ಎನ್‍ಐಎ ತನಿಖೆಗಾಗಿ ಅಬ್ಬರವೀಗ ಮೌನ
ಡಿ-ಗ್ಯಾಂಗ್ ಪರ ಬೊಬ್ಬೆ ಹೊಡೆಯುವುದು ಮತ್ತು ಮಾಧ್ಯಮ ಪ್ರಚಾರಗಳು ಶಾಶ್ವತವಾಗಿ ಸತ್ಯವನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ.
ಕೆಲವು ವಾರಗಳ ಕಾಲ ಸಂಘಪರಿವಾರ ಮತ್ತು ಅದರ ಪರ ಪಿಟೀಲು ಬಾರಿಸುವ ಮಾಧ್ಯಮ ವೇದಿಕೆಗಳು ಧರ್ಮಸ್ಥಳದ ಹಗರಣಗಳ ಬಗ್ಗೆ ಎನ್‍ಐಎ ತನಿಖೆಯನ್ನು ಆಗ್ರಹಿಸುವುದರಲ್ಲಿ ತೊಡಗಿದ್ದವು. ಇವರ ಉದ್ದೇಶ ಇದ್ದುದು ಸತ್ಯವನ್ನು ಗುರುತಿಸಲು ಅಲ್ಲ; ಬದಲಾಗಿ, ಎಸ್‍ಐಟಿ ತನಿಖೆಯಿಂದ ಗಮನ ಬೇರೆಡೆಗೆ ಸೆಳೆಯುವುದಾಗಿತ್ತು. ಏಕೆಂದರೆ ಎಸ್‍ಐಟಿ ತನಿಖೆ ತನ್ನ ಅಂತಿಮ ಹಂತವನ್ನು ತಲುಪುತ್ತಿದ್ದು, ಸರಣಿ ಅತ್ಯಾಚಾರ ಮತ್ತು ಹತ್ಯೆಗಳ, ದೇವಸ್ಥಾನಕ್ಕೆ ಸಂಬಂಧಿಸಿದ ಪಾತಕಿಗಳನ್ನು ಗುರುತಿಸುವ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದೆ. ಇವರ ಲೆಕ್ಕಾಚಾರ ಎಂದರೆ, ಒಮ್ಮೆ ಎನ್‍ಐಎ ಮಧ್ಯಪ್ರವೇಶಿಸಿದರೆ, ಎಸ್‍ಐಟಿಯನ್ನು ಬದಿಗೆ ಸರಿಸಲಾಗುತ್ತದೆ, ತಮಗೆ ಅನುಕೂಲಕರವಾದ ವರದಿಯನ್ನು ತಮಗೆ ಬೇಕಾದಂತೆ ಬಳಸಬಹುದು ಎನ್ನುವುದಾಗಿತ್ತು. ಆದರೆ ಈ ಪ್ರಸ್ತಾವನೆ ಮತ್ತು ಯೋಜನೆ ಈಗ ವಿಫಲವಾದಂತೆ ಕಾಣುತ್ತಿದ್ದು, ಕೇಂದ್ರ ಗೃಹ ಸಚಿವಾಲಯದ ಮಾಹಿತಿಯ ಅನುಸಾರ, ಅಮಿತ್ ಶಾ ಎನ್‍ಐಎ ತನಿಖೆಯ ಪ್ರಸ್ತಾವನೆಯನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಹಿಂಜರಿತಕ್ಕೆ ನಾಲ್ಕು ಕಾರಣಗಳನ್ನು ಗುರುತಿಸಬಹುದು.
ಅಸಾರಾಂ ಪ್ರಕರಣದ ಪೂರ್ವನಿದರ್ಶನ
ಮೊದಲನೆ ಕಾರಣ ಎಂದರೆ, ಗುಜರಾತ್‍ನ ಅಸಾರಾಂ ಬಾಪು ಪ್ರಕರಣ. ಮೋದಿ ಮತ್ತು ಶಾ ಈ ದೇವಮಾನವನಿಗೆ ಒತ್ತಾಸೆಯಾಗಿ ನಿಂತಿದ್ದುದೂ ಉಂಟು. ಆದಾಗ್ಯೂ ಅಸಾರಾಂ ಪೆÇೀಕ್ಸೋ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದರು. ಇದು ಬಿಜೆಪಿಯನ್ನು ರಾಜಕೀಯವಾಗಿ ಮುಜುಗರಕ್ಕೀಡು ಮಾಡಿತ್ತು. ವಿವಾದಾಸ್ಪದ ದೇವಮಾನವನೊಂದಿಗೆ ನಿಕಟವರ್ತಿಗಳಾಗಿ ಗುರುತಿಸಿಕೊಳ್ಳುವುದು ಅಪಾಯಕಾರಿ ಎನ್ನುವುದು ಸ್ಪಷ್ಟವಾಗಿದೆ. ಇದೇ ತಪ್ಪನ್ನು ಧರ್ಮಸ್ಥಳದಲ್ಲಿ ಮಾಡಿದರೆ, ಅದೇ ರೀತಿಯ ಹಾನಿಯಾಗುವುದು ನಿಶ್ಚಿತ.
ಕೇಂದ್ರ ರಾಜ್ಯ ಸಂಬಂಧಗಳ ಸೂಕ್ಷ್ಮತೆ
ಎರಡನೆ ಕಾರಣ ಎಂದರೆ, ಎನ್‍ಐಎ ಮೂಲಕ ಒಂದು ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ತನಿಖೆ ನಡೆಸುವುದರಿಂದ ರಾಜಕೀಯ ಹಸ್ತಕ್ಷೇಪದ ಆಪಾದನೆಗಳನ್ನು ಎದುರಿಸಬೇಕಾಗುತ್ತದೆ. ಕರ್ನಾಟಕವು ಕಾಂಗ್ರೆಸ್ ಆಡಳಿತದಲ್ಲಿದ್ದು, ವಿರೋಧ ಪಕ್ಷದ ಸರ್ಕಾರ ಇರುವ ರಾಜ್ಯದಲ್ಲಿ ಬಿಜೆಪಿ ಮಧ್ಯಪ್ರವೇಶಿಸಿ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ ಎಂಬ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಈ ಅನಗತ್ಯ ವಿವಾದ ಬಿಜೆಪಿಯ ಪಾಲಿಗೆ ಆತ್ಮಹತ್ಯಾಕಾರಿಯಾಗಿ ಪರಿಣಮಿಸುತ್ತದೆ.
ವಿದೇಶಿ ಕೈವಾಡದ ಪೆÇಳ್ಳು ಆಪಾದನೆ
ಮೂರನೆಯದಾಗಿ, ಧರ್ಮಸ್ಥಳದ ಹಗರಣಗಳಲ್ಲಿ ಮೂರನೆಯ ಶಕ್ತಿ, ವಿದೇಶಿ ಕೈವಾಡ ಇದೆ ಎಂಬ ಆರೋಪ ಹುರುಳಿಲ್ಲದ್ದು. ಯು ಟ್ಯೂಬ್ ಚಾನೆಲ್ ನಡೆಸುವುದು ಅಥವಾ ವಿಮರ್ಶಾತ್ಮಕ ಬರಹ ಪ್ರಕಟಿಸುವುದು ಖಯಾಲಿಯ ವಿಚಾರ. ಅದಕ್ಕೆ ವಿದೇಶೀ ಸಂಘಟನೆಗಳ ಹಣ ಬೇಕಾಗಿಲ್ಲ. ಇದನ್ನು ಅಂತಾರಾಷ್ಟ್ರೀಯ ಪಿತೂರಿಗೆ ತಗುಲಿ ಹಾಕುವುದು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸಬೇಕಾಗುತ್ತದೆ, ಅಪಹಾಸ್ಯಕ್ಕೀಡಾಗಬೇಕಾಗುತ್ತದೆ.
ಸಾರ್ವಜನಿಕ ಅಹವಾಲುಗಳು-ಗುಪ್ತಚರ ವರದಿ
ನಾಲ್ಕನೆಯದಾಗಿ, ಗೃಹ ಸಚಿವಾಲಯವು ಎನ್‍ಜಿಒಗಳಿಂದ, ನಾಗರಿಕ ಸಂಘಟನೆಗಳಿಂದ ಮತ್ತು ಕಾಳಜಿ ಇರುವ ಜನರಿಂದ ನೂರಾರು ಅರ್ಜಿಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಹೆಗ್ಗಡೆ ಕುಟುಂಬದ ತಪ್ಪು ಒಪ್ಪುಗಳನ್ನು ಪ್ರಸ್ತಾಪಿಸಲಾಗಿದೆ. ಇವೆಲ್ಲವೂ ಪ್ರಕಟವಾಗದೆ ಇದ್ದರೂ, ಅದಕ್ಕೆ ಒಂದು ಪ್ರಾಮುಖ್ಯತೆ, ಬಲ ಇದೆ. ಗುಪ್ತಚರ ಇಲಾಖೆಯ ಪರಾಮರ್ಶೆಯೂ ಸಹ ಎನ್‍ಐಎ ತನಿಖೆ ಅನವಶ್ಯಕ ಎಂದು ತಿಳಿಸಿದ್ದು ಎಸ್‍ಐಟಿ ತನಿಖೆಯನ್ನು ಯಾವುದೇ ಅಡೆತಡೆ ಇಲ್ಲದೆ ನಡೆಸಲು ಸೂಚಿಸಲಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಸ್‍ಐಟಿ ತನಿಖೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ, ಹಸ್ತಕ್ಷೇಪ ಮಾಡುವುದಿಲ್ಲ ಎಂದು ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಂದು ಕುಟುಂಬದ ಪರ ವಹಿಸಲು ತನಿಖೆ ಆದೇಶಿಸುವುದು ರಾಜಕೀಯ ಆತ್ಮಹತ್ಯೆಯಂತಾಗುತ್ತದೆ.
ಈ ಕಾರಣಗಳಿಂದ, ಕೇಂದ್ರ ಸರ್ಕಾರವು ಪರಿವಾರದ ತುತ್ತೂರಿಗಳು ತೆಪ್ಪಗಿರಲು ಸೂಚಿಸಿದೆ. ಬಿಜೆಪಿ ಮತ್ತು ಸಂಘಪರಿವಾರದ ಅಭಿಪ್ರಾಯಗಳು ಮೊದಲು ಎನ್‍ಐಎ ತನಿಖೆಯ ಬಗ್ಗೆ ಅಬ್ಬರಿಸುತ್ತಿದ್ದರೂ ಈಗ ತೆಪ್ಪಗಾಗಿವೆ. ಯಜಮಾನರು ಮೌನವಾಗಿರಲು ಹೇಳಿದಾಗ, ಅವರ ಮಾಧ್ಯಮ ಬೆಂಬಲಿಗರ ವಂದಿಮಾಗಧ ದನಿಗಳೂ ತೆಪ್ಪಗಾಗುತ್ತವೆ.
ಡಿ ಗ್ಯಾಂಗ್ ಮಟ್ಟಿಗೆ ಇದು ಗಂಭೀರ ಹಿನ್ನಡೆಯಾಗಿದೆ. ರಾಜಕೀಯ ರಕ್ಷಾ ಕವಚ ಇಲ್ಲದೆ, ಈಗ ಎಸ್‍ಐಟಿಯ ರಾಜಿಯಾಗದ ತನಿಖೆಯನ್ನು ಎದುರಿಸಬೇಕಿದೆ. ಇಲ್ಲಿ ಕಲಿಯಬೇಕಾದ ಪಾಠ ಎಂದರೆ, ಡಿ-ಗ್ಯಾಂಗ್ ಪರ ಬೊಬ್ಬೆ ಹೊಡೆಯುವುದು ಮತ್ತು ಮಾಧ್ಯಮ ಪ್ರಚಾರಗಳು ಶಾಶ್ವತವಾಗಿ ಸತ್ಯವನ್ನು ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಅಧಿಕಾರ ನ್ಯಾಯವನ್ನು ವಿಳಂಬ ಮಾಡಬಹುದು ಆದರೆ ಅಳಿಸಲಾಗುವುದಿಲ್ಲ. ಎಸ್‍ಐಟಿ ತನಿಖೆಯ ಅಂತಿಮ ಹಂತ ತಲುಪುತ್ತಿರುವಾಗಲೂ ತಮ್ಮನ್ನು ಮುಟ್ಟಲಾಗುವುದಿಲ್ಲ ಎಂಬ ಭ್ರಮೆಯಲ್ಲಿದ್ದವರೂ ಸಹ, ಮನುಷ್ಯ ಪ್ರಸ್ತಾಪಿಸುವುದನ್ನು ದೇವರು ನಿಷ್ಕರ್ಷೆ ಮಾಡುತ್ತಾನೆ ಎಂಬ ನಾಣ್ಣುಡಿಯನ್ನು ಅರ್ಥಮಾಡಿಕೊಳ್ಳುವಂತಾಗಿದೆ.
Comments
Post a Comment