ಮೇಲ್ಮನೆ ನಾಮನಿರ್ದೇಶನ: ಪರಿಷ್ಕøತ ಪಟ್ಟಿಯೂ ನ್ಯಾಯಸಮ್ಮತವಲ್ಲ

 ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸ್ಥಾನಗಳಿಗೆ ವಿಶಿಷ್ಟವಾದ ಪ್ರಜಾಸತ್ತಾತ್ಮಕ ಕರ್ತವ್ಯಗಳಿರುತ್ತವೆ. ಪರಿಷತ್ತನ್ನು ಸಾಧಕರೊಂದಿಗೆ ನಡೆಸುವುದರಿಂದ ವೈವಿಧ್ಯತೆ ಲಭ್ಯವಾಗುತ್ತದೆ. 

ಕರ್ನಾಟಕದ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲಾಗಿರುವ ಹೆಸರುಗಳನ್ನು ಸರ್ಕಾರ ಪ್ರಕಟಿಸಿದ್ದು, ಮೊದಲಿನ ಆಯ್ಕೆಗಳನ್ನು ಕೈಬಿಟ್ಟು ಹೊಸ ಹೆಸರುಗಳನ್ನು ಸೇರಿಸಲಾಗಿದೆ. ಕೆಪಿಸಿಸಿ (ಸಂವಹನ ಮುಖ್ಯಸ್ಥ) ರಮೇಶ್ ಬಾಬು, ಡಾ ಆರತಿ ಕೃಷ್ಣ (ಕರ್ನಾಟಕ ಎನ್‍ಆರ್‍ಐ ಫೆÇೀರಂ), ಕೆ ಶಿವಕುಮಾರ್ (ಹಿರಿಯ ಪತ್ರಕರ್ತ) ಮತ್ತು ಎಫ್ ಎಚ್ ಜಕ್ಕಪ್ಪನವರ್ (ದಲಿತ ನಾಯಕರು, ಶಿಕ್ಷಣ ತಜ್ಞ) ಈ ನಾಲ್ವರ ಹೆಸರುಗಳನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ.

ಮೇಲ್ನೋಟಕ್ಕೆ ಈ ಪರಿಷ್ಕರಣೆ ಮೊದಲಿನ ಪಟ್ಟಿಯನ್ನು ಸರಿಪಡಿಸಿದಂತೆ ಕಾಣುತ್ತದೆ. ಈ ಮುನ್ನ ಆಯ್ಕೆ ಮಾಡಲಾಗಿದ್ದ ದಿನೇಶ್ ಅಮಿನ್ ಮಟ್ಟು ಮತ್ತು ಡಿ ಜಿ ಸಾಗರ್ ಅವರನ್ನು ಕೈಬಿಡಲಾಗಿರುವುದು, ಈ ಹಿಂದೆ ಸರ್ಕಾರ ತನ್ನ ಆಯ್ಕೆಯಲ್ಲಿ ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದೆ, ಕೆಲವರಿಗೆ ಪುನರ್ವಸತಿ ಕಲ್ಪ್ಪಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಕಂಡುಬರುತ್ತದೆ. ಆದರೆ ಇನ್ನೂ ಸಹ ಗಂಭೀರ ಪ್ರಶ್ನೆಗೆ ಉತ್ತರ ದೊರೆತಂತಾಗಿಲ್ಲ. ಈ ಸ್ಥಾನಗಳು ಸಾಂವಿಧಾನಿಕ ಉದ್ದೇಶಗಳನ್ನು ಗೌರವಿಸಲು ಇರುವುದೋ ಅಥವಾ ಅಧಿಕಾರಕ್ಕೆ ಹತ್ತಿರವಾದವರಿಗೆ ಪುರಸ್ಕರಿಸಲು ಇರುವುದೋ? ಸಂವಿಧಾನದ ಅನುಚ್ಚೇದ 171(5) ಈ ನಿಟ್ಟಿನಲ್ಲಿ ಸ್ಪಷ್ಟವಾಗಿದೆ. ನಾಮನಿರ್ದೇಶಿತರು ವಿಶೇಷ ಜ್ಞಾನ ಅಥವಾ ಆಚರಣಾತ್ಮಕ ಅನುಭವ ಉಳ್ಳವರಾಗಿರಬೇಕು, ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಹಕಾರಿ ಚಳುವಳಿ, ಸಾಮಾಜಿಕ ಸೇವಾ ಕ್ಷೇತ್ರದಿಂದ ಬಂದವರಾಗಿರಬೇಕು ಎಂದು ಈ ಅನುಚ್ಛೇದ ಹೇಳುತ್ತದೆ.

ಹಾಗಾದಲ್ಲಿ ಈಗ ವೃತ್ತಿಯಲ್ಲಿರುವ ಪತ್ರಕರ್ತ ಕೆ ಶಿವಕುಮಾರ್ ಮತ್ತು ಹಿರಿಯ ಸೇವಾ ವಲಯದ ದನಿ ಎಫ್ ಎಚ್ ಜಕ್ಕಪ್ಪನವರ್ ಅವರ ಆಯ್ಕೆಯು ಪಕ್ಷದ ಗಡಿಯನ್ನೂ ದಾಟಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದರೂ ಅರ್ಧಕ್ಕೂ ಹೆಚ್ಚು ಸ್ಥಾನಗಳು, ಆರತಿ ಕೃಷ್ಣ ಮತ್ತು ರಮೇಶ್ ಬಾಬು, ಪಕ್ಷದ ಸಂಘಟನಾತ್ಮಕ ವಾತಾವರಣದಲ್ಲೇ ಉಳಿಯುತ್ತದೆ. ಹಾಗಾಗಿ ಇಲ್ಲಿ ಮಿಶ್ರ ಸೂಚನೆ ಲಭ್ಯವಾಗುತ್ತದೆ. ನಾಮನಿರ್ದೇಶನಗಳನ್ನು ಒಂದು ಪರಿಚಿತ ವಲಯದೊಳಗೇ ಉಳಿಸಿಕೊಳ್ಳುವ ತಂತ್ರ ಕಾಣುತ್ತದೆ.

ಇದು ಮುಖ್ಯವಾಗುವುದೇಕೆಂದರೆ, ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸ್ಥಾನಗಳಿಗೆ ವಿಶಿಷ್ಟವಾದ ಪ್ರಜಾಸತ್ತಾತ್ಮಕ ಕರ್ತವ್ಯಗಳಿರುತ್ತವೆ. ಪರಿಷತ್ತನ್ನು ಸಾಧಕರೊಂದಿಗೆ ನಡೆಸುವುದರಿಂದ ವೈವಿಧ್ಯತೆ ಲಭ್ಯವಾಗುತ್ತದೆ, ಆಯ್ಕೆಯಾದವರ ಸ್ಥಾನಮಾನಗಳು ಚುನಾವಣಾ ರಾಜಕಾರಣದಿಂದ ಆಚೆ ಇರಬೇಕಾಗುತ್ತದೆ. ಈ ಸ್ಥಾನಗಳು ರಾಜಕೀಯ ಪಕ್ಷದ ವ್ಯವಸ್ಥೆಯ ವಿಸ್ತರಣೆಯಾದಾಗ, ಮೇಲ್ಮನೆಯು ತನ್ನ ನ್ಯಾಯಸಮ್ಮತತೆಯನ್ನು, ಉಪಯುಕ್ತತೆಯನ್ನು ಕಳೆದುಕೊಳ್ಳುತ್ತದೆ. ದೃಷ್ಟಿಕೋನವಿಲ್ಲದ ಒಂದು ಅವಕಾಶವನ್ನು ಮಾತ್ರ ಕಲ್ಪಿಸಿದಂತಾಗುತ್ತದೆ. ಸರ್ಕಾರವು ಸಾರ್ವಜನಿಕ ಆರೋಗ್ಯವನ್ನು ರೂಪಿಸುವ ವಿಜ್ಞಾನಿಯನ್ನು, ಸಾಮಾಜಿಕ ಬದಲಾವಣೆಯನ್ನು ಮಾಡುವ ಸಾಹಿತಿಯನ್ನು, ತಳಮಟ್ಟದ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳುವ ಸಹಕಾರಿ ಕ್ಷೇತ್ರದ ನುರಿತ ಮುತ್ಸದ್ದಿಯನ್ನು ನಿರ್ಲಕ್ಷಿಸಿದಂತಾಗುತ್ತದೆ.

ವಿರೋಧಿ ಪಕ್ಷಗಳು ದುರ್ಬಲಗೊಳಿಸಲು ಮುಂದಾಗಿದ್ದ ಸಂಸ್ಥೆಗಳನ್ನು ಬಲಪಡಿಸುವ ಭರವಸೆಯೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಭರವಸೆಯನ್ನು ಕೇವಲ ಹೆಸರು ಅದಲುಬದಲು ಮಾಡುವುದರ ಮೂಲಕ ಈಡೇರಿಸಲಾಗುತ್ತಿದೆಯೇ ಹೊರತು, ಪಾರದರ್ಶಕವಾದ, ಅರ್ಹತೆ ಮತ್ತು ಮಾನದಂಡಗಳನ್ನು ಆಧರಿಸಿದ ನಾಮನಿರ್ದೇಶನದ ಪ್ರಕ್ರಿಯೆಯ ಮೂಲಕ ಅಲ್ಲ. ಈ ಪ್ರಕ್ರಿಯೆಯು ಸಹಜವಾಗಿ ಸಾಂವಿಧಾನಿಕ ನಿಯಮಗಳಿಗೆ ಬದ್ಧವಾಗಿದ್ದು, ನಾಗರಿಕ ಸಮಾಜದ ಅನುಮೋದನೆ ಪಡೆಯಬೇಕಾಗುತ್ತದೆ. ಕರ್ನಾಟಕದಲ್ಲಿ ಇಂತಹ ವ್ಯಕ್ತಿಗಳ ಕೊರತೆಯೇನೂ ಇಲ್ಲ. ಕೊರತೆ ಇರುವುದು ರಾಜಕೀಯ ಇಚ್ಛಾಶಕ್ತಿಯಲ್ಲಿ, ಪಕ್ಷದ ಹಿತವಲಯದಿಂದಾಚೆ ನೋಡುವ ವ್ಯವಧಾನದಲ್ಲಿ.

ಇನ್ನೂ ಉನ್ನತ ಗುಣಮಟ್ಟವನ್ನು ಕಾಪಾಡಲು ಈಗಲೂ ಸಮಯ ಇದೆ. ಅನುಚ್ಛೇದ 171(5)ರ ನಿಯಮಗಳನ್ನು ಸರಿದೂಗಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡುವುದರ ಮೂಲಕ ಸಂಸ್ಥೆಗಳಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಸರ್ಕಾರವು ಅತ್ಯುತ್ತಮ ಮನಸ್ಸುಗಳನ್ನು ಮೇಲ್ಮಟ್ಟಕ್ಕೆ ಏರಿಸುವ ಕಾರಣಕ್ಕಾಗಿ ಸ್ಮರಣೀಯವಾಗಬೇಕಾದರೆ, ಈ ನಾಮ ನಿರ್ದೇಶನಗಳು ಆ ರೀತಿಯೇ ಕಾಣಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again