ಧರ್ಮಸ್ಥಳದಲ್ಲಿನ ಶವಗಳನ್ನು 65 ಕಿ ಮೀ ದೂರದ ಖಾಸಗಿ ಕೆ ಎಸ್ ಹೆಗ್ಡೆ ಕಾಲೇಜು ಆಸ್ಪತ್ರೆಗೆ ಯಾಕೆ ಕಳಿಸಲಾಗುತ್ತಿತ್ತು?

 


ನಿಷ್ಪಕ್ಷಪಾತ, ಪಾರದರ್ಶಕ ತನಿಖೆಯೊಂದೇ ವ್ಯವಸ್ಥೆಯ ಮತ್ತು ಸತ್ತವರ ಪಾವಿತ್ರ್ಯತೆಯ ವಿಶ್ವಾಸಾರ್ಹತೆಯನ್ನು ಕಾಪಾಡಬಲ್ಲದು.

* ಸಂಪಾದಕೀಯ

ಧರ್ಮಸ್ಥಳದ ಸುತ್ತಲಿನ ವಿವಾದದಲ್ಲಿ ಒಂದು ಪ್ರಕ್ಷುಬ್ಧ ಬೆಳವಣಿಗೆ ಲಾಗಾಯ್ತಿನಿಂದಲೂ ನಡೆದಿದೆ. ಅಸಹಜ ಸಾವುಗಳ ಸಂಬಂಧಿತ ಶವಗಳನ್ನು ಪರೀಕ್ಷೆಗಾಗಿ 65 ಕಿಲೋಮೀಟರ್ ದೂರದಲ್ಲಿರುವ ದೇರಳಕಟ್ಟೆಯಲ್ಲಿರುವ ಖಾಸಗಿ ವೈದ್ಯಕೀಯ ಸಂಸ್ಥೆಯಾದ ಕೆ ಎಸ್ ಹೆಗ್ಡೆ ವೈದ್ಯಕೀಯ ಕಾಲೇಜಿಗೆ ಏಕೆ ಕಳಿಸಲಾಗುತ್ತಿತ್ತು, ಇದನ್ನು ಘಟನೆ ನಡೆದ ಸ್ಥಳದ ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಯಾಕೆ ಮಾಡಿಸುತ್ತಿರಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ಬೆಳ್ತಂಗಡಿಯಲ್ಲಿ ಸರ್ಕಾರಿ ಆಸ್ಪತ್ರೆ ಇದ್ದು, ಮರಣೋತ್ತರ ಪರೀಕ್ಷೆಯ ಸೌಲಭ್ಯವನ್ನು ಹೊಂದಿದೆ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಸಂಸ್ಥೆಯಾಗಿದೆ. ಆದರೂ ಪೆÇಲೀಸರಿಗಾಗಲೀ, ಧರ್ಮಸ್ಥಳದ ದೇವಾಲಯ ಆಡಳಿತ ಮಂಡಲಿಗಾಗಲೀ ಸ್ಪಷ್ಟೀಕರಣ ನೀಡದ ರೀತಿಯಲ್ಲಿ, ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆ ಮಹತ್ವದ್ದೆನಿಸಿದೆ.

ಇದು ಪ್ರಶ್ನಾರ್ಹ ಆಯ್ಕೆಯಾಗಿತ್ತು ಮಾತ್ರವಲ್ಲ, ತರ್ಕಹೀನವೂ ಆಗಿದ್ದು, ಶವಸಂಸ್ಕಾರ ಕುರಿತ ಪ್ರಕ್ರಿಯೆಗಳ ಬಗ್ಗೆಯೇ ಗಂಭೀರ ಸ್ವರೂಪದ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಅಸಹಜ ಸಾವುಗಳ ಮರಣೋತ್ತರ ಪರೀಕ್ಷೆಯನ್ನು ಪಾರದರ್ಶಕತೆ ಮತ್ತು ಕಾನೂನು ಮನ್ನಣೆಯ ಸಲುವಾಗಿ ಸರ್ಕಾರಿ ಆಸ್ಪತ್ರೆಗಳಲ್ಲೇ ಮಾಡಬೇಕಾಗುತ್ತದೆ. ಇತರ ಯಾವುದೇ ಮಾರ್ಗಗಳನ್ನು ಅನುಸರಿಸಿದಲ್ಲಿ ಮನಗಾಣುವ ಸೂಕ್ತ ವಿವರಣೆ ನೀಡಬೇಕಾಗುತ್ತದೆ. ಆದರೆ ಕೆ ಎಸ್ ಹೆಗ್ಡೆ ಆಸ್ಪತ್ರೆ ನಿರ್ವಹಿಸಿದ ಶವ ಪರೀಕ್ಷಾ ಪ್ರಕ್ರಿಯೆ ಹೊಂದಿದ ಪ್ರಕರಣದಲ್ಲಿ ಯಾವುದೇ ವಿವರಣೆಗಳನ್ನು ನೀಡಲಾಗಿಲ್ಲ.

ಇದೆಲ್ಲದರ ಕುರಿತಾಗಿ ಸಾರ್ವಜನಿಕರ ಅನುಮಾನ ಸಹಜವಾಗಿ ಅರ್ಥವಾಗುವಂತಹುದು. ಸಾಮಾಜಿಕ ಮಾಧ್ಯಮಗಳ ಚರ್ಚೆಗಳಲ್ಲಿ ಮತ್ತು ಯು-ಟ್ಯೂಬರ್ ವರದಿಗಳಲ್ಲಿ, ಧರ್ಮಸ್ಥಳದ ಪೆÇಲೀಸರು ಮತ್ತು ಖಾಸಗಿ ಆಸ್ಪತ್ರೆಯ ನಡುವೆ ಬಹಿರಂಗಪಡಿಸದ ಒಪ್ಪಂದವೇನಾದರೂ ಇದೆಯೇ ಎಂಬ ಅನುಮಾನವನ್ನು  ವ್ಯಕ್ತಪಡಿಸಲಾಗುತ್ತಿದೆ. ವಾರೀಸುದಾರರಿಲ್ಲದ ಅಥವಾ ಹಾಗೆ ಭಾವಿಸಲಾದ ದೇಹಗಳಿಂದ ಅಂಗಾಂಗಗಳ ಲಾಭ ಪಡೆಯುವ ಯೋಜನೆಯೇನಾದರೂ ಇದೆಯೇ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇದು ಗಂಭೀರವಾದ ತನಿಖೆಗೆ ಒಳಪಡಬೇಕಿದೆ. ಪ್ರಜಾಸತ್ತಾತ್ಮಕ ಸಮಾಜದಲ್ಲಿ ಈ ರೀತಿಯ ಆರೋಪಗಳನ್ನು ಊಹಾಪೆÇೀಹ ಎಂದು ಅಲ್ಲಗಳೆಯಲಾಗುವುದಿಲ್ಲ. ವಿಶ್ವಾಸ ಕುಸಿದು ಹೋದಾಗ ಈ ಪ್ರಶ್ನೆ ಉದ್ಭವಿಸುತ್ತದೆ.

ಧರ್ಮಸ್ಥಳದಲ್ಲಿ ಸಂಭವಿಸಿರುವ ಅಸಹಜ ಸಾವುಗಳ ವರದಿಯು ಅಹಿತಕರ ಸನ್ನಿವೇಶವನ್ನು ಮತ್ತಷ್ಟು ಜಟಿಲಗೊಳಿಸಿದೆ. ಸಾರ್ವಜನಿಕರಿಗೆ ಮಾಹಿತಿ ಇಲ್ಲದಿರುವುದು, ಈ ಸಾವುಗಳನ್ನು ಹೇಗೆ ವರ್ಗೀಕರಿಸಲಾಗಿದೆ, ತನಿಖೆ ಮಾಡಲಾಗಿದೆ, ವೈದ್ಯಕೀಯವಾಗಿ ನಿರ್ವಹಿಸಲಾಗಿದೆ ಎಂಬ ಅನುಮಾನಗಳನ್ನು ಹುಟ್ಟುಹಾಕುವುದಲ್ಲದೆ, ಇದು ವ್ಯವಸ್ಥಿತವಾಗಿ ಅಸಹಜ ಸಾವುಗಳ ಪ್ರಕರಣಗಳನ್ನು ಮುಚ್ಚಿಡುವ ತಂತ್ರವಾಗಿಯೂ ಕಾಣತೊಡಗಿದೆ. ಅಸಹಜ ಸಾವುಗಳಲ್ಲಿ ಪ್ರಬಲ ಸಂಸ್ಥೆಗಳು ಮತ್ತು ಸ್ಥಳೀಯ ಜಾಲಗಳು ಭಾಗಿಯಾಗಿರುವುದರಿಂದ, ಶವ ಪರೀಕ್ಷೆಗಳನ್ನು ಪ್ರಭಾವಿಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಇದರ ಉದ್ದೇಶ ಮತ್ತು ಉಪಯೋಗಗಳ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸುತ್ತವೆ.

ಕರ್ನಾಟಕ ಸರ್ಕಾರವು ಈ ವಿಚಾರವನ್ನು ಕೂಡಲೇ ಗಮನಿಸಿ ಪಾರದರ್ಶಕವಾಗಿ ಪರಾಮರ್ಶಿಸಬೇಕಿದೆ. ಸ್ಪಷ್ಟವಾದ, ಸ್ವತಂತ್ರ ತನಿಖೆಯನ್ನು ಆದೇಶಿಸುವ ಮೂಲಕ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಿಶೇಷ ತನಿಖಾ ದಳಕ್ಕೆ ಇದನ್ನು ವಹಿಸಬೇಕಿದೆ. ಎಸ್‍ಐಟಿ ಈಗಾಗಲೇ ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಯನ್ನು ನಡೆಸುತ್ತಿದ್ದು, ಈಗ ಪ್ರತಿಯೊಂದು ದೇಹವನ್ನೂ ಗುರುತಿಸಿ ಪ್ರತಿಯೊಂದು ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಲಾಗಿತ್ತೇ, ದೇಹದ ವರ್ಗಾವಣೆಗೆ ಸಮ್ಮತಿಸಲಾಗಿತ್ತೇ, ಪ್ರತಿಯೊಂದು ವರದಿಯನ್ನು ಕಾಪಾಡಲಾಗಿದೆಯೇ ಎಂಬುದನ್ನು ಕಂಡುಹಿಡಿಯಬೇಕಿದೆ. ಪೆÇಲೀಸ್ ಇಲಾಖೆ, ಆಸ್ಪತ್ರೆ ಮತ್ತು ಮಧ್ಯವರ್ತಿಗಳನ್ನು ಉತ್ತರದಾಯಿಗಳನ್ನಾಗಿ ಪರಿಗಣಿಸಿ, ಇವರ ಪಾತ್ರವನ್ನು ತನಿಖೆಗೊಳಪಡಿಸಬೇಕಿದೆ.

ಇದರಿಂದ ಸ್ಪಷ್ಟವಾದ ಮಾಹಿತಿ ಹೊರಬರುತ್ತದೆ. ಅನುಮಾನಗಳು ಪರಿಹಾರವಾಗುತ್ತವೆ. ಈ ವೈದ್ಯಕೀಯ ಪ್ರಕ್ರಿಯೆಗಳ ಹಿಂದೆ ಹೊಂದಾಣಿಕೆ, ರಾಜಿ, ಸಹಭಾಗಿತ್ವ ಅಥವಾ ಲಾಭ ಗಳಿಸುವ ಉದ್ದೇಶಗಳೇನಾದರೂ ಕಂಡುಬಂದಲ್ಲಿ, ಅದು ಸಾರ್ವಜನಿಕ ವಿಶ್ವಾಸಕ್ಕೆ ಮಹಾದ್ರೋಹ ಬಗೆದಂತಾಗುತ್ತದೆ. ಏನೇ ಆದರೂ, ಮೌನವಾಗಿರುವುದು ಆಯ್ಕೆಯಾಗುವುದಿಲ್ಲ. ನಿಷ್ಪಕ್ಷಪಾತ, ಪಾರದರ್ಶಕ ತನಿಖೆಯೊಂದೇ ವ್ಯವಸ್ಥೆಯ ಮತ್ತು ಸತ್ತವರ ಪಾವಿತ್ರ್ಯತೆಯ ವಿಶ್ವಾಸಾರ್ಹತೆಯನ್ನು ಕಾಪಾಡಬಲ್ಲದು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again