ಮಣಿಶಂಕರ್ ಐಯ್ಯರ್ ಯಾರಿಗೂ ಬೇಡವಾದ ಹೊಣೆಗೇಡಿ ಕಾಂಗ್ರೆಸ್ಸಿಗ

ತಮ್ಮನ್ನು ಸ್ವತಃ ಬುದ್ಧಿಜೀವಿ ಎಂದು ಭಾವಿಸುವ ಐಯ್ಯರ್ ಘಾತುಕರಾಗಿ ಕಾಣುವುದೇ ಹೆಚ್ಚು


ಒಂದು ಕಾಲಘಟ್ಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜಕೀಯ ಅಂಗಳದಲ್ಲಿ ಗೌರವಯುತ ರಾಜತಾಂತ್ರಿಕರಾಗಿ, ವಾಕ್ಚಾತುರ್ಯದ ಸಂಸದೀಯಪಟುವಾಗಿ, ನೆಹರೂ ಅವರ ಕಟ್ಟಾ ಅಭಿಮಾನಿಯಾಗಿ ಮೆರೆದಿದ್ದ ಮಣಿಶಂಕರ್ ಐಯ್ಯರ್, ಇಂದು ಮೂಲೆಗುಂಪಾಗಿರುವುದೇ ಅಲ್ಲದೆ, ತಮ್ಮ ಪಕ್ಷದೊಳಗೇ ಕಾಣದಂತಾಗಿದ್ದಾರೆ. ಇತ್ತೀಚೆಗೆ ತಮ್ಮ ಕಾಂಗ್ರೆಸ್ ಕಚೇರಿಯ ಭೇಟಿಯ ಸಂದರ್ಭದಲ್ಲಿ ಒಬ್ಬ ಜವಾನನೂ ಸಹ ಅವರ ಬಳಿ ಮಾತನಾಡಲಿಲ್ಲ ಅಥವಾ ಒಂದು ಕಪ್ ಕಾಫಿ ಕೊಡಲಿಲ್ಲ ಎಂದು ಸಾರ್ವಜನಿಕವಾಗಿ ಅವರೇ ಅಲವತ್ತುಕೊಂಡಿರುವುದು ಕೇವಲ ಸಾಂಕೇತಿಕ ಭಾವನೆ ಅಲ್ಲ. ಇದು ಆಳವಾದ ವಾಸ್ತವವನ್ನು ಬಿಂಬಿಸುತ್ತದೆ. ಐಯ್ಯರ್  ಈಗ ರಾಜಕೀಯವಾಗಿ ಅನಾಥರಾಗಿದ್ದು, ತಾವು ಸೇವೆ ಸಲ್ಲಿಸಿದ ಸಂಸ್ಥೆಯೇ ತಮ್ಮನ್ನು ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿಯಾಗಿದ್ದಾರೆ.

ಇಲ್ಲಿ ತೀಕ್ಷ್ಣವಾದ ವಿಡಂಬನೆಯನ್ನು ಗ್ರಹಿಸಬೇಕಿದೆ. ಇದೇ ಆಯ್ಯರ್ 2014ರಲ್ಲಿ ನರೇಂದ್ರ ಮೋದಿಯನ್ನು ಕೇವಲ `ಚಾಯ್ ವಾಲಾ' ಎಂದು ಮೂದಲಿಸಿದ್ದೇ ಅಲ್ಲದೆ, ಉನ್ನತ ಕಚೇರಿಗೆ ಸೂಕ್ತ ವ್ಯಕ್ತಿಯಲ್ಲ ಎಂದು ಟೀಕಿಸಿದ್ದರು.  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೋದಿ ಅವರು ಎಐಸಿಸಿ ಕಚೇರಿಯಲ್ಲಿ ಅಥವಾ ಸಮ್ಮೇಳನದಲ್ಲಿ ಚಹಾ ಹಂಚಲು ಬರುವವರೇ ಆದರೆ ಅಧಿಕೃತವಾಗಿ ಆಹ್ವಾನಿಸುವುದಾಗಿ ಮೂದಲಿಸಿದ್ದರು. ಈ ಒಂದು ಟೀಕೆ, ತೀವ್ರ ಅವಗಣನೆಯಿಂದ ಕೂಡಿದ್ದು ಐಯ್ಯರ್ ಅವರಿಗೆ ತಿರುಗುಬಾಣವಾಯಿತು. ಮೋದಿ ಈ ಟೀಕೆಯನ್ನು ತಮಗೆ ಸಂದ ಗೌರವ ಎಂದು ಭಾವಿಸಿ, ಭಾವನಾತ್ಮಕವಾಗಿ ಲಕ್ಷಾಂತರ ಭಾರತೀಯರೊಡನೆ ಸಂಪರ್ಕಿಸಲು ಇದನ್ನೇ ಬಳಸಿಕೊಂಡರು ಇಂಗ್ಲಿಷ್ ಮಾತನಾಡುವ ಮೇಲ್ಪದರದ ರಾಜಕಾರಣಿಗಳಿಂದ ಬೇಸತ್ತಿದ್ದ ಸಾಮಾನ್ಯ ಜನತೆ ಇದನ್ನು ಸವಾಲಾಗಿ ಸ್ವೀಕರಿಸಿದ್ದರು. ಈ ಗಳಿಗೆ ಪಕ್ಷಕ್ಕೆ ಮತ್ತಾವುದೇ ನೀತಿ ವೈಫಲ್ಯಗಳಿಗಿಂತಲೂ ಹೆಚ್ಚು ಹಾನಿ ಉಂಟುಮಾಡಿತ್ತು.

ಇಂದು ಐಯ್ಯರ್ ತಮ್ಮ ರಾಜಕೀಯ ತವರಿನಲ್ಲಿ ಒಂದು ಕಪ್ ಚಹಾ ಕೊಡುವವರೂ ಇಲ್ಲ. ಪಕ್ಷದೊಳಗೆ ಅವರಿಗೆ ಯಾರಾದರೂ ಸ್ನೇಹಿತರು ಉಳಿದಿದ್ದಾರೆಯೇ? ಖಂಡಿತವಾಗಿಯೂ ಇಲ್ಲ. ಇವರನ್ನು ಎಲ್ಲ ಸಮಿತಿಗಳಿಂದಲೂ ಕೈಬಿಡಲಾಗಿದ್ದು  ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಹ ನಿರಾಕರಿಸಲಾಯಿತು. ಸೋನಿಯಾ ಗಾಂಧಿ ಕುಟುಂಬವೇ ಇವರನ್ನು `ವೇಸ್ಟ್ ಬಾಡಿ' ಎಂದು ಪರಿಗಣಿಸಿದಂತಿದೆ. ಆದರೆ ತಮ್ಮ ಪ್ರಸ್ತುತತೆಯನ್ನು ಸಾಬೀತುಪಡಿಸಲು ಐಯ್ಯರ್ ಬಾಯಿ ಚಪಲಕ್ಕೆ ಮಾತಾಡುತ್ತಲೇ ಬಂದಿದ್ದಾರೆ. ತಮ್ಮ ನಡವಳಿಕೆಯನ್ನು ಗುರುತಿಸಿಕೊಂಡು, ಕ್ಷಮಾಪಣೆ ಕೋರಲು ಒಪ್ಪದ ಐಯ್ಯರ್ ಈಗ ಎಲ್ಲರಿಂದಲೂ ಪ್ರತ್ಯೇಕವಾಗಿ ಯಾರಿಗೂ ಬೇಡವಾಗಿದ್ದಾರೆ.

ಆದಾಗ್ಯೂ ಐಯ್ಯರ್ ವಿವೇಕದಿಂದ ಮಾತನಾಡದೆ ದ್ವೇಷಪೂರಿತವಾಗಿಯೇ ಮಾತನಾಡುತ್ತಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರ ಮೇಲೆ ಅವರ ನಿರಂತರ ದಾಳಿ ಕೆಲವೊಮ್ಮ ಅಸಭ್ಯ ಮಟ್ಟಕ್ಕೂ ತಲುಪಿದ್ದು, ಯಾವುದೇ ಕಾರ್ಯತಂತ್ರದ  ಮೇಲೆ ಪರಿಣಾಮ ಬೀರುವಂತಿರುವುದಿಲ್ಲ. ಅಥವಾ ಅವರಿಂದ ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವುದಾಗಲೀ, ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸುವುದಾಗಲೀ ಆಗುವುದಿಲ್ಲ. ಅವರ ಹಗೆತನದ ಮಾತುಗಳು ವೈಯುಕ್ತಿಕ ಆಕ್ರೋಶಕ್ಕೆ ಒಳಗಾದ ವ್ಯಕ್ತಿಯ ಹತಾಶ ವ್ಯಕ್ತಿತ್ವವನ್ನಷ್ಟೇ ಬಿಂಬಿಸುತ್ತದೆ.

ಇನ್ನೂ ದೊಡ್ಡ ದುರಂತವೆಂದರೆ, ಅವರ ಮಾತುಗಳು ಎಂತಹ ಹಾನಿ ಉಂಟುಮಾಡುತ್ತವೆ ಎನ್ನುವುದಕ್ಕೆ ಅವರು ಉದ್ದೇಶಪೂರ್ವಕವಾಗಿ ಕುರುಡಾಗಿದ್ದಾರೆ, ಅರಿಯದವರಾಗಿದ್ದಾರೆ. ಭಾರತಕ್ಕೆ ರಾಜಕೀಯ ಸ್ಥಿರತೆ ಅತ್ಯವಶ್ಯವಾಗಿರುವ ಸನ್ನಿವೇಶದಲ್ಲಿ, ಜಾಗತಿಕ ವಿಶ್ವಾಸಾರ್ಹತೆ ಬೇಕಾಗಿರುವ ಸಮಯದಲ್ಲಿ, ಇವರ ಬೇಜವಾಬ್ದಾರಿಯುತ ಹೇಳಿಕೆಗಳು ಅಸ್ಥಿರತೆಯನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತವೆ. ಭಾರತದಲ್ಲಿ ಉತ್ತಮ ವಿಶ್ವಾಸಾರ್ಹ ಪರ್ಯಾಯ ಇಲ್ಲದೆ ಮೋದಿ ಪತನಗೊಂಡರೆ, ಆಗ ನಿರ್ಮಾಣವಾಗುವ ನಿರ್ವಾತವನ್ನು ವಿದೇಶಿ ಶಕ್ತಿಗಳು ಉಪಯೋಗಿಸಿಕೊಳ್ಳಲು ಸಜ್ಜಾಗಿವೆ. ಈ ಸಾಧ್ಯತೆಗಳ ಬಗ್ಗೆ ಐಯ್ಯರ್ ಅಸಡ್ಡೆ ತೋರುತ್ತಿರುವುದು ಅಪಾಯಕಾರಿಯಷ್ಟೇ ಅಲ್ಲ, ಎಚ್ಚರಿಕೆಯ ಗಂಟೆಯಾಗಿದೆ.

ಇದು ಸಾಲದೆಂಬಂತೆ ಐಯ್ಯರ್ ಪಾಕಿಸ್ತಾನದ ಪರ ವಹಿಸಿ ಮಾತನಾಡುವುದು, ಇಷ್ಟೆಲ್ಲಾ ಭಯೋತ್ಪಾದಕ ದಾಳಿಗಳ ನಂತರವೂ ಮುಂದುವರೆದಿರುವುದು ಅವರ ದೋಷಪೂರ್ಣ ವ್ಯಕ್ತಿತ್ವದ ಪೂರ್ಣ ಚಿತ್ರಣವನ್ನು ನೀಡುತ್ತದೆ. ತಮ್ಮನ್ನು ಸ್ವತಃ ಬುದ್ಧಿಜೀವಿ ಎಂದು ಭಾವಿಸುವ ಐಯ್ಯರ್ ಘಾತುಕರಾಗಿ ಕಾಣುವುದೇ ಹೆಚ್ಚು. ನೆರೆ ರಾಷ್ಟ್ರ ಪಾಕಿಸ್ತಾನದೊಡನೆ ಅನಿಬರ್ಂಧಿತ ಮತ್ತು ಅನಿಯಂತ್ರಿತ ಮಾತುಕತೆಗಳಿಗೆ ಅವರು ನೀಡುವ ಕರೆಯು ಜನರಿಗೆ ಅವರಲ್ಲಿ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ.

ಮಣಿ ಶಂಕರ್ ಐಯ್ಯರ್ ಅವರ ಪತನ ದುರಂತ ಎನ್ನುವುದಕ್ಕಿಂತಲೂ, ನಾಟಕೀಯ ಎನ್ನಬಹುದು. ಅರ್ಹತೆಯ ಸ್ಥಾನವನ್ನು ಅನುಕಂಪ ಆಕ್ರಮಿಸಿದಾಗ,  ಬುದ್ಧಿವಂತಿಕೆಯು ಅಪಹಾಸ್ಯದ ಮುಖವಾಡದೊಂದಿಗೆ ಎದುರಾದಾಗ, ಹೀಗಾಗುವುದುಂಟು.. ರಾಜಕಾರಣದಲ್ಲಿ ಗೌರವ ವಂಶಾವಳಿಯಿಂದ ಬರುವುದಿಲ್ಲ. ಅದನ್ನು ಸಂಪಾದಿಸಬೇಕು. ಐಯ್ಯರ್ ಬಹುಶಃ ಇದನ್ನು ಮಾಡುತ್ತಿಲ್ಲ. 

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again