ್ಯಾಯಯುತ ಮಾರ್ಗ ಎಂಬಂತೆ ಅನುಸರಿಸುತ್ತಿದೆ. ಭಯೋತ್ಪಾದಕರಿಗೆ ಆಶ್ರಯ ನೀಡುವುದು, ಗಡಿಯಲ್ಲಿ ಸಂಘರ್ಷಗಳಿಗೆ ಪೆÇ್ರೀತ್ಸಾಹಿಸುವುದು, ಕಾಶ್ಮೀರದ ಬಗ್ಗೆ ರಾಷ್ಟ್ರೀಯ ಭಾವನೆಗಳನ್ನು ಕೆರಳಿಸುವುದು ಪಾಕಿಸ್ತಾನದ ನೀತಿಯಾಗಿದೆ. ಆದರೆ ಭಾರತದ ಮೇಲೆ ಪ್ರಯೋಗಿಸಿದ ಪ್ರತಿಯೊಂದು ಗುಂಡೇಟು ಸಹ ಪಾಕಿಸ್ತಾನದ ಅಂತಃಸತ್ವವನ್ನು ಭೇದಿಸಿದೆ. ಒಂದು ಕಾಲದಲ್ಲಿ ಕಾರ್ಯತಂತ್ರದ ರೂಪದಲ್ಲಿ ತರಬೇತಿ ಪಡೆದ ಜಿಹಾದಿಗಳು ಈಗ ಅಲ್ಲಿಯ ನಗರಗಳ ಮೇಲೆಯೇ ದಾಳಿ ನಡೆಸುತ್ತಿದ್ದಾರೆ. ಇತರರ ವಿನಾಶಕ್ಕಾಗಿ ಹೊತ್ತಿಸಿದ ಬೆಂಕಿ ಈಗ ದಂಗೆಕೋರರ ಮನೆಗಳನ್ನೇ ಸುಡುತ್ತಿದೆ.

ನೆರೆ ರಾಷ್ಟ್ರಗಳೊಡನೆ ಪಾಕಿಸ್ತಾನದ ಸಂಬಂಧಗಳು ಇದೇ ದುರಂತ ಕತೆಯನ್ನು ಸೂಚಿಸುತ್ತವೆ. ಆಘ್ಪಾನಿಸ್ತಾನದೊಡನೆ ಹಲವು ದಶಕಗಳ ಕಾಲ ಮೌನ ಕಲಹವನ್ನು ಮುಂದುವರೆಸಿದ್ದು, ತಾಲಿಬಾನ್‍ಗಳಿಗೆ ತರಬೇತಿ ನೀಡಿ, ಕಾಬುಲ್ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿ, ಭಯೋತ್ಪಾದನೆಯನ್ನು ರಫ್ತು ಮಾಡುವಲ್ಲಿ ನಿರತವಾಗಿದೆ. ಈಗ ಇದೇ ಪೆಡಂಭೂತವೇ ಪೆÇೀಷಕರ ವಿರುದ್ಧ ತಿರುಗಿದ್ದು, ಪಾಕಿಸ್ತಾನದ ಸೈನಿಕರನ್ನು, ನಾಗರಿಕರನ್ನು ಸಮನಾಗಿ ಹತ್ಯೆ ಮಾಡಲು ಆರಂಭಿಸಿದೆ. ಇರಾನ್ ಸಹ ವಿರೋಧಿ ನೆರೆ ರಾಷ್ಟ್ರವಾಗಿದ್ದು, ಇದಕ್ಕೆ ಪಾಕಿಸ್ತಾನದ ಸುನ್ನಿ ಭಯೋತ್ಪಾದಕ ಗುಂಪುಗಳ ಉಪಟಳ ಮತ್ತು ಗಡಿಯಾಚೆಗಿನ ಹಿಂಸೆ ಕಾರಣವಾಗಿದೆ. ಚೀನಾ ಸಹ ಒಂದು ಕಾಲದಲ್ಲಿ ಪಾಕಿಸ್ತಾನದ ಗಟ್ಟಿ ರಕ್ಷಕ ದೇಶವಾಗಿದ್ದುದು, ಈಗ ಇಸ್ಲಮಾಬಾದನ್ನು ಒಂದು ಹೊರೆ ಎಂದು ಭಾವಿಸುತ್ತಿದೆ. ಹಲವು ಪ್ರಮಾದಗಳ ಆಂತರಿಕ ದಂಗೆಗಳ, ಆಳ್ವಿಕೆ ನಡೆಸಲಾಗದ ಪ್ರಕ್ಷುಬ್ಧತೆ ಪಾಕಿಸ್ತಾನದಲ್ಲಿ ಚೀನಾದ ಬಂಡವಾಳ ಹೂಡಿಕೆಯನ್ನೂ, ಕಾರ್ಮಿಕರನ್ನೂ ಪ್ರಭಾವಿಸಿದೆ.

ಆಂತರಿಕವಾಗಿ ಪಾಕಿಸ್ತಾನದ ವಿಭಜನೆಗಳು ಸಹ ಅಷ್ಟೇ ವಿನಾಶಕಾರಿಯಾಗಿವೆ. ಬಲೂಚಿಸ್ತಾನದಲ್ಲಿ ಉಲ್ಬಣಿಸಿರುವ ಸ್ವಾತಂತ್ರ್ಯದ ಕೂಗು ಶೋಷಣೆಯ ವಿರುದ್ಧ ಹೋರಾಟವಾಗಿ ಪರಿಣಮಿಸಿದ್ದು, ಪಶ್ತೂನ್‍ಗಳು ಸೇನೆಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದಾರೆ, ಸಿಂಧ್‍ಪ್ರಾಂತ್ಯವು ಪಂಜಾಬಿಗಳ ಪ್ರಾಬಲ್ಯದಲ್ಲಿ ನಲುಗುತ್ತಿದೆ. ಶಿಯಾ ಮತ್ತು ಅಹಮದಿ ಅಲ್ಪಸಂಖ್ಯಾತರು ಶುದ್ಧತೆಯ ಹೆಸರಿನಲ್ಲಿ ಬೇಟೆಗೊಳಗಾಗುತ್ತಿದ್ದಾರೆ. ಪ್ರಭುತ್ವವು ಪ್ರತಿರೋಧಗಳನ್ನು ಹಿಂಸೆಯ ಮೂಲಕ ಹತ್ತಿಕ್ಕುತ್ತಿದ್ದು ಸ್ಮಶಾನ ಮೌನ ಆವರಿಸಿದೆ. ಪಾಕಿಸ್ತಾನಕ್ಕೆ ಯಾವುದೇ ಸಮಾನ ಅಸ್ಮಿತೆಯಾಗಲೀ, ಪರಸ್ಪರ ಹಂಚಿಕೊಳ್ಳುವ ಕನಸುಗಳಾಗಲೀ ಉಳಿದಿಲ್ಲ. ಬಂದೂಕುಗಳು ಮತ್ತು ಉಪದೇಶಗಳಿಂದಲೇ ನಿರ್ವಹಿಸಲ್ಪಡುತ್ತಿರುವ ಕುಂದುಕೊರತೆಗಳ ಪೈಪೆÇೀಟಿ ಎದ್ದು ಕಾಣುವಂತಿದೆ.

ಆರ್ಥಿಕವಾಗಿಯೂ ಪಾಕಿಸ್ತಾನ ತನ್ನದೇ ಆದ ಭ್ರಮಾಲೋಕದಿಂದ ನಲುಗಿಹೋಗುತ್ತಿದ್ದು, ಐಎಮ್‍ಎಫ್ ಒದಗಿಸುವ ಹಣಕಾಸು ನೆರವು, ವಿದೇಶಿ ನೆರವು, ಚೀನಾ ಮತ್ತು ಕೊಲ್ಲಿ ರಾಷ್ಟ್ರಗಳ ನೆರವನ್ನು ಆಶ್ರಯಿಸಿದೆ. ಇದಕ್ಕೆ ತೆತ್ತ ಬೆಲೆ ರಾಜತಾಂತ್ರಿಕ ಅವಕಾಶಗಳು ಮತ್ತು ದೇಶವನ್ನು ನಿರಂತರ ಶೋಷಣೆಗೊಳಪಡಿಸುವ ನೀತಿಗಳು. ಭ್ರಷ್ಟಾಚಾರ ಮತ್ತು ಸೇನೆಯ ದುರಾಸೆ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದು, ಜನತೆ ಮುಲ್ಲಾಗಳು ಮತ್ತು ಸೇನಾಧಿಕಾರಿಗಳ ನಡುವೆ ಸಿಲುಕಿ ವಲಸೆ ಹೋಗುವುದನ್ನು ಬಿಟ್ಟು ಬೇರಾವುದೇ ಪಾರಾಗುವ ಹಾದಿಗಳನ್ನು ಕಾಣಲಾಗುತ್ತಿಲ್ಲ.

ಪಾಕಿಸ್ತಾನದ ಅವಸಾನ ಹಠಾತ್ತನೆ ಆಗುತ್ತಿರುವುದಲ್ಲ, ಆತ್ಮಘಾತುಕವಾದ ಹಲವು ವರ್ಷಗಳ ನಡೆಯ ಫಲಿತಾಂಶವಾಗಿದೆ. ತಾನು ಒಂದು ಸಮಯದಲ್ಲಿ ಸಂಭ್ರಮಿಸಿದ ದ್ವೇಷದಿಂದ ಸ್ವತಃ ವಿಷಪ್ರಾಶನ ಮಾಡಿಕೊಂಡ ದೇಶವಾಗಿದೆ ಪಾಕಿಸ್ತಾನ. ನೆರೆ ರಾಷ್ಟ್ರಗಳೊಡನೆ ಶಾಂತಿ, ಸೌಹಾರ್ದತೆಯನ್ನು ನಿರಾಕರಿಸಿ, ತನ್ನ ಗಡಿಗಳ ಒಳಗೇ ವೈವಿಧ್ಯತೆಯನ್ನು ನಾಶಪಡಿಸಿ, ಹಿಂಸೆಯನ್ನೇ ಪವಿತ್ರ ಎಂದು ಪರಿಗಣಿಸಿ ತನ್ನದೇ ಆದ ಭಾರಕ್ಕೆ ನಲುಗಿಹೋಗುತ್ತಿದೆ. ದ್ವೇಷವನ್ನೇ ಆದರಿಸಿದ ದೇಶ ಉಳಿಯವುದಿಲ್ಲ ಎಂಬ ವಾಸ್ತವವನ್ನು ಪಾಕಿಸ್ತಾನ ನಿರೂಪಿಸಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again