ಧರ್ಮಸ್ಥಳದ ಮೇಲೆ ಕರಾಳ ನಿಗೂಢ ನೆರಳು

 ಧರ್ಮಸ್ಥಳದಲ್ಲಿ ನಡೆದ ಅಸಂಖ್ಯಾತ ಮಹಿಳೆಯರ ರೇಪ್ & ಮರ್ಡರ್‍ಗಳು ಅಪರಾಧಿಗಳೇ ಇಲ್ಲದೇ ಸಂಭವಿಸಿದ ದುರಂತಗಳು ಎಂದು ಬಿಂಬಿಸಲಾಗುತ್ತಿದೆ.

ಧರ್ಮಸ್ಥಳದಲ್ಲಿ ಅನಾವರಣವಾಗುತ್ತಿರುವ ನಾಟಕೀಯ ಪ್ರಸಂಗಗಳು ಕೇವಲ ರಾಜಕೀಯ ಸಂಘರ್ಷ ಮಾತ್ರವಲ್ಲ, ಬದಲಾಗಿ ಇದು ಆರ್ವೆಲ್ ಪ್ರತಿಪಾದಿಸಿದಂತೆ, ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಅಂತರವನ್ನು ಉದ್ದೇಶಪೂರ್ವಕವಾಗಿ ಮಸುಕಾಗಿಸಿ, ಬಲಾಢ್ಯರನ್ನು ರಕ್ಷಿಸುವ ಒಂದು ತಂತ್ರ. ಬಿಜೆಪಿ ಪಕ್ಷ ಜೆಡಿಎಸ್ ಮೈತ್ರಿಯೊಂದಿಗೆ ಹೊಸ ನಿರೂಪಣೆಗಳನ್ನು ರೂಪಿಸಲು ಯತ್ನಿಸುತ್ತಿದ್ದು, ಇದರ ಪ್ರಕಾರ ಅಪರಾಧಗಳನ್ನು ಎಸಗಿದ ವ್ಯಕ್ತಿಗಳು ಅಪ್ರಸ್ತುತರಾಗುತ್ತಾರೆ, ಆದರೆ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವವರು ಪಿತೂರಿಕೋರರು, ವಿದೇಶಿ ಕೈವಾಡದೊಡನೆ ಶಾಮೀಲಾದವರು ಆಗುತ್ತಾರೆ.

ಈ ನಿರೂಪಣೆಯ ಕೇಂದ್ರ ಬಿಂದು ಧರ್ಮಸ್ಥಳದ ಗಣತಂತ್ರ. ಇದು ವಿಚಾರಣೆಗಳನ್ನು ಮೀರಿದ, ಕಾನೂನು ಮೀರಿದ ಸಂಸ್ಥೆಯಾಗಿ ಕಾಣಿಸುತ್ತದೆ. ಸೌಜನ್ಯ, ಪದ್ಮಲತ, ವೇದವತಿ, ಆನೆ ಮಾವುತ, ಆತನ ಸೋದರಿ ಮತ್ತಿತರರ ಹತ್ಯೆ ಮತ್ತು ಅತ್ಯಾಚಾರಗಳು ಕಳೆದ ಐದು ದಶಕಗಳಲ್ಲಿ ನಡೆದ ಘಟನೆಗಳಲ್ಲಿ ಕೆಲವು ನಿದರ್ಶನಗಳಾಗಿದ್ದು, ಇವೆಲ್ಲವನ್ನೂ ಅಪರಾಧಿಗಳೇ ಇಲ್ಲದೆ ಸಂಭವಿಸಿದ ಅಪಘಾತಗಳ ಹಾಗೆ, ಯಾವುದೇ ಅಪರಾಧಿಗಳಿಲ್ಲದೆಯೇ ನಡೆದ ದುರಂತಗಳೆಂದು ಚಿತ್ರಿಸಲಾಗುತ್ತಿದೆ. ಅವರನ್ನು ಯಾರೂ ಕೊಲ್ಲಲಿಲ್ಲ ಎಂಬ ಮೌನ ಸಂದೇಶ ಹರಿದಾಡುತ್ತಿದ್ದು, ಆರೋಪಿಗಳು ಸುರಕ್ಷಿತವಾಗಿದ್ದಾರೆ.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಿಜೆಪಿ ಪ್ರಚಾರವನ್ನು, ಧರ್ಮಸ್ಥಳ ರಿಪಬ್ಲಿಕ್ ಮೇಲಿನ ಋಣ ತೀರಿಸುವ ತಂತ್ರ ಎಂದು ಬಣ್ಣಿಸುವ ಮೂಲಕ, ಅನುಮಾನಗಳು ಇನ್ನೂ ದಟ್ಟವಾಗುತ್ತಿವೆ. ಜೆಡಿಎಸ್ ಮತ್ತು ಬಿಜೆಪಿಯ ಪ್ರತಿಯೊಬ್ಬ ಸಂಸದರ ವರ್ತನೆಯನ್ನು ಹೀಗೆಯೇ ನೋಡಲಾಗುತ್ತಿದ್ದು, ತಮ್ಮ ಋಣ ತೀರಿಸುವ ಕ್ರಮವಾಗಿ ಕಾಣುತ್ತಿದೆಯೇ ಹೊರತು, ನ್ಯಾಯವನ್ನು ಎತ್ತಿಹಿಡಿಯಲು ಅಲ್ಲ. ಆದರೂ ಬಿಜೆಪಿ ದೃಢವಾಗಿ ನಿಂತಿದ್ದು, ಹಿಂದೆ ಸರಿಯಲು ಒಪ್ಪುತ್ತಿಲ್ಲ, ತನ್ನ ಮಿತ್ರರನ್ನು ಕಡೆಯವರೆಗೂ ರಕ್ಷಿಸಲು ಸಂಕಲ್ಪ ಮಾಡಿದೆ.

ಈ ಪ್ರಯತ್ನದಲ್ಲಿ ಪಕ್ಷವು ಧಾರ್ಮಿಕ ಅಧಿಕಾರವನ್ನು ಬಲವಾಗಿ ಅವಲಂಬಿಸಿದೆ. ಸ್ವಾಮಿಗಳನ್ನು ಕರೆತಂದು, ಆಗ್ರಹಿಸಲಾಗುತ್ತಿದೆ. ಆದರೆ ಅವರಲ್ಲಿ ಕೆಲವರು ಈಗಾಗಲೇ ಕಳಂಕ ಹೊತ್ತಿರುವವರಾಗಿದ್ದಾರೆ. ಅವರ ಪೈಕಿ ಒಬ್ಬರು ಈಗಾಗಲೇ ಬೆಳ್ಳಾರೆಯಲ್ಲಿ ಮಹಿಳೆಯೊಬ್ಬರ ಅಪಹರಣ ಅಕ್ರಮ ಬಂಧನದ ಆರೋಪ ಎದುರಿಸುತ್ತಿದ್ದಾರೆ, ಪೆÇಲೀಸ್ ತನಿಖೆ ನಡೆಯುತ್ತಿದೆ. ಆದÀರೂ ಇವರು ವೇದಿಕೆಯ ಮೇಲೆ ನಿಂತು ಧರ್ಮಸ್ಥಳದ ವಿರುದ್ಧ ರಾಜ್ಯ ಸರ್ಕಾರÀ ಎಸ್‍ಐಟಿ ರಚಿಸಿದ ಕ್ರಮವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅಬ್ಬರಿಸಿದ್ದಾರೆ. ಇವರ ಉಪಸ್ಥಿತಿಯೇ ಸಮಾವೇಶವನ್ನು ಅಲಕ್ಷಿಸುವ ಬದಲು, ನೈತಿಕ ಹೊದಿಕೆ ಹೊದಿಸುವ ಕ್ರಮವನ್ನಾಗಿ ಮಾಡಿದೆ. ಇಲ್ಲಿ ಮತ್ತೆ ಭ್ರಷ್ಟರನ್ನು, ದುಷ್ಟರನ್ನು ನೈತಿಕತೆಯ ಸಂರಕ್ಷಕರ ಹಾಗೆ ಮೆರವಣಿಗೆ ಮಾಡಲಾಗುತ್ತದೆ ಎಂಬ ಆರ್ವೆಲ್ ಪ್ರತಿಪಾದನೆ ನೆನಪಾಗುತ್ತದೆ.

ಇಲ್ಲಿ ನಿರ್ಣಾಯಕ ಗಳಿಗೆ ಎದುರಾಗಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಘೋಷಣೆಯಲ್ಲಿ. ಬಾಯಿ ತಪ್ಪಿಯೋ ಅಥವಾ ಗೊತ್ತಿಲ್ಲದೆಯೋ ಜೋಷಿ, ಪ್ರಧಾನಿಯವರೇ ಡಿಗ್ಯಾಂಗ್ ರಕ್ಷಣೆ ಮಾಡುತ್ತಾರೆ ಎಂದು ಘೋಷಿಸಿರುವುದು ಇಲ್ಲಿ ತಟಸ್ಥತೆಯ ಮುಖವಾಡವನ್ನು ಕಿತ್ತೊಗೆದಿದೆ. ಜನರು ಭಾವಿಸಿದ್ದನ್ನೇ ಗಟ್ಟಿಯಾಗಿ ಹೇಳಲಾಗಿದೆ. ಕೇಂದ್ರ ಸರ್ಕಾರದ ಸಂಪೂರ್ಣ ಅಧಿಕಾರವನ್ನು ಧರ್ಮಸ್ಥಳದ ಕ್ರಿಮಿನಲ್ ಗುಂಪಿನ ರಕ್ಷಣೆಗಾಗಿ ಕಟಿಬದ್ದವಾಗಿ ನಿಲ್ಲಿಸಲಾಗಿದೆ.

ಆರ್ವೆಲ್‍ನ ಪ್ರತಿಪಾದನೆಗಳ ಪರ್ಯಾಯಗಳನ್ನು ಇಲ್ಲಿ ನೇರವಾಗಿ ಕಾಣಬಹುದು. ಸಂತ್ರಸ್ತರು ವಿಲನ್‍ಗಳಾಗುತ್ತಾರೆ, ಆರೋಪಿಗಳು ಅಧಿಕಾರಸ್ಥರಾಗಿದ್ದು, ಸಂತ್ರಸ್ತರ ಛದ್ಮವೇಷ ಧರಿಸುತ್ತಾರೆ. ನ್ಯಾಯಕ್ಕಾಗಿ ಆಗ್ರಹಿಸುವವರು, ವಿದೇಶಿ ಪಿತೂರಿಯ ಏಜೆಂಟರೆಂದು ಬಿಂಬಿಸಲ್ಪಡುತ್ತಾರೆ. ರಾಜ್ಯ ಸರ್ಕಾರ ರಚಿಸಿರುವ ಎಸ್‍ಐಟಿಯ ನ್ಯಾಯಪರತೆಯನ್ನೇ ನಗಣ್ಯಗೊಳಿಸಿ ಅದು ಅಂತಿಮ ವರದಿ ಸಲ್ಲಿಸುವ ಮುನ್ನವೇ ಪಿತೂರಿ ಎಂಬ ಹಣೆಪಟ್ಟಿ ನೀಡಲಾಗುತ್ತದೆ. ಇಡೀ ವಾತಾವರಣವನ್ನು ಆವರಿಸಿರುವುದು ಎನ್‍ಐಎ ತನಿಖೆಗಾಗಿ ಬೇಡಿಕೆ, ಇದು ಅಪರಾಧವನ್ನು ಬಯಲಿಗೆಳೆಯಲು ಅಲ;್ಲ ಬದಲಾಗಿ, ಆರೋಪಿ ಅಧಿಕಾರಸ್ಥರನ್ನು ಪವಿತ್ರಗೊಳಿಸಿ, ಅವರ ಪೀಠವನ್ನು ಉಳಿಸುವ ಸಲುವಾಗಿ.

`1984' ಕೃತಿಯಲ್ಲಿ ಜಾರ್ಜ್ ಆರ್ವೆಲ್ ಹೇಗೆ ಆಳ್ವಿಕೆಗಳು ಮಾತುಗಳನ್ನೂ ತಿರುಚಿ, ನೆನಪುಗಳನ್ನೂ ನಿಯಂತ್ರಿಸುತ್ತವೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಯುದ್ದ ಎಂದರೆ ಶಾಂತಿ, ಸ್ವಾತಂತ್ರ್ಯ ಎಂದರೆ ಗುಲಾಮಿತನ, ಅರಿವಿಲ್ಲದಿರುವುದೇ ಶಕ್ತಿ ಎಂದು ಬಿಂಬಿಸುತ್ತದೆ. ಧರ್ಮಸ್ಥಳ ಇದರ ಜೀವಂತ ಪ್ರತಿಧ್ವನಿಯಾಗಿ ಕಾಣುತ್ತಿದೆ. ನ್ಯಾಯ ಎನ್ನುವುದೇ ಪಿತೂರಿಯಾಗಿದೆ. ಆರೋಪಗಳು ಗೌರವ ಸೂಚಕವಾಗಿವೆ. ಸಂತ್ರಸ್ತರು ವಿಲನ್‍ಗಳು ಎಂದು ಬಿಂಬಿಸಲಾಗುತ್ತಿದೆ. ಇಲ್ಲಿ ಉದ್ಬವಿಸುವ ಪ್ರಶ್ನೆ ಎಂದರೆ, ಇದು ಸಂಭವಿಸುತ್ತಿದೆಯೇ ಎನ್ನುವುದಲ್ಲ. ಬದಲಾಗಿ ಕರ್ನಾಟಕದ ಪ್ರಜಾತಾಂತ್ರಿಕ ಸಂಸ್ಥೆಗಳು, ಸಾರ್ವಜನಿಕ ಪ್ರಜ್ಞೆ ಈ ಕರಾಳ ಅಧ್ಯಾಯವನ್ನು ಸಾಧ್ಯವಾಗಲು ಬಿಡುತ್ತಾರೆಯೇ ಎನ್ನುವುದು ಪ್ರಶ್ನೆ. ಇದು ಸತ್ಯವನ್ನು ನೋಡುವ ಶಾಶ್ವತ ಕನ್ನಡಿಯಾಗಲಿದೆಯೇ ಎನ್ನುವುದು ಪ್ರಶ್ನೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again