ಯುಟ್ಯೂಬರ್ಸ್ ಮೇಲೆ ಇ ಡಿ ದಾಳಿ - ಸಂತ್ರಸ್ತರಿಗೆ ಸಿಗದ ನ್ಯಾಯ

 ಧರ್ಮಸ್ಥಳದ ಡಿ ಗ್ಯಾಂಗ್‍ನ ದುಷ್ಟ ಕೃತ್ಯಗಳ ಅನೇಕ ವಾಸ್ತವಗಳನ್ನು ಬಯಲಿಗೆಳೆಯುತ್ತಿದ್ದ ಯು ಟ್ಯೂಬರ್ಸ್ ಮತ್ತು ಸಾಮಾಜಿಕ ಮಾಧ್ಯಮಗಳ ಕಾರ್ಯಕರ್ತರ ವಿರುದ್ಧ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯದ (ಇ ಡಿ) ದಾಳಿ ನಡೆಸುವ ಮೂಲಕ, ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಹೂಡಿದಂತಾಗಿದೆ. ಯು ಟ್ಯೂಬ್‍ನಲ್ಲಿ ಪ್ರಸಾರಕರು ಯಾವುದೇ ವಿಷಯವನ್ನು ಬಿತ್ತರಿಸಲು ಸ್ಮಾರ್ಟ್ ಫೆÇೀನ್, ಅಂತರ್ಜಾಲ ಸಂಪರ್ಕ ಮತ್ತು  ಧೈರ್ಯ ಇದ್ದರೆ ಸಾಕು. ಈ ಏಕಾಂಗಿ ದನಿಗಳ ಹಿಂದೆ ಅಕ್ರಮ ಹಣ ಸಾಗಾಣಿಕೆಯ ವ್ಯವಹಾರ ಇದೆ ಎಂದು ಪರಿಗಣಿಸುವುದು ಅಸಂಬದ್ಧವಷ್ಟೇ ಅಲ್ಲ, ಉದ್ದೇಶಪೂರ್ವಕವಾಗಿ ಗಮನ ಬೇರೆಡೆ ಸೆಳೆಯುವ ತಂತ್ರವಾಗಿ ಕಾಣುತ್ತದೆ.

ಇಲ್ಲಿರುವ ವಾಸ್ತವ ವಿಷಯ ಎಂದರೆ, ಧರ್ಮಸ್ಥಳದಲ್ಲಿ ಹಲವು ವರ್ಷಗಳಲ್ಲಿ ನಡೆದಿದೆ ಎನ್ನಲಾಗುವ ಅತ್ಯಾಚಾರಗಳು ಮತ್ತು ಹತ್ಯೆಗಳನ್ನು ಎಸ್‍ಐಟಿ ತನಿಖೆಗೆ ಒಳಪಡಿಸುವುದು. ಇದರಲ್ಲಿ ಮುಖ್ಯವಾದುದು ಸೌಜನ್ಯ ಪ್ರಕರಣ. ಈ ತನಿಖೆಯು ಮೊತ್ತಮೊದಲ ಬಾರಿಗೆ ಸಂರಕ್ಷಿತ ಶಕ್ತಿ ಕೇಂದ್ರಕ್ಕೆ ನಡುಕ ಹುಟ್ಟಿಸಿದೆ. ಸತ್ಯಾಂಶ ಹೊರಬರಲು ಅವಕಾಶ ನೀಡುವುದರ ಬದಲು ಬಿಜೆಪಿ ಮಾತನಾಡುವವರನ್ನು ಭೀತಿಗೊಳಪಡಿಸಲು ಯತ್ನಿಸುತ್ತಿದೆ. ಸೋಷಿಯಲ್ ಮೀಡಿಯಾವಾಲಾಗಳಿಗೆ ಹಣಕಾಸು ಪೂರೈಕೆಯ ಪಿತೂರಿ ನಡೆದಿದೆ ಎನ್ನುವ ಕಲ್ಪಿತ ಆರೋಪಗಳನ್ನು ಹೊರಿಸುವ ಮೂಲಕ, ಬಿಜೆಪಿ ಕರ್ನಾಟಕದ ಅತ್ಯಂತ ಪ್ರಬಲ ಸಂಸ್ಥೆಯೊಂದನ್ನು ರಕ್ಷಿಸಲು ಮುಂದಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹ ಇದಕ್ಕೆ ಬೆಂಗಾವಲಾಗಿ ನಿಂತಿದ್ದಾರೆ.

ಇದು ಸರಕಾರಿ ಸಂಸ್ಥೆಗಳ ದುರುಪಯೋಗದ ಅಪಾಯಕಾರಿ ವಿಧಾನವಾಗಿದೆ. ಇ ಡಿ ಮತ್ತು ಎನ್‍ಐಎ ಭಯೋತ್ಪಾದಕರ ಹಣದ ಮೂಲಗಳನ್ನು, ಜಾಗತಿಕ ಅಪರಾಧಗಳನ್ನು ಶೋಧಿಸಲು ಇರುವ ಸಂಸ್ಥೆಗಳು, ಸಾಧಾರಣ ನಾಗರಿಕರು ವಿಡಿಯೋಗಳನ್ನು ಅವರ ಮನೆಗಳಲ್ಲೇ ಚಿತ್ರೀಕರಿಸಿದ್ದನ್ನು ಶೋಧಿಸಲು ಇರುವುದಲ್ಲ. ಈ ಸಂಸ್ಥೆಗಳನ್ನು ಸತ್ಯಕ್ಕಾಗಿ ಹೋರಾಡುವವರ ವಿರುದ್ಧ ಬಳಸುವುದು, ಪ್ರತಿರೋಧವನ್ನೇ ಅಪರಾಧವನ್ನಾಗಿಸುತ್ತದೆ.

ಆದರೆ ಜನರು ಮೂರ್ಖರಲ್ಲ. ಇದರ ತೆರೆಮರೆಯಲ್ಲಿರುವ ವಾಸ್ತವಗಳನ್ನು ಗಮನಿಸುತ್ತಾರೆ. ದುರ್ಬಲರನ್ನು ಶಿಕ್ಷಿಸಿ, ಬಲಾಢ್ಯರನ್ನು ರಕ್ಷಿಸುವ ಹುನ್ನಾರವನ್ನು ಕಾಣುತ್ತಾರೆ. ಬಿಜೆಪಿ ತನ್ನ ಈ ರೀತಿ ಗಮನ ಸೆಳೆಯುವ ತಂತ್ರಗಳ ಮೂಲಕ ನ್ಯಾಯದ ಆಗ್ರಹವನ್ನು ಅಳಿಸಿಹಾಕಲು ಯೋಚಿಸುವುದು, ಅದು ಜನರ ನಾಡಿಮಿಡಿತವನ್ನು ಗ್ರಹಿಸಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ತನ್ನ ಮಿತ್ರರನ್ನು ರಕ್ಷಿಸುವುದರ ಬದಲು ಬಿಜೆಪಿಯ ಈ ಸಿನಿಕತನದ ಆಟವು ಪಕ್ಷಕ್ಕೇ ಮುಳುವಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI