ಮರಳಿ ಜನ ವಿಶ್ವಾಸ ಗಳಿಸಿದ ಕರ್ಣಾಟಕ ಬ್ಯಾಂಕ್

 

                                            ರಾಘವೇಂದ್ರ ಎಸ್ ಭಟ್, ಎಂಡಿ, ಕರ್ಣಾಟಕ ಬ್ಯಾಂಕ್


ಶತಮಾನ ಪೂರೈಸಿರುವ ಕರ್ಣಾಟಕ ಬ್ಯಾಂಕ್, ಮಂಗಳೂರಿನಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದ್ದು, ದೇಶವ್ಯಾಪಿಯಾಗಿ ಸಾವಿರ ಶಾಖೆಗಳನ್ನು ಹೊಂದಿದೆ. ತನ್ನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಂಡು ಬ್ಯಾಂಕ್ ಈಗ ಹೊಸ ಕಾರ್ಯನಿರ್ವಾಹಕ ನಿರ್ದೇಶಕ (ಎಂಡಿ) ಮತ್ತು ಸಿಇಒ ರಾಘವೇಂದ್ರ ಕೆ ಭಟ್ ಅವರ ಮುಂದಾಳತ್ವದಲ್ಲಿ ತಹಬಂದಿಗೆ ಬಂದಿದೆ. ರಾವ್ ಮತ್ತು ಶರ್ಮ ಅವರ ನೇತೃತ್ವದಲ್ಲಿ ಹಿಂದಿನ ಆಡಳಿತ ಮಂಡಲಿಯ ಕೆಟ್ಟ ನಿರ್ವಹಣೆಯಿಂದ ಸಾರ್ವಜನಿಕ ಗೌರವ ಕಳೆದುಕೊಂಡಿದ್ದ ಬ್ಯಾಂಕ್ ಈಗ ಪುನರ್ನಿರ್ಮಾಣ ಹೊಂದಿದ್ದು ಬ್ಯಾಂಕಿನ ಮೂಲಭೂತ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಹಾಗೆಯೇ ಗ್ರಾಹಕರ ವಿಶ್ವಾಸವನ್ನೂ ಮರಳಿ ಗಳಿಸಲಾಗಿದ್ದು ಲಾಭಾಂಶದ ಪ್ರಮಾಣವನ್ನೂ ಹೆಚ್ಚಿಸಲಾಗಿದೆ.

ತಿಂಗಳುಗಳ ಹಿಂದೆ ಬ್ಯಾಂಕಿನ ಉಸ್ತುವಾರಿ ವಹಿಸಿಕೊಂಡ ಕೂಡಲೇ ಸಂಸ್ಥೆಯ ಕಾರ್ಯಾಚರಣೆಯನ್ನು ಪರಿಷ್ಕರಿಸಲಾರಂಭಿಸಿದ ಭಟ್ ಅವರು ಸಮಗ್ರ ಪರಿಶೀಲನೆ ನಡೆಸಿ, ಸಾಲದ ಯೋಜನೆಗಳ ದೌರ್ಬಲ್ಯ, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಲ್ಲಿದ್ದ ಕೊರತೆ, ಗ್ರಾಹಕರನ್ನು ತಲುಪುವಲ್ಲಿ ಇದ್ದ ಅಂತರ ಇಂತಹ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಕ್ರಮಗಳನ್ನು ಕೈಗೊಂಡಿದ್ದಾರೆ. ಭಟ್ ಅವರು ಕೈಗೊಂಡ ಮೊದಲ ಕ್ರಮ ಎಂದರೆ ಸಾಲ ಯೋಜನೆಯನ್ನು ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಸರಿಪಡಿಸಿರುವುದು, ತನ್ಮೂಲಕ ಸಾಲ ವಿತರಣೆಯಲ್ಲಿ ದಕ್ಷತೆಯನ್ನು ತಂದಿರುವುದು. ಒತ್ತಡದ ಆಸ್ತಿ ಅಥವಾ ಬಾಕಿ ಇರುವ ಸಾಲಗಳ ವಸೂಲಾತಿಗೆ ಕಠಿಣ ಕ್ರಮಗಳನ್ನು ಅನುಸರಿಸಿದ್ದು ಇದು ಸಾಲಗಳು ಹೊಸದಾಗಿ ಅನುತ್ಪಾದಕವಾಗುವುದನ್ನು ತಡೆಗಟ್ಟಿದ್ದು, ಸಾಲ ಸೌಲಭ್ಯದ ವಿತರಣೆಯಲ್ಲಿ ಹೆಚ್ಚಿನ ಶಿಸ್ತು ಮೂಡಿದೆ.

ಬ್ಯಾಂಕಿಂಗ್ ವ್ಯವಹಾರದ ಭವಿಷ್ಯ ತಂತ್ರಜ್ಞಾನದಲ್ಲಿಯೇ ಇರುವುದನ್ನು ಗುರುತಿಸಿರುವ ರಾಘವೇಂದ್ರ ಭಟ್ ಅವರು ಡಿಜಿಟಲ್ ಪರಿವರ್ತನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮೊಬೈಲ್ ಮತ್ತು ಅಂತರ್ಜಾಲ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲಾಗಿದ್ದು, ಭದ್ರತಾ ಲಕ್ಷಣಗಳನ್ನು, ಗ್ರಾಹಕ ಸ್ನೇಹಿ ಸಂವಹನವನ್ನು ಉತ್ತಮಪಡಿಸಿದ್ದಾರೆ. ಹೊಸದಾಗಿ ಫಿನ್‍ಟೆಕ್ ಅಂದರೆ ಹಣಕಾಸು ತಂತ್ರಜ್ಞಾನದ ಅಳವಡಿಕೆಗೆ ಇತರ ಏಜೆನ್ಸಿಗಳೊಡನೆ ಸಹಭಾಗಿತ್ವ ಸಾಧಿಸಲಾಗಿದ್ದು, ತ್ವರಿತ ಗತಿಯ ಸಾಲ ವಿತರಣೆ, ಸೂಕ್ತ ಸಮಯದಲ್ಲಿ ಹಣದ ವರ್ಗಾವಣೆ, ಡಿಜಿಟಲ್ ಕೆವೈಸಿ ಮುಂತಾದ ಕಾರ್ಯಾಚರಣೆಗಳಲ್ಲಿ ಉತ್ತಮ ಬೆಳವಣಿಗೆಗೆ ಕಾರಣರಾಗಿದ್ದಾರೆ.  ಇದು ಯುವ ಗ್ರಾಹಕರನ್ನು ಆಕರ್ಷಿಸಿರುವುದೇ ಅಲ್ಲದೆ, ಎಲ್ಲ ಶಾಖೆಗಳಲ್ಲೂ ದಕ್ಷತೆಯನ್ನು ಹೆಚ್ಚಿಸಿದೆ.

ಭಟ್ ಅವರು ಆದ್ಯತೆ ನೀಡಿರುವ ಮತ್ತೊಂದು ಕಾರ್ಯ ಎಂದರೆ ಠೇವಣಿದಾರರ ವಿಶ್ವಾಸವನ್ನು ಮರಳಿ ಪಡೆಯುವುದು. ಗ್ರಾಹಕ ಕೇಂದ್ರಿತ ಪ್ರಚಾರಗಳನ್ನು ನಡೆಸುವ ಮೂಲಕ, ರಿಟೈಲ್ ಮತ್ತು ಎಸ್‍ಎಮ್‍ಇ ಗ್ರಾಹಕರೊಡನೆ ನೇರ ಸಂಪರ್ಕ ಸಾಧಿಸಿ ಪಾರದರ್ಶಕ ಸಂವಹನದ ಮೂಲಕ ಬಡ್ಡಿದರಗಳ ಮಾಹಿತಿಯನ್ನು ಒದಗಿಸಲಾಗುತ್ತಿದೆ. ವೈಯಕ್ತಿಕವಾಗಿ ಬ್ಯಾಂಕಿಂಗ್ ಸೇವೆಯನ್ನು ಒದಗಿಸುವ ಹೊಸ ಮಾದರಿಗಳನ್ನು ಅನುಸರಿಸಲಾಗುತ್ತಿದೆ. ತನ್ನ ಕೆಲವು ಬ್ರ್ಯಾಂಡ್‍ಗಳಿಗೆ ಹೊಸ ಹೆಸರು ನೀಡಿರುವ ಬ್ಯಾಂಕ್ ಆಧುನಿಕ ಗ್ರಾಹಕರನ್ನು ಸೆಳೆಯುವಂತಿದ್ದು, ಗ್ರಾಮೀಣ ಮತ್ತು ಪಟ್ಟಣಗಳಲ್ಲಿ ತನ್ನ ಪಾರಂಪರಿಕ ಪ್ರಾಬಲ್ಯವನ್ನು ಉಳಿಸಿಕೊಳ್ಳುತ್ತಿದೆ.

ಕಾರ್ಯಾಚರಣೆಯ ನಿಟ್ಟಿನಲ್ಲಿ ಭಟ್ ವೆಚ್ಚವನ್ನು ಕಡಿಮೆ ಮಾಡುವ, ಸಮರ್ಪಕವಾಗಿಸುವ ಮತ್ತು ಅಪಾಯಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವ ಪದ್ಧತಿಗಳನ್ನು ಅಳವಡಿಸಿದ್ದಾರೆ. ಸಿಬ್ಬಂದಿ ತರಬೇತಿ ಕಾರ್ಯಕ್ರಮಗಳನ್ನು ಉತ್ತಮಗೊಳಿಸಲಾಗಿದ್ದು, ಸಿಬ್ಬಂದಿಯು ಮೊದಲು ಗ್ರಾಹಕರ ಸೇವೆಗೆ ಬದ್ಧರಾಗಿ, ಡಿಜಿಟಲ್ ಅಳವಡಿಕೆ ಮತ್ತು ನಿಯಮ ಪಾಲನೆಯ ಪದ್ಧತಿಗಳನ್ನು ಅಳವಡಿಸಿದ್ದಾರೆ. ಈ ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಮೂಲಕ, ಅಧಿಕಾರಶಾಹಿಯ ತೊಡಕುಗಳನ್ನು ನಿವಾರಿಸಿರುವ ಬ್ಯಾಂಕ್, ತನ್ನ ಸೇವೆಯಲ್ಲಿ, ಸಾಲದ ಮಂಜೂರಾತಿಯಲ್ಲಿ, ಕುಂದುಕೊರತೆಗಳನ್ನು ನಿವಾರಿಸುವಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಂಡಿದೆ.

ಇದರ ಪರಿಣಾಮ ಈಗಾಗಲೇ ಎದ್ದುಕಾಣುವಂತಿದೆ. ಮಾರುಕಟ್ಟೆ ವಿಶ್ಲೇಷಣೆಗಳ ಅನುಸಾರ ಕರ್ಣಾಟಕ ಬ್ಯಾಂಕ್‍ನ ಷೇರುಗಳು ಉತ್ತಮ ಸಾಧನೆಯನ್ನು ತೋರುತ್ತಿದ್ದು, ಲಾಭಾಂಶವೂ ಹೆಚ್ಚಳವಾಗಿದೆ, ಆಸ್ತಿಯ ಗುಣಮಟ್ಟವೂ ಉತ್ತಮವಾಗಿದೆ. ಬಹುಮುಖ್ಯವಾಗಿ, ಸಾರ್ವಜನಿಕ ತಿಳುವಳಿಕೆಯೂ ಸಹ ಸಕಾರಾತ್ಮಕವಾಗುತ್ತಿದ್ದು, ಗ್ರಾಹಕರು ಮತ್ತು ಹೂಡಿಕೆದಾರರು ಬ್ಯಾಂಕಿನ ವಿಶ್ವಾಸಾರ್ಹತೆ ಮತ್ತೊಮ್ಮೆ ಉತ್ತಮವಾಗಿರುವುದನ್ನು ಗುರುತಿಸುತ್ತಿದ್ದಾರೆ.

ಉದ್ಯಮದ ಒಳಗಿನ ವಿಶ್ಲೇಷಕರು ಹೇಳುವಂತೆ ಮುಂದಿನ ಹಾದಿಯು ಸವಾಲಿನದ್ದಾಗಿದ್ದು, ಬ್ಯಾಂಕಿಂಗ್ ವಲಯದ ಸ್ಪರ್ಧಾತ್ಮಕತೆಯಲ್ಲಿ ರಾಘವೇಂದ್ರ ಅವರ ಮುಂದಾಳತ್ವವು ಕರ್ಣಾಟಕ ಬ್ಯಾಂಕಿನಲ್ಲಿ ಉನ್ನತ ಧ್ಯೇಯೋದ್ದೇಶ ಸಾಧನೆಯ ಭಾವನೆಯನ್ನು ಮೂಡಿಸಿದೆ. ಈ ಉತ್ಸಾಹವನ್ನು ಮುಂದೆ ಕಾಪಾಡಿಕೊಂಡು ಬಂದಲ್ಲಿ, ಬ್ಯಾಂಕ್ ಶೀಘ್ರವೇ ತನ್ನ ಹಿಂದಿನ ಸ್ಥಾನವನ್ನು ಮರಳಿ ಪಡೆಯಲಿದ್ದು, ಭಾರತದ ಖಾಸಗಿ ಬ್ಯಾಂಕಿಂಗ್ ವಲಯದಲ್ಲಿ ತನ್ನ ವಿಶ್ವಾಸವನ್ನು ಉಳಿಸಿಕೊಳ್ಳಲಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again