ಸೌಜನ್ಯ ಪ್ರಕರಣ: ಮೈಸೂರಿನ ಹೊಣೆಗೇಡಿ ಕೃಷ್ಣನ ಅನಗತ್ಯ ಆರೋಪ

 


ದಶಕಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಒಂದು ದುಃಖತಪ್ತ ಕುಟುಂಬದ ವಿರುದ್ಧ ಸ್ನೇಹಮಯಿ ಕೃಷ್ಣ ಅವರ ಅನಗತ್ಯ, ಬೇಜವಾಬ್ದಾರಿ ಹೇಳಿಕೆ ತನಿಖೆಯ ದಿಕ್ಕು ತಪ್ಪಿಸುತ್ತದೆ.

ನ್ಯಾಯಕ್ಕಾಗಿ ಆಗ್ರಹಿಸುವ ಪ್ರತಿಯೊಂದು ಸಾರ್ವಜನಿಕ ವಿಷಯವೂ ಸಹ ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನಗಳಿಗೆ ಈಡಾಗುತ್ತದೆ. ಇದು ಬಲಾಢ್ಯರಿಂದ ಮಾತ್ರವೇ ಆಗಬೇಕಿಲ್ಲ, ಕೆಲವೊಮ್ಮೆ ಅನಗತ್ಯವಾಗಿ ಮೂಗು ತೂರಿಸುವವರಿಂದಲೂ ಆಗುತ್ತದೆ. ಸೌಜನ್ಯ ಅತ್ಯಾಚಾರ-ಹತ್ಯೆಯ ಪ್ರಕರಣದಲ್ಲಿ ಇತ್ತೀಚಿನ ತಿರುವು ಇದನ್ನೇ ಸೂಚಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯನ್ನೇ ಆಘಾತಕ್ಕೊಳಪಡಿಸಿದ ಘಟನೆ ನಡೆದ 13 ವರ್ಷಗಳ ನಂತರ, ಮೈಸೂರಿನ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ್ದು, ಅವರು ನೀಡಿರುವ ಹೇಳಿಕೆಯು ಸಂತ್ರಸ್ತ ಕುಟುಂಬಕ್ಕೆ ಆಘಾತ ತಂದಿರುವುದೇ ಅಲ್ಲದೆ, ಪ್ರತಿಭಟನಾಕಾರರನ್ನೂ ಚಕಿತಗೊಳಿಸಿದೆ.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದ ಪತ್ರವೊಂದರಲ್ಲಿ ಕೃಷ್ಣ ಅವರು ಸೌಜನ್ಯಾಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಂದವರು, ಆಕೆಯ ಸ್ವಂತ ಸೋದರ ಮಾವ ವಿಠ್ಠಲ ಗೌಡ ಎಂದು ಆರೋಪಿಸಿದ್ದಾರೆ. ಈ ಆರೋಪವು ಅಚ್ಚರಿದಾಯಕವಾಗಿ ಕಾಣುವುದು ಅದರ ವಿವರಗಳಿಂದ ಅಲ್ಲ, ಬದಲಾಗಿ ಬೇಜವಾಬ್ದಾರಿತನದಿಂದ. ಕೃಷ್ಣ ಮೈಸೂರು ವಾಸಿಯಾಗಿದ್ದಾರೆ, ಬೆಳ್ತಂಗಡಿಯಿಂದ ಬಹಳ ದೂರದಲ್ಲಿದ್ದಾರೆ, ಸೌಜನ್ಯ ಅಥವಾ ಆಕೆಯ ಕುಟುಂಬದೊಡನೆ ಯಾವುದೇ ಸಂಬಂಧ ಹೊಂದಿಲ್ಲ. ಆದರೂ ಅವರ ಪತ್ರವನ್ನು ನೋಡಿದರೆ, ಅವರಿಗೆ ಪ್ರಥಮ ಮಾಹಿತಿ ಲಭ್ಯವಾಗಿದೆ ಎನ್ನುವಂತಿದೆ. ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬರು ಹಠಾತ್ತನೆ ಹೀಗೆ ಗಂಭೀರ ಆರೋಪ ಮಾಡುವುದು, ನಿಜಕ್ಕೂ ಆಘಾತ ಮೂಡಿಸುತ್ತದೆ.

ಇಲ್ಲಿ ಮೊದಲನೆ ಪ್ರಶ್ನೆ ಇರುವುದು ಈ ಪತ್ರ ನೀಡಿರುವ ಸಮಯ. 13 ವರ್ಷಗಳ ಕಾಲ ಪ್ರತಿಭಟನಾಕಾರರು ರಸ್ತೆಗಿಳಿದು, ಹೋರಾಟ ನಡೆಸುತ್ತಿದ್ದು, ನ್ಯಾಯಕ್ಕಾಗಿ ಆಗ್ರಹವನ್ನು ಜೀವಂತವಾಗಿರಿಸಿದ್ದಾರೆ. ಎಂದೂ ಸಹ ಈ ಅಭಿಪ್ರಾಯ ಕೇಳಿಬಂದಿಲ್ಲ. ಕೃಷ್ಣ ಈ ವಿಚಾರದಲ್ಲಿ ಏನಾದರು ತಿಳಿದವರಾಗಿದ್ದಲ್ಲಿ, ಇಷ್ಟು ವರ್ಷಗಳ ಕಾಲ ಏಕೆ ಮೌನವಾಗಿದ್ದರು? ಹೋರಾಟಗಳು ತೀವ್ರತೆ ಪಡೆದು ಉನ್ನತ ಹಂತ ತಲುಪಿರುವಾಗ ಮಾತನಾಡುವುದು, ಅವರ ಆರೋಪವನ್ನು ಸತ್ಯ ಹೇಳುವ ಕ್ರಿಯೆಗಿಂತಲೂ ಹೆಚ್ಚಾಗಿ, ಉದ್ದೇಶಪೂರ್ವಕವಾಗಿ ವಿಷಯವನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿ ಕಾಣುತ್ತದೆ.

ಎರಡನೆಯದಾಗಿ, ಇದು ಮಾನವೀಯತೆಯ ಪ್ರಶ್ನೆ. ವಿಠ್ಠಲ ಗೌಡ ಹೊರಗಿನವರಲ್ಲ, ಸೌಜನ್ಯಾಳ ಸೋದರ ಮಾವ. ಅವರು ಕುಟುಂಬಕ್ಕೆ ನಿಕಟವಾಗಿದ್ದು, ದುರಂತ ನಡೆದಾಗ ಕುಟುಂಬದೊಡನೆ ಸ್ಥಿರವಾಗಿ ನಿಂತಿದ್ದಾರೆ. ಅವರ ಮೇಲೆ ಆರೋಪ ಹೊರಿಸುವ ಮೂಲಕ ಕೃಷ್ಣ, ಇಡೀ ಕುಟುಂಬವನ್ನು ಘಾಸಿಗೊಳಿಸಿದ ಅಪರಾಧಕ್ಕೆ ಯಾವುದೇ ಸಾಕ್ಷಿ ಪುರಾವೆಗಳನ್ನು ನೀಡಿಲ್ಲ. ಇದು ಮಾನಹಾನಿಯ ಕ್ರಮವಷ್ಟೇ ಅಲ್ಲದೆ, ಕ್ರೂರ ನಡೆಯೂ ಆಗಿ ಕಾಣುತ್ತದೆ. ಇದು ಕುಟುಂಬಕ್ಕೆ ಈಗಾಗಲೇ ಆಗಿರುವ ಗಾಯವನ್ನು ಮತ್ತಷ್ಟು ತೀವ್ರಗೊಳಿಸುತ್ತದೆ, ಯಾವುದೇ ಅನುಮಾನಗಳಿಲ್ಲದ ವ್ಯಕ್ತಿಗಳನ್ನು ಅನುಮಾನಾಸ್ಪದ ಮಾಡುತ್ತದೆ.

ಅಷ್ಟೇ ಮುಖ್ಯವಾದುದು ವಿಶ್ವಾಸಾರ್ಹತೆ. ಕೃಷ್ಣ ಒಂದು ಸಮಯದಲ್ಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡುವವರಾಗಿ ಗೌರವ ಪಡೆದಿದ್ದವರು. ಆದರೆ ಒಂದು ಕ್ಷೇತ್ರದಲ್ಲಿ ಕಾರ್ಯಕರ್ತರಾಗಿರುವುದು, ಸಾರ್ವಜನಿಕ ಭಾವನೆಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲೂ ಮೂಗು ತೂರಿಸುವ ಪರವಾನಗಿಯನ್ನೇನೂ ನೀಡುವುದಿಲ್ಲ.  ನ್ಯಾಯಕ್ಕಾಗಿ ಹೋರಾಟಗಳು ವಾಸ್ತವಾಂಶಗಳು ಮತ್ತು ನೈತಿಕ ಸ್ಪಷ್ಟತೆಯನ್ನು ಆಧರಿಸಿರುತ್ತವೆ. ಹೊರಗಿನವರು ಅನಗತ್ಯ ವಿವಾದಗಳನ್ನು ಸೃಷ್ಟಿಸಿದರೆ, ಅದು ಸಾರ್ವಜನಿಕರನ್ನು ಗೊಂದಲಕ್ಕೆ ದೂಡುವುದೇ ಅಲ್ಲದೆ, ಹೋರಾಟವನ್ನೇ ದಿಕ್ಕುತಪ್ಪಿಸುತ್ತದೆ. ಹೀಗೆ ಮಾಡುವ ಮೂಲಕ ಕೃಷ್ಣ ತಮ್ಮ ಖ್ಯಾತಿ, ಗೌರವವನ್ನು ಹಾಳುಮಾಡಿಕೊಳ್ಳುವುದೇ ಅಲ್ಲದೆ, ಸೌಜನ್ಯ ಹೋರಾಟದ ಸಾಮೂಹಿಕ ಧ್ಯೇಯವನ್ನೂ ಭಂಗಗೊಳಿಸಿದ್ದಾರೆ.

ಪ್ರತಿಭಟನಾಕಾರರ ಆಕ್ರೋಶವು ಸಹಜವಾಗಿಯೇ ನ್ಯಾಯಯುತವಾಗಿದೆ. ಈ ಕಾರ್ಯಕರ್ತರು ಕೃಷ್ಣ ಅವರ ಆರೋಪದ ವಿರುದ್ಧ ದನಿ ಎತ್ತಿದ್ದು, ಈ ಆಧಾರರಹಿತ ಹೇಳಿಕೆಗೆ ಉತ್ತರದಾಯಿತ್ವವನ್ನು ಆಗ್ರಹಿಸಿದ್ದಾರೆ. ಇವರ ಆಕ್ರೋಶ ಸತ್ಯವನ್ನು ಬಿಂಬಿಸುತ್ತದೆ. ಸೌಜನ್ಯಾಳ ಕ್ರೂರ ಹತ್ಯೆಯನ್ನು ಒಂದು ದಶಕಕ್ಕೂ ಕಾಲ ಸಹಿಸಿಕೊಂಡಿರುವ ಕನ್ನಡಿಗರಿಗೆ ಈ ಪ್ರಕರಣವು ಬೇಜವಾಬ್ದಾರಿಯುತ ದನಿಗಳಿಂದ ಕಲುಷಿತವಾಗುವುದನ್ನು ಸಹಿಸಲಾಗುವುದಿಲ್ಲ.

ಕೃಷ್ಣ ಭ್ರಷ್ಟಾಚಾರದ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ವರ್ಚಸ್ಸು ಪಡೆದಿದ್ದು, ಈ ದುರಂತದಲ್ಲಿ ಏಕೆ ಅನಗತ್ಯವಾಗಿ ಪ್ರವೇಶಿಸಿದರು ಎನ್ನುವುದೇ ಅಚ್ಚರಿಯ ಅಂಶವಾಗಿದೆ. ಇವರಿಗೆ ನೆರವಾಗುವ ಇಚ್ಛೆ ಇದ್ದುದೇ ಆದಲ್ಲಿ, ಅದರಲ್ಲಿವಿಫಲರಾಗಿದ್ದಾರೆ. ದಾರಿ ತಪ್ಪಿಸಲು ಯೋಚಿಸಿದ್ದರೆ, ಅದು ತಿರುಗುಬಾಣವಾಗಿದೆ. ಎರಡೂ ಕಡೆ ಕೃಷ್ಣ ಅವರ ಮಧ್ಯಪ್ರವೇಶ ವೈಯುಕ್ತಿಕ ದುಃಖವನ್ನು ಸಾರ್ವಜನಿಕವಾಗಿ ಪ್ರದರ್ಶನ ವಸ್ತುವನ್ನಾಗಿ ಮಾಡುವ ಹೊರಗಿನವರ ಅಪಾಯಕಾರಿ ನಡೆಯನ್ನು ಸೂಚಿಸುತ್ತದೆ.

ಸೌಜನ್ಯ ಪ್ರಕರಣ ಪ್ರಯೋಗಗಳಿಗೆ ತೆರೆದಿರುವ ವಿಷಯ ಅಲ್ಲ. ಅದು ಒಬ್ಬ ಯುವತಿಯ ಬದುಕನ್ನು ಕಸಿದುಕೊಂಡ,  ಮತ್ತು ಆಕೆಯ ಕುಟುಂಬದ ನ್ಯಾಯಕ್ಕಾಗಿ ಹೋರಾಟದ ಪ್ರತೀಕವಾಗಿದೆ. ಇದನ್ನು ನಗಣ್ಯಗೊಳಿಸುವ ಯಾವುದೇ ಪ್ರಯತ್ನ, ಅದೂ ಆಧಾರರಹಿತ ಆರೋಪಗಳ ಮೂಲಕ, ಹೀಗೆ ಮಾಡುವುದು ಪ್ರಕರಣದ ಮೂಲ ಕಾರಣವನ್ನೇ ವಂಚಿಸಿದ ರಾಕ್ಷಸೀ ಯತ್ನವಾಗುತ್ತದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again